ಒಲವಿನ ನಿಲ್ದಾಣ: ದೇವರ ಪ್ರಸಾದದಲ್ಲೇ ವಿಷ! ನಿಜವಾದ ವಿಲನ್‌ ಮನೇಲೇ ಇದ್ದಾಳೆ!

Published : Nov 02, 2022, 02:12 PM IST
ಒಲವಿನ ನಿಲ್ದಾಣ: ದೇವರ ಪ್ರಸಾದದಲ್ಲೇ ವಿಷ! ನಿಜವಾದ ವಿಲನ್‌ ಮನೇಲೇ ಇದ್ದಾಳೆ!

ಸಾರಾಂಶ

ಒಲವಿನ ನಿಲ್ದಾಣ ಸೀರಿಯಲ್‌ನಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಆಗುತ್ತಿದೆ. ಒಂದು ಕಡೆ ಸಿದ್ಧಾಂತ್‌ಗೆ ಅಂತ ಹೊಡೆದ ಗುಂಡೇಟು ತಾರಿಣಿ ಮೇಲೆ ಬಿದ್ದಿದೆ. ಇನ್ನೊಂದೆಡೆ ಆಕೆ ಅಮ್ಮ ಅಂತಲೇ ಕರೆಯುತ್ತಿದ್ದ ಅಮ್ಮನಿಗಿಂತ ಹೆಚ್ಚು ಪ್ರೀತಿಸುತ್ತಿದ್ದ ಅತ್ತೆಯೇ ಆಕೆಗೆ ವಿಷ ವೂಡಿಸುವುದರಲ್ಲಿದ್ದಾಳೆ.

ಪ್ರೀತಿಯ ಕಣ್ಣಾಮುಚ್ಚಾಲೆ, ಮಲೆನಾಡ ಬದುಕು, ಸಂಬಂಧಗಳ ನಿಜ ಸ್ವರೂಪಗಳನ್ನೆ ತೋರಿಸೋ ಸೀರಿಯಲ್‌ ಒಲವಿನ ನಿಲ್ದಾಣ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ ಆರು ಗಂಟೆಗೆ ಪ್ರಸಾರವಾಗ್ತಿರೋ ಸೀರಿಯಲ್‌ ಇದು, ತಾರಿಣಿ ಇದರ ನಾಯಕಿ, ಸಿದ್ಧಾಂತ್ ನಾಯಕ. ಸಿದ್ಧಾರ್ಥನಿಗೆ ಫೋಟೋಗ್ರಫಿ ಹವ್ಯಾಸ. ಮಲೆನಾಡ ಹುಡುಗಿ ತಾರಿಣಿ. ಬಸ್‌ಸ್ಟಾಪ್‌ನಲ್ಲಿ ಸಿಕ್ಕ ಸಿದ್ಧಾರ್ಥ ತಾರಿಣಿ ಮನೆಗೆ, ಮನಸ್ಸಿಗೆ ಬಂದು ಒಂದಿಷ್ಟು ಸಮಯವಾಗಿದೆ. ಪ್ರೀತಿ ಹುಟ್ಟೋ ಮೊದಲೇ ಇವರಿಬ್ಬರ ನಡುವೆ ನಿಶ್ಚಿತಾರ್ಥವೂ ಆಗಿದೆ. ತಾರಿಣಿಗೆ ಮದುವೆ ಇಷ್ಟ ಇಲ್ಲ ಅಂದುಕೊಂಡು ಸಿದ್ಧಾಂತ್ ತಾನೇ ಅವಳನ್ನು ಪ್ರೀತಿಸುವ ಹುಡುಗ ಅಂತ ಸುಳ್ಳು ಹೇಳಿದ್ದಾನೆ. ಈ ನಡುವೆ ಸಿದ್ಧಾಂತ್ ಮನೆಯಲ್ಲಿ ಏನೇನೋ ಸಮಸ್ಯೆಗಳಿವೆ. ಅದನ್ನು ಸರಿ ಮಾಡೋದಷ್ಟೇ ತನ್ನ ಗುರಿ ಅಂದುಕೊಂಡಿದ್ದ ಸಿದ್ಧಾಂತನಿಗೆ ಕೊನೆಗು ತನಗೆ ತಾರಿಣಿ ಮೇಲೆ ಪ್ರೀತಿ ಇರೋದು ಗೊತ್ತಾಗಿದೆ. ಆ ಪ್ರೀತಿಯನ್ನು ಅವಳ ಮುಂದೆ ಹೇಳಲು ಬರುವಾಗಲೇ ಅವಳಿಗೆ ಗುಂಡೇಟು ತಗುಲಿದೆ. ಇನ್ನೊಂದೆಡೆ ಅವಳು ಅಮ್ಮನಿಗಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಅತ್ತೆಯೇ ಅವಳಿಗೆ ವಿಷವೂಡಿಸಲು ಮುಂದಾಗಿದ್ದಾಳೆ. ಇದು ಸೀರಿಯಲ್‌ನ ಹೊಸ ಟರ್ನಿಂಗ್. ಅತ್ತೆಗ್ಯಾಕೆ ಹೂವಿನಂಥಾ ಸೊಸೆ ಮೇಲೆ ಕೋಪ? ಅಂಥಾ ತಪ್ಪು ತಾರಿಣಿ ಏನು ಮಾಡಿದ್ದಾಳೆ?

