ಚಾಂದನಿ ಜೊತೆ ಸೀತಾ ಚೈಯಾ ಚೈಯಾ... ಅವ್ಳು ಒಳ್ಳೆಯವಳಲ್ಲ ಕಣೇ ಹುಷಾರ್ ಎಂದ ಫ್ಯಾನ್ಸ್​...

Published : Mar 04, 2024, 08:40 PM ISTUpdated : Mar 04, 2024, 08:41 PM IST
ಚಾಂದನಿ ಜೊತೆ ಸೀತಾ ಚೈಯಾ ಚೈಯಾ... ಅವ್ಳು ಒಳ್ಳೆಯವಳಲ್ಲ ಕಣೇ ಹುಷಾರ್ ಎಂದ ಫ್ಯಾನ್ಸ್​...

ಸಾರಾಂಶ

ಸೀತಾರಾಮ ಸೀರಿಯಲ್​ನ ಮೂವರು ಮಹಿಳಾಮಣಿಗಳು ಸೇರಿ ರೀಲ್ಸ್ ಮಾಡಿದ್ದಾರೆ. ಸೀತಾ ಮತ್ತು ಚಾಂದನಿಯನ್ನು ಒಟ್ಟಿಗೇ ನೋಡಿ ಫ್ಯಾನ್ಸ್​ ಏನಂದ್ರು?  

ಸೀತಾ ರಾಮ ಸೀರಿಯಲ್​ ಇದೀಗ ಕುತೂಹಲದ ಘಟ್ಟ ತಲುಪಿದೆ. ಇತ್ತ ಸೀತಾ- ರಾಮ ಒಂದಾಗುವ ಕಾಲ ಬಂದಿದೆ. ಇವರಿಬ್ಬರನ್ನೂ ಒಂದು ಮಾಡಲು ಅಶೋಕ ಹರಸಾಹಸ ಮಾಡುತ್ತಿದ್ದಾರೆ. ಪ್ರೀತಿಯನ್ನು ಹೇಳಿಕೊಂಡು ಬಂದ ರಾಮ್​ನನ್ನು ಬೈದು ಸೀತಾ ಮನೆಯಿಂದ ಹೊರಕ್ಕೆ ಕಳಿಸಿದ್ದಾಳೆ. ಇದೇ ಅವಮಾನದಲ್ಲಿ ರಾಮ್​ ಏನು ಮಾಡಬೇಕು ಎಂದು ತಿಳಿಯುವಷ್ಟರಲ್ಲಿಯೇ ಭಯಾನಕ ಅಪಘಾತ ಸಂಭವಿಸಿದೆ. ಅಷ್ಟಕ್ಕೂ ಈ ಆ್ಯಕ್ಸಿಡೆಂಟ್​ ಮಾಡಿಸಿದ್ದು, ಖುದ್ದು ಆತನ ಚಿಕ್ಕಮ್ಮ. ಸೀತಾಳಿಗೆ ಮೋಸ ಮಾಡುವ ಉದ್ದೇಶದಿಂದ ಮದುವೆಯಾಗಲು ಹೊರಟಿದ್ದ ರುದ್ರಪ್ರತಾಪ್​ನ ಕೈಜೋಡಿಸಿ ಚಿಕ್ಕಮ್ಮ ಅಪಘಾತ ಮಾಡಿಸಿದ್ದಾಳೆ. ಜೈಲು ಸೇರಿದ್ದ ರುದ್ರಪ್ರತಾಪ್​ನಿಗೆ ಜಾಮೀನು ಕೊಡಿಸಿ ಹೊರಕ್ಕೆ ಕರೆದುಕೊಂಡು ಬಂದಿರುವ ಚಿಕ್ಕಮ್ಮ, ರುದ್ರಪ್ರತಾಪ್​ ಕೈಯಲ್ಲಿ ಅಪಘಾತ ಮಾಡಿಸಿದ್ದಾಳೆ. ಭೀಕರ ಅಪಘಾತದಲ್ಲಿ ರಾಮ್​ ಆಸ್ಪತ್ರೆಗೆ ಸೇರಿದ್ದಾನೆ.  ಸೀತಾ ರಕ್ತ ಕೊಟ್ಟು ಪ್ರಾಣ ಕಾಪಾಡಿದ್ದಾಳೆ. 
 
