
ಕಳೆದ ಕೆಲವು ದಿನಗಳಿಂದ ತುಕಾಲಿ ಸಂತೋಷ್ ಗಂಭೀರವಾಗಿಬಿಟ್ಟಿದ್ದರು. ಮೊದಲ ವಾರದಲ್ಲಿ ಅವರು ಮಾಡಿದ ಕಾಮಿಡಿಯ ಕ್ವಾಲಿಟಿ ಬಗ್ಗೆ ಸ್ವತಃ ಕಿಚ್ಚ ಸುದೀಪ್ ಅವರೇ ತರಾಟೆಗೆ ತೆಗೆದುಕೊಂಡಿದ್ದರು. ‘ನಿಮ್ಮ ಕಾಮಿಡಿ ಬೇರೆಯವರ ಮನಸ್ಸನ್ನು ನೋಯಿಸುತ್ತದೆ’ ಎಂಬ ಮಾತು ಪದೇ ಪದೇ ಮನೆಮಂದಿಯ ಬಾಯಲ್ಲಿ ಬರುತ್ತಿತ್ತು. ಇದರಿಂದ ಹಾಸ್ಯ ಮಾಡಲೇ ಹಿಂಜರಿಯುತ್ತಿದ್ದ ತುಕಾಲಿ ಅವರು ಗಂಭೀರವಾಗಿಬಿಟ್ಟಿದ್ದರು. ಮನೆಯೊಳಗಿನ ಸನ್ನಿವೇಶಗಳು, ಟಾಸ್ಕ್‌ಗಳು ಮತ್ತು ಜಗಳಗಳೂ ಅವರು ಗಂಭೀರವಾಗಲು ಕಾರಣವಿರಬಹುದು.
ಆದರೆ ಈವತ್ತು ಬಿಗ್‌ಬಾಸ್ ಮನೆಯಲ್ಲಿ ಮತ್ತೆ ನಗೆಯ ಹೊನಲು ಹರಡಿದೆ. ಆ ನಗೆಯ ಅಲೆಯಲ್ಲಿ ಮನೆಯ ಸದಸ್ಯರು ಪರಸ್ಪರ ಭಿನ್ನಾಭಿಪ್ರಾಯಗಳನ್ನು ಮರೆತು ನಕ್ಕು ನಲಿದಿದ್ದಾರೆ. ಆ ನಗುವಿಗೆ ಕಾರಣವಾದವರು ತುಕಾಲಿ ಸಂತೋಷ್! ಈವತ್ತಿನ ಎಪಿಸೋಡ್ ಸಖತ್ ಎಂಟರ್‍ಟೈನಿಂಗ್ ಆಗಿರುತ್ತದೆ ಎಂಬುದರ ಸೂಚನೆ JioCinema ಬಿಡುಗಡೆ ಮಾಡಿರುವ ಬೆಳಗಿನ ಪ್ರೋಮೊದಲ್ಲಿಯೇ ಸಿಕ್ಕಿದೆ.
‘ಬಾರೇ ರಾಜಕುಮಾರಿ’ ಎಂದು ಕಾರ್ತಿಕ್ ಅವರು ತುಕಾಲಿ ಸಂತೋಷ್ ಹೆಗಲ ಮೇಲೆ ಕೈ ಹಾಕಿ ಕರೆದುಕೊಂಡು ಬಂದಾಗ ಇಡೀ ಮನೆಯೇ ದಂಗಾಬಿಟ್ಟಿತ್ತು. ಯಾಕೆಂದರೆ ತುಕಾಲಿ ಅವರ ವೇಷ ಬದಲಾಗಿತ್ತು! ಅವರು ‘ಚೂಡಿದಾರ ತೊಟ್ಟ ಮರಿಜಿಂಕೆ’ಯಾಗಿ ಬದಲಾಗಿದ್ದರು!
ಬಂದವರು ವರ್ತೂರ್ ಸಂತೋಷ್ ಅವರ ಹೆಗಲಿಗೆ ಕೈ ಹಾಕಿ ನುಲಿಯುತ್ತ, ‘ವರ್ತೂ… ಯಾಕೆ ನನ್ನನ್ನ ಬಿಟ್ಬಟ್ಟು ಒಬ್ನೇ ಟೊಮೆಟೊ ಮಾರೋಕೆ ಹೋಗಿದ್ದೆ’ ಎಂದು ಕೇಳಿದಾಗಲಂತೂ ಮನೆಯವರೆಲ್ಲರೂ ಬಿದ್ದು ಬಿದ್ದು ನಗುವಂತಾಯ್ತು.
ಯಾವೊಳು ಬಕೆಟ್ ಹಿಡಿಯೋದು, ಅಲ್ಲಿ ಕೂತಿದಾನಲ್ಲಾ ಅವ್ನು ಬಕೆಟ್ ಹಿಡಿಯೋದು; ಸುನಾಮಿಯಾದ ನಮ್ರತಾ!
‘ಇನ್ನೊಂದ್ ವಿಷ್ಯ ಗೊತ್ತಾ? ಯಾವಾಗ ನನ್ನ ತಂಗಿ ಸಿಕ್ರೂ ನಾನು ಜೋರಾಗಿ ತಬ್ಕೋತೀನಿ’ ಎಂದು ನಮ್ರತಾ ಕಡೆಗೆ ಹೋದರೆ, ನಮ್ರತಾಕಿರುಚುತ್ತ ಓಡಿಹೋಗಿಬಿಟ್ಟರು. ಅಷ್ಟೇ ಅಲ್ಲ, ಈ ‘ಹೊಸ ಹುಡುಗಿ’ಯಿಂದ ‘ಪಪ್ಪಿ’ ತೆಗೆದುಕೊಳ್ಳಲು ಪೈಪೋಟಿಯೇ ನಡೆದಿದೆ. ‘ನೀವೆಷ್ಟು ಬರ್ಗೆಟ್ಟಿದೀರಾ ಅಂತ ಈವಾಗ ಗೊತ್ತಾಗ್ತಿದೆ’ ಎಂದು ಸಂತೋಷ್ ಹಣೆ ಹಣೆ ಚಚ್ಚಿಕೊಳ್ತಿದ್ದಾರೆ.
ತಲೆ ತಗ್ಗಿಸಿದ ಕಾರ್ತಿಕ್; ಗೇಮ್ ನೆಪದಲ್ಲಿ ವೈಯಕ್ತಿಕ ತೇಜೋವಧೆಗೆ ಇಳಿದರಾ ವಿನಯ್ ಅಂಡ್ ಟೀಮ್?
ಬಿಗ್ ಬಾಸ್ ಶೋದಲ್ಲಿ ಏನಾಗುತ್ತಿದೆ ಎಂದು ನೋಡಲು, ಈ ಮೋಜಿನ ಆಟ ನೋಡಿ ಮಜಾ ತೆಗೆದುಕೊಳ್ಳಲು JioCinemaದಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್ ಕನ್ನಡವನ್ನು ವೀಕ್ಷಿಸಿ. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಿ. IG - https://www.instagram.com/p/CzaJN2htR98/. ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ರಾತ್ರಿ 9.30ಕ್ಕೆ ಹಾಗೂ ಶನಿವಾರ-ಭಾನುವಾರದ ಸಂಚಿಕೆಗಳನ್ನು ರಾತ್ರಿ 9.00ಕ್ಕೆ ವೀಕ್ಷಿಸಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.