ಮದುವೆ ನಿಲ್ಲಿಸಲು ಮುಂದಾಗಿದ್ದ ತಾರಿಣಿ

ತಾರಿಣಿಗೇನೋ ಸಿದ್ಧಾಂತ್ ಮೇಲೆ ಪ್ರೀತಿ ಇದೆ. ಆದರೆ ಸಿದ್ಧಾಂತ್‌ಗೆ ತನ್ನ ಪ್ರೀತಿಗಿಂತಲೂ ಗುರಿ ತಲುಪುವ ಬಗ್ಗೆ ಫೋಕಸ್ (Focus) ಇತ್ತು. ಈ ನಡುವೆ ಅವನಿಗೂ ತಾನು ತಾರಿಣಿಯನ್ನು ಪ್ರೀತಿಸುತ್ತಿರೋದು ಕನ್‌ಫರ್ಮ್ ಆಗಿದೆ. ಅವನು ತನ್ನ ಪ್ರೀತಿಯನ್ನು ಅವಳ ಬಳಿ ಹೇಳಿಕೊಳ್ಳಬೇಕು ಎಂದುಕೊಂಡಿದ್ದ. ಅಷ್ಟರಲ್ಲೇ ತಾರಿಣಿ ಮದುವೆ ಬೇಡ ಎಂದು ಬಿಟ್ಟಿದ್ದಾಳೆ. ಅದಕ್ಕೆ ಸಿದ್ಧಾಂತ್ ತಾರಿಣಿಯ ಬಳಿ ಮಾತನಾಡಲು ಹೋಗಿದ್ದಾನೆ. ಆದ್ರೆ ಆ ಹೊತ್ತಿಗೆ ಗುಂಡಿನ ಸದ್ದು ಕೇಳುತ್ತೆ. ನೋಡಿದ್ರೆ ತಾರಿಣಿಗೆ ಏಟು ಬಿದ್ದಿರುತ್ತೆ.

Ramachari: ನನ್ನ ಪಾಲಿಗೆ ನೀನು ಯಾರು ರಾಮಾಚಾರಿ ಅಂತಿದ್ದಾಳೆ ಚಾರು!

ಜಗದೀಶ್ವರಿಯ ಸುಪಾರಿ
ಸಿದ್ಧಾಂತ್‌ನನ್ನು ಕೊಲ್ಲಲು ಜಗದೀಶ್ವರಿ ಪ್ಲ್ಯಾನ್ ಮಾಡಿರುತ್ತಾಳೆ. ಕಿಲ್ಲರ್‌ಗೆ ಸುಪಾರಿ ಕೊಟ್ಟಿದ್ದಾಳೆ. ಅವಳ ಆಜ್ಞೆಯಂತೆ ಗನ್‍ನಿಂದ ಕಿಲ್ಲರ್ ಗುಂಡು ಹಾರಿಸಿಬಿಟ್ಟಿದ್ದಾನೆ. ಆದ್ರೆ ಅದು ಸಿದ್ಧಾಂತ್ ಬದಲು ತಾರಿಣಿಗೆ ಬೀಳುತ್ತೆ. ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ ತಾರಿಣಿ ಇದೀಗ ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆಗಿ ಮನೆಗೆ ಬಂದಿದ್ದಾಳೆ. ಆ ಹೊತ್ತಿಗೇ ಅವಳು ಅಮ್ಮನಿಗಿಂತ ಹೆಚ್ಚು ಪ್ರೀತಿಸುತ್ತಿದ್ದ ಸೋದರತ್ತೆ ತನ್ನ ಕೈಯ್ಯಾರೆ ಅವಳಿಗೆ ವಿಷ ನೀಡಲು ಹೊರಟಿದ್ದಾಳೆ.

ಸುಮತಿ ಸೇಡು
ಸುಮತಿ ಯಾಕೆ ತಾರಿಣಿಗೆ ವಿಷ ನೀಡಲು ಬಂದಿದ್ದಾಳೆ. ಅಂಥಾ ತಪ್ಪನ್ನು ಹೂ ಮನಸ್ಸಿನ ಹುಡುಗಿ ತಾರಿಣಿ ಏನು ಮಾಡಿದ್ದಾಳೆ ಅನ್ನೋ ಅನುಮಾನ ಪ್ರೇಕ್ಷಕರದು. ಅದಕ್ಕೂ ಉತ್ತರ ಸಿಕ್ಕಿದೆ. ಸುಮತಿಗೆ ಮಕ್ಕಳಾಗಿಲ್ಲ. ಅದಕ್ಕೆ ತಾರಿಣಿಯ ಅಮ್ಮ, ಯಾವಾಗಲೂ ಅವಳನ್ನು ಬಂಜೆ ಅನ್ನುತ್ತಿದ್ದಳು. ಸಭೆ, ಸಮಾರಂಭಗಳಲ್ಲಿ, ನೆಂಟರ ಮುಂದೆ ಅವಮಾನ ಮಾಡಿರುತ್ತಾಳೆ. ಅದಕ್ಕೆ ಆಕೆ ಮಗಳನ್ನೇ ದಾಳ ಮಾಡಿಕೊಂಡು ನೋವು ಕೊಟ್ಟು ಸೇಡು ತೀರಿಸಿಕೊಳ್ಳೋ ಪ್ರಯತ್ನ ಮಾಡ್ತಾ ಇದ್ದಾಳೆ ಸುಮತಿ. ತಾರಿಣಿ ಅಮ್ಮನ ಮೇಲಿನ ಕೋಪವನ್ನು ಮಗಳ ಮೇಲೆ ತೀರಿಸಲು ಹೊರಟಿದ್ದಾಳೆ.

