ಎಂದೂ ಮರೆಯಲಾಗದ ಈ ರಿಯಾಲಿಟಿ ಶೋ ಮತ್ತೆ ನೆನಪು ಮಾಡ್ಕೊಳ್ಳಿ!

By Bhavani Bhat  |  First Published Oct 22, 2024, 9:38 PM IST

ಒಂದು ಕಾಲದಲ್ಲಿ ಮನೆಮಾತಾಗಿದ್ದ ರಿಯಾಲಿಟಿ ಶೋವೊಂದರ ಬಗ್ಗೆ ಈ ಲೇಖನ. ಜನರು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಈ ಶೋಗೆ ಮೊರೆ ಹೋಗುತ್ತಿದ್ದರು. ಈಗ ಆ ಶೋನ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


ಒಂದಿಷ್ಟು ವರ್ಷಗಳ ಕೆಳಗೆ ಮನೆ ಮನೆಯಲ್ಲೂ ಈ ರಿಯಾಲಿಟಿ ಶೋ ಬಗ್ಗೆಯೇ ಚರ್ಚೆ. ಖ್ಯಾತ ನಟಿಯೊಬ್ಬರು ಇದನ್ನು ನಡೆಸಿಕೊಡ್ತಾ ಇದ್ದರೆ ಮನೆ ಮಂದಿಯೆಲ್ಲ ಕೂತಲ್ಲಿಂದ ಕದಲದೇ ನೋಡ್ತಿದ್ರು. ಅದ್ಯಾವುದು ಗೆಸ್ ಮಾಡಿ.

ಕಳೆದ ಒಂದು ದಶಕದಿಂದ ಏನೇನೆಲ್ಲ ರಿಯಾಲಿಟಿ ಶೋಗಳು ಬರ್ತಿವೆ. ಬಿಗ್‌ಬಾಸ್‌ನಂಥಾ ರಿಯಾಲಿಟಿ ಶೋಗಳೂ ಅನೇಕ ಕಾರಣಕ್ಕೆ ಸುದ್ದಿಯಾಗುತ್ತದೆ. ಆದರೆ ಮನಸ್ಸಲ್ಲಿ ಉಳಿಯುವ ರಿಯಾಲಿಟಿ ಶೋಗಳು ಕಡಿಮೆ. ಆದರೆ ಒಂದು ಕಾಲದಲ್ಲಿ ಒಂದು ವಿಶಿಷ್ಠ ರಿಯಾಲಿಟಿ ಶೋ ತನ್ನ ಅಪ್ರೋಚ್‌ನಿಂದಲೇ ಮನೆಮಾತಾಗಿತ್ತು. ಜನ ಕಾದು ಕುಳಿತು ಈ ಶೋವನ್ನು ನೋಡುತ್ತಿದ್ದರು. ಇನ್ನೂ ಹೇಳಬೇಕು ಅಂದರೆ ನೆರೆಮನೆಯಲ್ಲೋ, ಸ್ನೇಹಿತರ ವಲಯದಲ್ಲೋ ಏನಾದರೂ ಸಮಸ್ಯೆ ಬಂದರೆ ಕೂಡಲೇ ಈ ಶೋ ಗೆ ಹೋದರೆ ನಿಮ್ಮ ಸಮಸ್ಯೆ ಬಗೆಹರಿಯಬಹುದೇನೋ ಅನ್ನೋ ರೀತಿ ಮಾತನಾಡುತ್ತಿದ್ದರು. ಅಷ್ಟೇ ಯಾಕೆ, ತಮ್ಮ ಮನೆಯಲ್ಲೇ ಏನಾದರೂ ಸಮಸ್ಯೆ ಬಂದರೂ ಜನರಿಗೆ ಮೊದಲು ಮನಸ್ಸಿಗೆ ಬರುತ್ತಿದ್ದದ್ದೇ ಈ ಶೋ. ಇದಕ್ಕೆ ಹೋದರೆ ತಮ್ಮ ಫ್ಯಾಮಿಲಿ ಪ್ರಾಬ್ಲೆಂ ಖಂಡಿತಾ ಸರಿಹೋಗುತ್ತೆ ಅನ್ನೋ ಅಚಲ ವಿಶ್ವಾಸ. ಅಂದಹಾಗೆ ಜೆನ್‌ ಜೀ ಯವರಿಗೆ ಇದೊಂದು ರೀತಿ ನಾಸ್ತಾಲ್ಜಿಯಾ. ಅವರ ಬಾಲ್ಯದಲ್ಲಿ ಮನೆಮಂದಿಯೆಲ್ಲ ಕಾದು ಕೂತು ನೋಡುತ್ತಿದ್ದ ಈ ಶೋ ಅವರಿಗೆ ಆಗ ಅರ್ಥ ಆಗದಿದ್ದರೂ ಆ ಶೋ ಟೈಟಲ್‌ ಬಂದ ಕೂಡಲೇ ತಮ್ಮ ಬಾಲ್ಯದ ದಿನಗಳ ನೆನಪನ್ನಂತೂ ತರುತ್ತದೆ. ಅಷ್ಟಕ್ಕೂ ಆ ಶೋ ಯಾವುದು?

