
ಕರ್ನಾಟಕದ ಯುವಕ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕರಾವಳಿಯ ಯುವ ಸಮಾಜಿಕ ಕಾರ್ಯಕರ್ತ ಈಗ ಕೆಬಿಸಿಯಲ್ಲಿ ಮಿಂಚಿದ್ದಾರೆ.
ಜನಪ್ರಿಯ ಹಿಂದಿ ಟಿವಿ ರಿಯಾಲಿಟಿ ಶೋ ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮದ ಸೀಸನ್ 12 ರಲ್ಲಿ ಭಾಗವಹಿಸಲು ಉಡುಪಿಯ ಯುವ ಸಾಮಾಜಿಕ ಕಾರ್ಯಕರ್ತ ರವಿ ಕಟಪಾಡಿ ಆಯ್ಕೆಯಾಗಿದ್ದಾರೆ.
ವೇಷ ಹಾಕಿ ಬಡ ಮಕ್ಕಳಿಗೆ 50 ಲಕ್ಷ ನೀಡಿದ ರವಿಯಿಂದ ಮತ್ತೊಂದು ಸೇವೆ
ಸಮಾಜಕ್ಕೆ ಅವರ ಮಾನವೀಯ ಕೊಡುಗೆಯನ್ನು ಗುರುತಿಸಿದ ಟಿವಿ ಚಾನೆಲ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ರವಿ ಕಟಪಾಡಿಗೆ ಆಹ್ವಾನ ನೀಡಿದೆ. ಜನವರಿ 13 ರಂದು ಮುಂಬೈನಲ್ಲಿ ಶೂಟಿಂಗ್ ನಡೆದಿದ್ದು ಈ ಕಾರ್ಯಕ್ರಮವು ಜನವರಿ 15 ರಂದು ಪ್ರಸಾರವಾಗಲಿದೆ.
ಈ ವಿವರಗಳನ್ನು ರವಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕೌನ್ ಬನೇಗಾ ಕರೋಡ್‌ಪತಿಯಿಂದ ನನಗೆ ಕರೆ ಬಂದಾಗ ನಾನು ಆಹ್ವಾನವನ್ನು ನಿರಾಕರಿಸಿದ್ದೆ. ಆದರೆ ಅವರು ನನ್ನನ್ನು ಮತ್ತೆ ಕರೆದಾಗ ನಾನು ಒಪ್ಪಿಕೊಂಡೆ "ಎಂದು ರವಿ ಕಟಪಾಡಿ ಸೋಷಿಯಲ್ ಮೀಡಿಯಾದಲ್ಲಿ ಹೇಳಿದ್ದಾರೆ. ಅವರು ಎಲ್ಲ ಅಭಿಮಾನಿಗಳು ತಮ್ಮನ್ನು ಬೆಂಬಲಿಸುವಂತೆ ವಿನಂತಿಸಿದ್ದಾರೆ.
KBCಯಲ್ಲಿ 50 ಲಕ್ಷ ಗೆದ್ದ ಕರ್ನಾಟಕದ ವಿದ್ಯಾರ್ಥಿ
ಅವರ ಒಪ್ಪಿಗೆಯ ನಂತರ, ಕೆಬಿಸಿ ತಂಡವು ರವಿಯ ಮನೆಗೆ ಭೇಟಿ ನೀಡಿ ಪ್ರೋಮೋ ಚಿತ್ರೀಕರಣ ಮಾಡಿದೆ. ಅವರ ಸಾಮಾಜಿಕ ಚಟುವಟಿಕೆಗಳನ್ನು ಸಹ ಅವರು ದಾಖಲಿಸಿದ್ದಾರೆ. ರವಿ ಈಗಾಗಲೇ ಮುಂಬೈಗೆ ತೆರಳಿದ್ದು, ಶೀಘ್ರದಲ್ಲೇ ಅಮಿತಾಬ್ ಬಚ್ಚನ್ ಎದುರು ಹಾಟ್ ಸೀಟಿನಲ್ಲಿ ಕುಳಿತುಕೊಳ್ಳಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.