
ಬಿಗ್ ಬಾಸ್ ಕನ್ನಡ ಸೀಸನ್ 10' ಶೋದಲ್ಲಿ ಈ ಬಾರಿ ಯಾರು ಕಳಪೆ, ಯಾರು ಉತ್ತಮ ಎಂಬ ಪ್ರಶ್ನೆ ಎದ್ದಿದೆ. ಬಹುತೇಕ ಸ್ಪರ್ಧಿಗಳು ಮೈಕಲ್ ಅಜಯ್, ವರ್ತೂರು ಸಂತೋಷ್ ಹೆಸರನ್ನು ಕಳಪೆ ಪಟ್ಟಕ್ಕೆ ಹೆಸರಿಸಿದ್ದಾರೆ. ಅವರ ಹೆಸರು ಬಂದಿದ್ದೇ ತಡ, ವರ್ತೂರು ಸಂತೋಷ್ ಗರಂ ಆಗಿದ್ದಾರೆ. ಈ ವಾರ ಯಾರು ಉತ್ತಮ, ಯಾರು ಕಳಪೆ ಪಟ್ಟ ಪಡೆದರು ಎಂಬ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಬಿಗ್ ಬಾಸ್ ಕನ್ನಡ 10ರ ಮನೆಯಲ್ಲಿ ವಾರಾಂತ್ಯ ಸಮೀಪಿಸುತ್ತಿದ್ದಂತೆ ಕಳಪೆ-ಉತ್ತಮ ಎನ್ನುವ ಹಾವು ಏಣಿ ಆಟ ಮತ್ತೆ ಶುರುವಾಗಿದೆ. ಬಿಗ್ ಬಾಸ್ ಈ ವಾರ ಮನೆಯ ಸದಸ್ಯರಿಗೆ ಬಹುಮಾನದ ಮೊತ್ತವನ್ನು ಗಳಿಸುವ ಟಾಸ್ಕ್ ನೀಡಿತ್ತು. ಈ ಟಾಸ್ಕ್‌ನಲ್ಲಿ ಯಾರು ಆಡಬೇಕೆಂದು ಸ್ಪರ್ಧಿಗಳ ಮಧ್ಯೆ ಮಾತಿನ ಚಕಮಕಿಗಳೂ ನಡೆದಿದ್ದವು. ಈಗ ಅವೆಲ್ಲ ಮುಗಿದು ಈ ವಾರದ ಕಳಪೆ ಯಾರು, ಉತ್ತಮ ಯಾರು ಎಂಬುದನ್ನು ನಿರ್ಧರಿಸುವ ಹಂತಕ್ಕೆ ಬಂದು ನಿಂತಿದೆ.
ಕಳಪೆ-ಉತ್ತಮ ಯಾರು ಎಂಬ ಬಗ್ಗೆ ಮನೆಯ ಸದಸ್ಯರ ಅಭಿಪ್ರಾಯ ಏನು? ಈ ಬಗ್ಗೆ JioCinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಸಣ್ಣ ಸುಳಿವು ನೀಡಲಾಗಿದೆ. ಕಾರ್ತಿಕ್ ಮಹೇಶ್ ಅವರು ವರ್ತೂರು ಸಂತೋಷ್ ಅವರಿಗೆ ಕಳಪೆ ನೀಡಿದ್ದರೆ, ತನಿಷಾ 'ಮೈಕಲ್' ಕಳಪೆ ಪ್ರದರ್ಶನ ನೀಡಿದ್ದಾರೆ ಎಂದು ಹೇಳಿದ್ದಾರೆ. ಇನ್ನು ತುಕಾಲಿ ಸಂತು ಸಹ ಮೈಕಲ್‌ಗೆ ಕಳಪೆ ಪಟ್ಟ ನೀಡಿದ್ದಾರೆ.
ಭಾಗ್ಯಾಳ ಎದೆಗೊರಗಿ ಅಳುತ್ತಿರುವ ಗುಂಡಣ್ಣ; ತಾಂಡವ್ ಬಳಿ ಕಾಸು ಕೇಳಿ ಕಮಂಗಿಯಾದ್ಲಾ ತನ್ವಿ!
ಕಳಪೆ ಒಟ್ಟೊ ಬಗ್ಗೆ ಅವರು ನೀಡಿರುವ ವಿವರಣೆ ನೋಡುವುದಾದರೆ, ತನಿಷಾ 'ನನ್ನ ಜೊತೆ ಮೈಕಲ್ ಅವರು ಕ್ಯಾಪ್ಟನ್ ಆದಾಗ ನಡೆದುಕೊಂಡು ವರ್ತನೆ ಇಷ್ಟ ಆಗಿರಲಿಲ್ಲ' ಎಂದಿದ್ದರೆ ಕಾರ್ತಿಕ್ 'ವರ್ತೂರು ಸಂತೋಷ್ ಟಾಸ್ಕ್ ಅಂತ ಬಂದಾಗ ಆಡ್ತೀನಿ ಅಂತ ಹೇಳೋದಿಲ್ಲ, ಅದೇ ಬೇಸರ' ಎಂದಿದ್ದಾರೆ. ತಮ್ಮ ಬಗ್ಗೆ ಹಲವು ಹೇಳಿಕೆ ಬಂದ ಬೆನ್ನಲ್ಲೇ ಆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ ವರ್ತೂರು ಸಂತೋಷ್.
ಹಾವು ಏಣಿ ಆಟದಲ್ಲಿ ಸೋತವರು ಯಾರು, ಗೆದ್ದವರು ಯಾರು; ಭವಿಷ್ಯ ಬದಲಾಯಿಸುವ ಕ್ಷಣ!
'ಐದು ಲಕ್ಷದ ಟಾಸ್ಕ್ ವೇಳೆ ನಾನು ಸಾಕಷ್ಟು ರಿಸ್ಕ್ ತೆಗೆದುಕೊಂಡು ಆಡಿದ್ದೇನೆ. ಹಾಗೆ ನೋಡಿದರೆ ನಾನೇನೂ ಸ್ಫೋರ್ಟ್ಸ್ ಫೀಲ್ಡ್‌ನಿಂದ ಬಂದವನಲ್ಲ, ಆದರೆ ಎತ್ತು, ದನಗಳನ್ನು ಪರಿಗಣಿಸಿದರೆ ಸ್ಫೋರ್ಟ್ಸ್ ಹುಟ್ಟುಹಾಕಿದ್ದೇ ನಾವು ಎನ್ನಬಹುದು' ಎಂದು ವರ್ತೂರು ಸಂತೋಷ್ ಗರಂ ಆಗಿ ಹೇಳಿದ್ದಾರೆ. ಒಟ್ಟಾರೆ ಈ ವಾರದ ಕಳಪೆ ಯಾರು ಮತ್ತು ಉತ್ತಮ ಯಾರು ಎಂಬುದು ಪ್ರೊಮೋ ನೋಡಿದ ಮೇಲೂ ಪ್ರಶ್ನಾರ್ಥಕವಾಗಿಯೇ ಉಳಿಯುತ್ತದೆ. ಇದಕ್ಕೆ ಉತ್ತರ ಬೇಕೆಂದರೆ ಇಂದಿನ 'ಬಿಗ್ ಬಾಸ್' ಸಂಚಿಕೆ ವೀಕ್ಷಿಸುವುದೊಂದೇ ದಾರಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.