ಪಾರಿವಾಳ ವಿಡಿಯೋ ಆಲ್ಬಂ ರಿಲೀಸ್‌!

Kannadaprabha News   | Asianet News
Published : Mar 13, 2021, 09:59 AM ISTUpdated : Mar 13, 2021, 10:04 AM IST
ಪಾರಿವಾಳ ವಿಡಿಯೋ ಆಲ್ಬಂ ರಿಲೀಸ್‌!

ಸಾರಾಂಶ

ಐದು ಭಾಷೆಯಲ್ಲಿ ಸಿದ್ಧವಾಗಿರುವ ‘ಪಾರಿವಾಳ’ ಎಂಬ ಹೊಸ ವಿಡಿಯೋ ಆಲ್ಬಂ ಸದ್ಯ ಕನ್ನಡದಲ್ಲಿ ಬಿಡುಗಡೆಯಾಗಿದೆ. ಭಾನವಿ ಕ್ಯಾಪ್ಚರ್‌ ಯೂಟ್ಯೂಬ್‌ ಚಾನಲ್‌ನಲ್ಲಿ ಈ ಹಾಡು ಲಭ್ಯವಿದೆ.

ರಾಮ್‌ ಕಿರಣ್‌ ತಾವೇ ನೃತ್ಯ ಸಂಯೋಜಿಸಿ, ನಿರ್ದೇಸಿ ಜತೆಗೆ ಈ ಹಾಡಿನಲ್ಲಿ ಅಭಿನಯಿಸಿದ್ದಾರೆ. ಇತ್ತೀಚೆಗಷ್ಟೇ ‘ಪಬ್ಲಿಕ್‌ ಟಾಯ್ಲೆಟ್‌’ ಕಿರುಚಿತ್ರ ನಿರ್ಮಿಸಿದ ಭಾನವಿ ಕ್ಯಾಪ್ಚರ್‌ ನಿರ್ಮಾಣದ ವಿಡಿಯೋ ಆಲ್ಬಂ ಇದು. ಸಿಂಗಲ್‌ ಟೇಕ್‌ನಲ್ಲಿ ರೂಪಿಸಿರುವ ವಿಡಿಯೋ ಆಲ್ಬಂ. ಇದನ್ನು ಬಿಡುಗಡೆ ಮಾಡಿದ್ದು ಖ್ಯಾತ ನೃತ್ಯ ಸಂಯೋಜಕ ಚಿನ್ನಿಪ್ರಕಾಶ್‌ ಅವರು. ರಾಮ್‌ಕಿರಣ್‌ ಅವರು ಚಿನ್ನಿಪ್ರಕಾಶ್‌ ಶಿಷ್ಯ. ಹಾಗಾಗಿ ಶಿಷ್ಯನ ಮೊದಲ ಪ್ರಯತ್ನ ಬೆಂಬಲಿಸಲು ಚಿನ್ನಿಪ್ರಕಾಶ್‌ ಆಗಮಿಸಿದ್ದರು.

ಕೃಷ್ಣ ಹೆಸರಲ್ಲಿ ನೂರು ಸಿನಿಮಾ ಬಂದ್ರೂ ಮಾಡ್ತೀನಿ: ಅಜಯ್‌ ರಾವ್‌ 

ಮೋಹನ್‌ ಬಿ ಕೆರೆ ಸ್ಟುಡಿಯೋದಲ್ಲಿ ಒಂದೇ ರಾತ್ರಿ ಈ ಹಾಡನ್ನು ಚಿತ್ರೀಕರಿಸಲಾಗಿದೆ. ‘ಹಾಡು ತುಂಬಾ ಚೆನ್ನಾಗಿದೆ. ನಾನೇ ನೃತ್ಯ ಸಂಯೋಜನೆ ಮಾಡುವಷ್ಟುಚೆನ್ನಾಗಿ ರೂಪಿಸಿದ್ದಾರೆ. ನಾನಾಗಿದ್ರೆ ಈ ಹಾಡನ್ನು ನಾಲ್ಕೈದು ದಿನ ಮಾಡುತ್ತಿದ್ದೆ. ಆದರೆ ಈತನ ಆಲೋಚನೆ ಕಂಡು ಆಶ್ಚರ್ಯವಾಯ್ತು. ರಾಮ್‌ಕಿರಣ್‌ ನನ್ನ ಶಿಷ್ಯ ಎಂದು ಹೇಳಿಕೊಳ್ಳುವುದಕ್ಕೆ ಹೆಮ್ಮೆ ಇದೆ’ ಎಂದರು ಚಿನ್ನಿಪ್ರಕಾಶ್‌.

ಇದು ನನ್ನ ಮತ್ತೊಂದು ಅಧ್ಯಾಯ: ಆದಿತ್ಯ 

ಅಭಿಷೇಕ್‌ ಜಿ.ಕಾಸರಗೋಡು ವಿಡಿಯೋ ಆಲ್ಬಂ ಅನ್ನು ಸೆರೆಹಿಡಿದಿದ್ದು, ಅಗಸ್ತ್ಯ ಸಂತೋಪ್‌ ಸಾಹಿತ್ಯ ರಚಿಸಿ, ರಾಗ ಸಂಯೋಜನೆ ಮಾಡಿದ್ದಾರೆ. ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಸೇರಿದಂತೆ 5 ಭಾಷೆಗಳಲ್ಲಿ ‘ಪಾರಿವಾಳ’ ಮೂಡಿ ಬರುತ್ತಿದೆ. ‘ಸದ್ಯ ಕನ್ನಡದಲ್ಲಿ ಮಾತ್ರ ಹೊರಬಂದಿದೆ. ಮುಂದಿನ ದಿನಗಳಲ್ಲಿ ಪ್ರತಿವಾರ ಒಂದೊಂದು ಭಾಷೆಯಲ್ಲಿ ಈ ವಿಡಿಯೋ ಹಾಡನ್ನು ಮಾಡುವ ಯೋಜನೆ ಹಾಕಿಕೊಂಡಿದ್ದೇವೆ. ಎಲ್ಲ ಭಾಷೆಯಲ್ಲೂ ಗಾಯಕ ಶಶಾಂಕ್‌ ಶೇಷಗಿರಿ ಅವರೇ ಹಾಡಿದ್ದಾರೆ’ ಎಂದರು ರಾಮ್‌ಕಿರಣ್‌. ನಾಯಕ ರಾಮ್‌ಕಿರಣ್‌ ಅವರಿಗೆ ನಾಯಕಿಯಾಗಿ ತೇಜಸ್ವಿನಿ ಶರ್ಮಾ ನಟಿಸಿದ್ದಾರೆ. ಅರುಣ್‌ ಬಸವರಾಜ್‌ ಅವರ ಜತೆಗೆ ರೋಹಿತ್‌ ಕಾರ್ಯಕಾರಿ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Viral Video: 62 ವರ್ಷದ ಹಿರಿಯ ನಟನನ್ನು ಮದುವೆಯಾದ್ರಾ ಬಾಲಿವುಡ್‌ ಬ್ಯೂಟಿ ಮಹಿಮಾ ಚೌಧರಿ?
Brahmagantu ರೂಪಾಗೆ ಕಿಚ್ಚನ ವಾರದ ಚಪ್ಪಾಳೆ: ಸೀರಿಯಲ್​ನಲ್ಲಿ ತಲೆ ಇರೋದು ಇವಳೊಬ್ಬಳಿಗೆ ಮಾತ್ರವಂತೆ!