ಅವ್ಳನ್ನ ಮನಸ್ಸಲ್ಲಿ ಇಟ್ಕೊಂಡು ನಿನ್ನನ್ನ ಮದ್ವೆಯಾಗೋ ಒತ್ತಡವಿತ್ತು; ವೈಷ್ಣವ್ ಮಾತಿಗೆ ಮೌನವಾದಳೇ ಮಹಾಲಕ್ಷ್ಮೀ!

Published : Nov 15, 2023, 06:06 PM ISTUpdated : Nov 15, 2023, 06:13 PM IST
ಅವ್ಳನ್ನ ಮನಸ್ಸಲ್ಲಿ ಇಟ್ಕೊಂಡು ನಿನ್ನನ್ನ ಮದ್ವೆಯಾಗೋ ಒತ್ತಡವಿತ್ತು; ವೈಷ್ಣವ್ ಮಾತಿಗೆ ಮೌನವಾದಳೇ ಮಹಾಲಕ್ಷ್ಮೀ!

ಸಾರಾಂಶ

ವೈಷ್ಣವ್ ಎದುರಿನಲ್ಲಿ ನಿಂತು ಲಕ್ಷ್ಮೀ ತನ್ನನ್ನು ಮದುವೆಯಾಗಿದ್ದು ಆಕಸ್ಮಿಕವೇ ಎಂದು ಪ್ರಶ್ನಿಸುತ್ತಾಳೆ. 'ನಿಮಗೆ ನನ್ನ ಕುಟುಂಬದ ಜತೆ ಒಪ್ಪಂದವಾಗಿ ತರಾತುರಿಯಲ್ಲಿ ಮದುವೆ ಆಗದೇ ಇದ್ದರೆ ಬಹುಶಃ ನೀವು ನನ್ನನ್ನು ಮದುವೆಯೇ ಆಗುತ್ತಿರಲಿಲ್ಲವೇನೋ, ನಿಮಗೆ ಸಾಕಷ್ಟು ಒತ್ತಡ ಇರದೇ ಇದ್ದರೆ, ನಿಮಗೆ ಸಾವಿರಾರು ಆಯ್ಕೆಗಳಿದ್ದರೆ ಬಹುಶಃ ನೀವು ನಾನು ನಿಮ್ಮ ಕಣ್ಣಿಗೆ ಕೂಡ ಬೀಳುತ್ತಿರಲಿಲ್ಲವೇನೋ'

ಕಲರ್ಸ್‌ ಕನ್ನಡದಲ್ಲಿ ಸೋಮವಾರದಿಂದ ಶನಿವಾರ ರಾತ್ರಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಸೀರಿಯಲ್‌ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸಿಕೊಳ್ಳುತ್ತ ಸಾಗಿದೆ. ಪ್ರತಿ ಸಂಚಿಕೆಯಲ್ಲೂ ವೀಕ್ಷಕರು, ಲಕ್ಷ್ಮೀ ಬಾರಮ್ಮ ಅಭಿಮಾನಿಗಳು ವೈಷ್ಣವ್ ಮತ್ತು ಮಹಾಲಕ್ಷ್ಮೀ ಹತ್ತಿರವಾಗುವುದನ್ನೇ ಕಾಯುತ್ತಿದ್ದಾರೆ, ಅದೇ ಆಗುತ್ತಿದೆ ಕೂಡ. ಇತ್ತೀಚೆಗೆ ವೈಷ್ಣವ್ ಇಷ್ಟದಲ್ಲಿ ಸಾಕಷ್ಟು ಬದಲಾವಣೆಯಾಗಿದೆ, ಮಹಾಲಕ್ಷ್ಮೀ ಬಗ್ಗೆ ವೈಷ್ಣವ್‌ಗೆ ಈಗ ಗೌರವದ ಜತೆಗೆ ಒಲವೂ ಕೂಡ ಹೆಚ್ಚಾಗುತ್ತಿದೆ. ಬಹುಶಃ ಇದು ಪ್ರೇಕ್ಷಕರಿಗೂ ಇಷ್ಟವಾಗುತ್ತಿದೆ. 

ವೈಷ್ಣವ್ ಎದುರಿನಲ್ಲಿ ನಿಂತು ಲಕ್ಷ್ಮೀ ತನ್ನನ್ನು ಮದುವೆಯಾಗಿದ್ದು ಆಕಸ್ಮಿಕವೇ ಎಂದು ಪ್ರಶ್ನಿಸುತ್ತಾಳೆ. 'ನಿಮಗೆ ನನ್ನ ಕುಟುಂಬದ ಜತೆ ಒಪ್ಪಂದವಾಗಿ ತರಾತುರಿಯಲ್ಲಿ ಮದುವೆ ಆಗದೇ ಇದ್ದರೆ ಬಹುಶಃ ನೀವು ನನ್ನನ್ನು ಮದುವೆಯೇ ಆಗುತ್ತಿರಲಿಲ್ಲವೇನೋ, ನಿಮಗೆ ಸಾಕಷ್ಟು ಒತ್ತಡ ಇರದೇ ಇದ್ದರೆ, ನಿಮಗೆ ಸಾವಿರಾರು ಆಯ್ಕೆಗಳಿದ್ದರೆ ಬಹುಶಃ ನೀವು ನಾನು ನಿಮ್ಮ ಕಣ್ಣಿಗೆ ಕೂಡ ಬೀಳುತ್ತಿರಲಿಲ್ಲವೇನೋ' ಎಂದು ಲಕ್ಷ್ಮೀ ವೈಷ್ಣವ್‌ನನ್ನು ಪ್ರಶ್ನಿಸಿ ಉತ್ತರಕ್ಕಾಗಿ ಕಾಯುತ್ತಿದ್ದಾಳೆ. ಅದಕ್ಕೆ ವೈಷ್ಣವ್ ತುಂಬಾ ಮಾರ್ಮಿಕ ಉತ್ತರ ನೀಡುತ್ತಾನೆ.

