ಅರಸನ ಕೋಟೆ ಸೊಸೆ 'ಪಾರು'ವಿಗೆ ನಿಜ ಜೀವನದಲ್ಲಿ ವಿಶೇಷ ಚೇತನ ತಮ್ಮ, ಅವನಿಗೆ ಇವಳೇ ಅಮ್ಮ!

Published : Jul 08, 2023, 05:52 PM IST
ಅರಸನ ಕೋಟೆ ಸೊಸೆ 'ಪಾರು'ವಿಗೆ ನಿಜ ಜೀವನದಲ್ಲಿ ವಿಶೇಷ ಚೇತನ ತಮ್ಮ, ಅವನಿಗೆ ಇವಳೇ ಅಮ್ಮ!

ಸಾರಾಂಶ

ಜೀ ಟಿ.ವಿಯಲ್ಲಿ ಪ್ರಸಾರವಾಗುವ ಪಾರು ಧಾರಾವಾಹಿಯ ಮುದ್ದು, ಮುಗ್ಧ ಮುಖದ ನಾಯಕಿ ಪಾರುವಿನ ಜೀವನದಲ್ಲಿ ಕೂಡ ನೋವಿನ ಕಥೆಯಿದೆ.  

ಕಳೆದ ಐದು ವರ್ಷಗಳಿಂದ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಪಾರು (Paaru) ಇಷ್ಟು ವರ್ಷಗಳ ಬಳಿಕವೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿದೆ.  ಅರಸನ ಕೋಟೆಯ ಮನೆ ಕೆಲಸದಾಳುವಾಗಿರುವ ಪಾರು ಅದೇ ಮನೆಗೆ ಸೊಸೆಯಾಗಿ ಬಂದ ನಂತರ ನಡೆದಿರುವ ಘಟನೆಗಳ ಸುತ್ತಲೂ ಈ ಧಾರಾವಾಹಿಯ ಕಥೆ ಹೆಣೆಯಲ್ಪಟ್ಟಿದೆ. ಕರುಣೆಯ ಪೈರು ನಮ್ಮೀ ಪಾರು ಎಂದು ಸಂಜೆ 6.30ಕ್ಕೆ ಟೈಟಲ್​ ಸಾಂಗ್​ ಮೂಲಕ ಕನ್ನಡಿಗರನ್ನು ಹಿಡಿದಿಟ್ಟುಕೊಂಡಿರುವ ಪಾರು, ಕಳೆದ ತಿಂಗಳು 1,200 ಸಂಚಿಕೆಗಳನ್ನು ಪೂರೈಸಿದೆ.  ಅತ್ಯುತ್ತಮ ತಾರಾಗಣ, ರೋಚಕ ತಿರುವುಗಳ ಅದ್ಭುತ ಕಥೆಯೊಂದಿಗೆ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ  ಈ ಧಾರಾವಾಹಿ ಯಶಸ್ವಿಯಾಗಿದೆ. ಇದರಲ್ಲಿ ಹೆಚ್ಚು ಗಮನ ಸೆಳೆಯುವ ಪಾತ್ರ ಪಾರುದ್ದು. ಅತಿ ಎನ್ನಿಸುವಷ್ಟು ಮುಗ್ಧತೆಯನ್ನು ಹೊಂದಿರುವ ನಾಯಕಿ ಪಾರು. ಧಾರಾವಾಹಿಯಲ್ಲಿ ಕರುಣೆಯ ಸಂಕೇತವಾಗಿ ನಟಿಸುತ್ತಿರುವ ‘ಪಾರು’ವಿನ ನಿಜವಾದ ಹೆಸರು ಮೋಕ್ಷಿತಾ ಪೈ. ಮಂಗಳೂರು ಮೂಲದವರಾದ ಮೋಕ್ಷಿತಾ ಅವರು ಶಿಕ್ಷಣ ಮುಗಿಸಿದ್ದು ಬೆಂಗಳೂರಿನಲ್ಲಿ.  ಚಿತ್ರರಂಗಕ್ಕೆ ಎಂಟ್ರಿ ಕೊಡುವ ಮುನ್ನ  ಮಕ್ಕಳಿಗೆ ಟ್ಯೂಷನ್ (Tuition) ಹೇಳುತ್ತಿದ್ದರು ಇವರು. ಆದರೆ  ಫೇಸ್‌ಬುಕ್​ನಲ್ಲಿ ಇವರು ಹಾಕುತ್ತಿದ್ದ ಫೋಟೋದಿಂದಾಗಿ ಇವರಿಗೆ ಕಿರುತೆರೆಯಲ್ಲಿ ಅವಕಾಶ ಸಿಕ್ಕಿರುವುದು ಇವರ ಬದುಕಿನ ಅತಿ ದೊಡ್ಡ ತಿರುವು.

