
ಬೆಂಗಳೂರು (ಜ.22): ಬಿಗ್‌ಬಾಸ್ ಕನ್ನಡ ಸೀಸನ್ 10ರ ಪ್ರಭಲ ಸ್ಪರ್ಧಿಯಾಗಿದ್ದು, ಫೈನಲ್‌ಗೆ ಪ್ರವೇಶ ಮಾಡಿದರೂ ಒಮ್ಮೆಯೂ ಮನೆಯ ಕ್ಯಾಪ್ಟನ್ ಆಗದ ತುಕಾಲಿ ಸಂತೋಷ್ ಈಗ ಕೊನೇ ವಾರದಲ್ಲಿ ಕ್ಯಾಪ್ಟನ್ ಕೋಣೆಗೆ ನುಗ್ಗಿ ಅಲ್ಲಿ ಮಲಗಿ ಬಂದಿದ್ದಾನೆ. ಅಂದರೆ, ಕ್ಯಾಪ್ಟನ್ ಆಗದಿದ್ದರೂ, ನಾಯಕರ ಕೋಣೆಯಲ್ಲಿ ಮಲಗಿಬಂದ ಮೊದಲ ಕಂಟೆಸ್ಟೆಂಟ್ ಎಂಬ ಖ್ಯಾತಿಗೆ ಒಳಗಾಗುತ್ತಿದ್ದಾರೆ.'
ಬಿಗ್‌ಬಾಸ್ ಮನೆಯಲ್ಲಿ ಫೈನಲಿಸ್ಟ್ ಆದರೂ ತುಕಾಲಿ ಸಂತೋಷ್ ಅವರು ಒಮ್ಮೆಯೂ ಕ್ಯಾಪ್ಟನ್ ಆಗದೇ ಉಳಿದಿದ್ದಾರೆ. ಆದರೆ, ಇನ್ನೇನು ಒಂದು ವಾರದಲ್ಲಿ ಫೈನಲ್ ಮುಗಿದು ಮನೆಗೆ ಹೋಗುತ್ತಿದ್ದರೂ ಕ್ಯಾಪ್ಟನ್ ಕೋಣೆಗೆ ಹೆಜ್ಜೆಯನ್ನೂ ಇಡಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಬಿಗ್‌ಬಾಸ್ ಕನ್ನಡ 10 ಸೀಸನ್‌ನಲ್ಲಿ ತುಕಾಲಿ ಸಂತೋಷ್ ಅವರು ಬಿಗ್‌ಬಾಸ್ ಮನೆಯ ಕ್ಯಾಪ್ಟನ್ ಕೋಣೆಗೆ ಹೆಜ್ಜೆಯನ್ನೇ ಇಡದೆ ವಾಪಸ್ ಹೋಗುತ್ತಿರುವ ಮೊದಲ ಕಂಟೆಸ್ಟಂಟ್ ಕೂಡ ಆಗುತ್ತಿದ್ದರು. ಇನ್ನು ತುಕಾಲಿ ಸಂತೋಷ್ ಕೂಡ ತಾವು ಕ್ಯಾಪ್ಟನ್ ಆಗಲಿಲ್ಲ ಎಂಬ ಕೊರಗಿನಿಂದಲೇ ಮನೆಯಲ್ಲಿ ದಿನಗಳನ್ನು ದೂಡುತ್ತಿದ್ದರು.
ರಾಮಲಲ್ಲಾ ಪ್ರತಿಷ್ಠಾಪನೆಗೆ ಪ್ರಥಮ್ ಧಮಾಕಾ: ರಜೆ, ಡಬಲ್ ಸಂಬಳ ಜೊತೆ ವಿಮಾನದಲ್ಲಿ ಅಯೋಧ್ಯೆ ದರ್ಶನ!
