ಭಾಗ್ಯಾಳ ಎದೆಗೊರಗಿ ಅಳುತ್ತಿರುವ ಗುಂಡಣ್ಣ; ತಾಂಡವ್‌ ಬಳಿ ಕಾಸು ಕೇಳಿ ಕಮಂಗಿಯಾದ್ಲಾ ತನ್ವಿ!

By Shriram Bhat  |  First Published Jan 5, 2024, 2:28 PM IST

ಗುಂಡಣ್ಣನ ಮಗಳು ತನ್ವಿ ಅಪ್ಪನಿಗೆ ಕಾಲ್ ಮಾಡಿ ಮಾತನಾಡುತ್ತಿದ್ದಾಳೆ. 'ಅಪ್ಪಾ. ಯಾಕಪ್ಪ ನಿನ್ನೆ ಕಾಲ್ ರಿಸೀವ್ ಮಾಡಿ ಏನೂ ಮಾತಾಡಿಲ್ಲ' ಎಂದು ಕೇಳುವಳು. ಅದಕ್ಕೆ ತಾಂಡವ್ 'ಏನು, ನೀನು ಕಾಲ್ ಮಾಡಿದ್ಯಾ? ' ಎನ್ನುತ್ತ ಗಾಬರಿಯಾಗುವನು.


ಭಾಗ್ಯಾಳ ಮಗ ಗುಂಡಣ್ಣ ಅಮ್ಮನ ಪಕ್ಕ ಕುಳಿತು ತಾನು ಆಟ ಆಡುವುದಿಲ್ಲ ಎಂದು ಹೇಳುತ್ತಿದ್ದಾನೆ. ಆದರೆ ಭಾಗ್ಯಾಗೆ ಏನೋ ಸಂಕಟವಾಗಿ 'ಯಾಕೆ ಗುಂಡಣ್ಣ. ಆಟ ಆಡೋದಿಲ್ಲ' ಎಂದು ಕೇಳಲು ಆತ 'ನನಗೆ ಆಸಕ್ತಿ ಇಲ್ಲ' ಎನ್ನುತ್ತಾನೆ. ಆದರೆ, ಭಾಗ್ಯಾಗೆ ಆತ ಸುಳ್ಳು ಹೇಳುತ್ತಿದ್ದಾನೆ ಎಂಬುದು ಅರ್ಥವಾಗಿ 'ಯಾಕೆ ಆಟ ಆಡೋದಿಲ್ಲ, ನಿಜವಾಗಿಯೂ ಆಸಕ್ತಿ ಇಲ್ವಾ? ಯಾಕೆ ಸುಳ್ಳು ಹೇಳ್ತಾ ಇದೀಯ? ಅಮ್ಮನ ಹತ್ರ ಸುಳ್ಳು ಹೇಳಿದ್ರೆ ದೇವ್ರು ಶಿಕ್ಷೆ ಕೊಡ್ತಾನೆ ಅಂತ ನಿಂಗೆ ಸ್ಕೂಲಲ್ಲಿ ಹೇಳಿಲ್ವಾ? ಎನ್ನಲು ಗುಂಡಣ್ಣ ಅಳುತ್ತ ಅಮ್ಮನ ಎದೆಗೊರಗುತ್ತಾನೆ. ಆತನ ಅಳು ಹಾಗೂ ಮೌನ ನೋಡಿ ಭಾಗ್ಯಾಗೆ ಗುಂಡಣ್ಣ ಸುಳ್ಳು ಹೇಳುತ್ತಿದ್ದಾನೆ ಎಂದು ಅರ್ಥವಾಗುತ್ತದೆ. 

ಮತ್ತೆ ಮತ್ತೆ ಅಮ್ಮ ಭಾಗ್ಯಾ ಕೇಳಲು ಗುಂಡಣ್ಣ 'ಅದೂ ಅದೂ, ನನ್ನ ಶೂ ಕಿತ್ತೋಗಿದೆ. ನನ್ನ ಯೂನಿಫಾರ್ಮ್ ಕೂಡ ಚಿಕ್ಕದಾಗಿದೆ. ಮೊದಲು ಅಪ್ಪ ಕೊಡಿಸ್ತಾ ಇದ್ರು, ಆದ್ರೆ ಈಗ ಅಪ್ಪ ದುಡ್ಡು ಕೊಡಲ್ಲ. ಸ್ಪೋರ್ಟ್ಸ್‌ ಶೂ ಅದು ನಾಲ್ಕು ಸಾವಿರ ರೂಪಾಯಿ ಇರುತ್ತೆ. ನಿಂಗೆ ಕೊಡಿಸೋಕೆ ಕಷ್ಟ ಆಗುತ್ತೆ ಅಮ್ಮ. ಅದಕ್ಕೇ ನಾನು ಈ ಬಾರಿ ಸ್ಪೋರ್ಟ್ಸ್‌ ಆಡಲ್ಲ' ಎನ್ನುತ್ತಾನೆ. ಆತನ ಮಾತು ಕೇಳಿ ಭಾಗ್ಯಾ ಕಣ್ಣೀರಾಗುತ್ತಾಳೆ. ಆಕೆಗೆ ಏನು ಹೇಳಿ ಸಮಾಧಾನ ಮಾಡಬೇಕು ಎಂದು ತಿಳಿಯದೇ ಕಣ್ಣೀರು ಸುರಿಸುತ್ತ ಮಗನನ್ನು ತಬ್ಬಿಕೊಂಡು ಕುಳಿತಿದ್ದಾಳೆ. 

