'ಲಕ್ಷಣ'ವಾಗಿ ಎಂಟ್ರಿ ಕೊಟ್ಟ ವೈಷ್ಣವಿ; ಏನ್ ಕೆಲಸ ಇಲ್ಲ ಅದಿಕ್ಕೆ ಬಂದಿದ್ದಾಳೆ ಎಂದು ಕೊಂಕು ಮಾಡಿದ ನೆಟ್ಟಿಗರು

Published : Nov 03, 2022, 01:11 PM IST
'ಲಕ್ಷಣ'ವಾಗಿ ಎಂಟ್ರಿ ಕೊಟ್ಟ ವೈಷ್ಣವಿ; ಏನ್ ಕೆಲಸ ಇಲ್ಲ ಅದಿಕ್ಕೆ ಬಂದಿದ್ದಾಳೆ ಎಂದು ಕೊಂಕು ಮಾಡಿದ ನೆಟ್ಟಿಗರು

ಸಾರಾಂಶ

ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟ ವೈಷ್ಣವಿ. ಸಾಫ್ಟ್‌ ಹುಡುಗಿನ ವಿಲನ್ ಮಾಡಲು ಹೊರಟ ಭೂಪತಿ ವಿರುದ್ಧ ನೆಟ್ಟಿಗರು ಗರಂ.....

ಒಂದು ಕಾಲದಲ್ಲಿ ಸೀರಿಯಲ್ ನಾಯಕಿಯರಿಗೆ ಸಿನಿಮಾ ನಾಯಕಿಯರಷ್ಟೇ ಪಾಪ್ಯೂಲಾರಿಟಿ ಸಿಕ್ಕಿತ್ತು. ದಿನ ಸಂಜೆ ಟಿವಿಯಲ್ಲಿ ನೋಡಿ ನೋಡಿ ನಮ್ಮನೆ ಮಕ್ಕಳು ಅನ್ನುವಷ್ಟರ ಮಟ್ಟಕ್ಕೆ ಕ್ರೇಜ್ ಕ್ರಿಯೇಟ್ ಆಗಿತ್ತು. ಆ ಸಮಯದಲ್ಲಿ ಹಿಟ್ ಆಗಿದ್ದು ಅಗ್ನಿಸಾಕ್ಷಿ ಸೀರಿಯಲ್. ಸಿದ್ಧಾರ್ಥ್ ಮತ್ತು ವೈಷ್ಣವಿ ಕಾಂಬಿನೇಷನ್‌ನಲ್ಲಿ ಸುಮಾರು 8-9 ವರ್ಷಗಳ ಕಾಲ ಸಕ್ಸಸ್‌ ಕಂಡಿತ್ತು. ಹೆಂಡ್ತಿ ಅಂದ್ರೆ ಹೀಗೆ ಇರ್ಬೇಕು ಇದೇ ರೀತಿ ಜೀವನ ಮಾಡಬೇಕು ವೈಷ್ಣವಿನೇ ಮದುವೆ ಆಗಬೇಕು ಅನ್ನೋ ಕ್ರೇಜ್ ಹುಡುಗರಲ್ಲಿ ಕ್ರಿಯೇಟ್ ಆಗಿತ್ತು. ಬಿಗ್ ಬಾಸ್ ಸೀಸನ್ 8ರಲ್ಲಿ ವೈಷ್ಣವಿ ಆಫ್‌ಸ್ಕ್ರೀನ್‌ ಕ್ಯಾರೆಕ್ಟರ್‌ ಕೂಡ ಜನರಿಗೆ ಇಷ್ಟವಾಗಿತ್ತು. 

