ಗೆಳೆಯನ ಹುಟ್ಟುಹಬ್ಬಕ್ಕೆ ಕೈಯಾರೆ ಕೇಕ್ ಮಾಡಿ ಮನೆ ಅಲಂಕರಿಸಿದ ಅನುಪಮಾ ಗೌಡ; ಮದ್ವೆ ಸೂಚನೆ ಎಂದ ನೆಟ್ಟಿಗರು

Published : Jul 04, 2023, 11:35 AM ISTUpdated : Jul 04, 2023, 11:37 AM IST
ಗೆಳೆಯನ ಹುಟ್ಟುಹಬ್ಬಕ್ಕೆ ಕೈಯಾರೆ ಕೇಕ್ ಮಾಡಿ ಮನೆ ಅಲಂಕರಿಸಿದ ಅನುಪಮಾ ಗೌಡ; ಮದ್ವೆ ಸೂಚನೆ ಎಂದ ನೆಟ್ಟಿಗರು

ಸಾರಾಂಶ

ಸ್ಪೆಷಲ್ ಕೇಕ್ ತಯಾರಿಸಿದ ಅನುಪಮಾ ಗೌಡ. ದಿನದಿಂದ ದಿನ ಹೆಚ್ಚಾಯ್ತು ಯುಟ್ಯೂಬ್ ವಿಡಿಯೋ ಕ್ರೇಕ್... 

ಅಕ್ಕ ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟ ಅನುಪಮಾ ಗೌಡ ಬಿಗ್ ಬಾಸ್‌ ರಿಯಾಲಿಟಿ ಶೋನಲ್ಲಿ ಎರಡು ಸಲ ಸ್ಪರ್ಧಿಸಿ ಆನಂತರ ಹಲವಾರು ರಿಯಾಲಿಟಿ ಶೋಗಳನ್ನು ನಿರೂಪಣೆ ಮಾಡಿರುವ ಅನುಪಮಾ ಗೌಡ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದ್ದಾರೆ. ಅಲ್ಲದೆ ಅನುಪಮಾ ಯುಟ್ಯೂಬ್ ಲೋಕಕ್ಕೆ ಕಾಲಿಟ್ಟ ತಮ್ಮ ಪರ್ಸನಲ್ ಲೈಫ್‌, ಸಿನಿಮಾ, ಸೀರಿಯಲ್, ಶೂಟಿಂಗ್, ಸ್ಕಿನ್ ಕೇರ್, ಹೇರ್ ಕೇರ್ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಜನರಿಗೆ ತಿಳಿಸುತ್ತಾರೆ. ಈಗ ಮತ್ತೊಂದು ಸ್ಪೆಷಲ್ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. 

ಹೌದು! ಅನುಪಮಾ ಗೌಡ ಆಪ್ತ ಸ್ನೇಹಿತ ರಾಘವ್‌ ಎಂಬುವವ ಹುಟ್ಟುಹಬ್ಬಕ್ಕೆ ಸ್ಪೆಷಲ್ ಚಾಕೋಲೆಟ್‌ ಟಾರ್ಟ್‌ ತಯಾರಿಸಿದ್ದಾರೆ. ಮೊದಲ ಸಲ ಮಾಡಿರುವ ಕೇಕ್ ಸೀದು ಕಪ್ಪ ಆಗಿಬಿಟ್ಟಿತ್ತು. ಎರಡನೇ ಪ್ರಯತ್ನಕ್ಕೆ ಅದ್ಭುತವಾಗಿ ತಯಾರಾಗಿದೆ. ಚಾಕೋಲೆಟ್ ಟಾರ್ಟ್ ಮಾಡುವ ರೀತಿ ಅದನ್ನು ಅಲಂಕಾರ ಮಾಡುವುದು ಎಷ್ಟು ಸುಲಭ ಎಂದು ಅನು ವಿಡಿಯೋದಲ್ಲಿ ತೋರಿಸಿದ್ದಾರೆ. ಅಲ್ಲದೆ ಗೆಳೆಯನ ಬರ್ತಡೇಗೆ ಇಡೀ ಮನೆಯನ್ನು ಬಲೂನ್‌ನಿಂದ ಅಲಂಕಾರ ಮಾಡಿದ್ದಾರೆ. ಅನಂತರ ಸರ್ಪ್ರೈಸ್‌ ಕೊಡುತ್ತಾರೆ. ಅನುಪಮಾ ಗೌಡ ತಯಾರಿಸಿರುವ ಎರಡು ಕೇಕ್ ಅದ್ಭುತವಾಗಿತ್ತು ಎಂದು ಸ್ವತಃ ರಾಘವ್ ಹೇಳಿದಾಗ ಇಲ್ಲ ಇಲ್ಲ ವಿಡಿಯೋದಲ್ಲಿ ಒಂದೇ ತೋರಿಸಿರುವುದು ಎಂದು ಕ್ಲಾರಿಟಿ ನೀಡುತ್ತಾರೆ. 

