ತಾಂಡವ್‌ಗೆ ಮಗಳಿದ್ದಾಳೆ, ಅಪ್ಪನಿಗೆ ಸತ್ಯ ಹೇಳಿದ ಶ್ರೇಷ್ಠಾ; ಮುಂದೆ ಕಾವ್ಯಾಗೆ ಕಾದಿದ್ಯಾ ಮಾರಿಹಬ್ಬ!?

Published : Jan 14, 2024, 06:16 PM ISTUpdated : Jan 14, 2024, 07:50 PM IST
ತಾಂಡವ್‌ಗೆ ಮಗಳಿದ್ದಾಳೆ, ಅಪ್ಪನಿಗೆ ಸತ್ಯ ಹೇಳಿದ ಶ್ರೇಷ್ಠಾ; ಮುಂದೆ ಕಾವ್ಯಾಗೆ ಕಾದಿದ್ಯಾ ಮಾರಿಹಬ್ಬ!?

ಸಾರಾಂಶ

ಸುಳ್ಳು ಹೇಳಲು ಯೋಚಿಸುತ್ತಿದ್ದ ಶ್ರೇಷ್ಠಾಗೆ ಇನ್ನು ತಾನು ಸುಳ್ಳು ಹೇಳಿ ಬಚಾವ್ ಆಗುವುದು ಕಷ್ಟ ಎಂದು ಮನವರಿಕೆ ಆಗುತ್ತದೆ. ಅಪ್ಪ ಕೇಳಿದ ಪ್ರಶ್ನೆಗೆ 'ಹೌದು, ತಾಂಡವ್‌ಗೆ ಮಗಳು ಇದ್ದಾಳೆ' ಎಂದಷ್ಟೇ ಹೇಳುತ್ತಾಳೆ.

ಭಾಗ್ಯಲಕ್ಷ್ಮೀ ಸೀರಿಯಲ್‌ನಲ್ಲಿ ಬಾಂಬ್ ಸ್ಫೋಟವಾಗಿದೆ. ಅಂದ್ರೆ, ನಿಜವಾದ ಬಾಂಬ್ ಅಲ್ಲ, ಕಥೆಯಲ್ಲಿ ಬಾಂಬ್‌ ಸ್ಪೋಟವಾಗಿದೆ. ಅಂದರೆ, ಶ್ರೇಷ್ಠಾ ಅಪ್ಪನಿಗೆ ತಾಂಡವ್‌ಗೆ ಮದುವೆ ಆಗಿರುವುದು ಗೊತ್ತಾಗಿದೆ. ಈಗ ಸೀರಿಯಲ್‌ ನಿಜವಾಗಿಯೂ ಕುತೂಹಲದ ಘಟ್ಟ ತಲುಪಿದೆ. ಇಷ್ಟು ದಿನ ವೀಕ್ಷಕರಿಗೆ ಗೊತ್ತಿತ್ತು, ಶ್ರೇಷ್ಠಾಗೆ ಗೊತ್ತಿತ್ತು ತಾಂಡವ್‌ಗೆ ಮದುವೆ ಆಗಿದೆ ಎಂಬ ಸಂಗತಿ! ಆದರೆ, ಇದೀಗ ಸ್ವತಃ ತನ್ನ ಮಗಳ ಮದುವೆ ತಯಾರಿಯಲ್ಲಿರುವ ಶ್ರೇಷ್ಠಾ ಅಪ್ಪನಿಗೆ ತಾಂಡವ್‌ಗೆ ಮದುವೆ ಆಗಿದೆ ಎಂಬ ಸಂಗತಿ ಗೊತ್ತಾಗಿದೆ. 

ಮಗಳ ಮದುವೆ ಭರ್ಜರಿ ತಯಾರಿಯಲ್ಲಿ ಶ್ರೇಷ್ಠಾ ಅಪ್ಪ ತೊಡಗಿಸಿಕೊಂಡಿದ್ದಾನೆ. ಅಲ್ಲಿಯೇ ಓಡಾಡಿಕೊಂಡಿದ್ದ ಶ್ರೇಷ್ಠಾ ಅಪ್ಪನಿಗೆ ಕಾವ್ಯಾ (ಶ್ರೇಷ್ಠಾ ಫ್ರೆಂಡ್) ಯಾರದೋ ಜತೆ ಮಾತನಾಡುವುದು ಕೇಳಿಸುತ್ತದೆ. ಶ್ರೇಷ್ಠಾ ಅಪ್ಪ 'ತಾಂಡವ್‌ ಮಗಳು ತನ್ವಿಗೆ ಆಕ್ಸಿಡೆಂಟ್ ಆಗಿದೆ' ಎಂದು ಕಾವ್ಯಾ ಯಾರದೋ ಬಳಿ ಹೇಳಿದ್ದು ಕೇಳಿ ಹೌಹಾರುತ್ತಾನೆ. ಈ ಸುದ್ದಿಯನ್ನು ಕನ್ಫರ್ಮ್‌ ಮಾಡಿಕೊಳ್ಳಲು ಕಾವ್ಯಾ ಬಳಿ ವಿಚಾರಿಸಿದ ಶ್ರೇಷ್ಠಾ ಅಪ್ಪನಿಗೆ ಕಾವ್ಯಾ ಮೌನ ಸಿಟ್ಟು ತರಿಸುತ್ತದೆ. ತಕ್ಷಣ ಶ್ರೇಷ್ಠಾಳನ್ನೇ ಕೇಳುವನು. 

