
ರಾಮಾಚಾರಿ ಕಲರ್ಸ್ ಕನ್ನಡದಲ್ಲಿ ರಾತ್ರಿ 9ಕ್ಕೆ ಪ್ರಸಾರವಾಗುತ್ತಿರುವ ಸೀರಿಯಲ್. ಹಾವು ಮುಂಗುಸಿಯಂತೆ ಕಿತ್ತಾಡುತ್ತಿದ್ದ ಚಾರು ಮತ್ತು ಚಾರಿ ನಡುವೆ ದ್ವೇಷ ಮಾಯವಾಗಿದೆ. ರಾಮಾಚಾರಿಯನ್ನ ಅಡಿಗಡಿಗೆ ತುಳಿಯುತ್ತಾ ಸದಾ ಆತನ ಮೇಲೆ ದ್ವೇಷ ಕಾರುತ್ತಿದ್ದ ಚಾರುಲತಾ ಇದೀಗ 'ನನ್ನ ಪಾಲಿಗೆ ನೀನು ಯಾರು ರಾಮಾಚಾರಿ?' ಅಂತ ಕೇಳೋ ಹಾಗಾಗಿದೆ. ಅಷ್ಟಕ್ಕೂ ಇದಕ್ಕೆಲ್ಲ ಕಾರಣವಾದದ್ದು ಚಾರುಲತಾ ತಾಯಿ ಮಾನ್ಯತಾ. ಆಕೆಗೆ ತನ್ನ ಸವತಿ ಶರ್ಮಿಳಾ ಕಂಡರೆ ಸಿಟ್ಟು. ಈಕೆಯ ಭ್ರಷ್ಟಾಚಾರ ಕಂಡು ಉದ್ಯಮಿ ಜೈ ಶಂಕರ್ ತನ್ನ ವ್ಯವಹಾರದ ಜವಾಬ್ದಾರಿಯನ್ನು ಶರ್ಮಿಳಾಗೆ ವಹಿಸಿದ್ದಕ್ಕೆ ಕೋಪಗೊಂಡ ಮಾನ್ಯತಾ ಶರ್ಮಿಳಾಳನ್ನು ಕಾಡಿನಲ್ಲಿ ಕೊಲ್ಲಿಸುವ ಕೆಲಸ ಮಾಡಿದ್ದಳು. ಆದರೆ ಆಕಸ್ಮಿಕವಾಗಿ ಅವಳು ಹೋಗಬೇಕಿದ್ದ ಕಾರಿನಲ್ಲಿ ಮಾನ್ಯತಾ ಮಗಳು ಚಾರುಲತಾಳೇ ಹೋಗಿದ್ದಳು. ಕಾಡಿನಲ್ಲಿ ರೌಡಿಗಳ ಕೈಗೆ ಸಿಲುಕಿ ಸಾವಿನಂಚಿಗೆ ತಲುಪಿದ್ದ ಚಾರುವನ್ನು ತನ್ನ ಪ್ರಾಣ ಒತ್ತೆ ಇಟ್ಟು ರೌಡಿಗಳ ಜೊತೆ ಹೋರಾಡಿ ಜೀವ ಉಳಿಸಿದವನು ರಾಮಾಚಾರಿ. ಆದರೆ ಇದರ ಅರಿವಿಲ್ಲದೇ ತನ್ನನ್ನು ಕೊಲ್ಲಲು ಹೊರಟಿದ್ದು ರಾಮಾಚಾರಿಯೇ ಎಂದು ತಿಳಿದಿದ್ದ ಚಾರುವಿಗೆ ಚಿಕ್ಕಮ್ಮ ಶರ್ಮಿಳಾ ಮಾತು ಕೇಳಿ ಅಚ್ಚರಿ ಆಗಿದೆ. ರಾಮಾಚಾರಿ ಬಗ್ಗೆ ದ್ವೇಷ ಮಾಯವಾಗಿದೆ. ನನ್ನ ಬಗ್ಗೆ ಇಷ್ಟು ಕಾಳಜಿ ತೋರಿಸುವ ನೀನು ನನ್ನ ಪಾಲಿಗೆ ಯಾರು ರಾಮಾಚಾರಿ ಅಂತ ಅವಳು ತನ್ನಲ್ಲೇ ಕೇಳಿಕೊಳ್ಳುತ್ತಿದ್ದಾಳೆ.
