ಧಾರಾವಾಹಿಗಳಲ್ಲಿ 'ಗುಟ್ಟಿ'ನ ಪರ್ವ..ಇವ್ರು ಬಾಯಿಬಿಟ್ಟರೆ ಸೀರಿಯಲ್‌ಗಳೇ The End

Published : Nov 07, 2025, 01:47 PM IST
Kannada Serials

ಸಾರಾಂಶ

Kannada Serials: ಇತ್ತೀಚೆಗೆ ಸೀರಿಯಲ್‌ಗಳನ್ನ ನೋಡಿದರೆ ಈ ಹೈಡ್ ಅಂಡ್ ಸೀಕ್ ತುಸು ಹೆಚ್ಚಾಗಿದೆ ಎನ್ನಬಹುದು. ಇದು ಧಾರಾವಾಹಿಗಳಿಗೆ ಅಗತ್ಯವಾದರೂ, ಕೆಲವು ಕಡೆ ಇದು ಅತಿ ಎನಿಸುವ ಮಟ್ಟಕ್ಕೆ ಇರುತ್ತದೆ. ಹಾಗಾದಾರೆ ಯಾವ ಧಾರವಾಹಿಯಲ್ಲಿ ಯಾರು, ಏನನ್ನು ಮುಚ್ಚಿಟ್ಟಿದ್ದಾರೆ ಎಂದು ನೋಡುವುದಾದರೆ...

ನಾಯಕ ಅಥವಾ ನಾಯಕಿ ಒಂದೊಳ್ಳೆಯ ಉದ್ದೇಶಕ್ಕಾಗಿ ಅಥವಾ ಕಾರಣಾಂತರಗಳಿಂದಾಗಿ ಕೆಲವು ವಿಷಯವನ್ನ ಮುಚ್ಚಿಡುವುದು ಸಾಮಾನ್ಯ. ಆದರೆ ಮುಂದೊಂದು ದಿನ ನಾವು ಮುಚ್ಚಿಟ್ಟ ಆ ಗುಟ್ಟೇ ಬೇರೆಯವರಿಗೆ ಅಥವಾ ತಮಗೆ ಮುಳುವಾಗುತ್ತದೆ ಎಂದು ಗೊತ್ತಾಗುತ್ತಿದ್ದಂತೆ ಆಗ ಬಾಯಿಬಿಡುತ್ತಾರೆ ನೋಡಿ..ಕೆಲವೊಂದು ಸಿನಿಮಾಗಳಲ್ಲಿ ಕ್ಲೈಮಾಕ್ಸ್‌(Climax)ನಲ್ಲಿ ಸತ್ಯ ಗೊತ್ತಾಗಿದ್ದೂ ಉಂಟು. ಆದರೆ ಇತ್ತೀಚೆಗೆ ಸೀರಿಯಲ್‌ಗಳನ್ನ ನೋಡಿದರೆ ಈ ಹೈಡ್ ಅಂಡ್ ಸೀಕ್ ತುಸು ಹೆಚ್ಚಾಗಿದೆ ಎನ್ನಬಹುದು. ಇದು ಧಾರಾವಾಹಿಗಳಿಗೆ ಅಗತ್ಯವಾದರೂ, ಕೆಲವು ಕಡೆ ಇದು ಅತಿ ಎನಿಸುವ ಮಟ್ಟಕ್ಕೆ ಇರುತ್ತದೆ. ಹಾಗಾದಾರೆ ಯಾವ ಧಾರವಾಹಿಯಲ್ಲಿ ಯಾರು, ಏನನ್ನು ಮುಚ್ಚಿಟ್ಟಿದ್ದಾರೆ ಅಥವಾ ಗುಟ್ಟು ರಟ್ಟು ಮಾಡದೆ ಸುಮ್ಮನಿದ್ದಾರೆ ಎಂದು ನೋಡುವುದಾದರೆ...

