ಬೇಡ ಬೇಡ ಎಂದ್ರೂ ಗಾಯಕನಿಗೆ ಪದೇ ಪದೇ ಕಿಸ್​ ಕೊಟ್ಟ ಬಿಗ್​ಬಾಸ್​ ಸ್ಪರ್ಧಿ: ಉರ್ಫಿ ಹೇಳಿದ್ದೇನು?

By Suvarna News  |  First Published Jul 4, 2023, 2:27 PM IST

ಬಿಗ್​ಬಾಸ್​ ಸ್ಪರ್ಧಿ ಮನೀಶಾ ರಾಣಿ ಅವರು ಗಾಯಕ ಅಬ್ದು ರೋಜಿಕ್​ ಅವರಿಗೆ ಒತ್ತಾಯಪೂರ್ವಕ ಕಿಸ್​ ಕೊಟ್ಟಿದ್ದು, ಉರ್ಫಿ ಜಾವೇದ್​ ಹೇಳಿದ್ದೇನು?
 


‘ಬಿಗ್ ಬಾಸ್’ (Bigg Boss) ಮನೆ ಎಂದರೆ ಅದೊಂದು ಅಶ್ಲೀಲಗಳ ತಾಣ. ಇದೇ ಕಾರಣಕ್ಕೆ ಇದರ ಟಿಆರ್​ಪಿಯಲ್ಲಿಯೂ ಕುಸಿತ ಕಂಡಿದೆ. ಟಿವಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ಗೆ ಸ್ವಲ್ಪವಾದರೂ ಹಿಡಿತವಿರುತ್ತದೆ. ಆದರೆ ಓಟಿಟಿಯಲ್ಲಿ ಅಶ್ಲೀಲತೆಗೆ ಯಾವುದೇ ನಿಯಮಗಳು ಇಲ್ಲದ ಹಿನ್ನೆಲೆಯಲ್ಲಿ, ಇಲ್ಲಿ ಆಡಿದ್ದೇ ಆಟ. ಇದೇ ಕಾರಣಕ್ಕೆ ಬಿಗ್​ಬಾಸ್​ ಓಟಿಟಿಯಲ್ಲಿಯೂ ಎಗ್ಗಿಲ್ಲದೇ ಅಶ್ಲೀಲ ಘಟನೆಗಳು ನಡೆಯುತ್ತಲೇ ಇವೆ. ಇದನ್ನು ಯಥಾವತ್ತಾಗಿ ಪ್ರದರ್ಶಿಸಿ, ನಂತರ ಅದನ್ನು ನಡೆಸಿಕೊಡುತ್ತಿರುವವರು ಬೇಸರ ವ್ಯಕ್ತಪಡಿಸುವಂತೆಯೂ ತೋರಿಸುವುದು ನಡೆದೇ ಇದೆ.  ಬಹುತೇಕ ರಿಯಾಲಿಟಿ ಷೋಗಳಲ್ಲಿನ ಮಾತು-ಕತೆಗಳಂತೆ ಬಿಗ್​ ಬಾಸ್​ನಲ್ಲಿ ನಡೆಯುವುದು ಕೂಡ ಸ್ಕ್ರಿಪ್ಟೆಡ್ ಎಂದು ಜನರಿಗೆ ಅರಿವಾಗುತ್ತಲೇ ಈ ಷೋ ನೋಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಜನರನ್ನು ಹಿಡಿದಿಟ್ಟುಕೊಳ್ಳಲು ಓಟಿಟಿಯಲ್ಲಿನ ಸ್ಪರ್ಧಿಗಳ ಹುಚ್ಚಾಟ ಹೆಚ್ಚುವಂತೆ ನೋಡಿಕೊಳ್ಳಲಾಗುತ್ತಿದೆ.
 
