ಸೀತಾ ಅಮ್ಮ ಮಾಡಿದ್ರು ಅಕ್ಷತೆ ಪಾಯಸ: ಪುಟಾಣಿ ಸಿಹಿ ಜೊತೆ ಮಕ್ಕಳಿಂದ ರಾಮನ ಪ್ರತಿಷ್ಠಾಪನೆ!

Published : Jan 22, 2024, 04:09 PM IST
 ಸೀತಾ ಅಮ್ಮ ಮಾಡಿದ್ರು ಅಕ್ಷತೆ ಪಾಯಸ: ಪುಟಾಣಿ ಸಿಹಿ ಜೊತೆ ಮಕ್ಕಳಿಂದ ರಾಮನ ಪ್ರತಿಷ್ಠಾಪನೆ!

ಸಾರಾಂಶ

ಸೀತಾರಾಮ ಸೀರಿಯಲ್​ನಲ್ಲಿ ಪುಟಾಣಿ ಸಿಹಿಯ ನೇತೃತ್ವದಲ್ಲಿ ನಡೆದಿದೆ ಶ್ರೀರಾಮನ ಪ್ರತಿಷ್ಠಾಪನೆ. ಇದರ ವಿವರ ಇಲ್ಲಿದೆ...  

ಇಂದು ಭಾರತ ಮಾತ್ರವಲ್ಲದೇ ಬಹುತೇಕ ದೇಶಗಳಲ್ಲಿ ರಾಮಮಯವಾಗಿದೆ. ಇನ್ನು ಭಾರತದಲ್ಲಂತೂ ಹೇಳುವುದೇ ಬೇಡ.  ಎಲ್ಲೆಡೆ ರಾಮನಾಮನ ಜಪ ಜೋರಾಗಿ ನಡೆದಿದೆ. ಎಲ್ಲೆಲ್ಲೂ ಕೇಸರಿಮಯವಾಗಿದೆ. 550 ವರ್ಷಕ್ಕೂ ಅಧಿಕ ಕಾಯುವಿಕೆ, ನಾಲ್ಕು ಲಕ್ಷಕ್ಕೂ ಅಧಿಕ ಜನರ ಪ್ರಾಣತ್ಯಾಗದ ಬಳಿಕ ಕೊನೆಗೂ ತವರೂರು ಅಯೋಧ್ಯೆಗೆ ಶ್ರೀರಾಮ ಮರಳಿದ್ದಾನೆ. ಬಾಲರಾಮನ ರೂಪದಲ್ಲಿ ಇಂದು ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೊಂಡಿದ್ದಾನೆ. ಈ ಐತಿಹಾಸಿಕ ಕ್ಷಣಕ್ಕೆ ದೇಶ-ವಿದೇಶಗಳ ಕೋಟಿ ಕೋಟಿ ಜನರು ಸಾಕ್ಷಿಯಾದರು. ಪ್ರಾಣಪ್ರತಿಷ್ಠೆಯ ಅಪೂರ್ವ ಕ್ಷಣವನ್ನು ಕಣ್ತುಂಬಿಸಿಕೊಂಡರು. 

ಇಂದು ಪ್ರಾಣಪ್ರತಿಷ್ಠೆ ಅಂಗವಾಗಿ ಮನೆಮನೆಗೂ ಹೋಗಿ ಅಕ್ಷತೆ ಕೊಟ್ಟು ಪ್ರಾಣಪ್ರತಿಷ್ಠೆ ಸಮಾರಂಭಕ್ಕೆ ಆಹ್ವಾನ ನೀಡಲಾಗಿತ್ತು. ಈ ಅಕ್ಷತೆಯಿಂದ ಸಿಹಿ ತಿನಿಸು ಮಾಡಿ ಹಲವರು ಸೇವನೆ ಮಾಡಿದ್ದರೆ, ಇನ್ನು ಕೆಲವರು ಅದನ್ನು ತಮ್ಮ ದೇವರ ಮನೆಯಲ್ಲಿಯೇ ಇಟ್ಟು ಪೂಜೆ ಸಲ್ಲಿಸುತ್ತಿದ್ದಾರೆ. ಅಕ್ಷತೆ ಮನೆಗೆ ಬಂದ ಬಳಿಕ ಮಾಂಸ ಸೇವನೆ ಮಾಡುವುದನ್ನೂ ಕೆಲವರು ನಿಲ್ಲಿಸಿರುವ ಘಟನೆ ನಡೆದಿದೆ. ಹೀಗೆ ತಮ್ಮದೇ ಆದ ರೀತಿಯಲ್ಲಿ ಈ ಅಕ್ಷತೆಯನ್ನು ಶ್ರೀರಾಮನ ಭಕ್ತರು  ಸ್ವೀಕರಿಸಿದ್ದಾರೆ.