Tap to resize

Latest Videos

undefined

ಇಷ್ಟೆಲ್ಲ ಹೇಳಿದ ಮೇಲೆ ಹೆಚ್ಚಿನವರಿಗೆ ಈ ಶೋ ಯಾವುದು ಅಂತ ಗೊತ್ತಾಗಿರುತ್ತೆ. ಜನ ಕೋರ್ಟ್‌ ಮೆಟ್ಟಿಲು ಹತ್ತಬೇಕಾದ್ದನ್ನೂ ಮರೆತು ಈ ಶೋಗೆ ಹೋಗ್ತಿದ್ದರು ಅಂದರೆ ಸಣ್ಣದೊಂದು ಹಿಂಟ್ ಕೊಟ್ಟ ಕೂಡಲೇ ಅದ್ಯಾವುದು ಅಂತ ಗೊತ್ತಾಗುತ್ತೆ. ಯೆಸ್, ನಿಮ್ಮ ಗೆಸ್ ಕರೆಕ್ಟ್. ಅದು 'ಬದುಕು ಜಟಕಾ ಬಂಡಿ' ರಿಯಾಲಿಟಿ ಶೋ. ಮಾಳವಿಕಾ ಅವಿನಾಶ್ ನಡೆಸಿಕೊಡುತ್ತಿದ್ದ ರಿಯಾಲಿಟಿ ಶೋ. ಇದೀಗ ಆ ಶೋ ಒಂದರ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 

ಜೆನ್‌ ಜೀ ತಲೆಮಾರಿನ ವೀಕ್ಷಕರೊಬ್ಬರು ಇದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿದ್ದು ಎಲ್ಲೆಡೆ ವೈರಲ್ ಆಗಿದೆ. ಇದು ಜನಕ್ಕೆ ಎಷ್ಟು ಕನೆಕ್ಟ್ ಆಗ್ತಿತ್ತು ಅನ್ನೋದು ಇದನ್ನು ನೋಡಿದರೇ ತಿಳಿಯುತ್ತದೆ. ಇದರಲ್ಲಿ ಈ ಕಾರ್ಯಕ್ರಮದಲ್ಲಿ ನಡೆದ ಮಾರಾಮಾರಿಯೊಂದರ ವಿಶ್ಯುವಲ್ ಇದೆ. ವೀಕ್ಷಕರ ಗ್ಯಾಲರಿಯಿಂದ ಎದ್ದು ಬಂದ ಒಬ್ಬ ವ್ಯಕ್ತಿ ಕಾರ್ಯಕ್ರಮದಲ್ಲಿ ಭಾಗಿಯಾದವನ ಮೇಲೆ ಏಕಾಏಕಿ ಹೊಡೆಯತೊಡಗಿದ. 'ತಾಯಿ ಥರ ನೋಡ್ತಿದ್ದೆ ಅವಳನ್ನು, ನನ್ನ ಮೇಲೆ ಅನುಮಾನ ಪಡ್ತೀಯಾ' ಅಂತ ಮುಖ ಮೂತಿ ನೋಡದೇ ಚಚ್ಚತೊಡಗಿದ. ಅವನ ಎದುರು ಕೂತಿದ್ದ ಹೆಣ್ಮಗಳಿಗೆ ಮತ್ಯಾರೋ ತಳ್ಳಿದರು. ಆಕೆ ಸಿಟ್ಟಲ್ಲಿ ನೆಲಕ್ಕೆ ತಲೆ ತಲೆ ಚಚ್ಚಿಕೊಂಡರು. ಇದ್ದಕ್ಕಿದ್ದಂತೆ ಅಲ್ಲೊಂದು ದೊಡ್ಡ ದೊಂಬಿಯೇ ನಡೆಯತೊಡಗಿತು. ಎಲ್ಲರೆದುರು ಕ್ಯಾಮರಾ ಎದುರೇ ನಡೆದ ಹೊಡೆದಾಟ. 

