ನೋಡಲೇಬೇಕಾದ 5 ಹೃದಯ ವಿದ್ರಾವಕ ಕಥೆಗಳ ಸೈಕಲಾಜಿಕಲ್ ಥ್ರಿಲ್ಲರ್ ವೆಬ್ ಸಿರೀಸ್‌

Published : Mar 12, 2025, 03:42 PM ISTUpdated : Apr 16, 2025, 12:41 PM IST
ನೋಡಲೇಬೇಕಾದ 5 ಹೃದಯ ವಿದ್ರಾವಕ ಕಥೆಗಳ ಸೈಕಲಾಜಿಕಲ್ ಥ್ರಿಲ್ಲರ್ ವೆಬ್ ಸಿರೀಸ್‌

ಸಾರಾಂಶ

ಇತ್ತೀಚಿನ ದಿನಗಳಲ್ಲಿ ಸೈಕಲಾಜಿಕಲ್ ಥ್ರಿಲ್ಲರ್ ಕಥೆಗಳುಳ್ಳ ಸಿನಿಮಾ ಮತ್ತು ವೆಬ್ ಸಿರೀಸ್‌ಗಳು ಹೆಚ್ಚು ಜನಪ್ರಿಯವಾಗಿವೆ. ಈ ಲೇಖನದಲ್ಲಿ ಐದು ಸೂಪರ್ ಹಿಟ್ ಸೈಕಲಾಜಿಕಲ್ ಥ್ರಿಲ್ಲರ್ ವೆಬ್ ಸಿರೀಸ್‌ಗಳ ಮಾಹಿತಿಯನ್ನು ನೀಡಲಾಗಿದೆ, ಇವು ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿವೆ.

ತ್ತೀಚಿನ ದಿನಗಳಲ್ಲಿ ಜನರು ಸೈಕಲಾಜಿಕಲ್ ಥ್ರಿಲ್ಲರ್ ಕಥೆಯನ್ನು ಒಳಗೊಂಡಿರುವ ಸಿನಿಮಾ, ಕಿರುಚಿತ್ರ ಮತ್ತು ವೆಬ್‌ ಸಿರೀಸ್‌ಗಳನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ. ಭಾರತದಲ್ಲಿ ಸೈಕಲಾಜಿಕಲ್ ಥ್ರಿಲ್ಲರ್‌ಗಳು ಸಿನಿಮಾಗಳು ಹೆಚ್ಚು ಜನಪ್ರಿಯಗೊಂಡಿದೆ. ಒಟಿಟಿ ಪ್ಲಾಟ್‌ಫಾರಂಗಳಲ್ಲಿ ಜನರು ಎಲ್ಲಾ ಭಾಷೆಯ ಸಿನಿಮಾಗಳನ್ನು ನೋಡುತ್ತಿದ್ದಾರೆ. ಇಷ್ಟು ಮಾತ್ರವಲ್ಲ ಹಾಲಿವುಡ್, ಕೊರಿಯನ್, ಚೀನಿ ಸೇರಿದಂತೆ ವಿದೇಶಿ ಸಿನಿಮಾಗಳನ್ನು ತಮಗೆ ಬೇಕಾದ ಭಾಷೆಗೆ ಕನ್ವರ್ಟ್ ಮಾಡಿಕೊಂಡು ಜನರು ನೋಡುತ್ತಾರೆ. ಹಾಗಾಗಿ  ಸೈಕಲಾಜಿಕಲ್ ಥ್ರಿಲ್ಲರ್ ಕಥೆಯ ಸಿನಿಮಾಗಳು ವಿಭಿನ್ನ ಕೆಟಗೆರಿಗೆ ಸೇರುತ್ತವೆ. ಇಂತಹ ಸಿನಿಮಾಗಳು ನೇರವಾಗಿ ವೀಕ್ಷಕರ ಮಾನಸಿಕತೆ ಮೇಲೆ ಹಿಡಿತವನ್ನು ಸಾಧಿಸುತ್ತವೆ. ಹಾಗಾಗಿ ಜನರು ಸಿನಿಮಾಗಳು ಕೊನೆ ಕ್ಷಣದವರೆಗೂ ವೀಕ್ಷಿಸುತ್ತಾರೆ. ಈ ಲೇಖನದಲ್ಲಿ ಐದು ಸೂಪರ್ ಹಿಟ್ ಸೈಕಲಾಜಿಕಲ್ ಥ್ರಿಲ್ಲರ್‌ ವೆಬ್ ಸಿರೀಸ್ ಮಾಹಿತಿಯನ್ನು ನೀಡುತ್ತಿದ್ದೇವೆ.