ಬಿಗ್ ಬಾಸ್‌ ಸೀಸನ್ 8ರ ನಂತರ ಅಭಿನಯಕ್ಕೆ ಬ್ರೇಕ್‌ ಕೊಟ್ಟು ಯೂಟ್ಯೂಬ್ ಲೋಕದಲ್ಲಿ ವೈಷ್ಣವಿ ಸಖತ್ ಬ್ಯುಸಿಯಾಗಿ ಬಿಟ್ಟರು. ಸ್ಕಿನ್ ಹೇರ್, ಹೇರ್ ಕೇರ್, ಬ್ಯೂಟಿ ಟಿಪ್ಸ್‌, ಫ್ಯಾಷನ್, ಶಾಪಿಂಗ್, ಟ್ರಿಪ್, ಮನೆ, ಬುಕ್ಸ್‌...ಹೀಗೆ ಪ್ರತಿಯೊಂದು ವಿಚಾರವನ್ನು ವಿಭಿನ್ನವಾಗಿ ತೋರಿಸಿ ಅಪಾರ ಸಂಖ್ಯೆಯಲ್ಲಿ ಮತ್ತಷ್ಟು ಅಭಿಮಾನಿಗಳನ್ನು ಸಂಪಾದನ ಮಾಡಿದ್ದರು. ವೈಷ್ಣವಿ ಮತ್ತೆ ಸೀರಿಯಲ್ ಮಾಡಲ್ವಾ? ಯಾಕೆ ದೂರು ಉಳಿದಿರುವುದು ಎಂದು ಪದೇ ಪದೇ ಪ್ರಶ್ನೆ ಮಾಡುತ್ತಿದ್ದ ಅಭಿಮಾನಿಗಳಿಗೆ ಲಕ್ಷಣ ಧಾರಾವಾಹಿ ಉತ್ತರ ಕೊಟ್ಟಿದೆ.

ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷಣ ಧಾರಾವಾಹಿಯಲ್ಲಿ ಭೂಪತಿ ಗರ್ಲ್‌ಫ್ರೆಂಡ್/ಪತ್ನಿ ಎಂದು ಹೇಳಿಕೊಂಡು ವೈಷ್ಣವಿ ಎಂಟ್ರಿ ಕೊಟ್ಟಿದ್ದಾರೆ. ಇದು ಪಕ್ಕಾ ವಿಲನ್ ಕ್ಯಾರೆಕ್ಟ್ ಆಗಿರುವ ಕಾರಣ ಸೋಷಿಯಲ್ ಮೀಡಿಯಾದಲ್ಲಿ ವೈಷ್ಣವಿ ಕಮ್‌ ಬ್ಯಾಕ್‌ ಬಗ್ಗೆ ವೀಕ್ಷಕರು ಮಿಶ್ರ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಹೀಗಾಗಿ ವಾಹಿನಿಯ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪ್ರಶ್ನೆ ಮಾಡಲಾಗಿತ್ತು. 'ವೈಷ್ಣವಿ ಜೊತೆ ಭೂಪತಿ. ನಿಮ್ಮ ರಿಯಾಕ್ಷನ್ ಏನು? ಕಾಮೆಂಟ್ ಮಾಡಿ' ಎಂದು ಪೋಸ್ಟ್‌ ಮಾಡಿದ್ದರು. 2 ಸಾವಿರಕ್ಕೂ ಕಾಮೆಂಟ್‌ಗಳು ಬಂದಿದೆ. 

Lakshana serial: ಭೂಪತಿನೇ ಮದುವೆ ಆಗೋದಂತೆ ವೈಷ್ಣವಿ, ಭೂಪತಿ ಲೈಫು ಚಿತ್ರಾನ್ನ ಆಗೋಯ್ತಲ್ಲಾ ಶಿವಾ!

ಕಾಮೆಂಟ್ಸ್‌ ಏನು:

- 'ಭೂಪತಿ ಮತ್ತು ವೈಷ್ಣವಿ ಸ್ನೇಹಿತರು. ಭೂಪತಿನೇ ವೈಷ್ಣವಿನ ಕರೆಸಿರುವುದು. ಶ್ವೇತಾಗೆ ಬುದ್ಧಿ ಕಲಿಸುವುದಕ್ಕೆ' 

- 'ಈಗ ವೈಷ್ಣವಿಯವರಿಗೆ ಬೇರೆ ಕೆಲಸ ಇಲ್ಲ. ಅದಿಕ್ಕೆ ಬಂದಿದ್ದಾಳೆ ಅಷ್ಟೆ'

- 'ನಮ್ಮ ರಿಯಾಕ್ಷನ್ ಏನು ಗೊತ್ತಾ... ಇಂತ ಕಚಡ ಧಾರಾವಾಹಿ ನೋಡೋ ಜನಕ್ಕೆ ಬುದ್ಧಿ ಇಲ್ಲ'

