
ಬೆಂಗಳೂರು: ಕನ್ನಡದ ಖಾಸಗಿ ವಾಹಿನಿಯೊಂದು ಬಹಿರಂಗವಾಗಿ ಪತ್ರವೊಂದನ್ನು ಬರೆದುಕೊಂಡಿದೆ. ಈ ಪತ್ರ ಹಂಚಿಕೊಂಡಿರುವ ದಯವಿಟ್ಟು ನಮ್ಮನ್ನು ಕ್ಷಮಿಸಿಬಿಡಿ, ಇನ್ನು ಮುಂದೆಯೂ ಕ್ಷಮಿಸುತ್ತಲೇ ಇರಿ. ಯಾಕಂತ ಪತ್ರ ಓದಿರಿ ಎಂಬ ಶೀರ್ಷಿಕೆಯಡಿಯಲ್ಲಿ ಪತ್ರ ಶೇರ್ ಮಾಡಿಕೊಳ್ಳಲಾಗಿದೆ. ಪತ್ರದಲ್ಲಿ ಏನಿದೆ ಎಂಬುದರ ಮಾಹಿತಿ ಇಲ್ಲಿದೆ.
ವೈವಿಧ್ಯಮಯ, ವಿಶೇಷ, ವಿಭಿನ್ನ ಕಾರ್ಯಕ್ರಮಗಳ ಮೂಲಕ ಮನರಂಜನಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ನಿಮ್ಮ ಹೆಮ್ಮೆಯ ಜೀ ಕನ್ನಡ ಚಾನಲ್ ನಮ್ಮೆಲ್ಲರ ಮನಗೆದ್ದಿರುವುದು ಗೊತ್ತೇ ಇದೆ. ನಿಮ್ಮ ಪ್ರಶಂಸೆಯ ಜೊತೆಗೆ ಜೀ ಕನ್ನಡ ಚಾನಲ್ ಶುರುವಾದ ನಂತರ ಮನೋರಂಜನೆಯಲ್ಲೇ ಮುಳುಗುವ ನಾವು ರಿಮೋಟ್‌ನೇ ಮರೆತು ಬಿಡುತ್ತೀವಿ, ಚಾನಲ್ ಬದಲಾಯಿಸುವುದೇ ಇಲ್ಲ ಎನ್ನುವ ಪ್ರೀತಿಯ ಆರೋಪ ಕೇಳಿಬಂದಿದೆ. ನಮ್ಮ ಅದ್ಭುತ ಮನರಂಜನಾ ಕಾರ್ಯಕ್ರಮಗಳ ಮೂಲಕ ನಿಮಗೆ ಬೇರೆ ಚಾನಲ್ ಗಳನ್ನು ಮರೆಯುವಂತೆ ಮಾಡಿದ್ದಕ್ಕಾಗಿ ದಯವಿಟ್ಟು ಕ್ಷಮೆಯಿರಲಿ. ನಿಮ್ಮ ಕ್ಷಮೆಯ ಜೊತೆಜೊತೆಗೇ ನಿಮ್ಮ ಪ್ರೀತಿಯ ಆರೋಪವನ್ನು ನಾವು ಇನ್ನೂ ಹೆಚ್ಚು ಮಾಡುತ್ತೇವೆ ಎನ್ನುವ ಭರವಸೆ ನೀಡುತ್ತೇವೆ. ಧನ್ಯವಾದಗಳು.
ಈ ಕ್ಷಮಾಪನಾ ಪತ್ರ ಓದಿರುವ ವಾಹಿನಿಯ ವೀಕ್ಷಕರು, ನಿಮ್ಮ ಬೆನ್ನು ನೀವೇ ತಟ್ಟಿಕೊಳ್ಳುತ್ತಿದ್ದಾರೆ ಗೊತ್ತಾಗುತ್ತದೆ. ಹೊಸ ಧಾರಾವಾಹಿ, ರಿಯಾಲಿಟಿ ಶೋ ಉನ್ನತಿಯಿಂದ ಅವನತಿಯ ಕಡೆಗೆ ಹೋಗುತ್ತಿದೆ ಎಂದು ಕಮೆಂಟ್ ಮಾಡಿದ್ದಾರೆ. ಸ್ಟಾರ್ ಮೂವೀಸ್ ಅವರೂ ಸಹ ಹೀಗೆಯೇ ಕ್ಷಮೆ ಕೇಳಿದ್ದಾರೆ. 1 ದಿನದ ಹಿಂದೆ. ಇದು ಅದರ ನಕಲು ಅಂತ ಅನಿಸ್ತಾ ಇಲ್ಲ ಅನಿಸುತ್ತದೆ ಎಂದು ಬಹುತೇಕರು ನಕಾರಾತ್ಮಕವಾಗಿ ಪತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: Amruthdhaare Serial Latest Episode: ಅಂತೂ ಬಚ್ಚಿಟ್ಟ ಪ್ರೀತಿ ಮಾತು ಹೊರಬಂತು, ಈಗಲಾದರೂ ಅಮೃತಧಾರೆ ಹರಿಯತ್ತಾ?
ಕಮೆಂಟ್‌ಗಳು ಏನೇ ಬರಲಿ ಜೀ ಕನ್ನಡದಲ್ಲಿ ಪ್ರಸಾರವಾಗುವ ಸೀರಿಯಲ್ ಮತ್ತು ರಿಯಾಲಿಟಿ ಶೋಗಳು ಉತ್ತಮ ಟಿವಿಆರ್ ಪಡೆದುಕೊಳ್ಳುತ್ತವೆ. ಬೇರೆ ಖಾಸಗಿ ವಾಹಿನಿಗೆ ಹೋಲಿಕೆ ಮಾಡಿದ್ರೆ ಜೀ ಕನ್ನಡ ಮೊದಲ ಸ್ಥಾನದಲ್ಲಿ ಬರುತ್ತದೆ. ಕಳೆದ ಕೆಲವು ವರ್ಷಗಳಿಂದ ನಂಬರ್ ಒನ್ ಸ್ಥಾನ ಕಾಯ್ದುಕೊಂಡು ಬರುತ್ತಿದೆ.
ಇದನ್ನೂ ಓದಿ: ಪುಟ್ಟಕ್ಕನ ಹರಕೆ ಫಲಿಸಲಿಲ್ಲ, ಜೀವದ ಗೆಳತಿ ಉಳಿಯಲಿಲ್ಲ: ಬಡ್ಡಿ ಬಂಗಾರಮ್ಮ ಇನ್ನಿಲ್ಲ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.