ರಾತ್ರಿ ಮೊಸರನ್ನ ತಿನ್ನಲ್ಲ ; 10 ವರ್ಷದಿಂದ 50 ಕೆಜಿ ಇರುವ ಪ್ರಜ್ವಲ್ ದೇವರಾಜ್‌ ಪತ್ನಿ ರಾಗಿಣಿ ಸೀಕ್ರೆಟ್ ರಿವೀಲ್!

Published : Aug 04, 2023, 01:07 PM ISTUpdated : Aug 04, 2023, 01:50 PM IST
ರಾತ್ರಿ ಮೊಸರನ್ನ ತಿನ್ನಲ್ಲ ; 10 ವರ್ಷದಿಂದ 50 ಕೆಜಿ ಇರುವ ಪ್ರಜ್ವಲ್ ದೇವರಾಜ್‌ ಪತ್ನಿ ರಾಗಿಣಿ ಸೀಕ್ರೆಟ್ ರಿವೀಲ್!

ಸಾರಾಂಶ

ದಿನ ತಪ್ಪದೆ ಮೂರು ಗ್ಲಾಸ್ ಜ್ಯೂಸ್ ಕುಡಿಯುವೆ. 10 ವರ್ಷದಿಂದ ತೂಕ ಮೇಂಟೈನ್ ಮಾಡಲು ಕಾರಣ ಏನೆಂದು ರಿವೀಲ್ ಮಾಡಿದ ರಾಗಿಣಿ.... 

ಪಿಆರ್‌ಕೆ ಸಂಸ್ಥೆ ನಿರ್ಮಾಣ ಮಾಡಿದ 'ಲಾ' ಸಿನಿಮಾ ಮೂಲಕ ಬಣ್ಣದ ಪ್ರಪಂಚಕ್ಕೆ ಪಾದಾರ್ಪಣೆ ಮಾಡಿದ ಡ್ಯಾನ್ಸರ್‌, ಫಿಟ್ನೆಸ್‌ ಫ್ರೀ, ಸ್ಟಾರ್ ನಟ ಪ್ರಜ್ವಲ್ ದೇವರಾಜ್‌ ಪತ್ನಿ ರಾಗಿಣಿ ಈಗ ಯುಟ್ಯೂಬ್ ಚಾನೆಲ್ ಆರಂಭಿಸಿದ್ದಾರೆ. ಫಿಟ್ನೆಸ್‌ ಬಗ್ಗೆ ಪದೇ ಪದೇ ಪ್ರಶ್ನೆ ಕೇಳುವ ಅಭಿಮಾನಿಗಳಿಗೆ ಉತ್ತರಿಸಿದ್ದಾರೆ.

'ಏನ್ ತಿಂದ್ರೂ ಸುಲಭವಾಗಿ ಜೀರ್ಣ ಮಾಡಿಕೊಳ್ಳುವ ಶಕ್ತಿ ಯಾರಿಗೂ ಇಲ್ಲ. ಒಂದು ದಿನ ಚೀಟ್‌ ಮೀಲ್ ಮಾಡುವೆ. ನಮ್ಮ ಮನೆಯಲ್ಲಿ ಮೂರು ತಲೆ ಮಾರುಗಳಿಂದ ದಿನ ಬೆಳಗ್ಗೆ ತಪ್ಪದೆ ಈ ಕೆಲಸ ಮಾಡುತ್ತೀವಿ ಅದುವೇ Oil pulling.  15 ನಿಮಿಷಗಳ ಕಾಲ ಕೊಬ್ಬರಿ ಎಣ್ಣಯಲ್ಲಿ ಬಾಯಿ ಮುಕ್ಕಳಿಸುತ್ತೀವಿ ಹೀಗೆ ಮಾಡುವುದರಿಂದ ಜೀರ್ಣ ಶಕ್ತಿ ಹೆಚ್ಚಾಗುತ್ತದೆ  ಇಷ್ಟು ದಿನ ಇದೊಂದು ಸೀಕ್ರೆಟ್ ಆಗಿತ್ತು. ನಮ್ಮ ಮನೆಯಲ್ಲಿ ಯಾರೂ ಬೆಳಗ್ಗೆ ತಿಂಡಿ ತಿನ್ನುವುದಿಲ್ಲ  Intermittent fasting ಫಾಲೋ ಮಾಡುತ್ತೀವಿ ತುಂಬಾ ಆಸೆ ಆದರೆ ಮಾತ್ರ ಮಸಾಲ ದೋಸೆ ಆರ್ಡರ್‌ ಮಾಡಿಕೊಳ್ಳುತ್ತೀನಿ. ಪ್ರತಿನಿತ್ಯ ತಪ್ಪದೆ ಮೂರು ಲೋಟ ಹಣ್ಣಿನ ಜ್ಯೂಸ್‌ ಕುಡಿಯುತ್ತೀನಿ, ಮೊದಲು ನಿಂಬೆ ಹಣ್ಣು ನೀರು.... ಇದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಇದು ನಮ್ಮ ಆರೋಗ್ಯಕ್ಕೆ ಸ್ವತ್ಛೆ ಮತ್ತು ಕೂದಲು ಚೆನ್ನಾಗಿ ಬೆಳೆಯುವುದಕ್ಕೆ ಸಹಾಯ ಮಾಡುತ್ತದೆ, ಎರಡನೇ ಗ್ಲಾಸ್ ಕ್ಯಾರೆಟ್‌ ಜ್ಯೂಸ್ ಆಗಿರುತ್ತದೆ, ಮೂರನೇ ಗ್ಲಾಸ್‌ ಬೂದು ಕುಂಬಳಕಾಯಿ ಕುಡಿಯುವೆ ಇದರ ಬಗ್ಗೆ ಹೆಚ್ಚಿಗೆ ಜನರಿಗೆ ಗೊತ್ತಿಲ್ಲ. ದಯವಿಟ್ಟು ತಿಳಿದುಕೊಳ್ಳಿ ಆರೋಗ್ಯಕ್ಕೆ ಒಳ್ಳೆಯದು' ಎಂದು ರಾಗಿಣಿ ಮಾತನಾಡಿದ್ದಾರೆ.

