ಕನ್ನಡ ಪರ್ಫೆಕ್ಟ್‌, ಇಂಗ್ಲಿಷ್ ಓಕೆ, ಹಿಂದಿ......; ಸೋನು ಗೌಡ ಹವಾ ಎಬ್ಬಿಸಿದ ವಿಡಿಯೋ ವೈರಲ್!

By Vaishnavi Chandrashekar  |  First Published Aug 28, 2024, 2:35 PM IST

ಗೋವಾದಲ್ಲಿ ಧೂಳ್ ಎಬ್ಬಿಸಿದ ಸೋನು ಗೌಡ. ಹಿಂದಿಯಲ್ಲಿ ಯಾರು ಏನೇ ಹೇಳಿದ್ದರೂ ಕನ್ನಡದಲ್ಲೇ ಮಾತನಾಡಿದ ಸುಂದರಿ....


ಸಾಮಾನ್ಯವಾಗಿ ನೇಮ್ ಆಂಡ್ ಫೇಮ್ ಬರ್ತಿದ್ದಂತೆ ಮಾತನಾಡುವ ಶೈಲಿ, ಡ್ರೆಸ್ ಮಾಡಿಕೊಳ್ಳುವ ಸ್ಟೈಲ್ ಪ್ರತಿಯೊಂದು ಬದಲಾಗುತ್ತದೆ. ರಸ್ತೆಯಲ್ಲಿ ಹೋಗುವಾಗ ಯಾರಾದರೂ ಸೆಲ್ಫಿ ಕೇಳಿದ್ರೆ ತಲೆ ಭೂಮಿ ಮೇಲೆ ಇರುವುದಿಲ್ಲ ಸ್ಟಾರ್‌ ಫೀಲ್‌ ಬರುತ್ತದೆ. ಇದು ಸೆಲೆಬ್ರಿಟಿಗಳಿಗೆ ಮಾತ್ರವಲ್ಲ ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಅರಳುತ್ತಿರುವ ಪ್ರತಿಭೆಗಳಿಗೂ ಎನ್ನಬಹುದು. ಆದರೆ ಬಿಗ್ ಬಾಸ್ ಸ್ಪರ್ಧಿ, ಸೋಷಿಯಲ್ ಮೀಡಿಯಾ ಸ್ಟಾರ್ ಸೋನು ಶ್ರೀನಿವಾಸ್ ಗೌಡ ಮಾತ್ರ ಈ ಲಿಸ್ಟ್‌ಗೆ ಸೇರುವುದಿಲ್ಲ ಅನ್ನೋದಕ್ಕೆ ವೈರಲ್ ಆಗುತ್ತಿರುವ ವಿಡಿಯೋನೇ ಸಾಕ್ಷಿ. 

ಹೌದು! ಕೆಲವು ದಿನಗಳ ಹಿಂದೆ ಸೋನು ಶ್ರೀನಿವಾಸ್ ಗೌಡ ಗೋವಾ ಟ್ರಿಪ್ ಮಾಡಿದ್ದರು. ನಾನ್ ಸ್ಟಾಪ್ ಮಳೆ ಸುರಿಯುತ್ತಿದ್ದರೂ ಅಣ್ಣ-ತಮ್ಮನ ಜೊತೆ ಗೋವಾದಲ್ಲಿ ಜಾಲಿ ಮಾಡಲು ಹೊರಟರು. ಯೂಟ್ಯೂಬ್‌ ವ್ಲಾಗ್‌ಗಳನ್ನು ಮಾಡುವ ಸೋನು ಪ್ರತಿ ದಿನ ಹೇಗಿರುತ್ತಿತ್ತು? ಏನೆಲ್ಲಾ ನೋಡಿದ್ದಾರೆ ಎಂದು ಅಪ್ಲೋಡ್ ಮಾಡುತ್ತಿದ್ದರು. ಈ ವೇಳೆ ಸೋನು ಮಾತನಾಡುವ ಸ್ಟೈಲ್ ಎಲ್ಲರಿಗೂ ಇಷ್ಟವಾಗಿದೆ. ಗೋವಾದಲ್ಲಿ ಪ್ರತಿಯೊಬ್ಬರು ಹೆಚ್ಚಾಗಿ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತನಾಡುತ್ತಿದ್ದರು. ಈ ಎರಡು ಭಾಷೆ ಸೋನುಗೆ ತುಂಬಾನೇ ಕಷ್ಟ...ಹೇಗೋ ಅರ್ಥ ಮಾಡಿಕೊಂಡು ಅವರಿಗೆ ಕನ್ನಡದಲ್ಲಿ ಉತ್ತರ ಕೊಡುತ್ತಿದ್ದರು.