ಇದರಲ್ಲಿ ಭಾಗವಹಿಸುವ ಬಹುತೇಕ ಮಹಿಳಾ ಸ್ಪರ್ಧಿಗಳಂತೂ ಮೈಮೇಲೆ ಅರಿವೇ ಇಲ್ಲದಂತೆ ನಟಿಸುವುದು, ಅದನ್ನು ಯಥಾವತ್ತಾಗಿ ಸೆನ್ಸಾರ್​ ಇಲ್ಲದೇ ಜನರಿಗೆ ತೋರಿಸುವುದು ಓಟಿಟಿಯ ಸೀಸನ್​-2 (Season-2)ನಲ್ಲಿಯೂ ಮುಂದುವರೆದಿದೆ. ಇದೀಗ ಸ್ಪರ್ಧಿ ಮನೀಶಾ ರಾಣಿ ಅವರ ಮಿತಿ ಮೀರಿದ ವಿಡಿಯೋ ಒಂದು ವೈರಲ್​ ಆಗಿದೆ. ಮೂರನೆಯ ವಾರಕ್ಕೆ  ಕಾಲಿಟ್ಟಿರುವ ಬಿಗ್​ಬಾಸ್ ಓಟಿಟಿ ಸೀಸನ್​-2 ನಲ್ಲಿ ಅತಿಥಿಯಾಗಿ ಗಾಯಕ ಅಬ್ದು ರೋಜಿಕ್ ಅವರನ್ನು ಕರೆಸಲಾಗಿತ್ತು. ಬಿಗ್​ಬಾಸ್​ ಮನೆಯಲ್ಲೀಗ  ಪೂಜಾ ಭಟ್ ಮತ್ತು ಅಭಿಷೇಕ್ ಮಲ್ಹಾನ್ ಹೊರತುಪಡಿಸಿ  ಮನೆಯಲ್ಲಿರುವ ಎಲ್ಲಾ ಸ್ಪರ್ಧಿಗಳನ್ನು ಹೊರಹಾಕಲು ನಾಮನಿರ್ದೇಶನ ಮಾಡಲಾಗಿದೆ. ನಾಮನಿರ್ದೇಶನಗೊಂಡ ಸ್ಪರ್ಧಿಗಳಿಂದ ನಾಲ್ಕು ಜನರನ್ನು ಆಯ್ಕೆ ಮಾಡುವಂತೆ ತಜಕಿಸ್ತಾನ್ ಮೂಲದ ಗಾಯಕ ಅಬ್ದು ರೋಜಿಕ್ (Abdu Rozik) ಅವರಿಗೆ ಕೇಳಿಕೊಳ್ಳಲಾಯಿತು. ಇವರು ಬಿಗ್ ಬಾಸ್ 16 ರಲ್ಲಿ ಭಾಗವಹಿಸಿದ್ದರು.  OTT 2ನಲ್ಲಿ ಅವರನ್ನು ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಆ ಸಂದರ್ಭದಲ್ಲಿ  ನಾಮನಿರ್ದೇಶನಗೊಂಡ ಸ್ಪರ್ಧಿಗಳಿಂದ ನಾಲ್ಕು ಜನರನ್ನು ಆಯ್ಕೆ ಮಾಡಿ ನಂತರ ಅವರೊಂದಿಗೆ ಚಿಕ್ಕದಾಗಿ ಡಾನ್ಸ್​ ಮಾಡುವಂತೆ ಹೇಳಲಾಯಿತು.

'ಬಿಗ್ ಬಾಸ್'ನಲ್ಲಿ ಲಿಪ್​ಲಾಕ್​- ಅಂಗ ಪ್ರದರ್ಶನ: ಮುಸ್ಲಿಂ ರಾಷ್ಟ್ರಗಳ ಬಗ್ಗೆ ಸಲ್ಮಾನ್​ ಹೇಳಿದ್ದೇನು? 

