ಸೀತಾ-ರಾಮರ ಮದುವೆ ನಿರ್ವಿಘ್ನವಾಗಿ ನಡೆದಿದೆ. ಆದರೆ ಆರು ದಿನಗಳ ಮದುವೆಯ ಶೂಟಿಂಗ್ನಲ್ಲಿ ಏನೇನು ಮೋಜು ಮಸ್ತಿ ನಡೆಯಿತು ಎಂಬ ಬಗ್ಗೆ ವೈಷ್ಣವಿ ಗೌಡ ಶೇರ್ ಮಾಡಿಕೊಂಡಿದ್ದಾರೆ.
ಸೀತಾ ರಾಮರ ಮದುವೆ ನಿರ್ವಿಘ್ನವಾಗಿ ಮುಗಿದಿದೆ. ಹಲವು ಅಡೆತಡೆಗಳನ್ನು ಮೀರಿ ಮದುವೆ ಯಶಸ್ವಿಯಾಗಿ ನೆರವೇರಿದೆ. ಇವರಿಬ್ಬರ ಮದುವೆಗೆ ಯಾವ ಆತಂಕಗಳೂ ಬರದಿರಲಪ್ಪ ಎಂದುಕೊಂಡವರು ನಿರುಮ್ಮಳಾಗಿದ್ದಾಳೆ. ಮದುವೆ ಮುಗಿಯುವವರೆಗೆ ಇದ್ದ ಆತಂಕವೂ ದೂರವಾಗಿದೆ. ಇಲ್ಲಿಯವರೆಗೂ ಈ ಮದುವೆ ಆಗದಂತೆ ಚಿಕ್ಕಿ ಭಾರ್ಗವಿ ಶತ ಪ್ರಯತ್ನ ಮಾಡುತ್ತಲೇ ಬಂದಿದ್ದಾಳೆ. ಆದರೆ ಎಲ್ಲವೂ ಠುಸ್ ಆಗುತ್ತಲೇ ಇದೆ. ಕೊನೆಯ ಘಳಿಗೆಯಲ್ಲಿ ಸೀತಾಳ ಹೈಡ್ರಾಮಾದಿಂದಾಗಿ ಮದುವೆಯ ಬಗ್ಗೆ ಅನುಮಾನ ಕಾಡಿತ್ತು. ದೇಸಾಯಿಯವರು ಒಂದು ವರ್ಷದಲ್ಲಿ ಮಗುವನ್ನು ಹೆತ್ತು ಕೊಡುತ್ತಾಳೆ ಎಂದು ಸಂಬಂಧಿಕರ ಎದುರು ಹೇಳಿದಾಗ, ಸಿಹಿ ಬಿಟ್ಟು ಬೇರೆ ಮಗು ನನ್ನ ಜೀವನದಲ್ಲಿ ಬರಬಾರದು ಎಂದುಕೊಂಡಿರೋ ಸೀತಾಳಿಗೆ ಆಘಾತವಾಗಿ ಮದುವೆಯೇ ಬೇಡ ಎನ್ನುವ ತೀರ್ಮಾನಕ್ಕೆ ಬಂದಿದ್ದಳು. ಈಗ ಎಲ್ಲವೂ ಬಗೆಹರಿದು ಮದುವೆ ನಡೆದಿದೆ. ಅವರಿಬ್ಬರಿಂದ ಸಿಹಿಯನ್ನು ದೂರ ಮಾಡಲು ಭಾರ್ಗವಿ ಪ್ಲ್ಯಾನ್ ಮಾಡುತ್ತಲೇ ಇದ್ದಾಳೆ. ಗಂಡ-ಹೆಂಡತಿ ಕೋಣೆಯಲ್ಲಿ ಸಿಹಿ ಮಲಗಬಾರದು ಎಂದಿದ್ದಾಳೆ. ಆದರೆ ರಾಮ್ ಸಿಹಿಯನ್ನು ತನ್ನದೇ ಕೋಣೆಯಲ್ಲಿ ಮಲಗಿಸಿಕೊಂಡಿದ್ದಾನೆ. ಹೀಗೆ ಸೀತಾ-ರಾಮ ಪಯಣ ಮುಂದುವರೆದಿದೆ.
