ಭೂಮಿಕಾ ಹೆಸ್ರು ಹೇಳಿ ಜೈದೇವನ ವಿರುದ್ಧ ಕೇಸ್‌ ದಾಖಲಿಸಿದ್ದು ಇವ್ನಾ? ಇನ್ನು ಭೂಮಿ ಆಟ ಶುರು...!

Published : Mar 04, 2024, 01:50 PM IST
ಭೂಮಿಕಾ ಹೆಸ್ರು ಹೇಳಿ ಜೈದೇವನ ವಿರುದ್ಧ ಕೇಸ್‌ ದಾಖಲಿಸಿದ್ದು ಇವ್ನಾ? ಇನ್ನು ಭೂಮಿ ಆಟ ಶುರು...!

ಸಾರಾಂಶ

ಭೂಮಿಕಾ ಹೆಸರು ಹೇಳಿ ಜೈದೇವನ ವಿರುದ್ಧ ಕೇಸು ದಾಖಲಿಸಿದ್ದು ಯಾರು ಎನ್ನುವ ಸತ್ಯ ಬಹಿರಂಗಗೊಂಡಿದೆ. ಇನ್ನು ಭೂಮಿಕಾ ಆಟ ಶುರುವಿಟ್ಟುಕೊಂಡಿದ್ದಾಳೆ.   

ಜೈದೇವ ಪತ್ನಿಯ ಮೇಲೆ ಕೈಮಾಡಿದ್ದಾಗಿ ಆತನನ್ನು ಜೈಲಿಗೆ ಕಳುಹಿಸುವ ಪ್ಲ್ಯಾನ್‌ ಮಾಡಿದವ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ಭೂಮಿಕಾ ಮೇಲೆ ಕೆಟ್ಟು ಹೆಸರು ಬರುವ ಸಲುವಾಗಿ ಆಕೆಯ ಹೆಸರು ಹೇಳಿಕೊಂಡು ಕೇಸ್‌ ದಾಖಲು ಮಾಡಲಾಗಿತ್ತು. ಇದರಿಂದ ಇಡೀ ಮನೆಯವರು ಭೂಮಿಕಾ ಮೇಲೆ ತಿರುಗಿ ಬಿದ್ದಿದ್ದಾರೆ. ಒಂದು ಹಂತದಲ್ಲಿ ಗೌತಮ್‌ ಕೂಡ ಭೂಮಿಕಾಳನ್ನು ನಂಬಲಿಲ್ಲ. ಇನ್ನು ಅತ್ತೆ ಶಕುಂತಲಾ ದೇವಿಯೋ ತನ್ನ ಮಗನನ್ನು ಜೈಲಿಗೆ ಕಳುಹಿಸಿದ್ದಾಳೆ ಎಂದು ಮೊದಲೇ ಆಗದ ಭೂಮಿಕಾ ಮೇಲೆ ಇನ್ನಷ್ಟು ಕಿಡಿ ಕಾರುತ್ತಿದ್ದಾಳೆ. ಆದರೆ ಕೊನೆಗೂ ಭೂಮಿಕಾ ಹೆಸರಿನಲ್ಲಿ ಜೈದೇವನ ವಿರುದ್ಧ ಕೇಸು ಹಾಕಿದ್ದು ಯಾರು ಎನ್ನುವುದು ಬಹಿರಂಗಗೊಂಡಿದೆ.