ಕನ್ನಡಿಗರ ಹೃದಯಕ್ಕೆ ಹತ್ತಿರವಾಗಿರುವ ನಟಿ ಮೋಕ್ಷಿತಾ ಪೈ (Mokshita Pai) ಇದೀಗ ತಮಿಳು ಕಿರುತೆರೆಗೂ ಕಾಲಿಟ್ಟಿದ್ದಾರೆ.  ‘ಮೀನಾಕ್ಷಿ ಪೊಣ್ಣು’ ಎಂಬ ಧಾರಾವಾಹಿಯಲ್ಲಿ ನಟಿಸಲು ಮೋಕ್ಷಿತಾ ಪೈ ಒಪ್ಪಿಕೊಂಡಿದ್ದಾರೆ. ಜೊತೆಗೆ ನಿರ್ಭಯಾ-2 ಚಿತ್ರದಲ್ಲಿಯೂ ಇವರು ಭಾಗವಹಿಸುತ್ತಿದ್ದಾರೆ. ಪಾರು ಧಾರಾವಾಹಿಯಲ್ಲಿ ಹಳ್ಳಿ ರೀತಿ ವಸ್ತ್ರ ಧರಿಸಿ ಎಲ್ಲರ ಮನಸ್ಸನ್ನು ಗೆಲ್ಲುವ ಪಾರು, ಉಳಿದ ಟೈಮ್​ಗಳಲ್ಲಿ ಸಕತ್​  ಮಾಡರ್ನ್ ಆಗಿ ಕಾಣಿಸುತ್ತಾರೆ,   ಇನ್​ಸ್ಟಾಗ್ರಾಮ್​ನಲ್ಲಿ ರೀಲ್ಸ್​ ಮೂಲಕ ಜನರನ್ನು ರಂಜಿಸುತ್ತಾರೆ.  ನಿಜವಾಗಿಯೂ ಹಳ್ಳಿ ಹುಡುಗಿ ಪಾರು ನೀವೇನಾ ಎಂದು ಫ್ಯಾನ್ಸ್​ ಪ್ರಶ್ನಿಸುವುದೂ ಇದೆ. ನಿನ್ನೆಯಷ್ಟೇ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ರೀಲ್ಸ್​ ಒಂದನ್ನು ಮಾಡಿದ್ದರು. ಇವರ ನಗುಮೊಗವನ್ನು ನೋಡಿ ಫ್ಯಾನ್ಸ್​ ಫಿದಾ ಆಗಿದ್ದಾರೆ. ನಿಮ್ಮ ನಗು ಎಷ್ಟೋ ಗಂಡುಮಕ್ಕಳ ಜೀವನದಲ್ಲಿ ಉತ್ಸಾಹವನ್ನು ತುಂಬುತ್ತಿದೆ, ಸದಾ ಹೀಗೇ ನಗುತ್ತಿರಿ ಎಂದು ಯುವಕರು ಕಮೆಂಟ್ಸ್​ ಹಾಕಿದ್ದಾರೆ. 