ಅಮೃತಧಾರೆ
 

ವೀಕ್ಷಕರ ಬಹುದಿನಗಳ ಆಸೆಯೆಂದರೆ ನಾಯಕ ಗೌತಮ್‌- ನಾಯಕಿ ಭೂಮಿಕಾ ಒಂದಾಗಬೇಕು ಎಂಬುದು. ಆದರೆ ಇಲ್ಲಿ ನೋಡಿದರೆ ಭೂಮಿಕಾ ತಾನು ಯಾವ ಉದ್ದೇಶಕ್ಕಾಗಿ ಗೌತಮ್‌ಗೆ ಹತ್ತಿರವಾಗುತ್ತಿಲ್ಲ ಎಂಬುದನ್ನ ಬಾಯಿ ಬಿಡುತ್ತಿಲ್ಲ. ಅವರಿಬ್ಬರೂ ಒಂದಾಗುತ್ತಿಲ್ಲ. ಇದೇ ಈಗ ವೀಕ್ಷಕರಿಗೆ ತಲೆನೋವಾಗಿದೆ. ಅಷ್ಟೇ ಅಲ್ಲ, ಭೂಮಿಕಾ ಮಗನಿಗೂ ತನ್ನಪ್ಪ ಯಾರೂ ಎಂಬುದೇ ಗೊತ್ತಿಲ್ಲ. ಒಟ್ಟಾರೆ ಒಂದಲ್ಲ ಒಂದು ರೀತಿಯಲ್ಲಿ ಅಮೃತಧಾರೆಯಲ್ಲಿ ಹೈಡ್ ಅಂಡ್ ಸೀಕ್ ನಡೆಯುತ್ತಲೇ ಇದೆ. ಇದು ಯಾವಾಗ ಎಂಡ್ ಆಗುತ್ತದೆ ಎಂಬುದನ್ನ ಕಾದು ನೋಡಬೇಕಿದೆ.

ಅಣ್ಣಯ್ಯ
 

ಅಣ್ಣಯ್ಯ ಧಾರಾವಾಹಿಯಲ್ಲಿ ಗುಟ್ಟುಗಳ ಸರಮಾಲೆಯೇ ಇದೆ. ಇಲ್ಲಿ ನಾಯಕ ಶಿವು ಹಿಂದೆ ಏನಾಗಿದ್ದ ಎಂಬ ಬಗ್ಗೆ ಪಾರುಗೆ ತಿಳಿದೇ ಇಲ್ಲ. ಮುಂದಿನ ಸಂಚಿಕೆಯಲ್ಲಿ ಈ ಬಗ್ಗೆ ರಿವೀಲ್ ಆಗಬಹುದು ಎಂಬ ಮುನ್ಸೂಚನೆಯಂತೂ ಸದ್ಯಕ್ಕೆ ಸಿಕ್ಕಿದೆ. ಇನ್ನು ಶಿವು ಅಮ್ಮ ಶಾರದಮ್ಮನ ಬಗ್ಗೆಯೂ ವೀರಭದ್ರ ಎಲ್ಲರಿಂದಲೂ ಸತ್ಯ ಮುಚ್ಚಿಟ್ಟಿದ್ದಾನೆ. ಇನ್ನು ಪಿಂಕಿ-ಸೀನನ ಬಗ್ಗೆ ಮಾದಪ್ಪಣ್ಣನ ಬಳಿ ಗುಂಡಮ್ಮ ಏನನ್ನೂ ಹೇಳುತ್ತಿಲ್ಲ. ಹಾಗೆಯೇ ರಾಣಿ ಅತ್ತೆ ಮನೆಯಲ್ಲಿ ಹೇಗಿದ್ದಾಳೇ ಎಂದಾಗಲೀ, ಮನುವಿನ ಬಗ್ಗೆಯಾಗಲೀ ಅಣ್ಣಯ್ಯನಿಗೆ ಒಂಚೂರು ತಿಳಿದಿಲ್ಲ. ಈ ಮೊದಲೇ ಹೇಳಿದ ಹಾಗೆ ಅಣ್ಣಯ್ಯ ಸೀರಿಯಲ್‌ ಗುಟ್ಟುಗಳಿಂದ ಕೂಡಿದೆ.

ಕರ್ಣ
ಕರ್ಣ ಧಾರಾವಾಹಿ ಆರಂಭದಲ್ಲೇ ಕರ್ಣ ಯಾರೆಂಬ ವಿಷಯವನ್ನ ಮುಚ್ಚಿಡಲಾಗಿದೆ. ಆತನನ್ನು ಬೀದಿ ಮಗು ಎಂಬತಲೇ ಮನೆಯಲ್ಲಿ ವರ್ತಿಸಲಾಗುತ್ತಿದೆ. ಇನ್ನು ನಿತ್ಯಾಗೆ ಕರ್ಣ ತಾಳಿ ಕಟ್ಟಿಲ್ಲ, ಬರೀ ಶಾಸ್ತ್ರಗಳು ಮಾತ್ರ ಮುಗಿದಿವೆ. ಇದು ಕೂಡ ಯಾರಿಗೂ ಗೊತ್ತಿಲ್ಲ. ಹಾಗೆಯೇ ನಿತ್ಯಾ ಪ್ರೆಗ್ನೆಂಟ್ ಅನ್ನೋ ವಿಚಾರ ಕರ್ಣನಿಗೆ ಮಾತ್ರ ಗೊತ್ತಿತ್ತು. ಈಗ ನಿತ್ಯಾಗೆ ಮಾತ್ರ ತಿಳಿದದ್ದಾಯ್ತು. ಇನ್ನು ರಮೇಶ್ ಬಗ್ಗೆ ಎಲ್ಲ ಗೊತ್ತಿದ್ದರೂ ಕರ್ಣನ ಅಮ್ಮ ಹೇಳುವ ಹಾಗಿಲ್ಲ. ಹಾಗೆ ಹೆದರಿಸಿದ್ದಾನೆ ಆತ. ಇದ್ಯಾವಾಗ ರಿವೀಲ್ ಆಗುವುದೋ ಮುಂದೆ ಕಾದು ನೋಡಬೇಕಿದೆ.

