ಸರಿಗಮಪ ವೇದಿಕೆಯಲ್ಲಿ ಮೊದಲ ಬಾರಿಗೆ ಸಂಗೀತದಿಂದ 'ಕಾಂತಾರ' ದೈವದ ದರ್ಶನ ಮಾಡಿಸಲಾಗಿದ್ದು, ಇದರ ಪ್ರೊಮೋ ರಿಲೀಸ್ ಆಗಿದೆ.
ಸಿನಿ ಕ್ಷೇತ್ರದಲ್ಲಿ ಕಾಂತಾರಸೃಷ್ಟಿಸಿದ ದಾಖಲೆ ಅಷ್ಟಿಷ್ಟಲ್ಲ. ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶಿಸಿರುವ 'ಕಾಂತಾರ' ಸಿನಿಮಾ ತೆರೆಕಂಡಾಗ ಕೇವಲ ಕನ್ನಡ ಸಿನಿಮಾವಾಗಿತ್ತು. ಆದರೆ ನಂತರ ಅದು ಪ್ಯಾನ್ ಇಂಡಿಯಾ ಸಿನಿಮಾವಾಗಿ ಮಿಂಚಿತು. ಸ್ಯಾಂಡಲ್ವುಡ್ ನೆಲದಿಂದ ವಿಶ್ವಾದ್ಯಂತ ಕನ್ನಡದ ಕಂಪನ್ನು ಪಸರಿಸಿದೆ. ದಾಖಲೆಯ ಮೇಲೆ ದಾಖಲೆ ಬರೆದ ಕಾಂತಾರ ಭಾರತದಲ್ಲಿ 362 ಕೋಟಿ ಕಲೆ ಹಾಕಿದರೆ, ವಿಶ್ವಾದ್ಯಂತ 398 ಕೋಟಿ ಕ್ಲಬ್ಗೆ ಸೇರಿಸಿತು. ಕನ್ನಡದಲ್ಲಿ ನಿರ್ಮಿಸಿದ್ದ 'ಕಾಂತಾರ' ನಂತರ ತೆಲುಗು, ಹಿಂದಿ, ತಮಿಳು ವರ್ಷನ್‌ಗಳಲ್ಲಿಯೂ ಡಬ್ ಆಗಿ ಅಲ್ಲಿಂದಲೂ ಹಣ ಹರಿದುಬಂತು.
ಸ್ಯಾಂಡಲ್ವುಡ್ ಡಿವೈನ್ ಎಂದೇ ಖ್ಯಾತಿ ಪಡೆದಿರುವ ರಿಷಬ್ ಶೆಟ್ಟಿ ತಮ್ಮ ಮುಂದಿನ ಚಿತ್ರ ಕಾಂತಾರ 1 ನಲ್ಲಿ ಬ್ಯುಸಿಯಾಗಿದ್ದಾರೆ. ಇದು ಅವರ ಬ್ಲಾಕ್‌ಬಸ್ಟರ್ ಸಿನಿಮಾ ಕಾಂತಾರದ ಪ್ರೀಕ್ವೆಲ್ ಸಿನಿಮಾ ಆಗಿದೆ. ಪ್ರಿಕ್ವೆಲ್ ಸಿನಿಮಾ ಈ ವರ್ಷ ಬಿಡುಗಡೆಯಾಗಲಿದೆ. ಚಿತ್ರತಂಡ ಇನ್ನೂ ಸಿನಿಮಾ ರಿಲೀಸ್ ಡೇಟ್ ಫಿಕ್ಸ್ ಮಾಡಿಲ್ಲ. ಆದರೆ ಸಿನಿಮಾದ ಕೆಲಸಗಳು ವೇಗಗತಿಯಲ್ಲಿ ಸಾಗುತ್ತಿವೆ. ಇದೀಗ ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಶಿವನಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಚರ್ಚೆ ಕೂಡ ನಡೆಯುತ್ತಿದೆ. ಕಾಂತಾರದಲ್ಲಿ, ರಿಷಬ್ ಶೆಟ್ಟಿ ಪಾತ್ರವನ್ನು ಶಿವ ಎಂದು ಹೆಸರಿಸಲಾಗಿದೆ. ಕೊನೆಯಲ್ಲಿ ದೈವಪಾತ್ರಿಯಾಗಿ ಕಾಣಿಸಿಕೊಳ್ಳುತ್ತಾರೆ. ಈಗ ಸೆಟ್ಟೇರುತ್ತಿರುವ ಕಾಂತಾರ 1 ಅದೇ ಸಿನಿಮಾದ ಪ್ರೀಕ್ವೆಲ್ ಸ್ಟೋರಿ ಎಂದು ಹೇಳಲಾಗುತ್ತಿದೆ.
Jodi No.1: ಪತ್ನಿ ಪಿರಮಿಡ್ ಕಟ್ಟೋದ್ ಬಿಡಂಗಿಲ್ಲ, ಪತಿ ಓಡೋದ್ ನಿಲ್ಸಂಗಿಲ್ಲ! ಲಾವಣ್ಯ-ಶಶಿಗೆ ಇದೆಂಥ ಶಿಕ್ಷೆ?