ಕಾರ್ತಿಕ್-ಸಂಗೀತಾ ಬ್ರೇಕ್‌-ಅಪ್ ಕನ್ಫರ್ಮ್‌; ಮತ್ತೆ ಪ್ಯಾಚ್‌-ಅಪ್ ಆಗೋ ಬಗ್ಗೆ ಏನ್ ಹೇಳಿದ್ರು ಸಂಗೀತಾ!?

ಸುಳ್ಳು ಹೇಳಲು ಯೋಚಿಸುತ್ತಿದ್ದ ಶ್ರೇಷ್ಠಾಗೆ ಇನ್ನು ತಾನು ಸುಳ್ಳು ಹೇಳಿ ಬಚಾವ್ ಆಗುವುದು ಕಷ್ಟ ಎಂದು ಮನವರಿಕೆ ಆಗುತ್ತದೆ. ಅಪ್ಪ ಕೇಳಿದ ಪ್ರಶ್ನೆಗೆ 'ಹೌದು, ತಾಂಡವ್‌ಗೆ ಮಗಳು ಇದ್ದಾಳೆ' ಎಂದಷ್ಟೇ ಹೇಳುತ್ತಾಳೆ. ಪಕ್ಕದಲ್ಲೇ ಇರುವ ಕಾವ್ಯಾ ಶ್ರೇಷ್ಠಾಗೆ 'ಶ್ರೇಷ್ಠಾ, ದಯವಿಟ್ಟು ಎಲ್ಲಾ ಸತ್ಯನೂ ಹೇಳಿಬಿಡು  ಶ್ರೇಷ್ಠಾ. ಇನ್ನೂ ನನ್ನಿಂದ ಮುಚ್ಚಿಡಲು ಸಾಧ್ಯವಿಲ್ಲ' ಎನ್ನುತ್ತಾಳೆ. ಕಾವ್ಯಾ ಕೂಡ ಇನ್ನು ತನ್ನ ಸುಳ್ಳಿಗೆ ಸಪೋರ್ಟ್‌ ಮಾಡುವುದಿಲ್ಲ ಎಂಬುದನ್ನು ಅರಿತ ಶ್ರೇಷ್ಠಾ 'ಹೌದು, ತಾಂಡವ್‌ಗೆ ಹತ್ತನೇ ಕ್ಲಾಸ್ ಓದುತ್ತಿರುವ ಮಗಳಿದ್ದಾಳೆ' ಎಂದಷ್ಟೇ ಹೇಳುತ್ತಾಳೆ. 

ಟ್ರೈಲರ್ ಲಾಂಚ್‌ ವೇಳೆ ಮಾತನಾಡುತ್ತೇನೆ, ಹೇಳಲಿಕ್ಕೆ ತುಂಬಾ ಇದೆ; 'ಗಜರಾಮ' ನಟ ರಾಜವರ್ಧನ್

ಅಲ್ಲಿಗೆ, ಶ್ರೇಷ್ಠಾ ತಲೆಯಲ್ಲಿ ಇನ್ನೂ ಸುಳ್ಳು ಹೇಳುವ ಯೋಚನೆ ಇದೆ ಎನ್ನಬಹುದು. ಏಕೆಂದರೆ, ತಾಂಡವ್‌ಗೆ ಮಗಳು ತನ್ವಿ ಮಾತ್ರವಲ್ಲ, ಮಗ ಗುಂಡಣ್ಣ ಕೂಡ ಇದ್ದಾನೆ. ಅಷ್ಟೇ ಅಲ್ಲ, ಅವನಿಗೆ ಮದುವೆ ಆಗಿದೆ, ಮಗಳಿದ್ದಾಳೆ ಎಂದು ಶ್ರೇಷ್ಠಾ ಹೇಳಿಲ್ಲ. ಮುಂದೆ ಆಕೆ, ಅವಳು ಸಾಕು ಮಗಳು ಎಂದು ಸುಳ್ಳು ಹೇಳಿ ತಾಂಡವ್‌ನನ್ನು ಮದುವೆಯಾಗಲು ಪ್ಲಾನ್ ಮಾಡಬಹುದೇನೋ! ಒಟ್ಟಿನಲ್ಲಿ, ಭಾಗ್ಯಲಕ್ಷ್ಮೀ ಸೀರಿಯಲ್ ಈಗ ಸಾಕಷ್ಟು ಕುತೂಹಲ ಕೆರಳಿಸುತ್ತಿದೆ. ಅಂದಹಾಗೆ, ಕಲರ್ಸ್‌ ಕನ್ನಡದಲ್ಲಿ 'ಭಾಗ್ಯಲಕ್ಷ್ಮೀ' ಸೀರಿಯಲ್ ಸೋಮವಾರದಿಂದ ಶನಿವಾರ ಸಂಜೆ 7-00ಕ್ಕೆ ಪ್ರಸಾರವಾಗುತ್ತಿದೆ.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಸಮಾನ್ಯಳಲ್ಲಿ ಅಸಮಾನ್ಯ ಈ ಪುಟಾಣಿ: Naa Ninna Bidalaare ಹಿತಾ ನಿಬ್ಬೆರಗಾಗುವ ಫೋಟೋಶೂಟ್​!
Bigg Boss ಅಭಿಷೇಕ್​ಗೆ ದೊಡ್ಮನೆಯಿಂದ ಸಿಕ್ಕಿರೋ ಸಂಭಾವನೆ ಎಷ್ಟು? ಫ್ಯಾನ್ಸ್​ ನಿರೀಕ್ಷೆ ಸುಳ್ಳಾಗೋಯ್ತು!