ಇದೇ ವೇಳೆ, ಆರು ದಿನಗಳ ಮದುವೆಯ ಸಂಭ್ರಮ ಹೇಗಿತ್ತು? ಅದರ ಶೂಟಿಂಗ್ ಹೇಗಿತ್ತು ಎಂಬ ಬಗ್ಗೆ ಸೀತಾ ಪಾತ್ರಧಾರಿ ವೈಷ್ಣವಿ ಗೌಡ ರೀಲ್ಸ್ನಲ್ಲಿ ಚುಟುಕಾಗಿ ಮಾಹಿತಿ ನೀಡಿದ್ದಾರೆ. ಆರು ದಿನಗಳ ಮದುವೆ ಸಂಭ್ರಮ, ನಿಜವಾದ ಮದುವೆಯಂತೆಯೇ ಅದ್ಧೂರಿಯಾಗಿ ನಡೆದಿದೆ. ಎಲ್ಲಾ ಶಾಸ್ತ್ರಗಳನ್ನೂ ಅಚ್ಚುಕಟ್ಟಾಗಿ ನೆರವೇರಿಸಲಾಗಿದೆ. ಮೆಹಂದಿಯನ್ನೂ ಹಚ್ಚಲಾಗಿದೆ. ಶೂಟಿಂಗ್ ಸೆಟ್ನಲ್ಲಿ ಪ್ರಿಯಾ ಪಾತ್ರಧಾರಿ ಮೇಘನಾ ಶಂಕರಪ್ಪ ಅವರ ಜೊತೆ ನಡೆದ ತರ್ಲೆ ಪ್ರಸಂಗಗಳ ಬಗ್ಗೆಯೂ ರೀಲ್ಸ್ನಲ್ಲಿ ವೈಷ್ಣವಿ ತೋರಿಸಿದ್ದಾರೆ. ಇವರ ಜೊತೆ ಸಿಹಿ ಸೇರಿದಂತೆ ಇತರ ಕಲಾವಿದರೂ ಇದ್ದಾರೆ. ಇದೇ ವೇಳೆ ಮೇಘನಾ ಅವರು ಟೊಮೆಟೊಗೆ ಕನ್ನಡದಲ್ಲಿ ಏನು ಹೇಳುತ್ತಾರೆ ಎಂದು ತಲೆ ತಿಂದಿದ್ದರು. ಇದರ ಬಗ್ಗೆಯೂ ಈ ರೀಲ್ಸ್ನಲ್ಲಿ ತೋರಿಸಲಾಗಿದೆ. ಇದೇ ಕಾರಣಕ್ಕೆ ಒಂದು ಟೊಮೆಟೊ ಕಥೆ ಎಂದು ಇದಕ್ಕೆ ಹೆಸರು ಇಡಲಾಗಿದೆ. ಮದುವೆ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಹನಿಮೂನ್ ಯಾವಾಗ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. ಹನಿಮೂನ್ ವಿಡಿಯೋ ಕೂಡ ಹಾಕಿ ಎನ್ನುತ್ತಿದ್ದಾರೆ. ಹನಿಮೂನ್ನಲ್ಲಿ ಸಿಹಿಯೂ ಬರ್ತಾಳಾ ಎನ್ನುವ ಆತಂಕವೂ ಅಭಿಮಾನಿಗಳಿಗೆ ಕಾಡತೊಡಗಿದೆ!
ಕನ್ನಡದಲ್ಲಿ ಟೊಮ್ಯಾಟೊಗೆ ಏನು ಹೇಳ್ತಾರೆ? ಸೀತಾರಾಮ ಪ್ರಿಯಾಳ ಉತ್ತರಕ್ಕೆ ಫ್ಯಾನ್ಸ್ ಸುಸ್ತು...!