ಈ ಐದು ವೆಬ್ ಸಿರೀಸ್‌ಗಳು ಒಟಿಟಿಯಲ್ಲಿ ಲಭ್ಯವಿದ್ದು, ವೀಕ್ಷಕರು ಬಿಡುವಿನ ಸಮಯದಲ್ಲಿ ಇವುಗಳನ್ನು ನೋಡಿ ಆನಂದಿಸಬಹುದು. ಆ ಐದು ವೆಬ್ ಸಿರೀಸ್‌ಗಳು ಯಾವವು ಎಂಬದನ್ನು ನೋಡೋಣ ಬನ್ನಿ. 

1.ರುದ್ರ: ದಿ ಏಜ್ ಆಫ್ ಡಾರ್ಕ್‌ನೆಸ್ (Rudra:The Edge Of Darkness)
ಬಿಟೌನ್ ಅಂಗಳದ ಸೈಕಲಾಜಿಕಲ್ ಥ್ರಿಲ್ಲರ್ ವೆಬ್ ಸಿರೀಸ್‌ನ್ನು ಜಿಯೋ ಹಾಟ್‌ಸ್ಟಾರ್‌ನಲ್ಲಿ ನೋಡಬಹುದು. ಇದು ಬ್ರಿಟಿಷ್ ಶೋ Luther ಆಧಾರಿತವಾಗಿದೆ. ಅಜಯ್ ದೇವಗನ್, ರಾಶಿ ಖನ್ನಾ ಮತ್ತು ಇಶಾ ಡಿಯೋಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅಜಯ್ ದೇವ್‌ಗನ್ ಅವರ ನಟನೆ ನಿಮ್ಮನ್ನು ಮೂಕವಿಸ್ಮಿತರನ್ನಾಗಿ ಮಾಡುತ್ತದೆ.

2.ದುರಂಗ (Duranga)
ಇದು ಸೀರಿಯಲ್ ಕಿಲ್ಲರ್ ಒಬ್ಬನ ಕಥೆಯನ್ನು ಒಳಗೊಂಡಿದೆ. ಈ ಪ್ರಕರಣಗಳ ತನಿಖೆಯನ್ನು ಮಾಡೋದೇ ಈ ವೆಬ್‌ ಸಿರೀಸ್ ಕಥೆ. ಈ ವೆಬ್ ಸಿರೀಸ್‌ನ್ನು ಜಿ5 (ZEE5) ಪ್ಲಾಟ್‌ಫಾರಂನಲ್ಲಿ ವೀಕ್ಷಿಸಬಹುದು. 

3.ಅಸುರ್ (Asur)
ಇದು ಸೈಕಲಾಜಿಕಲ್ ಮತ್ತು ಸಸ್ಪೆನ್ಸ್ ಕ್ರೈಂ ಥ್ರಿಲ್ಲರ್ ಕಥೆಯನ್ನು ಹೊಂದಿದ್ದು, ನೋಡುಗರನ್ನು ಕೊನೆಯ ಸಂಚಿಕೆಯವರೆಗೂ ಕರೆದುಕೊಂಡು ಹೋಗುತ್ತದೆ. ಈ ವೆಬ್‌ ಸಿರೀಸ್‌ನಲ್ಲಿರುವ ಟ್ವಿಸ್ಟ್‌ಗಳಿಗೆ  ನೋಡುಗರು ಫಿದಾ ಆಗುತ್ತಾರೆ. ಅರ್ಷದ್ ವಾರ್ಸಿ, ವರುಣ್ ಶೋಬಿತಾ, ರಿದ್ಧಿ ಡೊಗಾರ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಈ ವೆಬ್ ಸಿರೀಸ್ ಜಿಯೋ ಸಿನಿಮಾ (JioCinema) ಪ್ಲಾಟ್‌ಫಾರಂನಲ್ಲಿದೆ. 

