
ಕನ್ನಡ ಕಿರುತೆರೆಯಲ್ಲಿ ಅಕ್ಕ ಧಾರಾವಾಹಿ ಮೂಲಕ ಬಣ್ಣದ ಪ್ರಪಂಚಕ್ಕೆ ಪರಿಚಯವಾದ ಅನುಪಮಾ ಗೌಡ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ ನಂತರ ಮಜಾ ಭಾರತ ಹಾಸ್ಯ ಕಾರ್ಯಕ್ರಮ ನಿರೂಪಣೆ ಮಾಡಿದ್ದರು. ಇದಾದ ಮೇಲೆ ಮತ್ತೆ ನನ್ನಮ್ಮ ಸೂಪರ್ ಸ್ಟಾರ್, ರಾಜಾ ರಾಣಿ, ಸುವರ್ಣ ಸೂಪರ್ ಸ್ಟಾರ್ ಮತ್ತು ಸುವರ್ಣ ಜಾಕ್‌ಪಾಟ್ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ್ದಾರೆ. ಈ ಯಾವುದೋ ಒಂದು ಕಾರ್ಯಕ್ರಮ ನಿರೂಪಣೆಯನ್ನು ಅರ್ಧಕ್ಕೆ ಬಿಟ್ಟಿದ್ದಕ್ಕೆ ಎಷ್ಟು ಕಷ್ಟವಾಯ್ತು ಎಂದು ಹೇಳಿಕೊಂಡಿದ್ದಾರೆ.
'ಆಂಕರಿಂಗ್ ಜರ್ನಿ ಆರಂಭಿಸಿ ಸುಮಾರು ಒಂದುವರೆ ವರ್ಷ ಆಗಿತ್ತು ಚೆನ್ನಾಗಿ ನಡೆಯುತ್ತಿತ್ತು ಆದರೆ ಸುಮಾರು ಕಾರಣಗಳಿಂದ ನನಿಗೋಸ್ಕರ ಒಂದು ಶೋಯಿಂದ ವಾಕೌಟ್ ಮಾಡಿದೆ. ಮತ್ತೆ ಆರಂಭದಿಂದ ಶುರು ಮಾಡುವುದು ಆಗಲ್ಲ ಈ ಸಮಯದಲ್ಲಿ ನನಗೆ ಸುವರ್ಣ ಜಾಕ್‌ಪಾಟ್ ಅವಕಾಶ ಸಿಕ್ಕಾಗ ....ದೇವರೆ ಒಳ್ಳ ಟಿಆರ್‌ಪಿ ಬರಲಿ ಎಂದು ದೇವರಲ್ಲಿ ಎಂದೂ ಬೇಡಿಕೊಂಡಿಲ್ಲ ಆದರೆ ನನ್ನ ಕೈಯಲ್ಲಿ ಮಾಡಲು ಆಗುತ್ತೆ ಅಂತ ನಾನು ಸಾಭೀತು ಮಾಡಬೇಕಿತ್ತು' ಎಂದು ಭಾವುಕಳಾಗಿ ಮಾತನಾಡಿರುವ ಹಳೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಡಾರ್ಲಿಂಗ್ ಜೊತೆ ಸ್ವಿಮ್ಮಿಂಗ್ ಪೂಲ್‌ನಲ್ಲಿ ತನಿಷಾ ಕುಪ್ಪಂಡ; ಅಶ್ಲೀಲ ಕಾಮೆಂಟ್ ವೈರಲ್
'ನನ್ನ ನನ್ನನ್ನು ತುಂಬಾ ಇಷ್ಟ ಪಟ್ಟು ನೋಡಲು ಆರಂಭಿಸಿದ್ದೇ ಸುವರ್ಣ ಸೂಪರ್ ಸ್ಟಾರ್ ಕಾರ್ಯಕ್ರಮದಿಂದ. ನಿರೂಪಕಿ ಶಾಲಿನಿ ಅನಾರೋಗ್ಯದ ಸಮಯದಲ್ಲಿ ನಾನು ಮಾಡಿದ್ದು ಸುಮಾರು 28 ಎಪಿಸೋಡ್‌ಗಳು ಮಾತ್ರ ಮಾಡಿದ್ದು ಆದರೆ ಅದರಿಂದ ನನ್ನ ಧೈರ್ಯ ಹೆಚ್ಚಾಗಿದೆ ಓಕೆ ನಾನು ಕಾಮಿಡಿ ಮಾಡಬಹುದು ಅನಿಸಲು ಶುರುವಾಗಿತ್ತು. ಸೆಲೆಬ್ರಿಟಿಗಳು ಅಥವಾ ಸ್ನೇಹಿತರು ಬಂದ್ರೆ ಸುಲಭವಾಗಿ ಮಾತನಾಡಬಹುದು ಅವರ ಜೊತೆ ತಮಾಷೆ ಮಾಡಬಹುದು ಆದರೆ ಜನ ಸಾಮಾನ್ಯರ ಜೊತೆ ಒಂದು ಸಲ ಅಡ್ಜೆಸ್ಟ್ ಆಗಿಬಿಟ್ಟರೆ ಹೊಂದಿಕೊಂಡು ಬಿಟ್ಟರೆ ಏನು ಬೇಕಿದ್ದರೂ ಸ್ಟೇಜ್ ಮೇಲೆ ಮಾಡಬಹುದು. ಎಂಥಾ ಸಾಧಕರು ಬಂದ್ದರೂ ಧೈರ್ಯದಿಂದ ಮಾತನಾಡಬಹುದು. ಸುವರ್ಣ ಸೂಪರ್ ಸ್ಟಾರ್ ಕಾರ್ಯಕ್ರಮದಿಂದ ಸುವರ್ಣ ಜಾಕ್ಟಾಪ್‌ನಲ್ಲಿ ಅವಕಾಶ ಸಿಕ್ಕಿತ್ತು..ಪ್ರತಿ ವಾರ ಟಿಆರ್‌ಪಿ ಮೆಸೇಜ್ ಮಾಡಿದಾಗ ತುಂಬಾ ಖುಷಿಯಾಗುತ್ತದೆ. ಇಡೀ ತಂಡ ಗೆದ್ದಿದೆ ಆ ನೆಮ್ಮದಿ ತೃಪ್ತಿ ನನಗಿದೆ' ಎಂದು ಅನುಪಮಾ ಗೌಡ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.