ಇನ್ನು ಬಿಗ್‌ಬಾಸ್ ಫೈನಲಿಸ್ಟ್ ಆದರೂ ಕ್ಯಾಪ್ಟನ್ ಕೋಣೆ ಉಪಯೋಗಿಸದೇ ವಾಪಸ್ ಕಳಿಸದ್ದಕ್ಕೆ ಇಚ್ಛಿಸಿದ ಬಿಗ್‌ಬಾಸ್ ಸಿಬ್ಬಂದಿ ತುಕಾಲಿ ಸಂತೋಷ್ ಅವರಿಗೆ ಒಂದು ದಿನದ ಮಟ್ಟಿಗೆ ಕ್ಯಾಪ್ಟನ್ ಕೋಣೆಯಲ್ಲಿ ಬಳಕೆ ಮಾಡಲು ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿದುಬಂದಿದೆ. ಆದ್ದರಿಂದ ಮಧ್ಯರಾತ್ರಿ ಬಾಕಿ ಆರು ಕಂಟೆಸ್ಟಂಟ್‌ಗಳು ಮಲಗಿದ ನಂತರ ಕ್ಯಾಪ್ಟನ್ ಕೋಣೆಗೆ ತೆರಳಿದ ತುಕಾಲಿ ಸಂತೋಷ್ ಅವರು ಅಲ್ಲಿ ಆನಂದದಿಂದಲೇ ಮಲಗಿ ಒದ್ದಾಡಿ ಖುಷಿ ಅನುಭವಿಸಿದ್ದಾರೆ. ಕ್ಯಾಪ್ಟನ್ ಆಗದೇ ಕ್ಯಾಪ್ಟನ್ ಕೋಣೆ ಉಪಯೋಗಿಸಿದ ಮೊದಲ ಸ್ಪರ್ಧಿಯೂ ಇವರಾಗಿದ್ದಾರೆ.
ಈ ಬಗ್ಗೆ ಕಲರ್ಸ್ ಕನ್ನಡ ವಾಹಿನಿಯು ಪ್ರೋಮೋ ವಿಡಿಯೋ ಬಿಡುಗಡೆ ಮಾಡಿದ್ದು, ತುಕಾಲಿ ಸಂತೋಷ್ ಕುಣಿದಾಡುವ ದೃಶ್ಯಗಳನ್ನು ನೀವು ಕಾಣಬಹುದು. ಆದರೆ, ಬಿಗ್‌ಬಾಸ್ ಮನೆಯಲ್ಲಿ ಒಬ್ಬ ಕಂಟೆಸ್ಟೆಂಟ್ ಫೈನಲ್‌ಗೆ ಬಂದಿದ್ದರೂ ಮನೆಯ ಯಾವುದೇ ಸೌಕರ್ಯಗಳನ್ನು ಬಳಸದೇ ವಂಚಿತರಾಗಬಾರದೆಂದು ಈ ಸೌಲಭ್ಯ ಕೊಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಪ್ರೋಮೋದಲ್ಲಿಯೇ ಒಂದು ತೋರಿಸಿ ಮತ್ತೊಂದು ವಿಚಾರವನ್ನು ಸಂಚಿಕೆಯಲ್ಲಿ ರಿವೀಲ್ ಮಾಡುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.
ಬಿಗ್‌ಬಾಸ್ ಫಿನಾಲೆಗೆ ದಿನಗಳು ಹತ್ತಿರ ಬರುತ್ತಿದ್ದಂತೆಯೇ ಪೈಪೋಟಿ ತುಸು ಜಾಸ್ತಿಯಾಗಿಯೇ ಕಾಣಿಸುತ್ತಿದೆ. ಸದ್ಯ ದೊಡ್ಮನೆಯಲ್ಲಿ ಆರು ಜನ ಉಳಿದುಕೊಂಡಿದ್ದಾರೆ. ಇದಾಗಲೇ ಸಂಗೀತಾ ಶೃಂಗೇರಿ ಡೈರೆಕ್ಟ್ ಆಗಿ ಫಿನಾಲೆಗೆ ಟಿಕೆಟ್ ಪಡೆದುಕೊಂಡಿದ್ದರೆ, ತುಕಾಲಿ ಸಂತೋಷ್ ನಾಮಿನೇಷನ್‌ನಿಂದ ಪಾರಾಗಿದ್ದರು. ನಂತರ, ವಿನಯ್‌ಗೌಡ, ಡ್ರೋನ್ ಪ್ರತಾಪ್, ವರ್ತೂರು ಸಂತೋಷ್ ಹಾಗೂ ಕಾರ್ತಿಕ್ ಮಹೇಶ್ ನಾಮಿನೇಷನ್‌ನಿಂದ ಪಾರಾಗಿ ಅಗ್ರ ಫೈನಲಿಸ್ಟ್ 6ರ ಪಟ್ಟಿಗೆ ಪ್ರವೇಶ ಪಡೆದಿದ್ದಾರೆ. ಆದರೆ, ನಮ್ರತಾಗೌಡ ಮನೆಯಿಂದ ಎಲಿಮಿನೇಟ್ ಆಗಿ ಹೊರಗೆ ಹೋಗಿದ್ದಾರೆ. ಈ ವಾರದ ನಡುವೆ ಮತ್ತೊಬ್ಬ ಸ್ಪರ್ಧಿ ಹೊರಗೆ ಹೋಗಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.