ಇದೇನೋ ಗಾಸಿಪ್ಪೋ, ಸತ್ಯ ಸಂಗತಿಯೋ ಗೊತ್ತಾಗುತ್ತಿಲ್ಲ. ಅಧಿಕೃತ ಸುದ್ದಿ ಎಂಬಂತೆ ಮಾಧ್ಯಮಗಳಲ್ಲೇ ಪ್ರಸಾರವಾಗುತ್ತಿದೆ. ಆದರೆ, ಗ್ರಾಂಡ್ ಫೀನಾಲೆ ಸಮೀಪ ಇರುವುದರಿಂದ ಇದು ಸುಮ್ಮನೇ ಫ್ರಾಂಕ್ ಸುದ್ದಿ ಆಗಿರಲಿದೆ ಎಂಬುದು ಹಲವರ ಅಭಿಪ್ರಾಯ.
ಬಿಗ್ ಬಾಸ್ ಕನ್ನಡ ಸೀಸನ್ 10 ಮನೆಯಿಂದ ಸ್ಪರ್ಧಿ ವರ್ತೂರು ಸಂತೋಷ್ ಹೊರಬಿದ್ದಿದ್ದಾರೆ ಎಂಬ ಬ್ರೇಕಿಂಗ್ ನ್ಯೂಸ್ ಎಲ್ಲಾ ಕಡೆ ಹರಿದಾಡುತ್ತಿದೆ. ಕಲರ್ಸ್ ಕನ್ನಡದಲ್ಲಿ ರಾತ್ರಿ 9.00ಕ್ಕೆ ಇಂದಿನ ಸಂಚಿಕೆ ಪ್ರಸಾರವಾಗಬೇಕಿದೆ. ಆದರೆ ಅಷ್ಟರಲ್ಲಿಯೇ ವರ್ತೂರು ಸಂತೋಷ್ ಹೊರಬಿದ್ದಿದ್ದಾರೆ ಎಂಬ ನ್ಯೂಸ್ ಎಲ್ಲಾ ಕಡೆ ಸುತ್ತಾಡುತ್ತಿದ್ದು, ಅದು ಹೇಗೆ ಈ ಮ್ಯಾಟರ್ 'ಔಟ್' ಆಯ್ತು ಎಂಬುದೀಗ ಸುದ್ದಿಯಾಗತೊಡಗಿದೆ.
ಇದೇನೋ ಗಾಸಿಪ್ಪೋ, ಸತ್ಯ ಸಂಗತಿಯೋ ಗೊತ್ತಾಗುತ್ತಿಲ್ಲ. ಅಧಿಕೃತ ಸುದ್ದಿ ಎಂಬಂತೆ ಮಾಧ್ಯಮಗಳಲ್ಲೇ ಪ್ರಸಾರವಾಗುತ್ತಿದೆ. ಆದರೆ, ಗ್ರಾಂಡ್ ಫೀನಾಲೆ ಸಮೀಪ ಇರುವುದರಿಂದ ಇದು ಸುಮ್ಮನೇ ಫ್ರಾಂಕ್ ಸುದ್ದಿ ಆಗಿರಲಿದೆ ಎಂಬುದು ಹಲವರ ಅಭಿಪ್ರಾಯ! ಗ್ರಾಂಡ್ ಫಿನಾಲೆಗೆ ಇನ್ನು ಒಂದೇ ವಾರ ಬಾಕಿಯಿದ್ದು, ಈಗ ಸಂಚಿಕೆ ಪ್ರಸಾರಕ್ಕೆ ಮೊದಲೇ ಎಲಿಮಿನೇಶನ್ ಬಗ್ಗೆ ನ್ಯೂಸ್ ಹೊರಬಿದ್ದಿದೆ ಎಂದರೆ ಅದು ಸುದ್ದಿ ಮಾಡಲೆಂದೇ ಹರಿಬಿಟ್ಟಿರುವ ಸುದ್ದಿ ಎನ್ನವುದು ಲೇಟೆಸ್ಟ್ ನ್ಯೂಸ್! ಅದು ನಿಜವೋ ಸುಳ್ಳೋ ಎಂಬುದು ಇನ್ನೇನು ರಾತ್ರಿ 9.00ಕ್ಕೆ ಜಗತ್ತಿಗೇ ಗೊತ್ತಾಗಲಿದೆ.
