ಸಹನಾ ಸತ್ತಳೆಂದು ಭಾವಿಸಿರೋ ಮುರಳಿ ಮತ್ತೊಂದು ಮದುವೆಗೆ ರೆಡಿ ಆಗಿದ್ದಾರೆ. ಇದಕ್ಕೆ ನೆಟ್ಟಿಗರು ಹೀಗೆಲ್ಲಾ ಹೇಳೋದಾ?
ಸಹನಾ ಬದುಕಿರುವ ವಿಷಯ ಅವಳ ಗಂಡನ ಮನೆಯವರಿಗೆ ತಿಳಿದಿಲ್ಲ. ಅತ್ತ ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಬೇಕೆಂದುಕೊಂಡಿರೋ ಸಹನಾ ಸ್ವಂತ ದುಡಿಮೆಯಿಂದ ಕೆಲಸ ಮಾಡಲು ಶುರು ಮಾಡಿದ್ದಾಳೆ. ಊರಿನಿಂದ ಬಹುದೂರದ ಬೆಂಗಳೂರಿಗೆ ಬಂದು ಕ್ಯಾಂಟೀನ್ ಶುರು ಮಾಡಿಕೊಂಡಿದ್ದಾಳೆ. ವಾಪಸ್ ಮನೆಗೆ ಹೋಗಲು ಅವಳಿಗೆ ಇಷ್ಟವಿಲ್ಲ. ಮಗಳು ಸಹನಾ ಬದುಕಿದ್ದಾಳೆ ಎಂದು ಮಗಳನ್ನು ಅರಸಿ ಬಂದಿರೋ ಪುಟ್ಟಕ್ಕನಿಗೆ ಕೊನೆಗೂ ಮಗಳು ಸಹನಾ ಸಿಕ್ಕಿದ್ದಾಳೆ. ಅಮ್ಮ-ಮಗಳ ಮಿಲನ ಆಗಿದೆ. ಆದರೆ ಸಹನಾ ಮಾತ್ರ ವಾಪಸ್ ಮನೆಗೆ ಬರಲು ರೆಡಿ ಇಲ್ಲ.
ಅದೇ ಇನ್ನೊಂದೆಡೆ ಮುರುಳಿಯನ್ನು ಸಹನಾಳಿಂದ ಬೇರೆ ಮಾಡಲು ಸ್ಕೆಚ್ ಹಾಕಿದ್ದ ಮುರಳಿ ಮನೆಯವರಿಗೆ ಈಗ ಖುಷಿಯೋ ಖುಷಿ. ಮದುವೆಯಾದ ಮುರಳಿ ಮೇಲೆ ಕಣ್ಣಿಟ್ಟಿದ್ದ ಟೀಚರ್ಗೆ ಈಗ ಹಾದಿ ಸುಗಮವಾಗಿದೆ. ಮುರುಳಿಗೆ ಇನ್ನೊಂದು ಮದುವೆ ಮಾಡಿಸಲು ಮನೆಯವರು ರೆಡಿ ಇದ್ದಾರೆ. ಅದಕ್ಕೆ ಮುರಳಿ ಒಪ್ಪಿಕೊಂಡಿದ್ದಾನೆ. ಇದರ ಪ್ರೊಮೋ ಬಿಡುಗಡೆಯಾಗುತ್ತಿದ್ದಂತೆಯೇ ಥಹರೇವಾರಿ ಕಮೆಂಟ್ಸ್ ಸುರಿಮಳೆಯಾಗಿದೆ. ಗಂಡಸರ ಹಣೆಬರಹವೇ ಇಷ್ಟು ಎನ್ನೋದಾ ನೆಟ್ಟಿಗರು? ಸಹನಾ ಸತ್ತಳು ಎಂದು ತಿಳಿದುಕೊಂಡು ವರ್ಷ ಆಗಿಲ್ಲ, ಆಗಲೇ ಬೇರೆ ಮದುವೆಗೆ ರೆಡಿ ಆಗಿದ್ದಾನೆ, ಗಂಡಸರೇ ಇಷ್ಟು, ತಡೆದುಕೊಳ್ಳಲು ಆಗುವುದೇ ಇಲ್ಲ ಎಂದಿದ್ದಾರೆ.
3 ವರ್ಷದಿಂದ ಸೆಕ್ಸೇ ಮಾಡಿಲ್ಲ ಅಂದ ಉರ್ಫಿ ಎದೆ ಮೇಲೆ ಉಡ ಬಿಟ್ಕೊಳೋದಾ? ಕಮೆಂಟಿಗರು ಸುಮ್ನೆ ಇರ್ತಾರಾ?