ರಾಮ್​ ಸೀತಾಳನ್ನು ಪ್ರೀತಿ ಮಾಡುವ ವಿಷ್ಯ ರಾಮ್​ ತಾತನಿಗೆ ತಿಳಿದಿದೆ. ಆದರೆ ಸೀತಾ ಒಂದು ಮಗುವಿನ ತಾಯಿ ಎನ್ನುವ ಸತ್ಯ ಗೊತ್ತಿಲ್ಲ. ರಾಮ್​ನನ್ನೇ ಸೀತಾಳಿಗೆ ಕೊಟ್ಟು ಮದುವೆ ಮಾಡಿಸುವ ಯೋಚನೆ ಮಾಡುತ್ತಿದ್ದಾನೆ. ರಾಮ್​ಗೆ ಅಪಘಾತ ಸಂಭವಿಸುವ ಪೂರ್ವದಲ್ಲಿ ಆತ ಸೀತಾಳ ಜೊತೆ ಮಾತನಾಡಿದ್ದು ಎನ್ನುವ ಸತ್ಯ ತಾತಾ ಸೂರಿಗೆ ಗೊತ್ತಾಗಿದೆ. ಇದೇ ಕಾರಣಕ್ಕೆ ಆತ ಸೀತಾಳನ್ನು ಕರೆದು ರಾಮ್​ ಅಂದ್ರೆ ನಿನಗೆ ಏನು ಅನಿಸುತ್ತೆ ಎಂದು ಕೇಳಿದ್ದಾನೆ. ಸೀತಾ ಸ್ವಲ್ಪ ಶಾಕ್​ ಆದ್ರೂ ಅವ್ರು ತುಂಬಾ ಒಳ್ಳೆಯವರು ಎಂದಿದ್ದಾಳೆ. ನಂತರ ರಾಮ್​ ನಿನ್ನ ಹತ್ರನೇ ಕೊನೆಯದಾಗಿ ಮಾತನಾಡಿದ್ದ. ಆ ಬಳಿಕ ಅಪಘಾತವಾಗಿದೆ. ಹಾಗಿದ್ರೆ ಆತ ಏನು ಮಾತನಾಡಿದ ಎಂದು ಕೇಳಿದ್ದಾನೆ. ಇದನ್ನು ಕೇಳಿ ಸೀತಾ ಅರೆಕ್ಷಣ ವಿಚಲಿತಳಾಗಿದ್ದಾಳೆ.

ವೇದಿಕೆ ಮೇಲೆ ಕಿಚ್ಚು ಹೊತ್ತಿಸಿದ ಮದುಮಕ್ಕಳು: ತೆರೆ ಮೆರೆ ಪ್ಯಾರ್​ಕೆ ಹಾಡಿಗೆ ಭರ್ಜರಿ ಸ್ಟೆಪ್​