ಚಾರುವನ್ನು ಉಳಿಸಲು ಪ್ರಾರ್ಥಿಸಿದ್ದ ಚಾರಿ
ಕಾಡಿನೊಳಗೆ ಸತ್ತೇ ಹೋದಳು ಅನ್ನೋ ಸ್ಥಿತಿ ತಲುಪಿದ್ದ ಚಾರುವನ್ನು ಹೆಗಲಲ್ಲಿ ಹೊತ್ತು ತಂದು ಆಸ್ಪತ್ರೆ ಸೇರಿಸಿದವನು ರಾಮಾಚಾರಿ. ಅಲ್ಲಿಗೆ ಚಾರುವನ್ನು ಕರೆತರುವಾಗ ಆಕೆಯ ನಾಡಿಮಿಡಿತ ಕ್ಷೀಣವಾಗಿತ್ತು. ಆಕೆ ಉಳಿಯೋದಿಲ್ಲ ಅನ್ನೋ ಮಾತನ್ನು ಡಾಕ್ಟರ್ ಹೇಳಿ ಮನೆಯವರನ್ನು ಕರೆಸಿ ಅಂದಿದ್ದರು. ರಾಮಾಚಾರಿ ಇದ್ದಬದ್ದ ದೇವರಲ್ಲೆಲ್ಲ ಪ್ರಾರ್ಥನೆ ಮಾಡಿದ್ದ. ಚಾರುವನ್ನು ಉಳಿಸಲು ಪರಿಪರಿಯಾಗಿ ಕೇಳಿಕೊಂಡಿದ್ದ. ಆದರೆ ಡಾಕ್ಟರ್ ಮನೆಯವರ ಕೈಗೆ ಆಕೆಯ ಡೆತ್ ಸರ್ಟಿಫಿಕೇಟ್ ನೀಡಿದ್ದರು. ಇನ್ನೇನು ಚಾರು ದೇಹವನ್ನು ಆಸ್ಪತ್ರೆಯಿಂದ ತೆಗೆದುಕೊಂಡು ಹೋಗಬೇಕು ಅನ್ನುವಾಗ ಆಕೆಯ ಕಣ್ಣಿಂದ ನೀರು ಬರುತ್ತಿರವುದು ರಾಮಾಚಾರಿಗೆ ಕಂಡಿತು. ತಕ್ಷಣ ಆತ ಇದನ್ನು ವೈದ್ಯರ ಗಮನಕ್ಕೆ ತಂದೆ. ಡಾಕ್ಟರ್ ಮತ್ತೆ ಚಿಕಿತ್ಸೆ ಮುಂದುವರಿಸಿ ಚಾರುವನ್ನು ಉಳಿಸಿದ್ದರು.
Ramachari: ಚಾರು ಸತ್ತೇ ಹೋದಳಾ? ಮಾನ್ಯತಾ ಕೈಯಲ್ಲಿದೆ ಚಾರು ಡೆತ್ ಸರ್ಟಿಫಿಕೇಟ್!
ಶರ್ಮಿಳಾಳಿಂದ ತಿಳಿದ ಸತ್ಯ
ಚಿಕಿತ್ಸೆಯಿಂದ ಎಚ್ಚರಾದ ಚಾರು ತನ್ನನ್ನು ಕಾಡಿನಲ್ಲಿ ಬಿಟ್ಟವನು ರಾಮಾಚಾರಿಯೇ ಎಂದು ತಿಳಿದು ಆತನಿಗೆ ಚಪ್ಪಲಿಯಿಂದ ಹೊಡೀಬೇಕು ಅನ್ನೋ ರೀತಿ ಮಾತಾಡಿದ್ದಳು. ಆಗ ಶರ್ಮಿಳಾ ಅವಳಿಗೆ ಎಲ್ಲ ನಿಜ ಸಂಗತಿ ಹೇಳಿದ್ದಾಳೆ. ನಿನ್ನ ಈ ಬದುಕು ರಾಮಾಚಾರಿ ನೀಡಿದ ಭಿಕ್ಷೆ. ನೀನು ಜೀವನ ಪರ್ಯಂತ ಅವನ ಚಪ್ಪಲಿಯಂತೆ ಬದುಕಿದರೂ ಕಡಿಮೆ ಅನ್ನೋ ಮಾತು ಹೇಳಿದ್ದಾಳೆ. ಇದನ್ನು ಕೇಳಿ ಚಾರುವಿಗೆ ಶಾಕ್ ಆಗಿದೆ. ತನ್ನ ಮತ್ತು ಚಾರಿ ನಡುವಿನ ಸಂಬಂಧದ ಬಗ್ಗೆ ಏನೊಂದೂ ಅರ್ಥವಾಗಲಿಲ್ಲ. ಆದರೆ ದ್ವೇಷದ ಜಾಗದಲ್ಲಿ ಸಣ್ಣ ಪ್ರೀತಿ ಚಿಗುರೊಡೆದಿದೆ. ನನ್ನ ಪಾಲಿಗೆ ನೀನು ಯಾರು ರಾಮಾಚಾರಿ ಅಂತ ಅವಳು ಕೇಳಿದ್ದಾಳೆ.
