ಬಿಗ್ ಬಾಸ್ ಮನೆಯಲ್ಲಿ ಬದಲಾವಣೆ ಗಾಳಿ/ ರಾಜೀವ್ ಮನೆಗೆ ಹೊಸ ನಾಯಕ/ ಮಸಿ ಬಳಿಯುವ ಟಾಸ್ಕ್/ ನಿಧಿ ಸುಬ್ಬಯ್ಯಗೆ ಮಸಿ ಬಳಿದ ಬಹುತೇಕರು/ ಮುಂದೆ ಯಾವ ತಂತ್ರಗಳನ್ನು ಅನುಸರಿಸಬೇಕು
ಬೆಂಗಳೂರು (ಮಾ. 11) ವೈರಸ್ ಟಾಸ್ಕ್ ನ್ನು ಮನೆಮಂದಿ ಹಾಳುಮಾಡಿಕೊಂಡಿದ್ದ ಕಾರಣ ಬಿಗ್ ಬಾಸ್ ಬೆಳಗಿನ ಹಾಡನ್ನು ಹಾಕಲಿಲ್ಲ. ಮನೆಯಲ್ಲಿ ಮಹತ್ವದ ಬದಲಾವಣೆಗಳಾಗಿದ್ದು ನಾಯಕನ ಓಟದಲ್ಲಿ ಗೆದ್ದ ರಾಜೀವ್ ಹೊಸ ಕ್ಯಾಪ್ಟನ್ ಆಗಿದ್ದಾರೆ. ಲ್ಯಾಗ್ ಮಂಜ ಮತ್ತು ರಾಜೀವ್ ನಡುನೆ ನಡೆದ ಹಣಾಹಣಿ ಯಾವ ಆಟಕ್ಕೂ ಕಡಿಮೆ ಇರಲಿಲ್ಲ.
ಬಿಗ್ ಬಾಸ್ ಮನೆ ಮಂದಿಗೆ ಮಸಿ ಬಳಿಯುವ ಟಾಸ್ಕ್ ನೀಡಿದರು. ವೈರಸ್ ಗೇಮ್ ನಲ್ಲಿ ಒಂದು ಚೂರು ಶ್ರಮ ಪಡೆದೆ ಹಗ್ಗ ಬಿಟ್ಟಿದ್ದ ನಿಧಿ ಸುಬ್ಬಯ್ಯಗೆ ಬಹುತೇಕರು ಮಸಿ ಬಳಿದರು. ಸಹಜವಾಗಿಯೇ ಗೇಮ್ ಸೋತಿದ್ದಕ್ಕೆ ಯಾರು ಕಾರಣ ಎಂಬ ಪೋಸ್ಟ್ ಮಾರ್ಟ್ಂ ನಡೆಯಿತು.
undefined
ವೈರಸ್ ಹಾವಳಿ, ಮನೆಯಲ್ಲಿ ಬೀಪ್ ಬೀಪ್ ಬೀಪ್
ಬಿಗ್ ಬಾಸ್ ಮನೆಯಲ್ಲಿ ನಂತರ ಎಲ್ಲವೂ ತಿಳಿಯಾಯಿತು. ಶುಭಾ ಪೂಂಜಾ ಚೆಲ್ಲಾಟ ಮಾಡಿ ರಂಜಿಸಿದರು. ಬ್ರೋ ಗೌಡನಿಗೆ ನೀನು ಇನ್ನೊಂದು ವಾರದಲ್ಲಿ ಹುಡುಗಿ ಪಟಾಯಿಸಬೇಕು ಎಂಬ ಟಾಸ್ಕ್ ಸಹ ನೀಡಿದರು. ಈ ನಡುವೆ ಮನೆಯಲ್ಲಿ ಯಾರು ಸಿಂಗಲ್ ಹುಡುಗಿಯರು ಇದ್ದೀರಿ ಎಂದಾಗ ದಿವ್ಯಾ ಸುರೇಶ್, ದಿವ್ಯಾ, ನಿಧಿ ಮತ್ತು ವೈಷ್ಣವಿ ಪ್ರಾಮಾಣಿಕವಾಗಿ ಕೈ ಎತ್ತಿದರು.
ಮನೆಯಲ್ಲಿ ರಘು ಗೌಡ ಸಖತ್ ಆಕ್ಟೀವ್ ಆದಂತೆ ಕಂಡುಬಂತು. ವಿಶ್ವ ಮತ್ತು ರಘು ಗೌಡ ಸಂಯೋಜನೆಯಲ್ಲಿ ಹಾಡು ಮೂಡಿಬಂತು. ಈ ನಡುವೆ ತನ್ನ ತಾಯಿ ನೆನೆಸಿಕೊಂಡು ವಿಶ್ವ ಒಂದು ಹಾಡನ್ನು ಹಾಡಿದ್ದು ಮೆಚ್ಚುಗೆ ಗಳಿಸಿಕೊಂಡಿತು .