ಹೌದು. ಕೆಲಸದಾಕೆ ಮಲ್ಲಿಯನ್ನು ಕಾಮತೃಷೆಗಾಗಿ ಬಳಸಿಕೊಂಡು ಕೈಕೊಡುವ ಪ್ಲ್ಯಾನ್​ ಮಾಡಿದ್ದ ಜೈದೇವನ ಆಟ ಭೂಮಿಕಾ ಮುಂದೆ ನಡೆಯಲಿಲ್ಲ. ನಾಪತ್ತೆ ಮಾಡಲಾಗಿದ್ದ ಮಲ್ಲಿಯನ್ನು ಹುಡುಕಿ ತಂದು ಜೈದೇವನ ಜೊತೆ ಭೂಮಿಕಾ ಮದುವೆ ಮಾಡಿಸಿದ್ದಾಳೆ. ಮದುವೆಯೇನೋ ಆಗಿದೆ. ಆದರೆ ಪತ್ನಿಯೆಂದು ಆಕೆಯನ್ನು ಒಪ್ಪಿಕೊಳ್ಳಬೇಕಲ್ಲ. ಒಪ್ಪಿಕೊಳ್ಳದಿದ್ದರೂ ಪರವಾಗಿಲ್ಲ. ಆದರೆ ಈ ಕುತಂತ್ರಿ ಜೈದೇವ ಮಲ್ಲಿಗೆ ಕೆನ್ನೆಗೆ ಚೆನ್ನಾಗಿ ಬಾರಿಸಿದ್ದಾನೆ, ಆಕೆಯ ಮೇಲೆ ಹಲ್ಲೆ ಮಾಡಿದ್ದದಾನೆ. ಮಲ್ಲಿಯ ಮೇಲೆ ಕೈಮಾಡಿದ ಜೈದೇವನ ವಿರುದ್ಧ ಭೂಮಿಕಾ ಕಿಡಿಕಿಡಿಯಾಗಿದ್ದಾಳೆ. ಅತ್ತೆಯ ಎದುರಿಗೇ ಜೈದೇವನನ್ನು ಝಾಡಿಸಿದ್ದಾಳೆ. ಇಬ್ಬರಿಗೂ ಮಾತಿಗೆ ಮಾತು ಬೆಳೆದಿದೆ. ನಾನು ಅತ್ತಿಗೆ ಎನ್ನುವ ಕಾರಣ ಬಾಯಿಮುಚ್ಚಿಕೊಂಡಿದ್ದೆ, ಇನ್ನೊಂದು ಮಾತನಾಡಿದರೆ ಸರಿ ಇರುವುದಿಲ್ಲ ಎಂದು ಜೈದೇವ ಹೇಳಿದರೆ ಭೂಮಿಕಾ ಸುಮ್ಮನೇ ಇರುತ್ತಾಳೆಯೆ?ಮೈದುನ ಎನ್ನುವ ಕಾರಣಕ್ಕೆ ಬಾಯಿಮುಚ್ಚಿಕೊಂಡಿದ್ದೆ. ಪತ್ನಿಯನ್ನು ಸರಿಯಾಗಿ ನೋಡದೇ ಹೋದರೆ ಮನೆಯಲ್ಲಿ ಜಾಗವಿರುವುದಿಲ್ಲ ಎಂದಿದ್ದಾಳೆ.  

ಜೀನೀ ಗೆಟಪ್​ಗೆ ಬಿಗ್​ಬಾಸ್​ ತುಕಾಲಿ ಸಂತೋಷ್​ ರೆಡಿಯಾಗಿದ್ದು ಹೀಗೆ ನೋಡಿ... ವಿಡಿಯೋ ವೈರಲ್

ಇದೇ ವೇಳೆ ಪೊಲೀಸರ ಎಂಟ್ರಿಯಾಗಿತ್ತು. ಭೂಮಿಕಾಳಿಂದ ತಮಗೆ ಜೈದೇವ ವಿರುದ್ಧ ದೂರು ಬಂದಿರುವುದಾಗಿ ಹೇಳಲಾಗಿತ್ತು. ಅಸಲಿಗೆ ಭೂಮಿಕಾ ಹೆಸರು ಹೇಳಿ ಬೇರೆಯವರು ದೂರು ಕೊಟ್ಟಿದ್ದಾರೆ.  ಭೂಮಿಕಾ ವಿರುದ್ಧ ತಂತ್ರ ಮಾಡಲಾಗಿದೆ. ಈ ಮೂಲಕ ಪತಿ-ಪತ್ನಿಯನ್ನು ದೂರ ಮಾಡಲು ನೋಡಲಾಗಿದೆ. ಪತ್ನಿ ಮೇಲೆ ಕೈಮಾಡಿದ ಜೈದೇವನನ್ನು ಪೊಲೀಸರು ಅರೆಸ್ಟ್​ ಮಾಡಿದ್ದರು. ಭೂಮಿಕಾ ಈ ದೂರನ್ನು ತಾನು ಕೊಟ್ಟಿಲ್ಲ ಎಂದು ಹೇಳಿದರೂ ಗೌತಮ್​ ಸೇರಿದಂತೆ ಯಾರೂ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಕೊನೆಗೂ ಜೈಲಿನಿಂದ ಬಿಡುಗಡೆಯಾಗಿ ಜೈದೇವ ಬಂದಿದ್ದಾನೆ. 