Tap to resize

Latest Videos

ಇತ್ತ ಗುಂಡಣ್ಣನ ಮಗಳು ತನ್ವಿ ಅಪ್ಪನಿಗೆ ಕಾಲ್ ಮಾಡಿ ಮಾತನಾಡುತ್ತಿದ್ದಾಳೆ. 'ಅಪ್ಪಾ. ಯಾಕಪ್ಪ ನಿನ್ನೆ ಕಾಲ್ ರಿಸೀವ್ ಮಾಡಿ ಏನೂ ಮಾತಾಡಿಲ್ಲ' ಎಂದು ಕೇಳುವಳು. ಅದಕ್ಕೆ ತಾಂಡವ್ 'ಏನು, ನೀನು ಕಾಲ್ ಮಾಡಿದ್ಯಾ? ' ಎನ್ನುತ್ತ ಗಾಬರಿಯಾಗುವನು. 'ಯಾಕಪ್ಪಾ, ನಿನ್ನ ಮೊಬೈಲಿಗೇ ಮಾಡಿದ್ದೆ, ನೀನೇ ರಿಸೀವ್ ಮಾಡಿ ಏನೂ ಮಾತಾಡಿಲ್ಲ. ಆಮೇಲೆ ನೀನು ಮೆಸೇಜ್ ಕೂಡ ಮಾಡಿದೀಯ' ಎನ್ನುವಳು. ಇನ್ನೂ ಗಾಬರಿಯಾದ ತಾಂಡವ್ ' ನಾನು ಮೆಸೇಜ್ ಮಾಡಿದ್ನಾ? ಏನಂತ..? ಎನ್ನುವನು. ಈಗ ಗಾಬರಿಯಾದ ತನ್ವಿ 'ಏನು, ನೀನು ಮೆಸೇಜ್ ಮಾಡಿಲ್ವಾ" ಎನ್ನುವಳು. 

ತಾಂಡವ್‌ಗೆ ಶಾಕ್ ಆಗುವುದು. ಶ್ರೇಷ್ಠಾ ಮೇಲೆ ಡೌಟ್ ಬರುವುದು. ಆದರೆ, ಸದ್ಯಕ್ಕೆ ಏನೂ ಮಾತನಾಡಲಾರ. ಆತನೇ ತಂದುಕೊಂಡ ಪರಿಸ್ಥಿತಿ ಅವನ ಬಾಯಿ ಕಟ್ಟಿದೆ. ಅತ್ತ ಭಾಗ್ಯಾಗೆ ಕೂಡ ದುಃಖದ ಕಟ್ಟೆ ಒಡೆದಿದೆ. ಆದರೆ, ತಾಂಡವ್ ಮನೆ ಬಿಟ್ಟು ಹೋದ ಮೇಲೆ ಮನೆಯ ಜವಾಬ್ದಾರಿಯನ್ನು ಕುಸುಮಾ ವಹಿಸಿಕೊಂಡಿದ್ದಾಳೆ. ಆದರೆ, ಇಳಿ ವಯಸ್ಸಿನಲ್ಲಿ ಅತ್ತೆಗೆ ಯಾರೂ ಭಾರವಾಗಬಾರದು ಎಂಬುದು ಭಾಗ್ಯಾಳ ಆಸೆ. ಈ ಕಾರಣಕ್ಕೆ ಅತ್ತೆ ಭಾರವನ್ನು ತನ್ನ ಹೆಗಲ ಮೇಲೆ ಹಾಕಿಕೊಳ್ಳಲು ಭಾಗ್ಯಾ ಯೋಜನೆ ಹಾಕಿಕೊಂಡಿದ್ದಾಳೆ. ಅದೇ ರೀತಿ, ಈಗ ಅಮ್ಮ ಭಾಗ್ಯಾಳ ಹೆಗಲು ಹಗುರ ಮಾಡಲು ಮಗ ಗುಂಡಣ್ಣ ತನ್ನ ಪುಟ್ಟ ಹೆಗಲು ಕೊಡಲು ರೆಡಿಯಾಗಿದ್ದಾನೆ. 

 

 

click me!