ಪ್ರಜ್ವಲ್ ದೇವರಾಜ್‌ ಆ ದೃಶ್ಯ ಬೇಕೆಂದು ನೋಡಲ್ಲ, ನಾನು ಮತ್ತು ಅಮ್ಮ ಅಷ್ಟು ಅತ್ತಿದ್ದೀವಿ: ಪತ್ನಿ ರಾಗಿಣಿ

'ಊಟಕ್ಕೆ ಏನು ಕೊಟ್ಟರೂ ತಿನ್ನುವೆ ಆದರೆ ಅನ್ನ ಆದಷ್ಟು ಕಡಿಮೆ ಮಾಡುವೆ...ತೀರಾ ಡಯಟ್‌ ಅಂತಲ್ಲ ಪರ್ಸನಲ್ ಆಗಿ ನನಗೆ ಇಷ್ಟ ಆಗುವುದಿಲ್ಲ ಹೀಗಾಗಿ ಸಾಮೆ ನಾವಣೆ ಗೋದಿ ರಾಗಿ ಹೆಚ್ಚಿಗೆ ಬಳಸುತ್ತೀನಿ. ಒಂದು ಲೈಫ್ ಹ್ಯಾಕ್ ಹೇಳಿಕೊಡುತ್ತೀನಿ...ನಾವು ತಿನ್ನುವ ಪ್ರಮಾಣ ಮುಖ್ಯವಾಗುತ್ತದೆ. ನಾವಣೆ ಕಡಿಮೆ ಹಾಕಿಕೊಂಡು ಪಲ್ಯ ಹೆಚ್ಚಿಗೆ ಸೇವಿಸುತ್ತೀನಿ. ಒಂದು ರೀತಿ ಹೇಳಬೇಕು ಅಂದ್ರೆ ಪಲ್ಯನೇ ಅನ್ನದ ರೀತಿ ತಟ್ಟೆಗೆ ಹಾಕಿಕೊಂಡಿರುವೆ. ರಾತ್ರಿ ಊಟ ಆದಷ್ಟು ಮನೆಯಲ್ಲಿ ತಿನ್ನುವುದಕ್ಕೆ ಇಷ್ಟ ಪಡುತ್ತೀವಿ..ಮದುವೆ ಆದ್ಮೇಲೆ ಜಾಸ್ತಿ ಅಡುಗೆ ಮಾಡುವುದಕ್ಕೆ ಶುರು ಮಾಡಿದ್ದೀವಿ. ಪ್ರಜ್ವಲ್ ಮತ್ತು ನಾನು ಜಾಸ್ತಿ ಜ್ಯೂಸ್ ಕುಡಿಯುತ್ತೀವಿ...ರಾತ್ರಿ ಸಮಯದಲ್ಲಿ Raw ಆಹಾರ ಮತ್ತು ಮೊಸರು ಅನ್ನ ಸೇವಿಸಬಾರದು' ಎಂದು ರಾಗಿಣಿ ಹೇಳಿದ್ದಾರೆ.