ಇಂಥಾದ್ದು ಈ ಶೋ ನಲ್ಲಿ ಸಾಕಷ್ಟು ಬಾರಿ ನಡೆದಿತ್ತು. ಆರಂಭದಲ್ಲಿ ಸೋಮವಾರದಿಂದ ಶುಕ್ರವಾರದ ತನಕ ಸಂಜೆ 7ಕ್ಕೆ ಪ್ರತಿ ದಿನ ಬದುಕು ಜಟಕಾ ಬಂಡಿ ಪ್ರಸಾರವಾಗುತ್ತಿತ್ತು. ಆ ಬಳಿಕ ಇದರ ಪ್ರಸಾರ ಮಧ್ಯಾಹ್ನಕ್ಕೆ ಶಿಫ್ಟ್ ಆಯ್ತು. ಇದು ಒಂಥರಾ ಕೌಟುಂಬಿಕ ಕೋರ್ಟು ಇದ್ದಂತೆ ಇತ್ತು. ಅದೂ ಕೂಡಾ ಫಾಸ್ಟ್ ಟ್ರಾಕ್! ಬೇಗ ಬೇಗ ಡ್ರಾ ಬೇಗ ಬೇಗ ಬಹುಮಾನ. ಮಾಳವಿಕಾ ಈ ಶೋ ನ ಒಂದು ಘಂಟೆಯಲ್ಲಿ ಎಂತೆಂಥಾದ್ದೋ ಕೌಟುಂಬಿಕ ಕಲಹಗಳನ್ನು ನಿವಾಳಿಸಿ, ನಿವಾರಿಸಿ ಎಸೆದಿದ್ದಾರೆ. ಎಲ್ಲವೂ ಖುಲ್ಲಂ ಖುಲ್ಲಾ. ಕ್ಯಾಮೆರಾ ಎದುರೇ ಪಂಚಾಯ್ತಿ. ಇದರ ಒಂದು ಶೋನಲ್ಲಿ ಕೇಸು ಜಡಿದಾಕೆ ಒಬ್ಬ ಹೆಣ್ಣುಮಗಳು. ಆಕೆಗೂ ಆತನ ಗಂಡನಿಗೂ ಮನಸ್ತಾಪ. ಇಬ್ಬರು ಗಂಡುಮಕ್ಕಳಿದ್ದಾರೆ. ಮಕ್ಕಳಿಬ್ಬರೂ ತಂದೆಯ ಜತೆ ಇದ್ದಾರೆ. ಬೇರೆಬೇರೆಯಾಗಿರುವ ನಮ್ಮನ್ನು ಮತ್ತೆ ಸೇರಿಸಿ ಅಂತ ಆಕೆ ಬಂದಿದ್ದಳೆನಿಸುತ್ತದೆ. ಮಾಳವಿಕಾ ಮೇಡಂ ಇಬ್ಬರನ್ನೂ ಮಾತಾಡಿಸತೊಡಗಿದರು.  ಒಂಥರಾ ಅವರೇ ಲಾಯರ್, ಅವರೇ ಜಡ್ಜ್, ಅವರೇ ಲೀಗಲ್ ಎಕ್ಸ್‌ಪರ್ಟ್ ಇದ್ದಂತೆ. ಅವರು ಪಕ್ಕಾ ಹಳ್ಳಿ ಪಂಚಾಯ್ತಿದಾರರಂತೆ ನಡೆಯುತ್ತಿದ್ದ ಈ ಕಾರ್ಯಕ್ರಮ ಇವತ್ತಿಗೂ ಜನರ ಮನಸ್ಸಲ್ಲಿ ಹಸಿರಾಗಿದೆ.  