Tap to resize

Latest Videos

undefined

ರಜಿನಿಕಾಂತ್‌ ಜೊತೆ ನಟಿಸಲು ಚೆನ್ನೈಗೆ ಹಾರಿದ ರಚಿತಾ ರಾಮ್; ಎಲ್ಲ ಬಿಟ್ಟು ತಮಿಳಿಗೆ ಹೋಗಿದ್ದಕ್ಕೆ ಕನ್ನಡಿಗರೆ ಬೇಸರ

ಗೋವಾದಲ್ಲಿ ಹೊಸದಾಗಿ ಟ್ರೆಂಡ್ ಕ್ರಿಯೇಟ್ ಆಗಿರುವ ಥ್ರೆಡ್‌ ಹೇರ್‌ಸ್ಟೈಲ್  ಅಂದ್ರೆ ಅಲ್ಲಿನ ಸ್ಥಳೀಯರು ಉದ್ದದ ದಾರವನ್ನು ಬಳಸಿ ತಮ್ಮ ಕೂದಲಿಗೆ ಜಡೆ ಹಾಕುತ್ತಾರೆ. ಗೋವಾ ಸ್ಟೈಲ್‌ನಲ್ಲಿ ರೆಡಿಯಾಗಿ ಈ ಹೇರ್‌ ಸ್ಟೈಲ್ ಮಾಡಿಸಿಕೊಂಡರೆ ಚೆನ್ನಾಗಿರುತ್ತದೆ. ಇದನ್ನು ಸೋನು ಗೌಡ ಕೂಡ ಮಾಡಿಸಿಕೊಂಡಿದ್ದಾರೆ ಆಗ ಅಲ್ಲಿನ ಮಹಿಳೆ ಜೊತೆ ಹಿಂದಿಯಲ್ಲಿ ಮಾತನಡಲು ಕಷ್ಟ ಪಟ್ಟಿದ್ದಾರೆ. 'ನನಗೆ ಬರೋ ಭಾಷೆಯಲ್ಲಿ ಮ್ಯಾನೇಜ್ ಮಾಡುತ್ತೀನಿ. ಕನ್ನಡ ಪರ್ಫೆಕ್ಟ್‌.. ಇಂಗ್ಲಿಷ್ ಓಕೆ ಓಕೆ..ಇನ್ನೂ ಹಿಂದಿ ವ್ಯಾ.......ಹಿಂದಿ ಕಲಿಯುವುದಿಲ್ಲ ನಾನು ಅದಿಕ್ಕೆ ಕನ್ನಡದಲ್ಲಿ ಪರ್ಫೆಕ್ಟ್ ಆಗಿರುವೆ' ಎಂದು ಮಾತನಾಡಿರುವ ಸಣ್ಣ ವಿಡಿಯೋ ಟ್ರೋಲ್ ಪೇಜ್‌ಗಳಲ್ಲಿ ವೈರಲ್ ಆಗುತ್ತಿದೆ.

ಅಶ್ವಿನಿ ಪುನೀತ್‌ಗೆ ಅವಮಾನ ಮಾಡಿದ ಕಿಡಿಗೇಡಿ; ಮು** ಎಂದವನನ್ನು ತರಾಟೆಗೆ ತೆಗೆದುಕೊಂಡ ನೆಟ್ಟಿಗರು!

ಒಂದಲ್ಲ ಒಂದು ರೀತಿಯಲ್ಲಿ ನೆಗೆಟಿವ್ ಟ್ರೋಲ್ ಆಗುವ ಸೋನು ಶ್ರೀನಿವಾಸ್ ಗೌಡ ಈ ಸಲ ಪಾಸಿಟಿವ್ ಆಗಿ ಟ್ರೋಲ್ ಆಗುತ್ತಿದ್ದಾರೆ. ಈಕೆಯಲ್ಲಿ ಇದೊಂದು ವಿಚಾರ ಮೆಚ್ಚಬೇಕು ಭಾಷೆ ಪ್ರೇಮಾ ಜಾಸ್ತಿ ಇದೆ, ಹಿಂದಿ ಕಲಿಯಬೇಡಿ ನಿಮ್ಮ ಕನ್ನಡ ಚೆನ್ನಾಗಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. 

 

click me!