ಈ ಹಿಂದೆ ಕೂಡ ಶೂಟಿಂಗ್ ಕುರಿತು ಹಲವು ವಿಡಯಗಳನ್ನು ನಟಿ ಶೇರ್ ಮಾಡಿಕೊಳ್ಳುತ್ತಲೇ ಬಂದಿದ್ದಾರೆ. ಇದೀಗ ತಮ್ಮ ಎರಡನೆಯ ಮನೆ ಎಂದೇ ಖ್ಯಾತಿ ಪಡೆದಿರುವ ಸೀತಾರಾಮ ಸೀರಿಯಲ್ ಸೆಟ್ ಸೀತಾಳ ಮನೆಯಲ್ಲಿನ ಕೊನೆಯ ದಿನದ ಶೂಟಿಂಗ್ ಕುರಿತು ಮಾಹಿತಿ ನೀಡಿದ್ದಾರೆ. ಮನೆಗಿಂತ ಸೆಟ್ನಲ್ಲಿ ಹೆಚ್ಚು ಹೊತ್ತು ಶೂಟಿಂಗ್ ಸೆಟ್ನಲ್ಲಿ ಇರುವುದರಿಂದ ಇದು ನಮ್ಮ ಸೆಕೆಂಡ್ ಮನೆ ಆಗಿದೆ. ಶೂಟಿಂಗ್ ಸಮಯದಲ್ಲಿ ಥೇಟ್ ವಠಾರ ಹಾಗೂ ಮನೆಯ ಚಿತ್ರವಣವನ್ನು ಇಲ್ಲಿ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಹಳೆಯ ಮನೆಗಳಲ್ಲಿ ಇರುವ ಟೇಪ್ ರೆಕಾರ್ಡರ್, ರೆಡಿಯೋ, ಅಂದು ಬಳಸುತ್ತಿದ್ದ ವಸ್ತುಗಳು ಎಲ್ಲವೂ ಈ ಮನೆಯಲ್ಲಿ ಇವೆ. ಅದರ ಸಂಪೂರ್ಣ ಪರಿಚಯ ಮಾಡಿಸಿದ್ದಾರೆ ನಟಿ. ಮಿಡ್ಲ್ ಕ್ಲಾಸ್ ಮನೆಯ ಸಂಪೂರ್ಣ ಚಿತ್ರಣ ಈ ಸೆಟ್ನಲ್ಲಿ ತೋರಿಸಲಾಗಿದೆ.
ಅಷ್ಟಕ್ಕೂ, ಪ್ರತಿಯೊಬ್ಬ ನಟ-ನಟಿಯರು ಅವರ ಮನೆಗಿಂತಲೂ ಹೆಚ್ಚಾಗಿ ಶೂಟಿಂಗ್ ಸ್ಪಾಟ್ನಲ್ಲಿಯೇ ಇರುತ್ತಾರೆ. ಸಿನಿಮಾಗಳಲ್ಲಿ ಈ ಸ್ಪಾಟ್ ವಿಭಿನ್ನ ಪ್ರದೇಶಗಳಲ್ಲಿ ನಡೆದರೆ, ಸಾಮಾನ್ಯವಾಗಿ ಸೀರಿಯಲ್ಗಳಲ್ಲಿ ಒಂದೇ ಕಡೆ ಸೆಟ್ ಮಾಡಿ ಅಲ್ಲಿಯೇ ಸಂಪೂರ್ಣ ಚಿತ್ರೀಕರಣ ನಡೆಯುತ್ತದೆ. ಇದೇ ಕಾರಣಕ್ಕೆ ಸಂಪೂರ್ಣ ವಾತಾವರಣವನ್ನೇ ಬದಲಾಯಿಸಲಾಗುತ್ತದೆ. ಒಂದು ಸೀರಿಯಲ್ ಐದಾರು ವರ್ಷಗಳು ನಡೆಯುವ ಕಾರಣ, ಇಲ್ಲಿ ಸೆಟ್ ಅತ್ಯಂತ ಪ್ರಾಮುಖ್ಯತೆ ವಹಿಸುತ್ತದೆ. ಬೆಂಗಳೂರಿನಂಥ ನಗರಗಳಲ್ಲಿ ಶೂಟಿಂಗ್ ಮನೆಗಳನ್ನು ಕಟ್ಟಿ ಅದನ್ನು ಬಾಡಿಗೆಗೆ ಕೊಡುವುದು ಇದೆ. ಇನ್ನು ಕೆಲವು ಸೀರಿಯಲ್ಗಳಲ್ಲಿ ತಮಗೆ ಬೇಕಾದಂತೆ ಹಳ್ಳಿಯ ವಾತಾವರಣ ನಿರ್ಮಾಣ ಮಾಡಿಕೊಂಡೋ ಅಥವಾ ಓಣಿ, ವಠಾರದ ರೀತಿಯಲ್ಲಿ ನೈಜ ಚಿತ್ರಣ ಬರುವಂತೆ ಶೂಟಿಂಗ್ ಮನೆಗಳನ್ನು ನಿರ್ಮಿಸಿಕೊಂಡಿರುತ್ತಾರೆ.
ಸೀತಾಳ ಮನೆಯಲ್ಲಿ ಕೊನೆಯ ದಿನದ ಶೂಟಿಂಗ್ ಹೀಗಿತ್ತು ನೋಡಿ... ಸೀತಾರಾಮ ವೈಷ್ಣವಿ ಗೌಡ ಮಾಹಿತಿ