ಸೋತರೂ ತುಕಾಲಿ ಸಂತು ಜತೆ ಕುಣಿದಾಡುತ್ತ ಬಂದ ತನಿಷಾ, ಪಿಸುಧ್ವನಿಯಲ್ಲಿ ಗೊಣಗಿದ ವಿನಯ್ 

ನನಗೆ ನೀನು ಒಂದು ಆಯ್ಕೆಯಲ್ಲ. ನಾನು ಮೊದಲೊಂದು ಲವ್ ಮಾಡಿ, ಬ್ರೇಕಪ್‌ ಆಗಿ ಬಳಿಕ ನಿನ್ನನ್ನು ಮದುವೆಯಾಗುತ್ತಿರುವ ಕಾರಣಕ್ಕೆ ನನಗೆ ಸ್ವಲ್ಪ ಬೇಜಾರಿತ್ತು. ಆದರೆ, ನಿನ್ನಂಥ ಹುಡುಗಿ ಯಾರಿಗೇ ಸಿಕ್ಕರೂ ಖುಷಿಯಿಂದ ಮದುವೆಯಾಗುತ್ತಾರೆ. 'ನನಗೆ ಒಂದು ಲವ್ ಇದೆ, ಅವ್ಳನ್ನ ಮನಸ್ಸಲ್ಲಿ ಇಟ್ಕೊಂಡು ನಿನ್ನ ಮದ್ವೆಯಾಗ್ತಿದೀನಿ ಎಂಬ ನೋವು ಇತ್ತು. ಅದೊಂದು ಬ್ಯಾಜೇಜ್ ಇಲ್ಲ ಅಂದಿದ್ರೆ, ನಾನು ತುಂಬಾ ಖುಷಿಯಿಂದ ನಿನ್ನ ಮದ್ವೆಯಾಗ್ತಿದ್ದೆ. ದೇವ್ರು ಕೊಡೋದು ಕೊಟ್ಟ, ನಿನ್ನಂಥ ಹುಡ್ಗಿ ನನಗೆ ಸಿಕ್ಕಿದ್ದು ತುಂಬಾ ಅದೃಷ್ಟ' ಎನ್ನುತ್ತಾನೆ ವೈಷ್ಣವ್. 

ನಮ್ಮಪ್ಪಂಗೆ ನಾನೇ ಹುಟ್ಟಿರೋದು, ನೀವ್ಯಾರಾದ್ರೂ ಹುಟ್ಟಿದ್ರೆ ಬಂದು ಶೋಕಿ ಮಾಡಿ; ಹೀಗೆ ಹೇಳಿದ್ರಾ ವರ್ತೂರು ಸಂತೋಷ್

ಅನಿರೀಕ್ಷಿತವಾಗಿ ವೈಷ್ಣವ್ ಬಾಯಿಂದ ಬಂದ ಉತ್ತರವನ್ನು ಕೇಳಿ, ಮನಸ್ಸಿನಲ್ಲಿ ತುಂಬಾ ದಿನಗಳಿಂದ ಹೆಪ್ಪುಗಟ್ಟಿದ್ದ ಪ್ರಶ್ನೆಯನ್ನು ಕೇಳಿದ್ದ ಮಹಾಲಕ್ಷ್ಮೀಗೆ ತುಂಬಾ ಸಂತೋಷವಾಯಿತು. ಅವಳ ಬಾಯಿಂದ ಮಾತೇ ಹೊರಡಲಿಲ್ಲ. ವೈಷ್ಣವ್ ಆಕೆಯ ಮನಸ್ಸನ್ನು ಅರ್ಥ ಮಾಡಿಕೊಂಡವನಂತೆ, ಮುಗುಳ್ನಗಲು ಮಹಾಲಕ್ಷ್ಮೀಗೆ ಸ್ವರ್ಗವೇ ಧರೆಗಿಳಿದು ಬಂದಂತೆ ಭಾಸವಾಗಿದೆ. ಪ್ರಮೋ ನೋಡಿಯೇ ಖುಷಿಯಾಗುತ್ತಿರುವ ವೀಕ್ಷಕರಿಗೆ, ಇಂದಿನ ಸಂಚಿಕೆ ಭಾರೀ ಸಂತೋಷ ನೀಡುವುದರಲ್ಲಿ ಸಂದೇಹವಿಲ್ಲ ಎನ್ನಬಹುದು. ಅಂದಹಾಗೆ, ಕಲರ್ಸ್‌ ಕನ್ನಡದಲ್ಲಿ ಸೋಮವಾರದಿಂದ-ಶನಿವಾರ ರಾತ್ರಿ 7.30ಕ್ಕೆ 'ಲಕ್ಷ್ಮೀ ಬಾರಮ್ಮ'ಪ್ರಸಾರವಾಗುತ್ತಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?