
'ರಾಧಾ ಕಲ್ಯಾಣ' ಧಾರಾವಾಹಿ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟ ಕೃತಿಕಾ ರವೀಂದ್ರ, ತಂದೆಯ ಹುಟ್ಟುಹಬ್ಬ ಸಂಭ್ರಮದಲ್ಲಿ ಬ್ಯುಸಿಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ತಂದೆಗೆ ಪತ್ರ ಬರೆಯುವ ಮೂಲಕ ಅವರೊಟ್ಟಿಗೆ ಕಳೆದ ಸುಮಧುರ ಕ್ಷಣಗಳನ್ನು ಬಗ್ಗೆ ಬರೆದುಕೊಂಡಿದ್ದಾರೆ....
'ಗೋಲಿ' ಕಳೆದುಕೊಂಡ ದುಖಃದಲ್ಲಿ ನಟಿ ಹಿತಾ ಚಂದ್ರಶೇಖರ್; ಭಾವುಕ ಪತ್ರ ವೈರಲ್!
ಕೃತಿಕಾ ಪತ್ರ:
'ಅಪ್ಪಾ ಐ ಲವ್ ಯು ಪಾ...ಹೆಣ್ಣು ಮಕ್ಕಳು ತಂದೆಯನ್ನು ತುಂಬಾ ಹಚ್ಚಿಕೊಂಡಿರ್ತಾರಂತೆ. ನಾನೂ ಅಷ್ಟೇ. ಆದ್ರೆ ತಂದೆ ಪ್ರೀತಿ ಪಡೆಯೋದ್ರಲ್ಲಿ ಅಲ್ಪ ತೃಪ್ತಳು ನಾನು. ನನಗೆ ಬುದ್ಧಿ ಬಂದಾಗಿನಿಂದ, ನಾನು ಪಿಯುಸಿ ಓದೋವರೆಗೂ ಅಪ್ಪ ನನ್ನ ಬೆನ್ನು ತಟ್ತಾ ನಾನಿದ್ದೀನಿ. ತಲೆ ಕೆಡಿಸ್ಕೋಬೇಡ ಅಂತಿದ್ರು. ದೇವರು ಒಮ್ಮೊಮ್ಮೆ ತುಂಬಾ ಅನ್ಯಾಯ ಮಾಡಿಬಿಡ್ತಾನೆ. ತನಗೆ ತುಂಬಾ ಇಷ್ಟ ಆಗೋವ್ರನ್ನ ಬೇಗ ತನ್ನ ಹತ್ರ ಕರೆಸಿಕೊಳ್ಳೋ ಸ್ವಾರ್ಥಿ ಅವನು. ನನ್ನ ತಂದೆ ನನ್ನ ಬಿಟ್ಟು ಹೊರಟೋದ್ರು, ಆಗ ತಾನೇ ಸಂಬಂಧಗಳ ಅರ್ಥ ತಿಳ್ಕೊಳ್ತಾ ಇದ್ದ ನನಗೆ. ಯಾವುದೂ ಶಾಶ್ವತ ಅಲ್ಲ ಅಂತ ಅರ್ಥ ಆಗ್ಹೋಯ್ತು. ಮೃದು ಮಾತುಕತೆ, ಯಾರ ಮನಸ್ಸನ್ನೂ ನೋಯಿಸದ ಜೀವ, ಅಜಾತ ಶತ್ರು, ದಯಾಳು ಹೀಗೆ ನನ್ನ ಅಪ್ಪ ಯಾರನ್ನೂ ಹೀಗಳೆಯದೆ ಎಲ್ಲರೊಂದಿಗೆ ಪ್ರೀತಿಯಿಂದ ಮಾತಾಡ್ತಾ ಇದ್ದ ಮುದ್ದು ಮನುಷ್ಯ,' ಎಂದು ಬರೆದುಕೊಂಡಿದ್ದಾರೆ.
'ನನ್ನ ಜೀವನದ ಕೊನೆಯ ಉಸಿರಿರೋವರೆಗೂ ನೀವು ನಂಗೆ ರೋಲ್ ಮಾಡೆಲ್. ನಿಮ್ಮಿಂದ ಕಲಿತ ಒಂದೊಂದು ಪಾಠನೂ ನನ್ನ ಜೀವನದ ಪ್ರತೀ ಘಟ್ಟದಲ್ಲೂ ಅಳವಡಿಸಿಕೊಳ್ತೀನಿ. ನಾನು ಹೇಗೆ ಆ್ಯಕ್ಟ್ ಮಾಡಿದ್ರೂ ಶಭಾಷ್ ಅಂತ ಚಪ್ಪಾಳೆ ತಟ್ಟಿ ಖುಷಿ ಪಡ್ತಿದ್ದ ನೀವು, ಇವತ್ತು ಈ ಕ್ಷಣ ನನ್ನ ಜೊತೆ ಇರ್ಬೇಕಿತ್ತು. ರಿಯಲ್ ಮಿಸ್ ಯು ಪಾ. ಬಟ್ ಅಮ್ಮ ನಿನ್ನ ಪ್ರೀತಿನೂ ಸೇರಿಸಿ ನಂಗೆ ಕೊಡ್ತಾ ಇದ್ದಾಳೆ. ನಿಮ್ಮಿಬ್ರಿಗೂ ಒಂದು ಸಲಾಂ. ಸಂಕ್ರಾಂತಿ ಹಬ್ಬಕ್ಕಿಂತ ನಿನ್ನ ಹುಟ್ಟುಹಬ್ಬವೇ ನಂಗೆ ದೊಡ್ಡದು. ನಿನ್ ಈ ಮುದ್ದು ಮಗಳು ಸದಾ ನಿನ್ನ ನೆನಪ್ ಮಾಡಿಕೊಳ್ತಾ ಇರ್ತಾಳೆ,' ಎಂದು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.