ಸೀತಾರಾಮ ಸೀರಿಯಲ್‌ನ ಸೀತಾ ಮತ್ತು ಶ್ರೀರಾಮ್ ಜೋಡಿ ಹಲವರ ಸೂಪರ್ ಫೇವರಿಟ್. ಇದೀಗ ಈ ಜೋಡಿ ರಿಯಲ್ ಲೈಫಲ್ಲೂ ಎಂಗೇಜ್‌ಮೆಂಟ್ ಮಾಡಿಕೊಂಡರಾ?
ಸೀತಾರಾಮ ಸೀರಿಯಲ್‌ನಲ್ಲಿ ಹಲವರ ಅಚ್ಚುಮೆಚ್ಚಿನ ಜೋಡಿ ಸೀತಾ ಮತ್ತು ರಾಮ. ನೋಡೋದಕ್ಕೆ ಸಖತ್ ಕ್ಯೂಟ್ ಆಗಿರುವ ಈ ಜೋಡಿ ರಿಯಲ್ ಲೈಫಲ್ಲೂ ಒಂದಾದ್ರೆ ಎಷ್ಟು ಚಂದ ಅಂತ ಈ ಸೀರಿಯಲ್ ವೀಕ್ಷಕರು ಬಹಳ ಹಿಂದಿನಿಂದಲೂ ಹೇಳುತ್ತಿದ್ದರು. ಆದರೆ ಈಗಾಗಲೇ ಸೀರಿಯಲ್‌ನಲ್ಲಿ ಫ್ಯಾನ್ಸ್ ಹಾಟ್ ಫೇವರಿಟ್ ಎಂದು ಗುರುತಿಸಿಕೊಂಡ ಜೋಡಿಗಳು ಮದುವೆ ಆದ ಉದಾಹರಣೆ ಕಡಿಮೆ ಇದೆ. 'ಲಕ್ಷ್ಮೀ ಬಾರಮ್ಮ' ಸೀರಿಯಲ್‌ನ ಚಂದನ್ ಮತ್ತು ಕವಿತಾ, ಬಿಗ್‌ಬಾಸ್‌ನ ಚಂದನ್ ಶೆಟ್ಟಿ, ನಿವೇದಿತಾ ಗೌಡ ಅಂಥಾ ಕೆಲವು ಜೋಡಿ ಲೆಕ್ಕಕ್ಕೆ ಸಿಗುತ್ತೆ.
ಲಕ್ಷ್ಮೀ ಬಾರಮ್ಮ ಟೈಮ್‌ನಲ್ಲೇ ಪ್ರಸಾರವಾಗುತ್ತಿದ್ದ 'ಅಗ್ನಿಸಾಕ್ಷಿ' ಸೀರಿಯಲ್ ನೋಡಿದ ಜನ ಅದರಲ್ಲಿ ಹೀರೋಯಿನ್ ಆಗಿದ್ದ ವೈಷ್ಣವಿ ಮತ್ತು ಹೀರೋ ಸಿದ್ಧಾರ್ಥ್ ಪಾತ್ರಧಾರಿ ವಿಜಯ್ ಸೂರ್ಯ ಅವರನ್ನು ಸಖತ್ ಇಷ್ಟಪಟ್ಟರು. ಇವರಿಬ್ಬರೂ ಮದುವೆ ಆಗೇ ಆಗ್ತಾರೆ ಅಂತ ಬೆಟ್ ಕಟ್ಟೋ ತನಕ ವಿಷಯ ಹೋಯ್ತು. ಆದರೆ ವಿಜಯ್ ತಂದೆ ತಾಯಿ ನೋಡಿದ ಹುಡುಗಿಯನ್ನು ಮದುವೆಯಾಗಿ ಗಂಡು ಮಗುವಿನ ತಂದೆಯೂ ಆದರು.
ಆಮೇಲೆ ಈ ಸೀರಿಯಲ್‌ನಿಂದಲೂ ಹೊರಬಂದರು. ಇದಾಗಿ ವೈಷ್ಣವಿ ಮದುವೆ ಬೇರೆ ಒಬ್ಬರ ಜೊತೆ ಫಿಕ್ಸ್ ಆಯ್ತು, ಆಮೇಲೆ ಹುಡುಗನ ಹಿಂದಿದ್ದ ಆರೋಪದ ಹಿನ್ನೆಲೆಯಲ್ಲಿ ಮುರಿದುಬಿತ್ತು.