ಈ ಕಮೆಂಟ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದು, ನೀವು ಹೀಗೆ ಜನರಲೈಸ್ ಮಾಡಬೇಡಿ ಎಂದು ಗರಂ ಆಗಿದ್ದಾರೆ. ಮತ್ತೆ ಕೆಲವರು ಮದುವೆಯಾದರೆ ತಪ್ಪೇನು ಎಂದು ಪ್ರಶ್ನಿಸಿದ್ದಾರೆ. ಮತ್ತೆ ಕೆಲವರು, ಹೆಣ್ಣು ಒಂಟಿಯಾಗಿ ಜೀವಿಸುವ ತಾಕತ್ತು ಇದೆ, ಆದರೆ ಗಂಡಸರಿಗೆ ಆ ತಾಕತ್ತು ಇಲ್ಲ. ನಮ್ಮದು ಪುರುಷ ಪ್ರಧಾನ ಸಮಾಜ ಆಗಿದ್ದರೂ, ನೈಸರ್ಗಿಕವಾಗಿ ಹೆಣ್ಣಿಗೆ ಇರುವಷ್ಟು ಶಕ್ತಿ ಗಂಡಸರಿಗೆ ಇರಲು ಸಾಧ್ಯವೇ ಇಲ್ಲ ಎಂದು ಕಮೆಂಟಿಗರು ಹೇಳುತ್ತಿದ್ದಾರೆ. ಈಗ ಸಹನಾಳ ಮುಂದಿನ ನಡೆ ಏನು ಎನ್ನುವುದನ್ನು ನೋಡಬೇಕಿದೆ.
ಅಲ್ಲಿ ಸಹನಾಗೆ ವಿದೇಶಿಗ ಸಹಾಯ ಮಾಡುತ್ತಿದ್ದಾನೆ. ಇವರಿಬ್ಬರ ಬಾಂಡಿಂಗ್ ಜನರು ಮೆಚ್ಚಿಕೊಂಡಿದ್ದಾರೆ. ಸಹನಾ ಅವನನ್ನೇ ಮದುವೆಯಾಗಬೇಕು ಎನ್ನುವುದು ಫ್ಯಾನ್ಸ್ ಅಭಿಮತ. ಅಷ್ಟಕ್ಕೂ ಮುರುಳಿ, ಅಮ್ಮನ ಮಾತು ಕೇಳಿಕೊಂಡು ಸಹನಾಳಿಗೆ ಕೊಡಬಾರದ ಹಿಂಸೆ ಕೊಟ್ಟಿದ್ದಾನೆ. ಸಹನಾ ಎಂಥವಳು ಎಂದು ತಿಳಿದಿದ್ದರೂ ಅವರಿಗೆ ಅನ್ನಬಾರದು ಅಂದಿದ್ದಾನೆ. ಇದೇ ಕಾರಣಕ್ಕೆ ಸಹನಾ ಮನೆ ಬಿಟ್ಟು ಬರುವ ಹಾಗಾಗಿತ್ತು. ಗಂಡನಿಂದ ದೂರವಾಗಿ ಮಹಿಳೆ ಏನನ್ನಾದರೂ ಸಾಧಿಸಬಹುದು ಎನ್ನುವುದನ್ನು ಸಹನಾ ತೋರಿಸಿಕೊಡುತ್ತಿದ್ದಾಳೆ. ಆದರೆ ಆಕೆಯ ಹಾದಿಯೂ ಏನೂ ಸುಗಮವಲ್ಲ. ಕಾಮುಕನ ಕೈಯಿಂದ ಸಾಲ ಪಡೆದುಕೊಂಡಿದ್ದಾಳೆ. ಸಾಲ ಮರುಪಾವತಿ ಮಾಡದಿದ್ದರೆ ಏನು ಮಾಡಬೇಕೋ ಅದನ್ನು ಮಾಡುತ್ತೇನೆ ಎಂದು ಆತ ಮನಸ್ಸಿನಲ್ಲಿಯೇ ಹೇಳಿಕೊಂಡಿದ್ದಾನೆ. ಸಹನಾ ಜೀವನದಲ್ಲಿ ಸಕ್ಸಸ್ ಆಗ್ತಾಳಾ? ಮುರಳಿ ಮದುವೆ ಆಗ್ತಾನಾ? ಹೀಗೆ ಹಲವು ಕುತೂಹಲವನ್ನು ಸೀರಿಯಲ್ ಉಳಿಸಿಕೊಂಡಿದೆ. ಅದೇ ಇನ್ನೊಂದೆಡೆ ಸ್ನೇಹಾ ಡಿಸಿ ಹುದ್ದೆಗೆ ಸಂದರ್ಶನ ಕೊಟ್ಟು ಭೇಷ್ ಎನ್ನಿಸಿಕೊಂಡಿದ್ದಾಳೆ. ಅವಳಿಗೆ ಗೆಲುವು ಸಿಗತ್ತಾ ಎನ್ನುವುದೂ ಪ್ರೇಕ್ಷಕರ ಕುತೂಹಲ.
ಮದುವೆ ದಿನ ಮದುಮಗನೇ ಕೋಣೆಯೊಳಗೆ ಲಾಕ್! ಅಭಿಮಾನಿಗಳಿಗೆ ವಾಷ್ರೂಮ್ದೇ ಚಿಂತೆ...