ಕುಂಕುಮ ಇಟ್ಕೊಂಡು ಗೌರಮ್ಮ ತರ ಇದ್ದೀರಾ; ಅನುಪಮಾ, ನೇಹಾ ಮತ್ತು ಇಶಿತಾ ಟ್ರೋಲ್

ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಸಫಾರಿಯಲ್ಲಿ ಬ್ಯುಸಿಯಾಗಿದ್ದಾರೆ. ನಟಿ ಇಶಿತಾ ವರ್ಷ, ನೇಹಾ ಹಾಗೂ ಕೃಷಿ ತಾಪಂಡಾ ಜೊತೆ ಸಫಾರಿ ಎಂಜಾಯ್ ಮಾಡಿ ಸಿಕ್ಕಾಪಟ್ಟೆ ಟ್ಯಾನ್ ಆಗಿದ್ದಾರೆ. ಇದನ್ನು ಸುಲಭವಾಗಿ ಹೋಗಿಸಲು ಫೇಸ್ ಪ್ಯಾಕ್ ಟ್ರೈ ಮಾಡಿದ್ದಾರೆ. ಅರಿಶಿಣ ಪುಡಿಯನ್ನು ಚೆನ್ನಾಗಿ ಬಿಸಿ ಮಾಡಿಕೊಂಡು ರೋಸ್ಟ್‌ ಮಾಡಬೇಕು ಕಾಫಿ ಪುಡಿ ರೀತಿಯಲ್ಲಿ ಬಣ್ಣ ಬದಲಾಗುತ್ತದೆ. ಸ್ವಲ್ಪ ಜೇನು ತುಪ್ಪ ಮತ್ತು ಹಾಲು ಬಳಸಿ ಪೇಸ್ಟ್‌ ಮಾಡಿಕೊಳ್ಳಬೇಕು ಆನಂತರ ಮುಖಕ್ಕೆ ಹಾಗೂ ಕೈಗಳಿಗೆ ಹಚ್ಚಿಕೊಂಡು 15 ನಿಮಿಷಗಳ ಕಾಲ ಬಿಡಬೇಕು. ಒಂದೇ ದಿನಕ್ಕೆ ಟ್ಯಾನ್ ಹೋಗುವುದಿಲ್ಲ ಆದರೆ ಮುಖ ಫ್ರೆಶ್ ಫೀಲ್ ಆಗುತ್ತದೆ ನೀವೆಲ್ಲರು ಒಮ್ಮೆ ಟ್ರೈ ಮಾಡಬೇಕು ಎಂದು ಅನುಪಮಾ ಗೌಡ ಹೇಳಿದ್ದಾರೆ. 

ಅನುಪಮಾ ಗೌಡ ಜಾಗ ಸ್ವೀಕರಿಸಿದ್ದಕ್ಕೆ ಹಿಗ್ಗಾಮುಗ್ಗಾ ಬೀಪ್‌ ಪದಗಳಿಂದ ಬೈದ್ರು: ಜಾನ್ವಿ ರಾಯಲ

'ನೀವು ಮದುವೆ ಮಾಡಿಕೊಳ್ಳುವ ಹುಡುಗನಾ? ನಿಮ್ಮ ಬಾಯ್‌ಫ್ರೆಂಡಾ? ಯಾವಾಗ ಮದುವೆ? ಹೇಗೆ ಫ್ರೆಂಡ್ಸ್‌ ಎಂದು ನೆಟ್ಟಿಗರು ಸಾಕಷ್ಟು ಕಾಮೆಂಟ್‌ ಮಾಡಿದ್ದಾರೆ. ನೆಟ್ಟಿಗರ ಯಾವ ಪ್ರಶ್ನೆಗೂ ಅನುಪಮಾ ಉತ್ತರಿಸಿಲ್ಲ ಹೀಗಾಗಿ ಕ್ಯೂರಿಯಾಸಿಟಿ ಹೆಚ್ಚಾಗುತ್ತಿದೆ. ಅನುಪಮಾ ಗೌಡ ಸ್ನೇಹಿತ ರಾಘವ್ ವೃತ್ತಿಯಲ್ಲಿ ಫೋಟೋಗ್ರಾಫರ್‌ ಮಾಡಲಿಂಗ್ ಫೋಟೋಶೂಟ್ ಹೆಚ್ಚಿಗೆ ಮಾಡುತ್ತಾರೆ. ಅನುಪಮಾ ಬಿಗ್ ಬಾಸ್‌ನಲ್ಲಿದ್ದಾಗ ಸೆಂಡ್‌ ಆಫ್‌ ಮಾಡಲು ಫ್ಯಾಮಿಲಿ ಜೊತೆ ರಾಘವ್ ಕೂಡ ಆಗಮಿಸಿದ್ದರು ಆಗ ನನ್ನ ನಾಯಿ ಮರಿ ಮತ್ತು ಜೀಪ್‌ನ ಚೆನ್ನಾಗಿ ನೋಡಿಕೊಳ್ಳುವಂತೆ ಹೇಳಿದ ವಿಡಿಯೋ ವೈರಲ್ ಆಗಿತ್ತು. 


 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Bossನಲ್ಲಿ ಲೈಟ್​ ಆಫ್​ ಆದ್ಮೇಲೆ ಇವರದ್ದು ನಡಿಯತ್ತೆ: ಇನ್ನೊಂದು ವಾರ ಇದ್ರೆ ಸತ್ತೇ ಹೋಗ್ತಿದ್ದೆ- ಡಾಗ್​ ಸತೀಶ್ ಹೇಳಿದ್ದೇನು?
ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!