
ʼನಾ ನಿನ್ನ ಬಿಡಲಾರೆʼ ಧಾರಾವಾಹಿ ಶುರುವಾಗುತ್ತಲೇ ಟಿಆರ್‌ಪಿಯಲ್ಲಿ ಕಮಾಲ್ ಮಾಡುತ್ತಿದೆ. ಈ ನಡುವೆ ಈ ಧಾರಾವಾಹಿಯ ದೃಶ್ಯವೊಂದು ಆಮಿರ್ ಖಾನ್ ಪುತ್ರ ಜುನೈದ್ ಖಾನ್ ನಟನೆಯ ʼಮಹಾರಾಜ್ʼ ಸಿನಿಮಾದ ದೃಶ್ಯವೊಂದನ್ನು ನೆನಪಿಸುತ್ತಿದೆ ಎಂದು ವೀಕ್ಷಕರು ಅಭಿಪ್ರಾಯಪಡುತ್ತಿದ್ದಾರೆ.
ʼಮಹಾರಾಜ್ʼ ಕಥೆ ಏನು?
ʼಮಹಾರಾಜ್ʼ ಸಿನಿಮಾದಲ್ಲಿ ಧಾರ್ಮಿಕ ಗುರುಗೆ ಮಹಿಳೆಯರು ತಮ್ಮ ದೇಹವನ್ನು ಒಪ್ಪಿಸಿಕೊಳ್ಳುವ ಮೂಲಕ ಭಕ್ತಿಯನ್ನು ಪ್ರದರ್ಶಿಸಬೇಕು. ಆ ರೀತಿ ದೇಹವನ್ನು ಒಪ್ಪಿಸುವ ಮಹಿಳೆಯರು ತುಂಬ ಪುಣ್ಯ ಮಾಡಿದ್ದಾರೆ ಎಂದು ಸಮಾಜ ನಂಬುತ್ತದೆ ಎಂದು ತೋರಿಸಲಾಗಿತ್ತು. ಇದರ ವಿರುದ್ಧ ಈ ಸಿನಿಮಾದಲ್ಲಿ ಪತ್ರಕರ್ತ ಪಾತ್ರದಲ್ಲಿರೋ ಹೀರೋ ಹೋರಾಟ ಮಾಡಿ ಗೆಲ್ಲುತ್ತಾನೆ. ಈ ದೃಶ್ಯವನ್ನು ಜೀ ಕನ್ನಡ ವಾಹಿನಿಯ ʼನಾ ನಿನ್ನ ಬಿಡಲಾರೆʼ ಧಾರಾವಾಹಿಯಲ್ಲಿ ತೋರಿಸಲಾಗಿದೆ. ಈ ಸಿನಿಮಾ ಸಿಕ್ಕಾಪಟ್ಟೆ ವಿವಾದವನ್ನು ಕೂಡ ಎದುರಿಸಿತ್ತು. Maharaj Libel Case ಆಧಾರದ ಮೇಲೆ ಈ ಸಿನಿಮಾ ಕತೆ ಹೆಣೆಯಲಾಗಿತ್ತು. 18-19ನೇ ಶತಮಾನದಲ್ಲಿ ಈ ರೀತಿ ಪದ್ಧತಿ ಎಂದು ಹೇಳಲಾಗಿದೆ. ಈ ರೀತಿ ಪದ್ಧತಿ ಅಂದು ಅಸ್ತಿತ್ವದಲ್ಲಿತ್ತು ಎನ್ನಲಾಗಿದೆ. ಜೈದೀಪ್ ಅಹ್ಲಾವತ್, ಶಾಲಿನಿ ಪಾಂಡೆ ಅವರು ಈ ಸಿನಿಮಾದಲ್ಲಿ ನಟಿಸಿದ್ದರು. ಇನ್ನು ಸಿದ್ಧಾರ್ಥ್ ಪಿ ಮಲ್ಹೋತ್ರಾ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದರು.
Kannada Serial TRP 2025: ರೆಕಾರ್ಡ್ ಸೃಷ್ಟಿಸಿದ್ದ ಧಾರಾವಾಹಿಗಳನ್ನು ಧೂಳಿಪಟ ಮಾಡಿದ ಹೊಸ ಸೀರಿಯಲ್! ಯಾವುದು?
ಧಾರಾವಾಹಿಯಲ್ಲಿ ಯಾವ ದೃಶ್ಯ ಇದೆ?