'ಬ್ರೋ' ಶಬ್ದಕ್ಕೆ ಅರ್ಥ ತಿಳಿದ್ಮೇಲೆ, ಯಾರನ್ನೂ ಹಾಗೆ ಕರೀತಿಲ್ಲವೆಂದ ಸತ್ಯ ಸೀರಿಯಲ್​ 'ಕೀರ್ತನಾ'!

ತಮ್ಮ ಮುಗ್ಧ ನಗು ಹಾಗೂ ಅಷ್ಟೇ ಮುಗ್ಧ ಪಾತ್ರಗಳಿಂದ ಧಾರಾವಾಹಿಗೆ ಜೀವ ತುಂಬುತ್ತಿರುವ ಈ ನಟಿಯ ಬಾಳಿನಲ್ಲಿ ಮಾತ್ರ ಅತ್ಯಂತ ನೋವು ತುಂಬಿದೆ. ಪಾರು ಧಾರಾವಾಹಿಯಲ್ಲಿ ಹಲವಾರು ಕಂತುಗಳಲ್ಲಿ ಪಾರುವಿನದ್ದು ಕಣ್ಣೀರಿನ ಕಥೆ. ಆದರೆ ತೆರೆಯ ಮೇಲೆ ತಮ್ಮ ನಗುವಿನ ಮೂಲಕ ರಂಜಿಸುವ ಪಾರು ಅಲಿಯಾಸ್​ ಮೋಕ್ಷಿತಾ ಪೈ ಅವರ ಜೀವನದಲ್ಲಿಯೂ  ನೋವು ತುಂಬಿದೆ. ಹೌದು. ಅಸಲಿಗೆ ಮೋಕ್ಷಿತಾ ಪೈ ಅವರಿಗೆ ಚಿಕ್ಕ ತಮ್ಮನೊಬ್ಬನಿದ್ದಾನೆ. ಸದ್ಯ ಈ ತಮ್ಮನಿಗೆ ಮೋಕ್ಷಿತಾ ಅವರೇ ಅಮ್ಮನಂತೆ ನೋಡಿಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣ, ಆತ ಮಾನಸಿಕ ಅಸ್ವಸ್ಥ. ಆತನ ಆರೈಕೆ ಮಾಡುವ ಜವಾಬ್ದಾರಿ ಮೋಕ್ಷಿತಾ ಅವರ ಮೇಲಿದೆ. ಒಮ್ಮೆ ರಿಯಾಲಿಟಿ ಷೋ (Reality Show) ಒಂದಕ್ಕೆ ತಮ್ಮ ತಮ್ಮನನ್ನು ಕರೆದುಕೊಂಡು ಬಂದಿದ್ದ ಪಾರು ಅವರು, ತನ್ನ ತಮ್ಮನನ್ನು ನಾನೇ ತಂದೆ ಹಾಗೂ ತಾಯಿಯ ಹಾಗೆ ನೋಡಿಕೊಳ್ಳುತ್ತಿದ್ದೇನೆ.  ಅವನಿಗೂ ನಾನೆಂದರೆ ತುಂಬಾ ಇಷ್ಟ ಎಂದು ಭಾವುಕರಾಗಿದ್ದರು.
 