ಡೈನಾಮಿಕ್‌ ಸ್ಟಾರ್‌ ಕೈಲಿ ಭೇಷ್‌ ಅನ್ನಿಸಿಕೊಂಡೆ ಪತ್ನಿ ರಾಗಿಣಿ ಚಂದ್ರನ್‌!

'100% ನಾನು cheat meal ಸೇವಿಸುವೆ...ನನ್ನ ತಂಗಿಗೆ ಕರೆ ಮಾಡಿ ಹೇಳುವೆ ನಾನು ಪಿಜಾ ಸೇವಿಸುತ್ತಿರುವೆ ಎಂದು ಇದರ ಬಗ್ಗೆ ನಮಗೆ ಯಾವ ಬೇಸರವೂ ಇಲ್ಲ. ಏನೇ ತಿಂದರೂ ಖುಷಿಯಿಂದ ತಿನ್ನಬೇಕು. ಆದಷ್ಟು ರಾತ್ರಿ 8 ಗಂಟೆ ಒಳಗೆ ಊಟ ಮುಗಿಸುತ್ತೀವಿ ತುಂಬಾ ಲೇಟ್ ಆದರೆ ಮಾತ್ರ 10 ಗಂಟೆ ಆಗುತ್ತದೆ. ದಿನದಲ್ಲಿ ವರ್ಕೌಟ್ ಮಾಡುವುದಕ್ಕೆ ಬೆಸ್ಟ್‌ ಟೈಂ ಅಂತಿಲ್ಲ ಆದರೆ ಎಷ್ಟು ಸಮಯ ವರ್ಕೌಟ್ ಮಾಡುತ್ತೀರಾ ಎಷ್ಟು ಕರೆಕ್ಟ್ ಆಗಿ ಮಾಡುತ್ತೀರಾ ಅನ್ನೋದು ಮುಖ್ಯವಾಗುತ್ತದೆ. ನಾನು ಅದಷ್ಟು ಬೆಳಗ್ಗೆ ವರ್ಕೌಟ್ ಮಾಡುವೆ ಏಕೆಂದರೆ ನಮ್ಮ ದೇಹದಲ್ಲಿ ಕೆಲವೊಂದು ಹಾರ್ಮೋನ್‌ಗಳು ಬೆಳಗ್ಗೆ ರಿಲೀಸ್ ಆಗುತ್ತದೆ. ಎಲ್ಲರಿಗೂ ನಾನು ಒಂದು ಸಲಹೆ ಕೊಡಲು ಇಷ್ಟ ಪಡುತ್ತೀನಿ....ಏನಾದರೂ ತಿನ್ನುವಾಗ ಎಂಜಾಯ್ ಮಾಡಿಕೊಂಡು ತಿನ್ನಬೇಕು...ಅಯ್ಯೋ ಈಗ ಊಟ ಮಾಡಿದರೆ ಇಷ್ಟು ತಿಂದರೆ ನಾಳೆ ನನಗೆ ಏನಾಗುತ್ತೆ? ದಪ್ಪ ಆಗಿಬಿಟ್ಟರೆ ಅನ್ನೋ ಯೋಚನೆ ಬೇಡ. ಇವತ್ತು ವರ್ಕೌಟ್ ಮಾಡಿಲ್ಲ ಅಂದ್ರೆ ಏನಾಗುತ್ತೆ ಜಂಕ್‌ ತಿಂದ್ರೆ ಏನಾಗುತ್ತೆ...ಹೀಗೆ ಮಾನಸಿಕ ಆರೋಗ್ಯ ತುಂಬಾ ಮುಖ್ಯವಾಗುತ್ತದೆ. 10 ವರ್ಷಗಳಿಂದ ನಾನು 50 ಕೆಜಿ ತೂಕವನ್ನು ಕಾಪಾಡಿಕೊಂಡು ಬರುತ್ತಿರಲು ಇದೇ ಕಾರಣ' ಎಂದಿದ್ದಾರೆ ರಾಗಿಣಿ.  

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Kannada Serial TRP: ಧಾರಾವಾಹಿಗಳ ಮಧ್ಯೆ ಪೈಪೋಟಿ; ನಂ 1 ಸ್ಥಾನ ಪಡೆದ ಸೀರಿಯಲ್‌ ಯಾವುದು?
BBK 12: ದೀಪಿಕಾ ದಾಸ್ ಮತ್ತೊಂದು ಪೋಸ್ಟ್‌ ವೈರಲ್.. ಹಿಂದಿನ ಪೋಸ್ಟ್‌ನಲ್ಲಿ ಟೀಕೆ ಮಾಡಿದ್ದು ಯಾರನ್ನ?