ಮಾನಸಗೆ ಮೆಚ್ಯೂರಿಟಿ ಇಲ್ಲ, ಉಗ್ರಂ ಮಂಜು ಸಿಂಹ ತರ ಬಂದ.....; ವಿಕ್ರಂ -ಐಶು ನೇರ ನಾಮಿನೇಶನ್‌ಗೆ ಎಲ್ಲರೂ ಶಾಕ್!

Published : Oct 22, 2024, 05:22 PM ISTUpdated : Oct 22, 2024, 05:24 PM IST
ಮಾನಸಗೆ ಮೆಚ್ಯೂರಿಟಿ ಇಲ್ಲ, ಉಗ್ರಂ ಮಂಜು ಸಿಂಹ ತರ ಬಂದ.....; ವಿಕ್ರಂ -ಐಶು ನೇರ ನಾಮಿನೇಶನ್‌ಗೆ ಎಲ್ಲರೂ ಶಾಕ್!

ಸಾರಾಂಶ

ಬಿಗ್ ಬಾಸ್ ಮನೆಯಲ್ಲಿ ಈ ವಾರದ ನಾಮಿನೇಷನ್ ಶುರು......ಮಂಜು ಮತ್ತು ಮಾಸನ ಟಾರ್ಗೆಟ್ ಮಾಡಿದ ಜೋಡಿ...

ಬಿಗ್ ಬಾಸ್ ಸೀಸನ್ 11ರಿಂದ ಲಾಯರ್ ಜಗದೀಶ್ ಮತ್ತು ರಂಜಿತ್ ಹೊರ ಬಂದ ಮೇಲೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಸಿಂಗರ್ ಹನುಮಂತು ಎಂಟ್ರಿ ಕೊಟ್ಟಿದ್ದಾನೆ. ಧನರಾಜ್ ಮತ್ತು ಹನುಮಂತು ಕಾಂಬಿನೇಷನ್ ಜನರಿಗೆ ಇಷ್ಟವಾಗುತ್ತಿದೆ. ಅಲ್ಲದೆ ಒಂದೆರಡು ದಿನಗಳ ಕಾಲ ಹನುಮಂತು ಕ್ಯಾಪ್ಟನ್ ಆಗಿ ತಲೆ ಕೆಡಿಸಿಕೊಂಡಿದ್ದಾನೆ. ಅಲ್ಲದೆ ಮೊದಲ ದಿನವೇ ಬಿಗ್ ಬಾಸ್ ಪ್ರತಿ ಸ್ಪರ್ಧಿಗಳು ಯಾವ ಸ್ಥಾನದಲ್ಲಿ ನಿಲ್ಲುತ್ತಾರೆ ಎಂದು ಪ್ರಶ್ನೆ ಮಾಡಿದಾಗ ಒಂದೊಂದು ಸ್ಥಾನ ನೀಡಿ ಸಂಕಷ್ಟಕ್ಕೆ ಸಿಲುಕಿಕೊಂಡ. ಆ ಸ್ಥಾನಗಳ ಆಧಾರದ ಮೇಲೆ ಮುಂದಿನ ಚಟುವಟಿಕೆಗಳಲ್ಲಿ ಭಾಗವಹಿಸಲು ಜೋಡಿಗಳ ಆಯ್ಕೆ ನಡೆಯಿತ್ತು. 

ಮಾಸನ ನಾಮಿನೇಟ್:

ಈ ವಾರದ ಮೊದಲ ಟಾಸ್ಕ್‌ನ ತ್ರಿವಿಕ್ರಂ ಮತ್ತು ಐಶ್ವರ್ಯ ಗೆದ್ದು ಇಬ್ಬರನ್ನು ನೇರವಾಗಿ ನಾಮಿನೇಟ್ ಮಾಡಲು ಅವಕಾಶ ಪಡೆದುಕೊಳ್ಳುತ್ತಾರೆ. 'ಮಾನಸರಲ್ಲಿ ಹೆಚ್ಚಾಗಿ immaturity ಅನಿಸುತ್ತದೆ...' ಎಂದು ಐಶ್ವರ್ಯ ಕಾರಣ ಕೊಡುತ್ತಾರೆ, ತಕ್ಷಣ 'ಅದನ್ನು ಕೊಡಲು ನೀನು ಯಾವಳು' ಎಂದು ಮಾನಸ ಜೋರು ಮಾಡುತ್ತಾರೆ...ಯಾವಳು ಎಂದು ಎಲ್ಲಾ ಮಾತನಾಡಬೇಡ ಎಂದು ಐಶ್ವರ್ಯ ಹೇಳುವುದನ್ನು ಪ್ರೋಮೋದಲ್ಲಿ ನೋಡಬಹುದು. 