ನಿಜ ಜೀವನದಲ್ಲಿ ನಡೆದ ಘಟನೆಗಳನ್ನು ತೆರೆದಿಡುತ್ತಿತ್ತು. ತಮ್ಮ ಮನಸ್ಸಿನ ಭಾವನೆಗಳನ್ನು ಹೃದಯ ಕಲಕುವ ಘಟನೆಗಳನ್ನು ಹಂಚಿಕೊಳ್ಳಬೇಕು ಎನ್ನುವವರಿಗೆ ಈ ಕಾರ್ಯಕ್ರಮ ಮುಕ್ತ ವೇದಿಕೆ ಇದ್ದಂತಿತ್ತು. 'ಈ ಕಾರ್ಯಕ್ರಮದ ನಿರೂಪಣೆ ನನಗೆ ಒಂದು ಸವಾಲಿದ್ದಂತೆ' ಅಂತ ನಿರೂಪಣೆಯನ್ನು ಲೀಲಾಜಾಲವಾಗಿ ನಿರ್ವಹಿಸುವ ಮಾಳವಿಕಾ ಹೇಳುತ್ತಿದ್ದರು.  

ಫಸ್ಟ್​ ನೈಟ್​ಗಾದ್ರೂ ಸೀರೆ ಉಡಿಸಿ ಕಳಿಸ್ಬಾರ್ದಾ? ದೀಪಾಳ ವೇಷಕ್ಕೆ ಸೀರಿಯಲ್ ಪ್ರಿಯರ ಅಸಮಾಧಾನ
 

ಅವರ ಹೆಸರು ಮಾಳವಿಕಾ ಅವಿನಾಶ್. ತಮಿಳು-ಕನ್ನಡ ಸಿನಿಮಾ-ಕಿರುತೆರೆಗಳಲ್ಲಿ ಕಲಾವಿದರಾಗಿ ಕೆಲಸ ಮಾಡುವವರು. ಕರ್ನಾಟಕದ ಟಿವಿ ನೋಡುವ ಸಾಕಷ್ಟು ಹೆಣ್ಣುಮಕ್ಕಳು ಅವರನ್ನು ಇಷ್ಟಪಡುತ್ತಾರೆ. ವಿಶೇಷವಾಗಿ ಮಾಯಾಮೃಗ ಎಂಬ ಸೀರಿಯಲ್ಲು ಅವರಿಗೆ ತುಂಬಾ ಹೆಸರು ಕೊಟ್ಟಿತ್ತು. ಬದುಕು ಜಟಕಾ ಬಂಡಿ ಅವರು ಜೀ ಕನ್ನಡದಲ್ಲಿ ನಡೆಸಿಕೊಡುವ ಕಾರ್ಯಕ್ರಮ. ಮೇಡಂ ಬಗ್ಗೆ ಇನ್ನಷ್ಟು ಹೇಳುವುದಾದರೆ ಅವರಿಗೆ ಅಧ್ಯಾತ್ಮದಲ್ಲಿ ಆಸಕ್ತಿ. ಅಧ್ಯಾತ್ಮದ ಮೂಲಕ ನಿತ್ಯಾನಂದ ಪಡೆಯಬಹುದೇ? ಇದು ಅವರ ಹುಡುಕಾಟವಿರಬಹುದು. ಜಟಕಾ ಬಂಡಿ ಒಂಥರಾ ಕೌಟುಂಬಿಕ ಕೋರ್ಟು ಇದ್ದಂತೆ. ಅದೂ ಕೂಡಾ ಫಾಸ್ಟ್ ಟ್ರಾಕ್! ಬೇಗ ಬೇಗ ಡ್ರಾ ಬೇಗ ಬೇಗ ಬಹುಮಾನ. ಮಾಳವಿಕಾ ಮೇಡಂ ಒಂದು ಘಂಟೆಯಲ್ಲಿ ಎಂಥೆಂಥದೊ ಫ್ಯಾಮಿಲಿ ಡಿಸ್ಪ್ಯೂಟ್ ಗಳನ್ನು ನಿವಾರಿಸಿ, ನೀವಳಿಸಿ ಎಸೆದಿದ್ದಾರೆ. ಎಲ್ಲವೂ ಖುಲ್ಲಂ ಖುಲ್ಲಾ. ಕ್ಯಾಮೆರಾ ಎದುರೇ ಪಂಚಾಯ್ತಿ. 