ಇದನ್ನೂ ಓದಿ: 50 ವರ್ಷಗಳಲ್ಲಿಯೇ ಇದುವರೆಗೂ ಯಾರು ಮಾಡದ ಹಾರರ್ ಸಿನಿಮಾ; ಹಲವು ದೇಶಗಳಲ್ಲಿ ಬ್ಯಾನ್ ಆದ ಚಿತ್ರ!

4.ಮುಖ್‌ಬೀರ್: ದಿ ಸ್ಟೋರಿ ಆಫ್ ಸ್ಪೈ (Mukhbir: Story of a Spy)
ಜಿ5ನಲ್ಲಿ ಲಭ್ಯವಿರೋ ಈ ವೆಬ್ ಸಿರೀಸ್ ಓರ್ವ ಗೂಢಚಾರನ ಕಥೆಯನ್ನು ಒಳಗೊಂಡಿದೆ. 1965ರ ಯುದ್ಧದ ಸಮಯದಲ್ಲಿ ಪ್ರಮುಖ ಗುಪ್ತಚರವನ್ನು ಒದಗಿಸುವ ಮೂಲಕ ಭಾರತದ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ ನಾಯಕನ ಕಥೆಯನ್ನು ಈ ವೆಬ್‌ ಸಿರೀಸ್ ಹೊಂದಿದೆ. ಇದು ಪಾಕಿಸ್ತಾನದ 'ಆಪರೇಷನ್ ಜಿಬ್ರಾಲ್ಟರ್' ಮತ್ತು 'ಆಪರೇಷನ್ ಗ್ರ್ಯಾಂಡ್ ಸ್ಲ್ಯಾಮ್' ಅನ್ನು ಸಮರ್ಥವಾಗಿ ಎದುರಿಸಲು ಭಾರತಕ್ಕೆ ಸಹಾಯ ಮಾಡಿತು.

5.ಬೆಸ್ಟ್‌ ಸೆಲ್ಲರ್ (Bestseller)
ಬರವಣಿಗೆಯಲ್ಲಿ ಸಮಸ್ಯೆ ಕಾಣುತ್ತಿರುವ ಓರ್ವ, ಉತ್ಸಾಹಭರಿತ ಲೇಖಕಿಯನ್ನು ಭೇಟಿಯಾಗುತ್ತಾನೆ. ನಂತರ ಆಕೆಯ ಕಥೆಯನ್ನೇ ತನ್ನ ಕಾದಂಬರಿಯಲ್ಲಿ ಬರೆಯಲು ನಿರ್ಧರಿಸುತ್ತಾನೆ. ಇದೇ ವೇಳೆ ಆತನನ್ನ ನಾಶ ಮಾಡಲು ಪ್ಲಾನ್ ನಡೆಯುತ್ತದೆ. ಇದುವೇ ಬೆಸ್ಟ್ ಸೆಲ್ಲರ್ ವೆಬ್ ಸಿರೀಸ್ ಕಥೆ. ನೀವು ಇದನ್ನು ಪ್ರೈಮ್ ವಿಡಿಯೋದಲ್ಲಿ ವೀಕ್ಷಿಸಿಬಹುದಾಗಿದೆ.

ಇದನ್ನೂ ಓದಿ: ಅಮಿತಾಭ್ ಬಚ್ಚನ್ ಮೊದಲ ಕಿಸ್, ತಮಗಿಂತ 36 ವರ್ಷ ಕಿರಿಯ ನಟಿ ಮೇಲೆ ಲವ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!