ಅಬ್ದು ಅವರು ಮನೀಶಾ ರಾಣಿ (Maneesha Rani), ಜಡ್ ಹದಿದ್, ಅವಿನಾಶ್ ಸಚ್‌ದೇವ್ ಮತ್ತು ಜಿಯಾ ಶಂಕರ್ ಅವರನ್ನು ಟಾಸ್ಕ್‌ಗಾಗಿ ಆಯ್ಕೆ ಮಾಡಿದರು. ನಂತರ ನಿಯಮದಮತೆ ಅವರು  ಮನೀಶಾ ಅವರೊಂದಿಗೆ ನೃತ್ಯದ ವಿಡಿಯೋ ಮಾಡಬೇಕಿತ್ತು. ಈ ಸಂದರ್ಭದಲ್ಲಿ ಮೈಮೇಲೆ ಅರಿವಿಲ್ಲದಂತೆ ವರ್ತಿಸಿದ ಮನೀಶಾ ರಾಣಿ, ಅಬ್ದು ರೋಜಿಕ್ ಅವರಿಗೆ ಪದೇ ಪದೇ ಕಿಸ್​ ಕೊಡಲು ಶುರು ಮಾಡಿದರು. ಒಂದು ಹಂತದಲ್ಲಿ ಇದು ಖುದ್ದು ಅಬ್ದು ಅವರಿಗೆ ಮುಜುಗರ ಹುಟ್ಟಿಸಿದೆ. ಅವರು ಬೇಡ ಎನ್ನುವಂತೆ ಹಿಂದೇಟು ಹಾಕಿದರೂ ಮನೀಶಾ ಮುತ್ತುಕೊಡುವುದನ್ನು ನಿಲ್ಲಿಸಲಿಲ್ಲ. ಈ ವಿಡಿಯೋ ವೈರಲ್​ ಆಗುತ್ತಲೇ  ನಟಿ ಉರ್ಫಿ ಜಾವೇದ್​ ರಿಯಾಕ್ಟ್​ ಮಾಡಿದ್ದಾರೆ. 

ಅಬ್ದು ಜೊತೆಗಿನ ವರ್ತನೆಗಾಗಿ ಉರ್ಫಿ ಜಾವೇದ್ ಮನೀಶಾ ರಾಣಿಯನ್ನು ದೂಷಿಸಿದ್ದಾರೆ. ಇದು ತುಂಬಾ ಅಸಹ್ಯ ಹುಟ್ಟಿಸುವಂತಿದೆ. ನೋಡಲು ಅಹಿತಕರವಾಗಿದೆ.  ಮನೀಶಾ ಹೀಗೇಕೆ  ಬಲವಂತವಾಗಿ ಚುಂಬಿಸುತ್ತಿದ್ದಳು? ಅವನೇನು ಚಿಕ್ಕ ಮಗುನಾ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.  ಪ್ರಾಮಾಣಿಕವಾಗಿ ಪೂಜಾ ಭಟ್ ತುಂಬಾ ಕ್ಲಾಸಿ ಮತ್ತು ಡಿಗ್ನಿಫೈಡ್ ಆಗಿದ್ದಾರೆ ಎಂದಿದ್ದಾರೆ ಉರ್ಫಿ. ಅಂದಹಾಗೆ, ಬಿಗ್ ಬಾಸ್ OTT ಯ ಮೊದಲ ಸೀಸನ್‌ನಲ್ಲಿ ಉರ್ಫಿ ಹದಿಮೂರು ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು, ವೂಟ್‌ನಲ್ಲಿ ಸ್ಟ್ರೀಮ್ ಮಾಡಲಾಗಿತ್ತು ಮತ್ತು 2021 ರಲ್ಲಿ ಕರಣ್ ಜೋಹರ್ ಅವರು ಹೋಸ್ಟ್ ಮಾಡಿದ್ದರು. ಪ್ರದರ್ಶನದಿಂದ ಹೊರಹಾಕಲ್ಪಟ್ಟ ಮೊದಲಿಗರಾಗಿದ್ದರು ಉರ್ಫಿ.

Tap to resize

Latest Videos

ದಿವ್ಯಾ ಉರುಡುಗ ಪ್ಯಾಂಟ್‌ ಮೇಲೆ ಸೂಪ್ ಚೆಲ್ಲಿದ ರಾಕೇಶ್; ಬಿಬಿ ಗ್ಯಾಂಗ್ ಫೋಟೋ

Abdu x Manisha Fun Video 📸
Song "You Very Chalak Bro"

Manisha kisses Abdu's face deliberately. pic.twitter.com/PwCs0AASwx

— Afjal Edit (@AfjalEdit)
click me!