ದೇವ್ರೆ ನನಗೆ ಜನ್ಮದಲ್ಲಿ ಮದ್ವೆನೇ ಬೇಡ ಅನ್ನಿಸ್ತಿದೆ ಅಂತಿದ್ದಾರೆ ಸೀರಿಯಲ್‌ ಫ್ಯಾನ್ಸ್‌!

Published : Mar 04, 2024, 02:26 PM IST
ದೇವ್ರೆ ನನಗೆ ಜನ್ಮದಲ್ಲಿ  ಮದ್ವೆನೇ ಬೇಡ ಅನ್ನಿಸ್ತಿದೆ ಅಂತಿದ್ದಾರೆ ಸೀರಿಯಲ್‌ ಫ್ಯಾನ್ಸ್‌!

ಸಾರಾಂಶ

ಭಾಗ್ಯಲಕ್ಷ್ಮಿಯ ಪ್ರೊಮೋ ನೋಡಿದ ಯುವತಿಯರು ನನಗೆ ಮದ್ವೆನೇ ಬೇಡ ಎನ್ನುತ್ತಿದ್ದಾರೆ. ಅಷ್ಟಕ್ಕೂ ಆಗಿರೋದು ಏನು?   

ತಾಂಡವ್‌, ರಿಕ್ವೆಸ್ಟ್‌ ಮಾಡಿಕೊಂಡಿದ್ದರಿಂದ ಭಾಗ್ಯ ಮನೆಗೆ ವಾಪಸಾಗಿದ್ದಾಳೆ. ಮಕ್ಕಳ ಒತ್ತಡಕ್ಕೆ ಮಣಿದು ತಾಂಡವ್‌ ಭಾಗ್ಯಳಿಗೆ ಕರೆ ಮಾಡಿದ್ದ. ಇದೀಗ ಆ ಕರೆಯ ಮೇರೆಗೆ ಮನೆಗೆ ವಾಪಸಾಗಿದ್ದನ್ನು ಕಂಡು ಆತ ಕೆಂಡಾಮಂಡಲವಾಗಿದ್ದಾನೆ. ಯಾಕೆ ಬಂದಿ ಎಂದು ಭಾಗ್ಯಳನ್ನು ಕೇಳಿದ್ದಾನೆ. ನೀವು ಕಾಲ್‌ ಮಾಡಿದ್ದಕ್ಕೆ ಬಂದಿರುವುದಾಗಿ ಭಾಗ್ಯ ಹೇಳಿದ್ದಾಳೆ. ಇದು ಕೇಳಿ ಮತ್ತಿಷ್ಟು ಸಿಟ್ಟಿನಿಂದ ಒಂದು ವಾರ ಮನೆಯ ಕಡೆಗೆ ಸುಳಿಯಬಾರದು ಎಂಬ ಷರತ್ತು ಇದ್ದರೂ ಬರಲು ನಾಚಿಕೆ ಆಗಲ್ವಾ? ನಾನು ಕರೆದ ತಕ್ಷಣ ಬರಲು ಎಷ್ಟು ಧೈರ್‍ಯ ಎಂದು ಪ್ರಶ್ನಿಸಿದ್ದಾನೆ. ಏನಾದರೂ ಒಂದು ನೆಪ ಹೇಳಿ ಮನೆಗೆ ಬರಲು ಆಗಲ್ಲ ಎಂದಿದ್ದರೆ, ಅದನ್ನೇ ನಾನು ಮಕ್ಕಳಿಗೆ ಹೇಳುತ್ತಿದ್ದೆ, ಅವರು ಕೇಳುತ್ತಿದ್ದರು. ಅದನ್ನು ಬಿಟ್ಟು ಕರೆದ ತಕ್ಷಣ ಮನೆಗೆ ಯಾಕೆ ಬಂದೆ ಎಂದು ಪ್ರಶ್ನಿಸಿದ್ದಾನೆ.

ಇದನ್ನು ಕೇಳಿ ಕೂಲ್‌ ಆಗಿಯೇ ಉತ್ತರಿಸಿರುವ ಭಾಗ್ಯ ನನಗೆ ಮದುವೆಯ ವಿಡಿಯೋ ನೋಡಬೇಕು ಎಂದಿದ್ದಾಳೆ. ಇದನ್ನು ಕೇಳಿ ತಾಂಡವ್‌ಗೆ ಆಶ್ಚರ್ಯ ಆಗಿದೆ. ಅಸಲಿಗೆ ನಾನು ನಿಮ್ಮ ಹೆಂಡತಿ ಎಂದು ತೋರಿಸುವ ಸಲುವಾಗಿ, ನನಗೆ ತಾಳಿ ಕಟ್ಟಿದ್ದು ನೀವೇ ಎಂದು ತೋರಿಸುವ ಸಲುವಾಗಿ ಆಕೆ ಹಾಗೆ ಹೇಳಿರಲಿಕ್ಕೆ ಸಾಕು. ಇದರ ಪ್ರೊಮೋ ಬಿಡುಗಡೆಯಾಗಿದೆ.