- ' ಮೊದಲೇ ನೂರ್ ತರ ಕಥೆ ಈಗ ಇದು ಬೇರೆ ಪಾಪ ನಮ್ಮ ನಕ್ಷತ್ರ. ಏನು ಇಲ್ಲಿ ಟ್ವಿಸ್ಟ್‌ಗೆ ಒಂದು ಅರ್ಥ ಇರಬೇಕು ವೈಷ್ಣವಿ ಬಂದಿರೋದು ಯಾಕೆ ಅಂತ ಗೊತ್ತಿಲ್ಲ ಅದು ನಿಜವಾದ ಅವರ ಪಾತ್ರದಲ್ಲಿ ಬಂದಿರೋದು ಇಷ್ಟ ಆಗ್ತಿಲ್ಲ'

- 'ಮುಂದಿನ ಕಥೆ ಡೈರೆಕ್ಟರ್‌ಗೆ ಗೊತ್ತಿಲ್ಲ ಅದಿಕ್ಕೆ ವೈಷ್ಣವಿ ಎಂಟ್ರಿ ಕೊಟ್ಟಿದ್ದಾರೆ. ಇವರಿಬ್ಬರು ಸ್ನೇಹಿತರು ಇರಬೇಕು ಮನೆ ಮಂದಿ ಮುಂದೆ ನಾಟಕ ಮಾಡುತ್ತಿದ್ದಾರೆ'

ನೆಗೆಟಿವ್ ಕಾಮೆಂಟ್ಸ್‌ ಇರುವುದು ಹೌದು ಆದರೆ ಹೆಚ್ಚಿಗೆ ಪಾಸಿಟಿವ್ ಕಾಮೆಂಟ್ಸ್‌ಗಳು ಬಂದಿರುವ ಕಾರಣ ಲಕ್ಷಣ ತಂಡ ಫುಲ್ ಖುಷ್ ಆಗಿದ್ದಾರೆ. 

ಡಾಕ್ಟರ್‌ ಮಾಡಿರೋ ಯಡವಟ್ಟಿನಿಂದ ಲಕ್ಷಣಾ ಮತ್ತು ಶ್ವೇತಾ ಬೇರೆ ಬೇರೆ ಮನೆ ಸೇರ್ಕೊಳ್ತಾರೆ. ಒಂದು ಹಂತದಲ್ಲಿ ಇದೆಲ್ಲ ರಿವೀಲ್‌ ಆಗುತ್ತೆ. ಬಡ ಕುಟುಂಬದಲ್ಲಿ ಹೀಗಳಿಕೆಗೆ ತುತ್ತಾಗಿದ್ದ ನಕ್ಷತ್ರಾ ಶ್ರೀಮಂತೆಯಾಗ್ತಾಳೆ. ಶ್ರೀಮಂತೆಯಾಗಿದ್ದ ಶ್ವೇತಾ ಬಡಮನೆಗೆ ಬರ್ತಾಳೆ. ಇನ್ನೊಂದೆಡೆ ಶ್ವೇತಾ ಮದುವೆ ಆಗಬೇಕಿದ್ದ ಹುಡುಗನನ್ನು ನಕ್ಷತ್ರಾ ಮನಸಾರೆ ಬಯಸುತ್ತಿರುತ್ತಾಳೆ. ನಕ್ಷತ್ರಾ ತಂದೆ ಚಂದ್ರಶೇಖರ್‌ ಇದನ್ನರಿತು ಶಕುಂತಲಾದೇವಿಗೆ ಬೆದರಿಕೆ ಒಡ್ಡಿ ನಕ್ಷತ್ರಳ ಮದುವೆಯನ್ನು ಬಲವಂತವಾಗಿ ಭೂಪತಿ ಜೊತೆ ಮಾಡ್ತಾರೆ. ಇದರಿಂದ ನಕ್ಷತ್ರಾ ಬದುಕೇ ಬದಲಾಗುತ್ತದೆ. ಶ್ವೇತಾ, ಭೂಪತಿ ತಾಯಿ ಶಕುಂತಲಾ ದೇವಿ ಹೇಗಾದರೂ ಶ್ವೇತಾ ಮತ್ತು ಭೂಪತಿ ಮದುವೆ ಮಾಡಲೇ ಬೇಕು ಅಂದುಕೊಳ್ಳುವಾಗ ಹೊಸತೊಂದು ತಿರುವು ಎದುರಾಗಿದೆ. ವೈಷ್ಣವಿ ಅನ್ನೋ ಹೊಸ ಪಾತ್ರ ಎಂಟ್ರಿಕೊಟ್ಟು ಭೂಪತಿ ಲೈಫು ಚಿಂದಿ ಚಿತ್ರಾನ್ನ ಆಗೋ ಹಾಗೆ ಮಾಡಿದೆ.


 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?