ಧಾರ್ಮಿಕ ಗುರು ಅಮೃತೇಶ್ವರ ಸ್ವಾಮಿ ಮುಂದೆ ದುರ್ಗಾ ಡ್ಯಾನ್ಸ್ ಮಾಡುತ್ತಾಳೆ. ಅವಳ ಡ್ಯಾನ್ಸ್ ನೋಡಿ ಆ ಗುರು ಖುಷಿಯಾಗಿ, ಕೊನೆಯಲ್ಲಿ ಬಣ್ಣವನ್ನು ತಂದು ಅವಳ ಮುಖಕ್ಕೆ ಹಚ್ಚುತ್ತಾನೆ. ಇದನ್ನು ನೋಡಿ ಅನೇಕರು ಎಂಥ ಪುಣ್ಯ, ಎಂಥ ಆಶೀರ್ವಾದ ಎಂದು ಖುಷಿಪಡುತ್ತಾರೆ. ಆದರೆ ಇದನ್ನು ಈ ಸೀರಿಯಲ್ ನಾಯಕಿ ಅಂಬಿಕಾ ತಿರಸ್ಕರಿಸುತ್ತಾಳೆ. ದೆವ್ವದ ರೂಪದಲ್ಲಿದ್ದರೂ ಕೂಡ ಅವಳು ಈ ದುಷ್ಟನನ್ನು ಸಂಹಾರ ಮಾಡಬೇಕು ಎಂದು ನಿರ್ಧಾರ ಮಾಡ್ತಾಳೆ.
ನಾ ನಿನ್ನ ಬಿಡಲಾರೆ ಶೂಟಿಂಗ್ ಸೆಟ್‌ನಲ್ಲಿ ತಪ್ಪಿದ ದುರಂತ; ಅಪಾಯದಿಂದ ಪಾರಾದ ದುರ್ಗಾ!
ಇಂದಿನ ಎಪಿಸೋಡ್‌ನಲ್ಲಿ ಏನಾಗುವುದು?
ಆ ಗುರು ಇನ್ನೂ ಕೆಲ ಹೆಣ್ಣುಮಕ್ಕಳನ್ನು ಆಧ್ಯಾತ್ಮಿಕತೆ, ದೇವರ ಹೆಸರಿನಲ್ಲಿ ಗರ್ಭಿಣಿ ಮಾಡಿರುತ್ತಾನೆ. ಈ ವಿಷಯ ಎಲ್ಲರಿಗೂ ಗೊತ್ತಿಲ್ಲ. ಇಂಥ ಕೆಟ್ಟ ಕೆಲಸದ ವಿರುದ್ಧ ದುರ್ಗಾ, ಅಂಬಿಕಾ ಹೇಗೆ ಹೋರಾಡ್ತಾರೆ? ಇವರಿಗೆ ಯಾರು ಸಹಾಯ ಮಾಡ್ತಾರೆ ಎಂದು ಕಾದು ನೋಡಬೇಕಿದೆ. ಇನ್ನು ದುರ್ಗಾ ಚಿಕ್ಕಮ್ಮ ಕೂಡ ಗುರುಗಳ ಚರಣಸೇವೆ ಮಾಡು, ಆ ಚರಣಸೇವೆ ಮಾಡಿದ್ರೆ ಹಣ ಸಿಗುತ್ತದೆ ಅಂತ ಅವಳಿಗೆ ಬುದ್ಧಿ ಹೇಳ್ತಾಳೆ. ದುರ್ಗಾಳನ್ನು ಈಗ ಯಾರು ಕಾಪಾಡ್ತಾರೆ ಅಂತ ನೋಡಬೇಕಿದೆ.
ಅಂದಹಾಗೆ ಜಗನ್ಮಾತೆ ದೇವಿಯೇ ದುರ್ಗಾಳನ್ನು ಕಾಪಾಡುತ್ತಾಳೆ ಎನ್ನುವ ನಂಬಿಕೆಯಿದೆ. ಒಟ್ಟಿನಲ್ಲಿ ಈ ಸೀರಿಯಲ್‌ನಲ್ಲಿ ಒಂದು ಸಂದೇಶ ನೀಡುತ್ತಿರೋದಂತೂ ಸತ್ಯ. ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಪ್ರಯೋಗಗಳು ಆಗಿವೆ. ಅವುಗಳಲ್ಲಿ ಇದೂ ಒಂದು ಎನ್ನಬಹುದು. ʼನಾ ನಿನ್ನ ಬಿಡಲಾರೆʼ ಧಾರಾವಾಹಿಯಲ್ಲಿ ಶರತ್ ಪದ್ಮನಾಭ್, ನೀತಾ ಅಶೋಕ್, ರುಹಾನಿ ಶೆಟ್ಟಿ, ಮಹಿತಾ ಮುಂತಾದವರು ನಟಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.