'ಮಾಟಗಾತಿಯ ಕಾಡಿನಲ್ಲಿ ರೇಣುಕಾ ಯಲ್ಲಮ್ಮ' ವೀಕ್ಷಿಸಿ ಸ್ಟಾರ್ ಸುವರ್ಣದಲ್ಲಿ

Published : Aug 04, 2023, 01:07 PM IST
'ಮಾಟಗಾತಿಯ ಕಾಡಿನಲ್ಲಿ ರೇಣುಕಾ ಯಲ್ಲಮ್ಮ' ವೀಕ್ಷಿಸಿ ಸ್ಟಾರ್ ಸುವರ್ಣದಲ್ಲಿ

ಸಾರಾಂಶ

 'ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ' ಧಾರಾವಾಹಿ ಸ್ಟಾರ್ ಸುವರ್ಣದಲ್ಲಿ ಹೆಚ್ಚಿನ ವೀಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿರೋದ್ರಿಂದ , ಇದೀಗ ಇದೇ ಕಥೆಯ ಸಿನಿಮಾವನ್ನು ಪ್ರಸಾರ ಮಾಡುತ್ತಿದೆ. 

ಕನ್ನಡ ಕಿರುತೆರೆಯಲ್ಲಿ ಮನರಂಜನೆಯ ವರ್ಷಧಾರೆಯನ್ನೇ ಹರಿಸುತ್ತಿರುವ ಸ್ಟಾರ್ ಸುವರ್ಣ ವಾಹಿನಿಯು ಇದೀಗ ವೀಕ್ಷರಿಗಾಗಿ ವಿಶೇಷ ಚಿತ್ರವೊಂದನ್ನು ಪ್ರಸಾರ ಮಾಡುತ್ತಿದೆ. ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ' ಧಾರಾವಾಹಿಯು ಆರಂಭದಿಂದಲೂ ಪ್ರೇಕ್ಷಕರ ಮನಗೆದ್ದು, ಅತೀ ಹೆಚ್ಚು ರೇಟಿಂಗ್ ಪಡೆಯುವ ಮೂಲಕ ಮನೆ ಮನೆಯ ಮಾತಾಗಿದೆ. 

ಈ ನಿಟ್ಟಿನಲ್ಲಿ ವಾಹಿನಿಯು 'ಮಾಟಗಾತಿಯ ಕಾಡಿನಲ್ಲಿ' ರೇಣುಕಾ ಯಲ್ಲಮ್ಮ ಎಂಬ ಶೀರ್ಷಿಕೆಯಡಿ ಸ್ಪೆಷಲ್ ಸಿನಿಮಾವೊಂದನ್ನು ಪ್ರಸಾರ ಮಾಡುತ್ತಿದೆ. ಕಥೆಯ ಅನುಸಾರ ಆ ಒಂದು ಕಾಡಿನಲ್ಲಿ ಎಷ್ಟೋ ವರ್ಷಗಳಿಂದ ಚಿರಯವ್ವೌನವನ್ನು ಹೊಂದಿರುವ ಕನಕಾಂಬರಿ ಎಂಬ ಮಾಟಗಾತಿಯೊಬ್ಬಳು ವಾಸವಾಗಿರುತ್ತಾಳೆ. ಆದರೆ ಪೌರ್ಣಮಿಯ ದಿನ ಹತ್ತಿರವಾಗುತ್ತಿದ್ದಂತೆ, ಆಕೆಯ ಶಕ್ತಿ ಕ್ಷೀಣಿಸಿ ನಿಜ ಸ್ವರೂಪಕ್ಕೆ ಬದಲಾಗುತ್ತಾಳೆ ಎಂಬ ಭಯ ಆಕೆಗೆ ಕಾಡುತ್ತಿರುತ್ತದೆ. ಹೀಗಾಗಿ  ಆಕೆ ಇನ್ನಷ್ಟು ಶಕ್ತಿ ಹಾಗೂ ಯವ್ವೌನವನ್ನು ಪಡೆದುಕೊಳ್ಳಲೇನು ಮಾಡುತ್ತಾಳೆ? ತಮ್ಮ ಬುದ್ದಿ ಶಕ್ತಿಯನ್ನು ಉಪಯೋಗಿಸಿಕೊಂಡು, ರೇಣುಕಾ ಯಲ್ಲಮ್ಮ ಹೇಗೆ ಅವಳ ಮುಂದೆ ವಿಜಯ ಸಾಧಿಸುತ್ತಾರೆ? ಎಂಬುದೇ ಮುಖ್ಯ ಕಥಾ ಹಂದರ. 

ಸಿಕ್ಕಾಪಟ್ಟೆ ಪಾಪ್ಯುಲರ್ ಆಗಿರೋ ಅನುಪಮಾ ಸೀರಿಯಲ್‌ನಲ್ಲಿ ರೋಚಕ ಟ್ವಿಸ್ಟ್ ಏನದು?

ಇಷ್ಟಕಾಮ್ಯ ಚಿತ್ರ ಖ್ಯಾತಿಯ ನಟಿ ಮಯೂರಿಯವರು ಬಹಳ ವರ್ಷಗಳ ನಂತರ ಕನಕಾಂಬರಿ ಎಂಬ ಮಾಟಗಾತಿಯ ಪಾತ್ರದ ಮೂಲಕ ಮತ್ತೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅತ್ಯುತ್ತಮ ಗ್ರಾಫಿಕ್ಸ್ ತಂತ್ರಜ್ಞಾನವನ್ನು ಬಳಸಿ ವಿಶೇಷ ಸಿನಿಮಾದ ಚಿತ್ರೀಕರಣ ಮಾಡಿದ್ದು, ಇದು ಕಿರುತೆರೆಯಲ್ಲಿ ಹೊಸ ಛಾಪನ್ನು ಮೂಡಿಸಲಿದೆ.

ತಪ್ಪದೇ ವೀಕ್ಷಿಸಿ 3 ಗಂಟೆಗಳ ವಿಶೇಷ ಚಿತ್ರ "ಮಾಟಗಾತಿಯ ಕಾಡಿನಲ್ಲಿ-ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ ". ಇದೇ ಆಗಸ್ಟ್ 6, ಭಾನುವಾರದಂದು ಸಂಜೆ 6.30 ಕ್ಕೆ ನಿಮ್ಮ ನೆಚ್ಚಿನ 'ಸ್ಟಾರ್ ಸುವರ್ಣ' ವಾಹಿನಿಯಲ್ಲಿ

ಅನಿಷ್ಟ ಪಂಚಮಿ ನಾಗ ಕನ್ನಿಕೆಯಾಗಿ ಬದಲಾಗಿದ್ದು ಹೇಗೆ? ಹೊಸ ಧಾರಾವಾಹಿ ಆರಂಭ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?