ಹಾಗೆಂದು 'ಸೀತಾರಾಮ' ಹೀರೋ ಗಗನ್ ಚಿನ್ನಪ್ಪ ಅವರದ್ದು ರಿಯಲ್ ಲೈಫಲ್ಲಿ ಲವ್ ಬ್ರೇಕಪ್ ಕೇಸ್. ಮೂರು ವರ್ಷಗಳ ಕೆಳಗೆ ಒಬ್ಬ ಹುಡುಗಿ ಜೊತೆ ಡೇಟಿಂಗ್ ಮಾಡ್ತಿದ್ದವರು ಆಮೇಲೆ ಬ್ರೇಕಪ್ ಆಗಿ ಬಿಟ್ಟು ಬಿಟ್ಟರು. ಈ ವಿಚಾರವನ್ನು ಗಗನ್ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
ಇದೀಗ ಈ ಗಗನ್ ಚಿನ್ನಪ್ಪ ಅವರೂ ಸಿಂಗಲ್, ಈ ಕಡೆ ವೈಷ್ಣವಿ ಅವರೂ ಸಿಂಗಲ್. ಹಾಗಿದ್ದರೆ ಇವರಿಬ್ಬರ ನಡುವೆ ಎಂಗೇಜ್‌ಮೆಂಟ್ ನಡೆಯಿತಾ ಎಂಬ ಪ್ರಶ್ನೆ ಎದ್ದಿದೆ. ಇದಕ್ಕೆ ಕಾರಣವೂ ಇದೆ.
ಇನ್ನೂ ಮದ್ವೆನೇ ಆಗ್ಲಿಲ್ಲ ಕಣ್ರೋ... ಫಸ್ಟ್ನೈಟ್ ಶುರು ಮಾಡಿಕೊಂಡುಬಿಟ್ರಾ ಎನ್ನೋದಾ ಫ್ಯಾನ್ಸ್!
ಇನ್ನೊಂದೆಡೆ 'ಸೀತಾರಾಮ' ಸೀರಿಯಲ್‌ನಲ್ಲೂ ಇವರಿಬ್ಬರೂ ಲವ್ ಪ್ರಪೋಸ್ ಮಾಡಿ ಒಂದಾಗಿದ್ದಾರೆ. ಬಿಲಿಯನೇರ್ ಬ್ಯುಸಿನೆಸ್‌ಮೆನ್ ಶ್ರೀರಾಮ್ ದೇಸಾಯಿ ಮನೆಯಲ್ಲಿ ಇದಕ್ಕೆ ಒಪ್ಪಿಗೆ ಸಿಗಬಹುದಾ ಎಂಬುದು ಸದ್ಯದ ಪ್ರಶ್ನೆ.
