
ಬೆಂಗಳೂರು (ನ.12): ಹುಲಿ ಉಗುರು ಧರಿಸಿದ ಪ್ರಕರಣದಲ್ಲಿ ಜಾಮೀನು ಸಿಕ್ಕ ಬಳಿಕ ಮತ್ತೆ ಬಿಗ್‌ಬಾಸ್ ಮನೆಗೆ ಹೋಗಿರುವ ಹಳ್ಳಿಕಾರ್ ಒಡೆಯ ವರ್ತೂರ್ ಸಂತೋಷ್ ಈ ವಾರ ಕೂಡ ಮನೆಯಲ್ಲಿ ಸೇಫ್ ಆಗಿದ್ದಾರೆ. ಆದರೆ ತಾನು ಮನೆಯಿಂದ ಹೊರ ಹೋಗುತ್ತೇನೆ ದಯವಿಟ್ಟು ನನ್ನನ್ನು ಕಳುಹಿಸಿಕೊಡಿ ಎಂದು ಕಿಚ್ಚ ಸುದೀಪ್ ಮುಂದೆ ಅಂಗಲಾಚಿದ್ದಾರೆ.
ಈ ಬಗ್ಗೆ ಕಲರ್ಸ್ ಕನ್ನಡ ಪ್ರೋಮೋ ಬಿಡುಗಡೆ ಮಾಡಿದ್ದು, ನಿರೂಪಕ ಕಿಚ್ಚ ಸುದೀಪ್ ಅವರು ನೀವು ಸೇಫ್ ಎಂದಿದ್ದಾರೆ. ಇದಕ್ಕೆ ಸಂತೋಷ್ ಹೊರಗಡೆ ಒಂದು ಘಟನೆ ನಡೆಯಿತು. ಅದರಿಂದ ಹೊರಗಡೆ ಬಂದು ಇಲ್ಲಿ ಆಡಬೇಕು ಎಂದುಕೊಂಡಿದ್ದೇ. ಆದರೆ ನನಗೆ ಗೇಮ್ ಮೇಲೆ ಗಮನ ಹರಿಸಲು ಆಗ್ತಿಲ್ಲ. ನಾನು ಹೊರಗಡೆ ಇರಬೇಕು ಎಂದು ಇಷ್ಟಪಡುತ್ತೇನೆ ಎಂದಿದ್ದಾರೆ. ಇದಕ್ಕೆ ಅಲ್ಲಿದ್ದ ಎಲ್ಲಾ ಸ್ಪರ್ಧಿಗಳು ಶಾಕ್ ಆಗಿದ್ದಾರೆ. ಕಾರ್ಯಕ್ರಮದಲ್ಲಿ ನೆರೆದಿದ್ದ ವೀಕ್ಷಕರು ಕೂಡ ಸಂತೋಷ್ ಮಾತಿಗೆ ಶಾಕ್ ಆಗಿದ್ದಾರೆ.
ಸಂಗೀತಾ ಮುಖದಲ್ಲಿ ಮಾತ್ರ ನಗು ಕಾಣ್ತಾ ಇದೆ, ಪ್ರತಾಪ್‌ಗೆ ಒಳ್ಳೇದಾಗಲಿ; ನೆಟ್ಟಿಗರ ಮಾತಿನ ಮರ್ಮವೇನು?
ಆಗ ಸುದೀಪ್ ನಿಮಗೆ ಬಂದಿರುವ ಓಟುಗಳು 34 ಲಕ್ಷದ 15 ಸಾವಿರದ 472 ಎಂದು ತಿಳಿಸಿದ್ದು, ಎಲ್ಲರೂ ಶಾಕ್ ಆದರು. ಆದ್ರೆ ಸಂತೋಷ್ ಮಾತ್ರ ನನಗೆ ಆಗ್ತಾ ಇಲ್ಲ ಅಣ್ಣಾ ಎಂದು ಅತ್ತಿದ್ದಾರೆ. ಇದಕ್ಕೆ ಸುದೀಪ್ ಜನಗಳ ವಿರುದ್ಧವಾಗಿ ನಾನು ಹೋಗಲ್ಲ. ಹೋಗೋದು ಇಲ್ಲ. ನಾನು ನಿಮ್ಮ ನಿರ್ಧಾರಕ್ಕೆ ತುಂಬಾ ಡಿಸಪಾಯಿಂಟೆಡ್ ಆಗಿದ್ದೇನೆ ಎಂದು ಹೇಳಿದ್ದಾರೆ.
ವರ್ತೂರು ಮಾತ್ರ ಮನೆಯ ಡೋರ್ ನಿಂದ ನಾನು ಹೋಗುತ್ತೇನೆ ಎಂದು ಅಳುತ್ತಿರುವ , ಆಗ ಸ್ಪರ್ಧಿಗಳಲ್ಲೇ ನೀವು ಹೋಗಬೇಡಿ ಮತ್ತೆ ಈ ಅವಕಾಶ ಸಿಗುವುದಿಲ್ಲ ಎಂದು ಸಮಾಧಾನ ಮಾಡುತ್ತಿರುವ ಪ್ರೋಮೋ ರಿಲೀಸ್ ಆಗಿದೆ.
BBK 10: ಕಿಚ್ಚನ ಮೆಚ್ಚುಗೆಯ ಚಪ್ಪಾಳೆ ಗಿಟ್ಟಿಸಿಕೊಂಡ ಡ್ರೋನ್ ಪ್ರತಾಪ್! ಏನ್ ಅದೃಷ್ಟ ಗುರೂ ಎಂದ ಫ್ಯಾನ್ಸ್
ಹುಲಿ ಉಗುರು ಧರಿಸಿದ ಪ್ರಕರಣದಲ್ಲಿ ವರ್ತೂರ್ ಅವರನ್ನು ಬಿಗ್ ಬಾಸ್ ಮನೆಯಿಂದ ಬಂಧಿಸಲಾಗಿತ್ತು. ಅದಾದ ಬಳಿಕ ರಾಜ್ಯದಲ್ಲಿ ಅನೇಕ ಸೆಲೆಬ್ರಿಟಿಗಳು, ಅಧಿಕಾರಿಗಳು, ಗಣ್ಯರು ಹುಲಿ ಉಗುರು ಧರಿಸಿದ್ದು ಬೆಳಕಿಗೆ ಬಂದಿತ್ತು. ಒಂದು ವಾರದ ಬಳಿಕ ಜಾಮೀನು ಪಡೆದ ವರ್ತೂರು ಮತ್ತೆ ಬಿಗ್‌ಬಾಸ್ ಮನೆಗೆ ಬಂದು ಎರಡು ವಾರಗಳ ಕಾಲ ಸೇಫ್ ಆಗಿದ್ದಾರೆ. ಬಿಗ್‌ಬಾಸ್ ತಂಡ ಮುಂದೆ ಯಾವ ತೀರ್ಮಾನ ತೆಗೆದುಕೊಳ್ಳಲಿದೆ. ವರ್ತೂರು ಮನೆಯಿಂದ ಹೊರಬರುತ್ತಾರಾ ಅಥವಾ ಅವರ ಮನವೊಲಿಸಿ ಬಿಗ್‌ಬಾಸ್ ಮನೆಯಲ್ಲಿ ಉಳಿಯುತ್ತಾರಾ ಎಂದು ಇಂದಿನ ಸಂಚಿಕೆಯಲ್ಲಿ ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.