ಮತ್ತೆ ಮಾಯಾಮೃಗ: ಮಾಳವಿಕಾ ಮಗಳಾಗಿ ವಿದ್ಯಾಭೂಷಣರ ಮಗಳು ಮೇಧಾ

ಸುಮತಿ ಮುಖವಾಡ ಬಯಲು
ಸುಮತಿ ತಾರಿಣಿಗೆ ಅಮ್ಮನ ತಮ್ಮನ ಹೆಂಡತಿ(Wife) ಆದರೂ ಅವಳನ್ನು ತಾರಿಣಿ ಯಾವತ್ತೂ ಅವಳನ್ನು ಅತ್ತೆ ಅಂತ ಕರೆದಿಲ್ಲ. ಅಮ್ಮ ಎಂದೇ ಕೂಗುತ್ತಾಳೆ. ಸುಮತಿಗೆ ಮಕ್ಕಳಿಲ್ಲದ ಕಾರಣ ಅವಳು ತಾರಿಣಿಯನ್ನು ಸ್ವಂತ ಮಗಳಂತೆ ನೋಡಿಕೊಳ್ಳುತ್ತಿದ್ದಳು. ಇದೇ ಸತ್ಯ(Truth) ಅಂತ ಇಷ್ಟು ದಿನ ಅದು ನಿಜ ಅಂತ ಅಭಿಮಾನಿಗಳು ಎಂದುಕೊಂಡಿದ್ರು. ಆದ್ರೆ ಆಕೆಯ ಮುಖವಾಡ ಬಯಲಾಗಿದೆ. ಆಕೆ ಸೇಡು ತೀರಿಸಿಕೊಳ್ಳಲು ಈ ರೀತಿ ಪ್ರೀತಿಯ ನಾಟಕ(Drama) ಆಡುತ್ತಿದ್ದಳು.

ದೇವರ ಪ್ರಸಾದದಲ್ಲಿ ವಿಷ
ಗುಂಡೇಟಿನಿಂದ ಚೇತರಿಸಿ ಸಾವಿಂದ(Death) ಪಾರಾಗಿ ಮನೆ ಸೇರಿದ್ದಾಳೆ ತಾರಿಣಿ. ಅವಳಿಗೀಗ ರೆಸ್ಟ್(Rest). ಸುಮತಿ ಇದೇ ಸಂದರ್ಭವನ್ನು ಬಳಸಿಕೊಳ್ತಾ ಇದ್ದಾಳೆ. ತಾರಿಣಿಗೆ ದೇವರ ಪ್ರಸಾದ ಎಂದು ವಿಷ(Poison) ನೀಡಲು ಹೊರಟಿದ್ದಾಳೆ. ಆ ವಿಷವನ್ನು ತಾರಿಣಿ ಕುಡಿದರೆ ಆಸ್ಪತ್ರೆಯಲ್ಲಿ ಉಳಿದ ಜೀವ ಮನೆಯಲ್ಲಿ ಹೋದಂತಾಗುತ್ತದೆ. ಅಡಿಕೆ ಗಣಪ ಈಗಲಾದರೂ ಅವಳನ್ನು ಕಾಯುತ್ತಾನಾ? ಗೊತ್ತಿಲ್ಲ. ವಿನಯಾ ಪ್ರಸಾದ್ ಮಗಳು ಪ್ರಥಮಾ ಪ್ರಸಾದ್ ಅತ್ತೆ ಸುಮತಿಯಾಗಿ ನಟಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Amruthadhaare Serial: ಗೌತಮ್-ಭೂಮಿಕಾ ಜೀವನ ಸರಿಮಾಡೋಕೆ ಯಾರು ಬರಬೇಕೋ ಅವ್ರು ಬಂದ್ರು; ಕೇಡಿಗಳಿಗೆ ಮಾರಿಹಬ್ಬ
Namratha Gowda ಪ್ರೀತಿಯಲ್ಲಿದ್ದಾರಾ? ಆ ಕಪ್ಪು ಬ್ಯಾಂಡ್‌ ಕೊಟ್ಟ ಸುಳಿವಿನ ಬಗ್ಗೆ Karthik Mahesh ಏನಂದ್ರು?