ಬಿಗ್‌ ಬಾಸ್‌ ಸ್ಪರ್ಧಿಗೆ ಹೃದಯಾಘಾತ, ಆಸ್ಪತ್ರೆಗೆ ದಾಖಲು?

ಬದುಕು ಜಟಕಾ ಬಂಡಿಯಲ್ಲಿ ಅಂಥ ಒಂದು ಕೇಸು. ಕೇಸು ಜಡಿದಾಕೆ ಒಬ್ಬ ಹೆಣ್ಣುಮಗಳು. ಆಕೆಗೂ ಆತನ ಗಂಡನಿಗೂ ಮನಸ್ತಾಪ. ಇಬ್ಬರು ಗಂಡುಮಕ್ಕಳಿದ್ದಾರೆ. ಮಕ್ಕಳಿಬ್ಬರೂ ತಂದೆಯ ಜತೆ ಇದ್ದಾರೆ. ಬೇರೆಬೇರೆಯಾಗಿರುವ ನಮ್ಮನ್ನು ಮತ್ತೆ ಸೇರಿಸಿ ಅಂತ ಆಕೆ ಬಂದಿದ್ದಳೆನಿಸುತ್ತದೆ. ಮಾಳವಿಕಾ ಮೇಡಂ ಇಬ್ಬರನ್ನೂ ಮಾತಾಡಿಸತೊಡಗಿದರು. ಮೇಡಂ ಒಂಥರಾ ಅವರೇ ಲಾಯರ್, ಅವರೇ ಜಡ್ಜ್, ಅವರೇ ಲೀಗಲ್ ಎಕ್ಸ್‌ಪರ್ಟ್ ಇದ್ದಂತೆ. ಅವರು ಪಕ್ಕಾ ಹಳ್ಳಿ ಪಂಚಾಯ್ತಿದಾರರಂತೆ ಕಾಣಿಸುತ್ತಾರೆ. ಒಂದೊಂದು ಸರ್ತಿ ಅವರು ದಾರ್ಶನಿಕರ ಶೈಲಿಯಲ್ಲಿ, ತತ್ತ್ವಜ್ಞಾನಿಗಳ ಶೈಲಿಯಲ್ಲಿ ಮಾತಾಡೋದು ಉಂಟು. ಹೀಗಾಗಿ ಅವರ ಬಳಿ ಸಮಸ್ಯೆ ತೆಗೆದುಕೊಂಡು ಬರುವವರಿಗೆ ಅವರು ಸಾಕ್ಷಾತ್ ಜಗನ್ಮಾತೆಯ ಹಾಗೆ ಕಾಣಿಸಿದರೂ ಆಶ್ಚರ್ಯವಿಲ್ಲ. ಕಥೆ ಇನ್ನೂ ವಿಸ್ತಾರವಾಗಿದೆ, ನಿಧಾನವಾಗಿ ಓದಿ. ಕಿರುತೆರೆ ಕಾರ್ಯಕ್ರಮಗಳ ಬಗ್ಗೆ ನೀವೂ ನಮಗೆ ಬರೆದು ಕಳುಹಿಸಬಹುದು.

 

 

click me!