12 ಎಕರೆ ಜಾಗದಲ್ಲಿ ರಜನೀಕಾಂತ್​ ಆಸ್ಪತ್ರೆ: ರಾಜಕೀಯದಿಂದ ದೂರವಿದ್ದು ಬಡವರಿಗೆ ಉಚಿತ ಚಿಕಿತ್ಸೆ ಗುರಿ

ಇದರಲ್ಲಿ ತಾಂಡವ್‌ನ ನಟನೆ ನೋಡಿ ಅಭಿಮಾನಿಗಳು ಅದರಲ್ಲಿಯೂ ಹೆಚ್ಚಾಗಿ ಯುವತಿಯರು ಅಬ್ಬಾ ಎನ್ನುತ್ತಿದ್ದಾರೆ. ಇಂಥ ಗಂಡ ಸಿಕ್ಕರೆ ಗತಿಯೇನಪ್ಪಾ ಎನ್ನುತ್ತಿದ್ದಾರೆ. ಇಂಥವರನ್ನು ಮದ್ವೆಯಾಗುವ ಬದಲು ಮದುವೆನೇ ಬೇಡ ಎನ್ನಿಸುತ್ತಿದೆ ಎನ್ನುತ್ತಿದ್ದಾರೆ. ಇನ್ನು ಪುರುಷರೋ, ತಾಂಡವ್‌ನಂತೆ ಎಲ್ಲರೂ ಕೆಟ್ಟವರು ಇರುವುದಿಲ್ಲ. ದಯವಿಟ್ಟು ಪುರುಷ ಪಾತ್ರವನ್ನು ಇಷ್ಟು ಕೆಟ್ಟದ್ದಾಗಿ ತೋರಿಸಬೇಡಿ ಎನ್ನುತ್ತಿದ್ದಾರೆ. 

ಇದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಭಾಗ್ಯಲಕ್ಷ್ಮಿ ಸೀರಿಯಲ್ ಕಥೆ. ಮನದಲ್ಲಿ ಪ್ರೇಯಸಿ ಕಾಡುತ್ತಿದ್ದರೆ, ಮಕ್ಕಳಿಗಾಗಿ ಅನಿವಾರ್ಯವಾಗಿ ಪತ್ನಿಯ ಜೊತೆಗೆ ಇರುವ ಅನಿವಾರ್ಯ ತಾಂಡವ್‌ಗೆ.  ಇತ್ತ ಪ್ರೇಯಸಿಯನ್ನು ಬಿಡಲಾಗದ ಸ್ಥಿತಿ, ಅಪ್ಪ-ಅಮ್ಮ ಮತ್ತು ವಿಶೇಷವಾಗಿ ಮಕ್ಕಳ ಮೇಲಿನ ಪ್ರೀತಿ ಹಾಗೂ ಮಗನ ಜಿದ್ದಿನಿಂದ ಪತ್ನಿಯನ್ನೂ ಬಿಡಲು ಆಗದ ಸ್ಥಿತಿ. ಆದ್ದರಿಂದ ಭಾಗ್ಯಳನ್ನು ಕರೆಸಿದ್ದಾನೆ. ಆದರೆ ಇಂಥ ಸಂಸಾರ  ಇಂಥ ಸಂಸಾರ ಎಷ್ಟು ದಿನ? ಪತಿಯ ಹೀಯಾಳಿಕೆಯನ್ನು ಸಹಿಸಿಕೊಂಡು, ಮಕ್ಕಳಿಗಾಗಿ ಎಲ್ಲವನ್ನೂ ಸಹಿಸಿಕೊಳ್ಳುವ ಪತ್ನಿಯ ಕಷ್ಟಕ್ಕೆ ಕೊನೆ ಎಂದು? ಅತ್ತ ಪತಿ-ಪತ್ನಿಯನ್ನು ದೂರ ಮಾಡಿ ಎರಡು ಮಕ್ಕಳ ತಂದೆಯನ್ನು ತನ್ನದಾಗಿಸಿಕೊಳ್ಳುವ ಶತಪ್ರಯತ್ನ ಮಾಡುತ್ತಿರುವ ಪ್ರೇಯಸಿ ಮುಂದೇನು ಕುತಂತ್ರ ಮಾಡಬಹುದು ಎನ್ನುವ ಪ್ರಶ್ನೆ ಅಭಿಮಾನಿಗಳಿಗೆ ಕಾಡುತ್ತಿದೆ.  

ಅಂದುಕೊಂಡದ್ದೆಲ್ಲಾ ಆಗಬೇಕೆ? ನೆಗೆಟಿವ್​ ಎನರ್ಜಿ ಸುಳಿಯಬಾರದೆ? ನಟಿ ವೈಷ್ಣವಿ ಹೇಳಿದ್ದಾರೆ ಸಿಂಪಲ್​ ಟಿಪ್ಸ್​...

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss ಗಿಲ್ಲಿ ಬಗ್ಗೆ ನಿಮ್ಗೆ ಗೊತ್ತಿಲ್ಲ, ರಘು ಚಪಾತಿ ಕೊಡದ ಕಾರಣ ನಾನ್​ ಹೇಳ್ತೀನಿ ಕೇಳಿ' ಎಂದ ಅಭಿಷೇಕ್
ಹೆಂಡ್ತಿಯನ್ನು ಹೇಗೆ ನೋಡಿಕೊಳ್ಳಬೇಕು? ಬೆಸ್ಟ್​ ಪತಿಯಾಗಲು ಮಾಳುಗೆ Bigg Boss ರಕ್ಷಿತಾ ಶೆಟ್ಟಿ ಏನೆಲ್ಲಾ ಟಿಪ್ಸ್​ ಕೊಟ್ರು ನೋಡಿ!