ಮಾಲ್ಡೀವ್ಸ್‌ನಲ್ಲಿ ಕಪಲ್ ಪೇಂಟಿಂಗ್ ಮಾಡಿದ ಸೋನಲ್- ತರುಣ್; ಓ ಜಾಲಿ ಜಾಲಿ ಎಂದು

ಮಂಜು ನಾಮಿನೇಟ್: 

'ಮಂಜಣ್ಣ ಎಲೋ ಒಂದು ಕಡೆ ಕಾರ್ನ್‌ ಆಗಿದ್ದಾರೆ ಭಾವನೆ ನನಗೆ ಬರುತ್ತಿದೆ' ಎಂದು ಕಾರಣ ಕೊಟ್ಟು ನಾಮಿನೇಟ್ ಮಾಡಲು ತ್ರಿವಿಕ್ರಂ ಶುರು ಮಾಡುತ್ತಾರೆ. 'ನಾನು ಯಾರೊಟ್ಟಿಗೆ ಕುಳಿತುಕೊಂಡು ಮಾತನಾಡಬೇಕು ಮಾತನಾಡಬಾರದು ಅನ್ನೋದು ಬಿಗ್ ಬಾಸ್ ರೂಲ್ಸ್‌ನಲ್ಲಿ ಇಲ್ಲ'ಎಂದು ಮಂಜು ಟಾಂಗ್ ಕೊಡುತ್ತಾರೆ. 'ನೀವು ಎಲ್ಲಿ ಎಂಟರ್ಟೈನ್ ಮಾಡಿದ್ದೀರಾ?' ಎಂದು ವಿಕ್ಕಿ ಪ್ರಶ್ನೆ ಮಾಡುತ್ತಾರೆ, 'ನಾನು ಎಂಟರ್ಟೈನ್ ಮಾಡಬೇಕು ಎಂದು ಎಲ್ಲೂ ಯಾರಿಂದಲೂ ಆರ್ಡರ್ ಇಲ್ಲ' ಎಂದು ಮತ್ತೆ ಮಂಜು ಉತ್ತರಿಸುತ್ತಾರೆ. 'ನಿಮ್ಮನ್ನು ನೀವು ಹುಲಿ ಅಂತ ತೋರಿಸಿಕೊಂಡು ಈಗ ಈ ರೀತಿ ಇದ್ದರೆ ನಾವು ಏನೂ ಮಾಡಲಾಗದು' ಎಂದು ವಿಕ್ರಂ ಹೇಳಿದಾಗಲೂ 'ಈಗ ನಿಮ್ಮ ಹತ್ರ ಬರಬೇಕು ನಿಮಗೆ ಬಕೆಟ್ ಹಿಡಿಯಬೇಕು (ಸನ್ನಿ ಮೂಲಕ ತೋರಿಸುತ್ತಾರೆ) ಆಗ ಮಾತ್ರ ನಾವು ಚೆನ್ನಾಗಿರುವುದು' ಎಂದು ಮಂಜು ನೇರ ಟಾಂಗ್ ಕೊಡುತ್ತಾರೆ. ಅಲ್ಲಿಗೆ ಪ್ರೋಮೋ ಮುಗಿಯುತ್ತದೆ. 

ಪ್ರೆಗ್ನೆಂಟ್ ಎಂದು ತಿಳಿಯುತ್ತಿದ್ದಂತೆ ಪತಿಯಿಂದ ಸಿನಿಮಾ ಗಿಫ್ಟ್‌ ಕೇಳಿದ ನಟಿ ಮಮತಾ; 35

ಈ ಪ್ರೋಮೋ ವಿಡಿಯೋಗೆ ಸಖತ್ ಪಾಸಿಟಿವ್ ಕಾಮೆಂಟ್ಸ್ ಬಂದಿದೆ. ಅದರಲ್ಲೂ ಈ ವಾರ ತ್ರಿವಿಕ್ರಂ ಕ್ಯಾಪ್ಟನ್ ಆಗಿರಬೇಕು ಎಂದು ಸಾಕಷ್ಟು ಜನ ಕಾಮೆಂಟ್ ಮಾಡಿದ್ದಾರೆ. ಇನ್ನು ದಿನ ಕಳೆಯುತ್ತಿದ್ದಂತೆ ಮಾಸನ ಸಿಕ್ಕಾಪಟ್ಟೆ ನೆಗೆಟಿವ್ ಕಾಮೆಂಟ್ ಪಡೆಯುತ್ತಿದ್ದಾರೆ. ಮಾಸನ ಮಾತನಾಡುವ ಶೈಲಿ ಸರಿಯಾಗಿಲ್ಲ, ವರ್ತನೇ ಸರಿಯಾಗಿಲ್ಲ ಹಾಗೂ ಯೋಚನೆ ಮಾಡದೆ ಮಾತನಾಡುತ್ತಾರೆ ಎಂದು ವೀಕ್ಷಕರು ಹೇಳುತ್ತಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Sri Raghavendra Mahathme: ರಾಯರ ಪತ್ನಿ ಸರಸ್ವತಿಯಾಗಿ ನಟಿಸುತ್ತಿರುವ ಸುಂದರಿ ಇವರೇ
Karavali Beauties: ಕನ್ನಡ ಕಿರುತೆರೆಯಲ್ಲಿ ಹವಾ ಸೃಷ್ಟಿಸಿದ ಕರಾವಳಿಯ ಸುಂದರಿಯರು