ಇದರ ನಡುವೆಯೇ ಇದೀಗ, ಸಂಗೀತ ವೇದಿಕೆಯಲ್ಲಿ ಮೊದಲ ಬಾರಿಗೆ ಸಂಗೀತದಿಂದ 'ಕಾಂತಾರ' ದೈವದ ದರ್ಶನ ಮಾಡಲಾಗಿದೆ. ಇದರ ಪ್ರೊಮೋ ರಿಲೀಸ್ ಆಗಿದೆ. ಗಾಯಕ ಶ್ರೀಹರ್ಷ ಅವರು ಕಾಂತಾರ ಚಿತ್ರದ ವಿಶ್ವಖ್ಯಾತಿ ಪಡೆದಿರುವ ವರಾಹರೂಪಂ ಹಾಡನ್ನು ಅದ್ಭುತವಾಗಿ ಹಾಡಿದ್ದಾರೆ. ಈ ಹಾಡಿನ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ವೇದಿಕೆಯ ಮೇಲೆ ಬಂದಿದ್ದಾರೆ. ಅವರನ್ನು ಹಂಸಲೇಖ ಸೇರಿದಂತೆ ಎಲ್ಲಾ ತೀರ್ಪುಗಾರರು ಕೊಂಡಾಡಿದ್ದಾರೆ. ಇಂಥದ್ದೊಂದು ಅದ್ಭುತ ದೃಶ್ಯಕಾವ್ಯ ಈ ವಾರದ ಸ ರಿ ಗ ಮ ಪ ಸಂಗೀತ ವೇದಿಕೆಯಲ್ಲಿ ನೋಡಬಹುದಾಗಿದೆ. ವಿಶೇಷವೆಂದರೆ, ಕಾಂತಾರ ಸಿನಿಮಾ ಪ್ರೇಕ್ಷಕರಲ್ಲಿ ದೈವಿ ಶಕ್ತಿಯ ಬಗ್ಗೆ ನಂಬಿಕೆ ಹೆಚ್ಚಿಸುತ್ತಿದೆ. ಇದನ್ನ ನಿರ್ಮಿಸೊ ಸಮಯದಲ್ಲಿ ಚಿತ್ರದ ನಟ-ನಿರ್ದೇಶಕ ರಿಷಬ್ ಶೆಟ್ಟಿ ಮಾಂಸಾಹಾರ ಸೇವನೆ ಬಿಟ್ಟಿದ್ದರೆ ಅದೇ ರೀತಿ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಕೂಡ ಮಾಂಸಾಹಾರ ತ್ಯಜಿಸಿದ್ದರಂತೆ. ಈ ಕುರಿತು ಅವರೇ ಹೇಳಿಕೊಂಡಿದ್ದರು.
ಕಾಂತಾರ-2 ಇನ್ನೂ ಹೆಚ್ಚು ಹೆಸರು ಮಾಡಲು ಕಾರಣವೆಂದರೆ ಅತ್ಯಂತ ಕಡಿಮೆ ಬಜೆಟ್ನಲ್ಲಿ ಇದನ್ನು ನಿರ್ಮಿಸಲಾಗಿತ್ತು. ಇದಕ್ಕೆ ಖರ್ಚು ಮಾಡಿದ್ದು ಕೇವಲ 16 ಕೋಟಿ ರೂಪಾಯಿ. ಈಗ ಸಾಮಾನ್ಯವಾಗಿ ನೂರಾರು ಕೋಟಿ ಒಂದು ಸಿನಿಮಾಕ್ಕೆ ಖರ್ಚು ಮಾಡುವುದು ಮಾಮೂಲಾಗಿದೆ. ಇವುಗಳ ಪೈಕಿ ಪೈಕಿ ಕೆಲವೊಂದು ಬ್ಲಾಕ್‌ಬಸ್ಟರ್ ಎಂದು ಸಾಬೀತಾದರೆ ಹಲವು ತೋಪೆದ್ದು ಹೋಗುವುದು ಇದೆ. ಒಂದು ಚಿತ್ರ ಹೀಗೆಯೇ ಕಮಾಯಿ ಮಾಡುತ್ತದೆ ಎಂದು ಹೇಳುವುದು ಕಷ್ಟವೇ. ಆದರೆ ಅತ್ಯಂತ ಕಡಿಮೆ ಬಂಡವಾಳದ ಚಿತ್ರಗಳೂ ಜಗತ್ಪ್ರಸಿದ್ಧ ಆಗಬಹುದು ಎನ್ನುವುದನ್ನು ತೋರಿಸಿಕೊಟ್ಟವರು ರಿಷಬ್ ಶೆಟ್ಟಿ. ಅದಕ್ಕೆ ಕಾರಣ ಕಾಂತಾರಾ. ಇದೀಗ ಸರಿಗಮಪ ವೇದಿಕೆಯಲ್ಲಿ ಇದರ ರಸದೌತಣ ಉಣಬಡಿಸಲಾಗಿದೆ.
100 ವರ್ಷದ ಹಳೆಯ ಕ್ಯಾಮೆರಾಕ್ಕೆ ಪೋಸ್ ಕೊಟ್ಟ ಡಾ.ಬ್ರೋ: ಕಾಬುಲ್ ಟೆಕ್ನಿಕ್ ವಿವರಿಸಿದ್ದು ಹೀಗೆ...