ಕಣ್ಣೀರಲ್ಲಿ ರಾಮಾಚಾರಿ
ರಾಮಾಚಾರಿ ತನ್ನ ಅತ್ತಿಗೆ ಅಪರ್ಣಾ ಕ್ಯಾನ್ಸರ್(Cancer) ಚಿಕಿತ್ಸೆ(Treatment)ಗೆ ಹಣ ಹೊಂದಿಸಲು ಒದ್ದಾಡುತ್ತಿದ್ದಾನೆ. ಬಬ್ಲಿ ಸಾರ್ ತನ್ನ ಕೈಲಾದ ಸಹಾಯ(Help) ಮಾಡುತ್ತಾರೆ. ಅತ್ತಿಗೆಯ ಸ್ಥಿತಿ ನೆನೆದು ಚಾರಿ, ಮನೆಯವರೆಲ್ಲ ಒಳಗೊಳಗೇ ಕಣ್ಣೀರು ಹಾಕುತ್ತಿದ್ದಾರೆ. ಆದರೆ ಅಪರ್ಣಾ ಬಗೆಗಿನ ಸಂಗತಿ ತಿಳಿಯದ ಚಾರು ಆತ ಕಣ್ಣೀರು ಹಾಕುತ್ತಿರುವುದು ತನ್ನ ಸಲುವಾಗಿಯೇ ಅಂದು ಕೊಂಡಿದ್ದಾಳೆ.
ಅವಳಿಗೆ ನಿಜ(Truth) ಸಂಗತಿ ತಿಳಿದರೆ ಇದೀಗ ಬದಲಾಗಿರುವ ಚಾರು ಈ ಹಿಂದೆ ತಾನು ರಾಮಾಚಾರಿ ಮಾಡಿರೋ ಪ್ರಾಜೆಕ್ಟ್(Project)ನ ಕದ್ದದ್ದನ್ನು ಒಪ್ಪಿಕೊಂಡು ಆ ಹಣವನ್ನು ಹಿಂದಿರುಗಿಸುತ್ತಾಳಾ, ಅಪರ್ಣಾ ಪ್ರಾಣ ಉಳಿಸುತ್ತಾಳಾ? ಅವಳ ಪಾಲಿಗೆ ರಾಮಾಚಾರಿ ಏನಾಗುತ್ತಾನೆ ಅನ್ನೋದನ್ನೆಲ್ಲ ಇನ್ನು ಮುಂದಿನ ಸಂಚಿಕೆ(Episode)ಗಳಲ್ಲಿ ನೋಡಬೇಕು. ರಿತ್ವಿಕ್ ಕೃಪಾಕರ್, ಮೌನಾ ಗುಡ್ಡೆಮನೆ ಮುಖ್ಯಪಾತ್ರಗಳಲ್ಲಿ ನಟಿಸಿದ್ದಾರೆ.
Kannadathi: ಅಮ್ಮಮ್ಮನ ಕೊಲೆ ಯತ್ನದ ಕೇಸ್ ಸಾನ್ಯಾ ಮೇಲೆ ಬೀಳೋ ಕ್ಷಣ ಹತ್ತಿರದಲ್ಲಿದೆ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.