ಅದೇ ಇನ್ನೊಂದೆಡೆ, ರಾಮ್​ ಚಿಕ್ಕಮ್ಮ ಅಶೋಕನ ಬಳಿ ಬಂದು ರಾಮ್​ ಇಷ್ಟು ಬೇಗ ಚೇತರಿಸಿಕೊಳ್ಳುತ್ತಾನೆ ಎಂದು ತಿಳಿದಿರಲಿಲ್ಲ. ಇದಕ್ಕೆ ಆತನ ಮಾಜಿ ಪ್ರೇಯಸಿ ಚಾಂದನಿ ಕಾರಣ ಎಂದಿದ್ದಾಳೆ.  ಆದರೆ ರಾಮ್​ಗೆ ಚಿಕ್ಕಮ್ಮ ಹಾಗೂ ಚಾಂದನಿಯ ಕುತಂತ್ರ ಗೊತ್ತು. ಅದೇ ಕಾರಣಕ್ಕೆ ಆತ, ಚಾಂದನಿ ಅಲ್ಲ, ಸೀತಾ ಮತ್ತು ಸಿಹಿ ಕಾರಣ ಎಂದಿದ್ದಾನೆ. ಇದನ್ನು ಕೇಳಿ ಚಿಕ್ಕಮ್ಮನ ಸಿಟ್ಟು ನೆತ್ತಿಗೇರಿದೆ. ಚಾಂದನಿಯನ್ನು ಮತ್ತೆ ರಾಮ್​ನ ಬಾಳಲ್ಲಿ ತರುವಲ್ಲಿ ಚಿಕ್ಕಮ್ಮ ಯಶಸ್ವಿಯಾಗ್ತಾಳಾ? ಮುಂದೇನು ಎನ್ನುವುದು ಈಗಿರುವ ಕುತೂಹಲ.

ಇದರ ನಡುವೆಯೇ ಸೀತಾ-ರಾಮ ಸೀರಿಯಲ್​ನ  ಸೀತಾ, ಚಾಂದನಿ ಮತ್ತು ಅಶೋಕ್​ ಪ್ರೇಯಸಿ ಪ್ರಿಯಾ ಸೇರಿ ಚೈಯ ಚೈಯ ಚೈಯಾ ಚೈಯಾ ಹಾಡಿಗೆ ರೀಲ್ಸ್​ ಮಾಡಿದ್ದಾರೆ. ಶೂಟಿಂಗ್​ನ ಬಿಡುವಿನ ಅವಧಿಯಲ್ಲಿ ಮೂವರೂ ಸೇರಿ ರೀಲ್ಸ್​ ಮಾಡಿದ್ದು, ಅದನ್ನು ನೋಡಿ ಥಹರೇವಾರಿ ಕಮೆಂಟ್ಸ್​ ಮಾಡಿದ್ದಾರೆ ನೆಟ್ಟಿಗರು. ಚಾಂದನಿಯ ಕಂತ್ರಿ. ಅವಳ ಜೊತೆ ರೀಲ್ಸ್​ ಮಾಡಬೇಡಿ, ಅವಳು ಒಳ್ಳೆಯವಲ್ಲ, ಕೆಟ್ಟವಳು ಎಂದೆಲ್ಲಾ ಕಮೆಂಟಿಗರು ಸೀರಿಯಸ್​ ಆಗಿ ಹಾಗೂ ಕೆಲವರು ತಮಾಷೆಗಾಗಿ ಹೇಳುತ್ತಿದ್ದಾರೆ. 

ಅಂದುಕೊಂಡದ್ದೆಲ್ಲಾ ಆಗಬೇಕೆ? ನೆಗೆಟಿವ್​ ಎನರ್ಜಿ ಸುಳಿಯಬಾರದೆ? ನಟಿ ವೈಷ್ಣವಿ ಹೇಳಿದ್ದಾರೆ ಸಿಂಪಲ್​ ಟಿಪ್ಸ್​...
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Amruthadhaare: ಅಜ್ಜಿ-ಮೊಮ್ಮಕ್ಕಳ ಮಿಲನದ ಅಪೂರ್ವ ಮಿಲನ; ವೀಕ್ಷಕರು ನಿರೀಕ್ಷಿಸುತ್ತಿದ್ದ ಘಳಿಗೆ ಬಂತು, ಆದ್ರೆ...
ಬಿಗ್ ಬಾಸ್ 19 ವಿನ್ನರ್ ಹೆಸರು ಆನ್‌ಲೈನ್‌ನಲ್ಲಿ ಲೀಕ್? ಹರಿದಾಡುತ್ತಿದೆ ಸ್ಕ್ರೀನ್‌ಶಾಟ್