ಬಿಗ್‌ಬಾಸ್ ಲೈಟ್‌ ಆಫ್‌ ಆದಮೇಲೆ ಪ್ರಿಯಾಂಕರನ್ನು ಹಗ್ ಮಾಡಿದ ವಾಸುಕಿ!

By Web Desk  |  First Published Nov 23, 2019, 3:51 PM IST

ಬಿಗ್‌ಬಾಸ್ ಮನೆಯ ಸೈಲೆಂಟ್ ಹುಡುಗ ಎನಿಸಿಕೊಂಡಿದ್ದ ವಾಸುಕಿ ವೈಭವ್ ಬಗ್ಗೆ ಈಗೀಗ ದೂರುಗಳು ಬರುತ್ತಿವೆ. ಟಾಸ್ಕ್‌ವೊಂದರಲ್ಲಿ ವಾಸುಕಿ ಪ್ರಿಯಾಂಕರನ್ನು ಹಗ್ ಮಾಡಿದ್ದು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. 


ಬಿಗ್ ಬಾಸ್ ಪ್ರತಿ ಸೀಸನ್‌ನಲ್ಲೂ ಲವ್ ಗಾಸಿಪ್‌ಗೇನೂ ಕಮ್ಮಿಯಿಲ್ಲ.  ಒಂದೊಂದು ಸೀಸನ್‌ನಲ್ಲೂ ಒಬ್ಬೊಬ್ಬರ ಹೆಸರು ಕೇಳಿ ಬರುತ್ತದೆ.  ಈ ಬಾರಿಯ ಬಿಗ್‌ಬಾಸ್‌ನಲ್ಲಿ ಇಷ್ಟು ದಿನ ಸೈಲೆಂಟ್ ಬಾಯ್ ಆಗಿದ್ದ ವಾಸುಕಿ ಈಗ ಹುಡುಗಿಯರ ಜೊತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ದೂರುಗಳು ಹೆಚ್ಚಾಗಿವೆ. 

ನನ್ನ ಧ್ವನಿಯೇ ಗಡಸು, ಅದು ಕೋಪ ಅಂದುಕೊಂಡ್ರೆ ಹೇಗೆ?

Tap to resize

Latest Videos

undefined

ಬಿಗ್ ಬಾಸ್ ಮನೆಯ ಲೈಟ್ ಆಫ್ ಆದ್ಮೇಲೆ ಪ್ರಿಯಾಂಕ, ಶೈನ್ ಹಾಗೂ ವಾಸುಕಿ ಮಾತಾಡ್ತಾ ನಿಂತಿದ್ದರು. ಆಗ ಪ್ರಿಯಾಂಕ ವಾಸುಕಿ ಎಲ್ಲರನ್ನು ಹಗ್ ಮಾಡಿ ಗುಡ್ ನೈಟ್ ಹೇಳೋದು ಜಾಸ್ತಿ ಆಗಿದೆ ಅಂತ ಭೂಮಿಯನ್ನು ಗಮನದಲ್ಲಿಟ್ಟುಕೊಂಡು ರೇಗಿಸಿದರು.  ಆಗ ವಾಸುಕಿ ಹಾಗೇನಿಲ್ಲ. ನಿಮ್ಮನ್ನು ಹಗ್ ಮಾಡ್ತೀನಿ ಬನ್ನಿ ಎಂದು ಪ್ರಿಯಾಂಕರನ್ನು ದಿಢೀರನೇ ಹಗ್ ಮಾಡಿದರು. ಇದನ್ನು ಬೆಡ್‌ರೂಮ್‌ನಿಂದಲೇ ಗಮನಿಸಿದ ಭೂಮಿ ಉರಿದುಕೊಂಡರು. 

ವೇದಿಕೆಯಲ್ಲಿ ಹೇಳಲಾಗದ ಒಂದಿಷ್ಟು ಸತ್ಯ ಹೊರಹಾಕಿದ ದುನಿಯಾ ರಶ್ಮಿ

ಮಾರನೇ ದಿನ ಭೂಮಿ ಕೋಪ ತಣಿಸಲು ಅವರ ಹಿಂದೆ ಸುತ್ತುತ್ತಾ ಕ್ಷಮೆ ಕೇಳಿದ್ದು ತೀರಾ ಅತಿರೇಕ ಅನಿಸುತ್ತಿತ್ತು. 

ನವೆಂಬರ್ 23ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

click me!