
ಎಂಟಿವಿ ರೋಡೀಸ್ ಸೀಸನ್ 19 ಶುರುವಾಗಿ ಒಂದಿಷ್ಟು ಸಮಯ ಆಯ್ತು. ಇದು ರೋಸ್ಟಿಂಗ್‌ಗೆ ಅಂತಲೇ ಇರೋ ಪ್ರೋಗ್ರಾಂ. ನಿಮ್ಮನ್ನ ಯಾವ ಲೆವೆಲ್‌ಗೆ ರೋಸ್ಟ್ ಮಾಡ್ತಾರೆ ಅಂದರೆ ಸಾಧಾರಣ ಗುಂಡಿಗೆ ಇದ್ದೋರು ಈ ಶೋನಲ್ಲಿ ಭಾಗವಹಿಸೋದಕ್ಕೆ ಸುತಾರಾಂ ಒಪ್ಪೋದಿಲ್ಲ. ಇದ್ರಲ್ಲಿ ಒಂದು ಕಡೆ ಪಾರ್ಟಿಸಿಪೆಂಟ್ಸ್ ನಡುವೆ ವಾಗ್ಯುದ್ಧ ನಡೆದರೆ ಮತ್ತೊಮ್ಮೆ ಗ್ಯಾಂಗ್ ಲೀಡರ್ಸ್ ನಡುವೆ ಮಾತಿನ ಮಾರಾಮಾರಿ ನಡೆಯುತ್ತೆ. ಪ್ರಿನ್ಸ್ ನೆರೂಲ ಮತ್ತು ರೆಹಾ ಚಕ್ರೋಬರ್ತಿ ನಡುವೆ ಇದೇ ಶೋನಲ್ಲಿ ನಾಲ್ಕೈದು ದಿನಗಳ ಹಿಂದೆ ಒಂದು ಟಾಕ್ ವಾರ್ ನಡೆದಿತ್ತು. ಅದು ಎಂಥಾ ಕೆಟ್ಟಾ ಕೊಳಕು ಆರ್ಗ್ಯುಮೆಂಟ್ ಆಗಿತ್ತು ಅಂದ್ರೆ ನೋಡುವವರ ತಲೆಯ ಪಿತ್ತ ನೆತ್ತಿಗೇರೋವಷ್ಟು. ಈ ಶೋನಲ್ಲಿ ಶುರುವಾದ ಆರ್ಗ್ಯುಮೆಂಟ್ ಕೆಲವೊಮ್ಮೆ ಪರ್ಸನಲ್ ಲೆವೆಲ್‌ಗೂ ಹೋಗೋದಿದೆ. ಪ್ರಿನ್ಸ್ ಈ ಬಗ್ಗೆ ಸಂದರ್ಶನವೊಂದರಲ್ಲಿ ತನ್ನ ಗೋಳನ್ನು ತೋಡಿಕೊಂಡಿದ್ದರು. ರೇಹಾ ಬಗ್ಗೆ ಸಂದರ್ಶನದಲ್ಲೂ ಕಂಪ್ಲೇಂಟ್ ಮಾಡಿದ್ದರು.
