
ಸೂಪರ್ ಸಂಡೇ ವಿತ್ ಸುದೀಪದಲ್ಲಿ ಯೆಸ್ ಆರ್ ನೋ ಕ್ವಶ್ಚನ್ ಬಂದಾಗ ಸುದೀಪ್ ಪ್ರಶ್ನೆಯೊಂದನ್ನು ಕೇಳಿದರು.
ಮನೆಯಲ್ಲಿ ಎಲ್ಲರಿಗಿಂತ ಜಾಸ್ತಿ ಬಟ್ಟೆ ದೀಪಿಕಾ ಬಳಿ ಇದೆ ಎಂದು ಸುದೀಪ್ ಕೇಳಿದಾಗ ಎಲ್ಲರೂ ಎಸ್ ಬೋರ್ಡ್ ಹಿಡಿದುಕೊಂಡರೆ ಕಿಶನ್ ಮಾತ್ರ ನೋ ಬೋರ್ಡ್ ಹಿಡಿದುಕೊಂಡಿದ್ದರು.
ಅಪ್ಪಿಕೊಂಡೇ ಈಜುಕೋಳಕ್ಕೆ ಜಿಗಿದ ಜೋಡಿ
ಕಿಶನ್ ಬಳಿ ಸುದೀಪ್ ನೋ ಯಾಕೆ ಎಂದು ಕೇಳಿದಾಗ ನನ್ನ ಬಳಿ 35 ರಿಂದ 40 ಟೀ ಶರ್ಟ್ ಇದೆ, ಶೂ ಗಳ ಕಲೆಕ್ಷನ್ ಸಹ ಇದೆ ಎಂದರು. ಇದೇ ಪ್ರಶ್ನೆ ದೀಪಿಕಾ ಬಳಿ ಕೇಳಿದಾಗ ಇಲ್ಲ ನನ್ನ ಬಳಿಯೇ ಅತಿ ಹೆಚ್ಚಿನ ಬಟ್ಟೆ ಇರುವುದು. ಯಾಕಂದ್ರೆ ನಮ್ಮದೆಲ್ಲಾ ಚಿಕ್ಕ ಚಿಕ್ಕ ಬಟ್ಟೆ ಅಲ್ವಾ ಎಂದಾಗ ಬಿಗ್ ಬಾಸ್ ಮನೆ ನಗೆಯಲ್ಲಿ ತೇಲಾಡಿತು.
ಇದಾದ ಮೇಲೆ ಇದೇ ವಿಚಾರವನ್ನು ಶೈನ್ ಬಳಿ ಕೇಳಲಾಯಿತು. ಹೌದು ವಾರದ ಅಂತ್ಯಕ್ಕೆ ಬಟ್ಟೆ ಬೇಕೆಂದು ದೀಪಿಕಾ ಯಾವಾಗಲೂ ಸ್ಟೋರ್ ರೂಂ ಬಳಿ ಹೋಗಿದ್ದನ್ನೇ ನೋಡಿಲ್ಲ ಎಂದರು. ಓಹೋ ಹಾಗಾದರೆ ಅವರ ಮೇಲೆ ಯಾವಾಗಲೂ ಒಂದು ಕಣ್ಣು ಇಟ್ಟಿರ್ಥಿರಾ ಎಂದು ಸುದೀಪ್ ಶೈನ್ ಕಾಲೆಳೆದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.