ಬಿಗ್ ಬಾಸ್ ಮನೆ ಈಗ ಕುತೂಹಲದ ಕೇಂದ್ರ ಬಿಂಧು. ಏಕೆಂದರೆ, ಇನ್ನೇನು ಎರಡು ವಾರಗಳಲ್ಲಿ ಗ್ರಾಂಡ್ ಫಿನಾಲೆ ನಡೆಯಲಿದೆ. ಎಲ್ಲ ಸ್ಪರ್ಧಿಗಳೂ ಕೂಡ ಬಿಗ್ ಬಾಸ್ ಮನೆಯೊಳಗೆ ಹೋಗಿದ್ದು ಗೆಲ್ಲುವ ಸಂಕಲ್ಪದಿಂದಲೇ ಎಂಬುದು ಎಲ್ಲರಿಗೂ ಗೊತ್ತು. ಆದರೆ ಈಗಾಗಲೇ ಹಲವರು ಅಲ್ಲಿಂದ ಹೊರಬಿದ್ದಾಗಿದೆ. ಉಳಿದಿರುವ ಸ್ಪರ್ಧಿಗಳು ಎಂದರೆ ಅದು ಸಂಗೀತಾ ಶೃಂಗೇರಿ, ಕಾರ್ತಿಕ್ ಮಹೇಶ್, ಡ್ರೋನ್ ಪ್ರತಾಪ್, ತುಕಾಲಿ ಸಂತೋಷ್ ಹಾಗೂ ತನಿಷಾ.
ತಾಂಡವ್‌ಗೆ ಮಗಳಿದ್ದಾಳೆ, ಅಪ್ಪನಿಗೆ ಸತ್ಯ ಹೇಳಿದ ಶ್ರೇಷ್ಠಾ; ಮುಂದೆ ಕಾವ್ಯಾಗೆ ಕಾದಿದ್ಯಾ ಮಾರಿಹಬ್ಬ!?
ವರ್ತೂರು ಸಂತೋಷ್ ಇಂದು ಎಲಿಮಿನೇಟ್ ಆಗಿರುವ ಸುದ್ದಿ ಸುಳ್ಳಾಗಿದ್ದರೆ ವರ್ತೂರು ಸಂತೋಷ್ ಕೂಡ ಮನೆಯಲ್ಲಿ ಇದ್ದಾರೆ ಎನ್ನಬಹುದು. ಗ್ರಾಂಡ್ ಫಿನಾಲೆಯಲ್ಲಿ ಸಾಮಾನ್ಯವಾಗಿ ಒಬ್ಬರು ವಿನ್ನರ್, ಇನ್ನೊಬ್ಬರು ರನ್ನರ್ ಅಪ್ ಹಾಗು ಮತ್ತೊಬ್ಬರು ಮೂರನೇ ಸ್ಥಾನ ಪಡೆದವರು ಎಂದು ಘೋಷಿಸುವುದು ಸಂಪ್ರದಾಯ. ಹೀಗಾಗಿ ಇರುವ ಅಷ್ಟು ಜನರಲ್ಲಿ ಯಾರು ಗೆಲ್ಲಲಿದ್ದಾರೆ ಎಂಬ ಸಂಗತಿಯೀಗ ತೀವ್ರ ಕುತೂಹಲ ಕೆರಳಿಸಿದೆ.
ಕಾರ್ತಿಕ್-ಸಂಗೀತಾ ಬ್ರೇಕ್-ಅಪ್ ಕನ್ಫರ್ಮ್; ಮತ್ತೆ ಪ್ಯಾಚ್-ಅಪ್ ಆಗೋ ಬಗ್ಗೆ ಏನ್ ಹೇಳಿದ್ರು ಸಂಗೀತಾ!?
ಅಂದಹಾಗೆ, ಬಿಗ್ ಬಾಸ್ ಮನೆಯಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ತಿಳಿಯಲು 'JioCinema'ದಲ್ಲಿ ಪ್ರಕಟವಾಗುತ್ತಿರುವ ಬಿಗ್‌ಬಾಸ್ ಕನ್ನಡ ನೇರಪ್ರಸಾರವನ್ನು ವೀಕ್ಷಿಸಬಹುದು. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಬಹುದು. ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ರಾತ್ರಿ 9.30ಕ್ಕೆ, ಶನಿವಾರ-ಭಾನುವಾರ ರಾತ್ರಿ 9.00 ಕ್ಕೆ ವೀಕ್ಷಿಸಬಹುದು.