ಅಷ್ಟಕ್ಕೂ ಈ ದೂರನ್ನು ಕೊಟ್ಟವರು ಯಾರು ಎಂಬ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ಭೂಮಿಕಾಳನ್ನು ಸಿಲುಕಿಸಲು ಅತ್ತೆ ಶಕುಂತಲಾ ದೇವಿ ದೂರು ಕೊಟ್ಟಿರಬಹುದು ಎಂದು ಕೆಲವರು ಹೇಳುತ್ತಿದ್ದರೆ, ಇದು ಖಂಡಿತಾ ಸಾಧ್ಯವಿಲ್ಲ, ಭೂಮಿಕಾ ಮೇಲೆ ಆಕೆಗೆ ಸಿಟ್ಟಿದ್ದರೂ ತನ್ನ ಮಗನನ್ನು ಜೈಲಿಗೆ ಕಳುಹಿಸುವ ಪ್ಲ್ಯಾನ್​ ಮಾಡಿರಲಿಕ್ಕಿಲ್ಲ ಎಂದಿದ್ದಾಳೆ. ಇನ್ನು ಜೈದೇವನ ತಂಗಿ ಈ ಕುತಂತ್ರ ಮಾಡಿರುವ ಎಲ್ಲಾ ಸಾಧ್ಯತೆ ಇದೆ ಎನ್ನುವುದು ಇನ್ನು ಕೆಲವರ ಪ್ಲ್ಯಾನ್​. ಏಕೆಂದರೆ ಇದಾಗಲೇ ಆಕೆ ತನ್ನ ಅಕ್ಕನ ಹೊಟ್ಟೆಯಲ್ಲಿರುವ ಮಗುವನ್ನು ತೆಗೆಸುವಲ್ಲಿ ಯಶಸ್ವಿಯಾಗಿದ್ದಳು. ಈಗ ಅತ್ತಿಗೆ ವಿರುದ್ಧ ಸೇಡು ತೀರಿಸಿಕೊಳ್ಳಲು ಅಣ್ಣನನ್ನು ಜೈಲಿಗೆ ಕಳುಹಿಸುವ ಪ್ಲ್ಯಾನ್​ ಮಾಡಿರಲಿಕ್ಕೆ ಸಾಕು ಎನ್ನುತ್ತಿದ್ದಾರೆ. ಇಲ್ಲದಿದ್ದರೆ ಶಕುಂತಲಾದೇವಿಯ ಸಹೋದರನ ಕೆಲಸ ಇರಬಹುದು ಎನ್ನುವುದು ಇನ್ನು ಕೆಲವರ ಊಹೆಯಾಗಿತ್ತು. ಎಲ್ಲರ ಊಹೆ ಸುಳ್ಳಾಗಿದೆ. ಖುದ್ದು ಜೈದೇವನೇ ಭೂಮಿಕಾ ಹೆಸರು ಹೇಳಿ ದೂರು ಕೊಟ್ಟಿದ್ದಾನೆ. ಇದು ಭೂಮಿಕಾಗೆ ತಿಳಿದಿದೆ. ಜೈದೇವನಿಗೆ ಚಾಲೆಂಜ್‌ ಹಾಕಿದ್ದಾಳೆ. ಈ ಮದುವೆ ಸಿಂಧುವೇ ಅಲ್ಲ ಎಂದಿದ್ದಾನೆ ಜೈದೇವ. ಅಷ್ಟಕ್ಕೆ ಸುಮ್ಮನಾಗದ ಭೂಮಿಕಾ ಇಬ್ಬರ ಮದುವೆಯನ್ನು ನೋಂದಣಿ ಮಾಡಿಸಿಬಿಟ್ಟಿದ್ದಾಳೆ. ಇನ್ನು ತನ್ನ ಆಟ ಶುರು ಮಾಡಿಕೊಂಡಿದ್ದಾಳೆ. 

ಅಂದುಕೊಂಡದ್ದೆಲ್ಲಾ ಆಗಬೇಕೆ? ನೆಗೆಟಿವ್​ ಎನರ್ಜಿ ಸುಳಿಯಬಾರದೆ? ನಟಿ ವೈಷ್ಣವಿ ಹೇಳಿದ್ದಾರೆ ಸಿಂಪಲ್​ ಟಿಪ್ಸ್​...
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?