ಫಸ್ಟ್​ ನೈಟ್​ಗಾದ್ರೂ ಸೀರೆ ಉಡಿಸಿ ಕಳಿಸ್ಬಾರ್ದಾ? ದೀಪಾಳ ವೇಷಕ್ಕೆ ಸೀರಿಯಲ್ ಪ್ರಿಯರ ಅಸಮಾಧಾನ

Published : Oct 22, 2024, 05:33 PM IST
ಫಸ್ಟ್​ ನೈಟ್​ಗಾದ್ರೂ ಸೀರೆ ಉಡಿಸಿ ಕಳಿಸ್ಬಾರ್ದಾ? ದೀಪಾಳ ವೇಷಕ್ಕೆ ಸೀರಿಯಲ್ ಪ್ರಿಯರ ಅಸಮಾಧಾನ

ಸಾರಾಂಶ

ಫಸ್ಟ್​ ನೈಟ್​ಗಾದ್ರೂ ಸೀರೆ ಉಡಿಸಿ ಕಳಿಸ್ಬಾರ್ದಾ? ದೀಪಾಳ ಮನೆಯವರ ವಿರುದ್ಧ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸ್ತಿರೋದ್ಯಾಕೆ?    

  ಬಾಹ್ಯ ಸೌಂದರ್ಯವೇ ಸರ್ವಸ್ವ ಎಂದುಕೊಂಡು ನಿಜ ಜೀವನದಲ್ಲಿ ಅದೆಷ್ಟೋ ಮಂದಿ ಮದುವೆಯಾಗಿ ಮೋಸ ಹೋದವರಿದ್ದಾರೆ. ಹುಡುಗ ಮತ್ತು ಹುಡುಗಿ ಇಬ್ಬರದ್ದೂ ಇದೇ ಕಥೆ. ಯುವತಿಯ ಬಾಹ್ಯ ಸೌಂದರ್ಯಕ್ಕೆ ಮನಸೋತು ಹುಡುಗರು ಅವರ ಹಿಂದೆ ಬಿದ್ದರೆ, ಹುಡುಗ ಸೌಂದರ್ಯದ ಜೊತೆಗೆ ಅವರಲ್ಲಿರುವ ಐಷಾರಾಮಿ ಸೌಲಭ್ಯ ನೋಡಿ ಹುಡುಗಿಯರೇ ಹುಡುಗರ ಹಿಂದೆ ಬಿದ್ದು ನರಕವನ್ನು ನೋಡುತ್ತಿರುವ ಹಲವಾರು ಉದಾಹರಣೆಗಳು ನಮ್ಮ ಕಣ್ಣೆದುರೇ ಇವೆ. ಒಂದಿಷ್ಟು ವರ್ಷಗಳಲ್ಲಿ ಕೊನೆಯಾಗುವ ಬಾಹ್ಯ ಸೌಂದರ್ಯವೇ ಸರ್ವಸ್ವ ಎಂದುಕೊಂಡು ಬದುಕುವ ಮನಸ್ಥಿತಿಯವರೇ ಬಹಳಷ್ಟು ಮಂದಿ ಇದ್ದಾರೆ. ಅದಕ್ಕಾಗಿಯೇ ಆಂತರಿಕ ಸೌಂದರ್ಯ ಗೌಣವಾಗಿಬಿಡುತ್ತದೆ. ಅದಕ್ಕೆ ಸಾಕ್ಷಿಯಾಗಿ ನಿಂತಿದೆ ಈ ಬ್ರಹ್ಮಗಂಟು ಸೀರಿಯಲ್​.  ಮನೆಯ ಮರ್ಯಾದೆ ಉಳಿಸಲು  ಚಿರುನ ಮದುವೆಯಾಗಿ ಬಂದು ತನ್ನ  ರೂಪದಿಂದಲೇ ಎಲ್ಲರಿಂದಲೂ ದೂರ ತಳ್ಳಿಸಿಕೊಳ್ತಿರೋ ನಾಯಕಿ ದೀಪಾ. ಈಕೆಯನ್ನು ದೂರವಿಡಲು ಒಬ್ಬೊಬ್ಬರದ್ದು ಒಂದೊಂದು ನೆಪವಷ್ಟೇ. 