ಲಕ್ಷ್ಮೀನಿವಾಸ
ಲಕ್ಷ್ಮೀನಿವಾಸದಲ್ಲಿ ಜಾಹ್ನವಿ-ಜಯಂತ್‌ ಪಾತ್ರಧಾರಿಗಳ ಬಗ್ಗೆ ಚರ್ಚೆಯಾಗುತ್ತಲೇ ಇರುತ್ತದೆ. ಇವರಿಬ್ಬರ ಬಗ್ಗೆ ಧಾರಾವಾಹಿ ವೀಕ್ಷಕರಿಗೆ ಹೆಚ್ಚೇನು ಹೇಳಬೇಕಿಲ್ಲ. ಜಾಹ್ನವಿ ತಾನು ಯಾರೆಂಬುದನ್ನೇ ಮುಚ್ಚಿಟ್ಟು ವಿಶ್ವನ ಮನೆಯಲ್ಲಿದ್ದಾಳೆ. ಜಯಂತ್‌ ಕೂಡ ತನ್ನ ಹಿನ್ನೆಲೆಯ ಬಗ್ಗೆ ಈವರೆಗೆ ಯಾರ ಬಳಿಯೂ ಹೇಳಿಲ್ಲ, ಹೇಳುವ ಹಾಗೆ ಕಾಣುತ್ತಿಲ್ಲ. ಹಾಗೆಯೇ ಈ ಹಿಂದೆ ಸಂತೋಷ್ ಮನೆ ಕಟ್ಟುತ್ತಿರುವ ವಿಷಯವನ್ನ ಹೆತ್ತವರ ಮುಂದೆ ಮುಚ್ಚಿಟ್ಟು ಅದೀಗ ಬಯಲಾಗಿದೆ. ಇನ್ನು ಜವರೇಗೌಡರ ಮೊದಲನೆಯ ಸೊಸೆಯ ಬಗ್ಗೆಯೂ ಮೊದಲಿನಿಂದ ಅನುಮಾನವಿದೆ. ಆಕೆ ಕೂಡ ಯಾರೆಂಬುದು ಈವರೆಗೆ ತಿಳಿದಿಲ್ಲ.

ಶ್ರಾವಣಿ ಸುಬ್ರಹ್ಮಣ್ಯ
ಇಲ್ಲಿ ಶ್ರಾವಣಿ ಅಮ್ಮನ ಬಗ್ಗೆ ಮೊದಲಿನಿಂದಲೂ ಗುಟ್ಟು ಬಿಟ್ಟು ಕೊಟ್ಟಿಲ್ಲ. ಇಷ್ಟು ದಿನ ಕಾಂತಮ್ಮನ ಗಂಡನ ಬಗ್ಗೆ ಹೈಡ್ ಮಾಡಲಾಗಿತ್ತು. ಇತ್ತೀಚೆಗೆ ಅವರ ಬಗ್ಗೆಯೂ ಗೊತ್ತಾಗಿದೆ.

ಪುಟ್ಟಕ್ಕನ ಮಕ್ಕಳು
ಸದ್ಯ ಇದೊಂದು ಧಾರಾವಾಹಿಯಲ್ಲಿ ಮುಚ್ಚಿಟ್ಟ ಗುಟ್ಟುಗಳೆಲ್ಲಾ ರಟ್ಟಾಗಿದೆ. ಇಲ್ಲಿ ಗುಟ್ಟುಗಳು ಬಹಳ ದಿನ ನಡೆಯುವುದಿಲ್ಲ, ಅಲ್ಲೇ ಡ್ರಾ ಅಲ್ಲೇ ಬಹುಮಾನದಂತಿದೆ.

ನೀವೂ ಸೀರಿಯಲ್ ಪ್ರಿಯರಾಗಿದ್ದು, ನಿಮಗೂ ಯಾವುದಾದರೂ ಧಾರವಾಹಿಗಳಲ್ಲಿನ ಗುಟ್ಟು ಗೊತ್ತಿದ್ದರೆ ನಮಗೆ ತಿಳಿಸಿ..

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

2 ಸತ್ಯ ಬಯಲು ಮಾಡಿದ 'ಲಕ್ಷ್ಮೀ ನಿವಾಸ' ನಿರ್ದೇಶಕರು, ವೀಕ್ಷಕರು ಫುಲ್ ಹ್ಯಾಪಿ
BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!