ಇತ್ತ ಸಿಹಿ ಸೂರಿ ಅಜ್ಜನ ಮನಸ್ಸಿಗೆ ಇಷ್ಟವಾಗುವಂತೆ ನಡೆದುಕೊಂಡಿದ್ದಾಳೆ. ಆದರೆ ಅವಳು ಸೀತಾ ಮಗಳು ಎಂಬ ಸತ್ಯ ಅವರಿಗೆ ತಿಳಿದಿಲ್ಲ. ಭಾರ್ಗವಿ ಕೂಡ ಬೇಕಂತಲೇ ಸೂರಿಯಿಂದ ಸಿಹಿ, ಸೀತಾ ಮಗಳು ಎಂಬ ಸತ್ಯವನ್ನು ಮುಚ್ಚಿಟ್ಟಿದ್ದಾಳೆ. ಸೀತಾಳೇ ತನ್ನ ವಿಷಯವನ್ನೆಲ್ಲಾ ಹೇಳಿಕೊಳ್ಳಲು ಹೊರಟಾಗಲು ತಡೆದಿದ್ದಾಳೆ. ಇದೆಲ್ಲವನ್ನೂ ಭಾರ್ಗವಿ ಬೇಕಂತಲೇ ಮಾಡಿದ್ದು, ಸೀತಾ ಮತ್ತು ರಾಮನನ್ನು ಒಂದು ಮಾಡುವುದಕ್ಕಿಂತಲೂ ಸೀತಾಳನ್ನು ಸಂಪೂರ್ಣವಾಗಿ ತನ್ನಿಂದ ದೂರ ಮಾಡಲು ಹೀಗೆ ಮಾಡುತ್ತಿದ್ದಾಳೆ. ಸೀತಾ ಜೊತೆ ನಯವಾಗಿ ಮಾತನಾಡಿದ ಭಾರ್ಗವಿ ಊಟಕ್ಕೆಂದು ಸೀತಾ ಮತ್ತು ರಾಮನನ್ನು ಕರೆಯಲು ಬಂದ ಭಾರ್ಗವಿ ಈಗ ಸೀತಾ ಜೊತೆಗೆ ಮಾತನಾಡಿದ್ದಾಳೆ. ರಾಮ ಮೇಲಿನ ಪ್ರೀತಿಯಿಂದಾಗಿ ಅವನಿಗೆ ಹತ್ತಿರವಾಗುವವರನ್ನೆಲ್ಲಾ ಅನುಮಾನಿಸುತ್ತಿದ್ದೆ. ಹಾಗಾಗಿ ನಿಮ್ಮ ಜೊತೆಗೆ ಸ್ವಲ್ಪ ರೂಡ್ ಆಗಿ ನಡೆದುಕೊಳ್ಳುತ್ತಿದ್ದೆ ಎಂದು ಹೇಳುತ್ತಾಳೆ. ನಿನ್ನಲ್ಲಿ ಹುಡುಕಿದರೂ ಒಂದು ಹುಳುಕೂ ಸಿಗುವುದಿಲ್ಲ ಎಂದು ಭಾರ್ಗವಿ ರಾಮಗೆ ಕೇಳುವಂತೆ ಸೀತಾಳನ್ನು ಹೊಗಳುತ್ತಿರುತ್ತಾಳೆ. ಭಾರ್ಗವಿ ಮಾಸ್ಟರ್ ಮೈಂಡ್ ಬಗ್ಗೆ ಇಬ್ಬರಿಗೂ ಅರ್ಥವಾಗುವುದಿಲ್ಲ.
ಸೀತಾ ಅಂತೂ ಚಿಕ್ಕಿ ತುಂಬಾ ಒಳ್ಳೆಯವರು ಎಂದು ನಂಬಿದ್ದಾಳೆ. ಈಗ ಸೀತಾರಾಮದ ಜೋಡಿಹಕ್ಕಿ ಸೀತಾ ಮತ್ತು ಶ್ರೀರಾಮ್ ಅಂದರೆ ರಿಯಲ್ ಲೈಫಿನ ಗಗನ್ ಮತ್ತು ವೈಷ್ಣವಿ ರಿಯಲ್ ಲೈಫಲ್ಲೂ ಒಂದಾಗ್ತಾರ ಅನ್ನೋ ಪ್ರಶ್ನೆ ಹುಟ್ಟಲು ಕಾರಣ ವೈಷ್ಣವಿ ಶೇರ್ ಮಾಡಿರುವ ಒಂದು ಫೋಟೋ. ಇದರಲ್ಲಿ ವೈಷ್ಣವಿ ಬೆರಳಿಗೆ ಗಗನ್ ಉಂಗುರ ಹಾಕುತ್ತಿದ್ದಾರೆ. ಇದು ರೀಲೋ ರಿಯಲ್ಲೋ ಅಂತ ವೀಕ್ಷಕರು ಕನ್‌ಫ್ಯೂಸ್ ಮಾಡಿಕೊಳ್ಳುತ್ತಿದ್ದಾರೆ.
ಆಗ ಆ ಕೆಲಸದೋಳು, ಈಗ ಈ ಕೆಲಸದೋಳು... ಕಥೆ ಸಿಕ್ತಿಲ್ವಾ ಕೇಳಿದ ಭಾಗ್ಯಲಕ್ಷ್ಮಿ ಅಭಿಮಾನಿಗಳು!