ಇರಲಿ, ಈಗ ವಿಷಯಕ್ಕೆ ಬರೋಣ. ಇದರಲ್ಲಿ ಈ ಬಾರಿ ಬಂದಿದ್ದ ಪಾರ್ಟಿಸಿಪೆಂಟ್ಸ್ ಹೆಸರು ಇಲ್ಲಿ ಅನಾವಶ್ಯಕ. ಅದರಲ್ಲೊಬ್ಬಳ ಹತ್ರ ರೆಹಾ ಒಂದು ಪ್ರಶ್ನೆ ಕೇಳ್ತಾಳೆ. ಇದೇನೂ ದೊಡ್ಡ ಕ್ವಿಜ್ ಪ್ರಶ್ನೆ ಅಲ್ಲ. ಸಿಂಪಲ್ ಅಂದ್ರೆ ಸಿಂಪಲ್ ಪ್ರಶ್ನೆ. ಎರಡನೇ ಕ್ಲಾಸಿನ ಮಗು ಉತ್ತರಿಸೋವಷ್ಟು ಸಿಂಪಲ್ ಪ್ರಶ್ನೆ. 'ಕರ್ನಾಟಕದ ರಾಜಧಾನಿ ಯಾವುದು?' ಅನ್ನೋ ಪ್ರಶ್ನೆ. ಅಫ್‌ಕೋರ್ಸ್ ಸ್ಪರ್ಧಿಗಳು ದಕ್ಷಿಣ ಭಾರತದವರಲ್ಲ, ನಮಲ್ಲೂ ಕೆಲವರಿಗೆ ಉತ್ತರ ಭಾರತದ ಕೆಲವು ರಾಜ್ಯಗಳ ರಾಜಧಾನಿ ಹೆಸರು ಕೇಳಿದರೆ ತಡಬಡಾಯಿಸಬಹುದು. ಆದರೆ ಒಂದು ರಾಜ್ಯದ ರಾಜಧಾನಿ ಹೆಸರು ಕೇಳಿದರೆ ಮತ್ತೊಂದು ರಾಜ್ಯದ ಹೆಸರು ಹೇಳೋವಷ್ಟು ದಡ್ಡರಿರಲು ಸಾಧ್ಯ ಇಲ್ಲ.
ಸತ್ತರೂ ಬದುಕೋದು, ಸ್ಕೂಟರನ್ನು ವಿಮಾನದಂತೆ ಹಾರಿಸೋದು ಸಾಧ್ಯವಾಗಿಸೋ ಟಿವಿ ಸೀರಿಯಲ್ಸ್!
ಆದರೆ ಈ ಸ್ಪರ್ಧೆ ಹೇಗಿತ್ತು ಅಂದರೆ ದಡ್ಡರಲ್ಲಿ ಯಾರು ಶತ ದಡ್ಡರು ಅನ್ನೋದನ್ನು ಡಿಸೈಡ್ ಮಾಡೋ ಹಾಗಿತ್ತು. ಕರ್ನಾಟಕದ ರಾಜಧಾನಿ ಯಾವ್ದಮ್ಮಾ ತಾಯಿ ಅಂತ ಪ್ರಶ್ನೆ ಕೇಳಿದ್ರೆ ಟೂ ಪೀಸ್‌ನಲ್ಲಿದ್ದ ಆ ಪೀಚಲು ಸುಂದರಿ 'ತಮಿಳ್ನಾಡು' ಅಂದು ಬಿಟ್ಟಳಪ್ಪಾ! ಅವಳ ಉತ್ತರ ನೋಡಿ ಅಲ್ಲಿ ಸೇರಿದವರಲ್ಲಿ ಹಲವರು ಎದೆ ಮೇಲೆ ಕೈ ಇಟ್ಕೊಂಡ್ರು. ಅಲ್ಲಿದ್ದವರ ಚಿತ್ರ ವಿಚಿತ್ರ ಪ್ರತಿಕ್ರಿಯೆ ನೋಡಿ ಮತ್ತೊಬ್ಬ ಸ್ಪರ್ಧಿಗೂ ಅತ್ಯುತ್ಸಾಹ ಬಂದುಬಿಟ್ಟಿತು. ಆಕೆ ತೆಗೆದ ಬಾಯಿಗೆ 'ಗೋವಾ' ಅಂದು ಬಿಟ್ಟಳು. ಈಗಂತೂ ಎಲ್ಲರದ್ದೂ ಮಾತೇ ಬರದಂಥಾ ಸ್ಥಿತಿ.