ಕಥೆ ಹೀಗಿದ್ದರೂ, ಗಂಡನ ಕಣ್ಣಲ್ಲಿ ಅತಿ ಕೆಟ್ಟದಾಗಿ ಕಾಣುವ ರೀತಿಯಲ್ಲಿ ದೀಪಾಳನ್ನು ಚಿತ್ರಿಸಿರುವುದನ್ನು ವೀಕ್ಷಕರು ಯಾಕೋ ಒಪ್ಪುತ್ತಿಲ್ಲ. ದೀಪಾಳನ್ನು ತವರು ಮನೆಗೇ ಬಿಟ್ಟುಬರುವ ನಿಟ್ಟಿನಲ್ಲಿ ಚಿರಾಗ್​ ಅವಳನ್ನು ಮನೆಗೆ ಕರೆದುಕೊಂಡು ಹೋಗಿದ್ದಾನೆ. ಆದರೆ ದೀಪಾಳ ಅಪ್ಪ-ಅಮ್ಮನಿಗೆ ತನ್ನ ಮಗಳ ಸ್ಥಿತಿ ಗೊತ್ತಿಲ್ಲ. ಅಲ್ಲಿಯೇ ಫಸ್ಟ್​ನೈಟ್​ ಆಯೋಜನೆ ಮಾಡಿದ್ದಾರೆ. ಇದನ್ನು ಚಿರಾಗ್​ಗೆ ಹೇಳಿದರೂ ದೀಪಾಳಿಗೆ ವಿಷಯ ತಿಳಿಸಲಿಲ್ಲ. ನಿನ್ನ ಗಂಡನಿಗೆ ಹಾಲು ಬೇಕಂತೆ, ತೆಗೆದುಕೊಂಡು ಹೋಗು ಎಂದು ದೀಪಾಳಿಗೆ ಹೇಳಿ ಕಳಿಸಿದ್ದಾರೆ ಮನೆಯವರು. ನೇರವಾಗಿ ಬೆಡ್​ರೂಮ್​ಗೆ ಬರುವ ದೀಪಾ ಅದನ್ನು ಗಂಡನಿಗೆ ಕೊಟ್ಟಿದ್ದಾಳೆ. ಇದನ್ನು ಯಾಕೆ ತಂದ್ರಿ ಎಂದು ಗಂಡ ಕೇಳಿದಾಗ, ನೀವೇ ಕೇಳಿದ್ರಂತಲ್ಲಾ ಎಂದಿದ್ದಾಳೆ.  ಆಗ ಚಿರಾಗ್​ ಫಸ್ಟ್​ನೈಟ್​ ಮಾತನಾಡಿದ್ದಾನೆ. ಮೊದಲ ರಾತ್ರಿಯನ್ನು ಅರೇಂಜ್​ ಮಾಡಿರುವುದಾಗಿ ಹೇಳಿದ್ದಾನೆ. ಇದನ್ನು ಕೇಳಿ ದೀಪಾ ಫುಲ್​ ಸುಸ್ತು ಬಿದ್ದಿದ್ದಾಳೆ. 

ಅನಿಲ್​ ಕಪೂರ್​ 10 ಕೋಟಿ ಆಫರ್​ ರಿಜೆಕ್ಟ್! ಶಾರುಖ್​- ಅಜಯ್​ ದೇವಗನ್​ ವಿರುದ್ಧ ನೆಟ್ಟಿಗರಿಂದ ಭಾರಿ ಆಕ್ರೋಶ

ಅದೇನೇ ಆದರೂ, ದೀಪಾಳ ಮನೆಯವರ ಮೇಲೆ ನೆಟ್ಟಿಗರಿಗೆ ಇನ್ನಿಲ್ಲದ ಸಿಟ್ಟು ಬಂದಿದೆ. ಅದಕ್ಕೆ ಕಾರಣ ಫಸ್ಟ್​ ನೈಟ್​ ಎಂದು ಮಗಳನ್ನು ಕಳಿಸುವಾಗಲಾದರೂ ಸೀರೆಯುಡಿಸಿ ಅಲಂಕಾರ ಮಾಡಿ ಕಳಿಸಬಾರದೆ ಎನ್ನುವುದು ಅವರ ಮಾತು. ದೀಪಳೋ ದಡ್ಡಿ. ಅವಳಿಗೆ ಫಸ್ಟ್​ ನೈಟ್​ ಮಾಡಲು ಹೋಗುವ ವಿಷಯವೂ ಗೊತ್ತಿಲ್ಲ. ಸಾಮಾನ್ಯವಾದ ಮೊದಲ ರಾತ್ರಿಯಲ್ಲಿ ಮನೆಯ ಮಗಳನ್ನು ಶೃಂಗಾರ ಮಾಡಿ ಕಳಿಸಲಾಗುತ್ತದೆ. ಆದರೆ ಇಲ್ಲಿ ನೋಡಿದ್ರೆ ದೀಪಾ ಚಿರಾಗ್​ ಕಣ್ಣಲ್ಲಿ ಮತ್ತಷ್ಟು ಅಸಹ್ಯವಾಗಿ ಕಾಣಿಸಲಿ ಎನ್ನುವ ರೀತಿಯಲ್ಲಿ ಮನೆಯ ಡ್ರೆಸ್​ನಲ್ಲಿಯೇ ಕಳುಹಿಸಲಾಗಿದೆ. ಸ್ವಲ್ಪನಾದರೂ ಕಾಮನ್​ ಸೆನ್ಸ್​ ಬೇಕು ಎಂದು ನೆಟ್ಟಿಗರು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