ನೃತ್ಯ, ಸಂಗೀತ, ಜಪದ ಮೂಲಕ ಸ್ಯಾಂಡಲ್​ವುಡ್​​ನಲ್ಲಿ ರಾಮನ ಸ್ಮರಣೆ... ಯಾರು ಹೇಗೆಲ್ಲಾ ಆಚರಿಸಿದ್ರು ನೋಡಿ...

ಇದೀಗ ಸೀತಾರಾಮನ ಸೀರಿಯಲ್​ನಲ್ಲಿ ಸೀತಾಳ ಅಮ್ಮ ಮನೆಗೆ ಬಂದಿರುವ ಅಕ್ಷತೆಯಿಂದ ಪಾಯಸ ಮಾಡಿದ್ದಾಳೆ. ಅದೇ ಇನ್ನೊಂದೆಡೆ ಸಿಹಿ ಅಜ್ಜನಿಂದ ಹಣ ಕೇಳಿದ್ದಾಳೆ. ಯಾಕೆ ಎಂದು ಹೇಳಲಿಲ್ಲ. ಆದರೆ ಎಷ್ಟು ಹಣ ಬೇಕು ಎಂದೂ ಅವಳಿಗೆ ಗೊತ್ತಿಲ್ಲ. ಆದರೆ ಮೊಮ್ಮಗಳು ಹಾಗೆಲ್ಲಾ ಸುಮ್ಮನೇ ಹಣ ಕೇಳುವುದಿಲ್ಲ ಎಂದು ಗೊತ್ತಿದ್ದ ಅಜ್ಜ, 100 ರೂಪಾಯಿ ಕೊಟ್ಟಿದ್ದಾನೆ. ಕೊನೆಗೆ ಆ ಹಣದಿಂದ ಸಿಹಿ ಏನು ಮಾಡುತ್ತಾಳೆ ಎನ್ನುವ ಕುತೂಹಲ ವೀಕ್ಷಕರಿಗೆ ಉಂಟಾಗುತ್ತದೆ.

ಅಸಲಿಗೆ ಸಿಹಿ ಆ ಹಣವನ್ನು ತೆಗೆದುಕೊಂಡು ಇಟ್ಟಿಗೆ ಖರೀದಿಗೆ ಕೊಟ್ಟಿದ್ದಾಳೆ. ಸಿಹಿ ಜೊತೆ ಓಣಿಯ ಮಕ್ಕಳೆಲ್ಲರೂ ಸೇರಿ ಇಟ್ಟಿಗೆ ಇಟ್ಟು ತಮ್ಮದೇ ಆದ ರೀತಿಯಲ್ಲಿ ಗುಡಿ ನಿರ್ಮಿಸಿದ್ದಾರೆ. ಅದರ ಮೇಲೆ ಶ್ರೀರಾಮ ಫೋಟೋ ಇಟ್ಟು, ಶ್ರೀರಾಮನಿಗೆ ಜೈಜೈಕಾರ ಹಾಕಿದ್ದಾರೆ. ಈ ಮೂಲಕ ಮಕ್ಕಳು ಅಯೋಧ್ಯೆಯಲ್ಲಿ ನಡೆಯುತ್ತಿರುವ ರಾಮಲಲ್ಲಾ ಪ್ರಾಣಪ್ರತಿಷ್ಠೆಗೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಿದ್ದಾರೆ. ಇದರ ಪ್ರೊಮೋ ಅನ್ನು ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿದ್ದು, ಕಮೆಂಟ್​ ತುಂಬಾ ಜೈ ಶ್ರೀರಾಮ್​ ಎನ್ನುವ ಕಮೆಂಟ್​ಗಳು ತುಂಬಿಹೋಗಿವೆ. ಇಂದಿನ ಮಕ್ಕಳಿಗೂ ಇಂಥ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಬಗ್ಗೆ ಹೇಳಿಕೊಡುತ್ತಿರುವ ಸೀರಿಯಲ್​ ತಂಡಕ್ಕೆ ಹಲವರು ಭೇಷ್​ ಎನ್ನುತ್ತಿದ್ದಾರೆ. ಇನ್ನು ಕೆಲವರು ಆದಷ್ಟು ಬೇಗ ಸೀರಿಯಲ್​ ಸೀತಾ-ರಾಮನನ್ನೂ ಒಂದು ಮಾಡಿ ಎನ್ನುತ್ತಿದ್ದಾರೆ. 

ಕೊಟ್ಟ ಮಾತಿನಂತೆ ನಡೆದ ಹನುಮಾನ್​ ಚಿತ್ರತಂಡ: ಅಯೋಧ್ಯೆಗೆ 2.67 ಕೋಟಿ ದೇಣಿಗೆ- ಹೀಗಿದೆ ಲೆಕ್ಕಾಚಾರ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?