ಈ ಸಹೋದರನಿಗಾಗಿಯೇ ತಮ್ಮ ಕನಸನ್ನೂ ನನಸು ಮಾಡಿಕೊಳ್ಳಲು ಆಗದೇ ನೋವುಂಡವರು ಮೋಕ್ಷಿತಾ. ನಟನಾ ಕ್ಷೇತ್ರಕ್ಕೆ ತಾವು ಕಾಲಿಡುತ್ತೇವೆ ಎಂಬ ಕನಸು ಕಂಡಿರಲಿಲ್ಲ. ಆದರೆ ಅವರ ಇಂಟರೆರಸ್ಟ್​ ಇದ್ದುದು  ಫ್ಯಾಷನ್ ಡಿಸೈನಿಂಗ್ ಮೇಲೆ. ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಈ ಕೋರ್ಸ್​ ಅನ್ನು ಸೇರಿದ್ದರು. ಆದರೆ ಅದಾಗಲೇ ಅವರ ಅಮ್ಮ  ಗೋದಾವರಿಯವರು, ಬುದ್ಧಿಮಾಂದ್ಯ ಮಕ್ಕಳ ಬಗೆಗಿನ ಉನ್ನತ ಅಧ್ಯಯನಕ್ಕೆ ತೆರಳಿದ್ದರಿಂದ ಮೋಕ್ಷಿತಾ ತಮ್ಮನ ಆರೈಕೆ ಮಾಡುವುದಕ್ಕಾಗಿ  ಫ್ಯಾಷನ್ ಡಿಸೈನಿಂಗ್ ಕೋರ್ಸ್ (Fashion Desiging Course) ಅರ್ಧಕ್ಕೇ ನಿಲ್ಲಿಸಬೇಕಾಗಿ ಬಂದಿತ್ತು. ಅಮ್ಮ ಉನ್ನತ ವಿದ್ಯಾಭ್ಯಾಸಕ್ಕಾಗಿ ಹೋದ ಕಾರಣಕ್ಕೆ, ಹದಿಹರೆಯದಲ್ಲಿಯೇ ತಮ್ಮನ ಸಂಪೂರ್ಣ ಹೊಣೆ ಹೊತ್ತವರು ಮೋಕ್ಷಿತಾ.  ಅಮ್ಮ ವಾಪಸ್​ ಬರುವವರೆಗೂ ಮೋಕ್ಷಿತಾ ಅವರದ್ದೇ ಜವಾಬ್ದಾರಿ. ತಮ್ಮನ ಪಾಲಿನ ಅಪ್ಪ- ಅಮ್ಮ ಇಬ್ಬರೂ ಇವರೇ ಆದರು. ಈ ತಮ್ಮನಿಗೂ ಅಕ್ಕನೇ ಅಮ್ಮ ಆಗಿಬಿಟ್ಟಿದ್ದು, ತಮ್ಮನ್ನು ಆತ ತುಂಬಾ ಇಷ್ಟಪಡುವ ಬಗ್ಗೆ ಮೋಕ್ಷಿತಾ ಹೇಳುತ್ತಾರೆ.  ಈಗ ಧಾರಾವಾಹಿಯಲ್ಲಿ ಬಿಜಿ ಇದ್ದರೂ ತಮ್ಮನ ಆರೈಕೆಯನ್ನು ಮರೆಯುವುದಿಲ್ಲ. ಆಗಾಗ್ಗೆ ತಮ್ಮನ ಫೋಟೋಗಳನ್ನು ಶೇರ್​ ಮಾಡುತ್ತಲೇ ಇರುತ್ತಾರೆ. 

18ನೇ ಮದುವೆಗೆ ರೆಡಿಯಾದ ಖ್ಯಾತ ನಟ ನಕುಲ್! ಏನಿದು ಸುದ್ದಿ?
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Amruthadhaare Serial: ಗೌತಮ್-ಭೂಮಿಕಾ ಜೀವನ ಸರಿಮಾಡೋಕೆ ಯಾರು ಬರಬೇಕೋ ಅವ್ರು ಬಂದ್ರು; ಕೇಡಿಗಳಿಗೆ ಮಾರಿಹಬ್ಬ
Namratha Gowda ಪ್ರೀತಿಯಲ್ಲಿದ್ದಾರಾ? ಆ ಕಪ್ಪು ಬ್ಯಾಂಡ್‌ ಕೊಟ್ಟ ಸುಳಿವಿನ ಬಗ್ಗೆ Karthik Mahesh ಏನಂದ್ರು?