ಅಲ್ಲೆಲ್ಲೋ ಮೂಲೆಯಲ್ಲಿ ಕೂತು ಮಜಾ ತಗೊಳ್ತಿದ್ದ ಸೋನು ಸೂದ್ ಕೂತಿರಲಾರದೇ ಎದ್ ನಿಂತು, 'ಅಮ್ಮಾ ತಾಯಿ ನೀನ್ಯಾವತ್ತಾದ್ರೂ ಇಂಡಿಯಾದ ಮ್ಯಾಪ್ ನೋಡಿದ್ದೀಯಾ? ಅದರಲ್ಲಿ ಕರ್ನಾಟಕ ಅನ್ನೋ ರಾಜ್ಯ ಎಲ್ ಬರುತ್ತೆ ಅನ್ನೋದನ್ನ ಗಮನಿಸಿದ್ದೀಯಾ? ಕರ್ನಾಟಕ ಒಂದು ರಾಜ್ಯ(state) ಕಣಮ್ಮಾ. ತಮಿಳ್ನಾಡು ಅದರ ಪಕ್ಕದ ರಾಜ್ಯ. ಒಂದು ರಾಜ್ಯದ ರಾಜಧಾನಿ ಇನ್ನೊಂದು ರಾಜ್ಯವೇ ಆಗೋದು ಬಹುಶಃ ಇತಿಹಾಸದಲ್ಲಿ ಹಿಂದೆಂದೂ ಸಂಭವಿಸಿರಲಿಕ್ಕಿಲ್ಲ, ಮುಂದೆಂದೂ ಸಂಭವಿಸಲಿಕ್ಕೂ ಇಲ್ಲ..' ಅಂದುಬಿಟ್ರು. ಆದ್ರೆ ಇದ್ಯಾವುದೂ ಆ ಹೆಣ್ ಮಗಳಿಗೆ ನಾಟಿದ ಹಾಗೇ ಕಾಣಲಿಲ್ಲ. ಕೊನೆಗೆ ಇವರ ಬಾಯಿಂದ ಇನ್ಯಾವ ಉತ್ತರ(answer) ಬರುವುದೋ ಅಂತ ಹೆದರಿ ಪ್ರಶ್ನೆ ಕೇಳಿದ ರೆಹಾ, 'ಬೆಂಗಳೂರು' ಅಂತ ಉತ್ತರ ಕೊಟ್ಟು ನಿಟ್ಟುಸಿರು ಬಿಟ್ಟಳು.
'ಬ್ರೋ' ಶಬ್ದಕ್ಕೆ ಅರ್ಥ ತಿಳಿದ್ಮೇಲೆ, ಯಾರನ್ನೂ ಹಾಗೆ ಕರೀತಿಲ್ಲವೆಂದ ಸತ್ಯ ಸೀರಿಯಲ್ 'ಕೀರ್ತನಾ'!
ದಕ್ಷಿಣ ಭಾರತೀಯರ ಬಗ್ಗೆ ಉತ್ತರ ಭಾರತದವರಿಗೆ ಒಂದು ಬಗೆಯ ಅಸಡ್ಡೆ ಇರೋದು ಹೊಸತೇನಲ್ಲ. ಅವರು ನಮ್ಮ ಭಾಷೆ, ವೇಷಭೂಷಣಗಳ ಬಗ್ಗೆ ಕೇವಲವಾಗಿ ನೋಡೋದು, ನಮ್ಮನ್ನು ಹಾಸ್ಯದ ವಸ್ತುಗಳಂತೆ ನೋಡೋದೆಲ್ಲ ನಡೀತಿತ್ತು. ಸಿನಿಮಾಗಳಲ್ಲೂ ಇದು ಮಾಮೂಲಾಗಿತ್ತು. ಆದ್ರೆ ಕೆಜಿಎಫ್‌ನಂಥಾ(KGF), ಬಾಹುಬಲಿಯಂಥಾ ಒಂದು ಸಿನಿಮಾ ನಾವೇನು ಅನ್ನೋದನ್ನು ಉತ್ತರದ ಸಿನಿಮಾ ಮಂದಿಗೆ ತೋರಿಸಿಕೊಟ್ಟಿತು. ಇಷ್ಟಾದ್ಮೇಲೂ, ಕರ್ನಾಟಕದ ರಾಜಧಾನಿ ತಮಿಳ್ನಾಡು ಅನ್ನೋ ಜೀವಿಗಳನ್ನ ಏನಂತ ಕರೀಬೇಕೋ ನೀವೇ ಡಿಸೈಡ್(decide) ಮಾಡಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.