  ಸೌಂದರ್ಯವೇ ಮೇಲೆಂದು ಬಗೆದು ಇಂಥ ಹೆಣ್ಣುಮಕ್ಕಳನ್ನು ಕೀಳಾಗಿ ಕಾಣುವ ಸೀರಿಯಲ್​ ವಿರುದ್ಧ ಹಲವು ಸೀರಿಯಲ್​ ಪ್ರೇಮಿಗಳು ಆಕ್ರೋಶ ಹೊರಹಾಕುತ್ತಿದ್ದರು. ಇದರಿಂದ ಏನು ಸಂದೇಶ ಕೊಡುತ್ತಿದ್ದೀರಿ ಎಂದೆಲ್ಲಾ ಪ್ರಶ್ನಿಸುತ್ತಿದ್ದರು. ಚಿರು ಅತ್ತಿಗೆ ಸೌಂದರ್ಯ ಇಲ್ಲಿ ವಿಲನ್​. ಆಕೆಗೆ ತನ್ನ ಸೌಂದರ್ಯ ಎಲ್ಲಿ ಹಾಳಾಗುತ್ತದೆಯೋ ಎನ್ನುವ ಚಿಂತೆ, ಅದಕ್ಕಾಗಿ ಮಕ್ಕಳು ಮಾಡಿಕೊಂಡಿಲ್ಲ. ಆದರೆ ಎಲ್ಲರೂ ಚಿರುವಿಗೆ ತಾಯಿಯ ಮಮತೆ ತೋರಬೇಕು ಎನ್ನುವ ಕಾರಣಕ್ಕೆ  ಮಕ್ಕಳು ಮಾಡಿಕೊಂಡಿಲ್ಲ ಎಂದೇ ಅಂದುಕೊಂಡಿದ್ದಾರೆ. ಅದೇ ಇನ್ನೊಂದೆಡೆ ಕ್ಷಣ ಕ್ಷಣಕ್ಕೂ ದೀಪಾ ಈ ಮನೆಯಲ್ಲಿ ಎಲ್ಲರ ಬಾಯಲ್ಲಿ ಚುಚ್ಚು ಮಾತುಗಳಿಂದ ನೋವು ಅನುಭವಿಸುತ್ತಿದ್ದರೂ, ತನ್ನ ಅಪ್ಪ-ಅಮ್ಮನಿಗೆ ಈ ವಿಷಯ ಹೇಳೇ ಇರಲಿಲ್ಲ. ಇದು ಕೂಡ ಸೀರಿಯಲ್​ ಪ್ರೇಮಿಗಳಿಗೆ ತುಂಬಾ ನಿರಾಸೆ ಉಂಟು ಮಾಡಿತ್ತು. ಇದರ ಹೊರತಾಗಿಯೂ ದೀಪಾಳ ಬಟ್ಟೆ ಬದಲಿಸದೇ ಇರುವುದಕ್ಕೆ ಈಗ ವೀಕ್ಷಕರು ಅಸಮಾಧಾನ ಹೊರಹಾಕುತ್ತಿದ್ದಾರೆ. 

3 ಬಾರಿ ಡಿವೋರ್ಸ್​: ಗಂಡಸರ ಸಹವಾಸ ಸಾಕೆನಿಸಿ ತನ್ನನ್ನು ತಾನೇ ಮದ್ವೆಯಾದ ನಟಿ! ಟರ್ಕ್​ ದ್ವೀಪದಲ್ಲಿ ಹನಿಮೂನ್​

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಇಂಥ ಸಣ್ಣಬುದ್ಧಿ ಸರಿನಾ? ಗಿಲ್ಲಿ ನಟ ಬೇಡಿದರೂ, ಗೋಗರೆದರೂ ಕೇಳಲಿಲ್ಲ: ರಘು ವಿರುದ್ಧ ರೊಚ್ಚಿಗೆದ್ದ ಜನತೆ
BBK 12: ಏನ್ರೀ ಇದು ತೆವಲು? ರಜತ್‌, ಅಶ್ವಿನಿ ಗೌಡ, ರಘು ಯಾಕೆ ಹೀಗೆಲ್ಲ ಮಾಡಿದ್ರು?