ಬಿಗ್​ಬಾಸ್​ಗೆ ಹೋಗ್ತೀರಾ ಎಂದಾಗ ಡ್ರೋನ್​ ಪ್ರತಾಪ್ ಹಿಂದೆ​ ಹೇಳಿದ್ದೇನು? ವಿಡಿಯೋ ವೈರಲ್- ಸಕತ್​ ಟ್ರೋಲ್​​

By Suvarna News  |  First Published Oct 13, 2023, 2:39 PM IST

ಬೇಕಾದಷ್ಟು ಕೆಲ್ಸ ಇದೆ, ಬಿಗ್​ಬಾಸ್​ನಲ್ಲಿ ಟೈಂಪಾಸ್​ ಮಾಡೋಕಾಗಲ್ಲ, ಅಲ್ಲಿಗೆಲ್ಲಾ ಹೋಗಲ್ಲ ಎಂದಿದ್ದ ಡ್ರೋನ್​ ಪ್ರತಾಪ್ ಅವರ ಹಳೆಯ ವಿಡಿಯೋ ವೈರಲ್​ ಆಗಿದ್ದು ಸಕತ್​ ಟ್ರೋಲ್​ ಮಾಡಲಾಗುತ್ತಿದೆ. 
 


ಡ್ರೋನ್​ ಪ್ರತಾಪ್ ಹೆಸರನ್ನು  ಕೇಳದವರೇ ಇಲ್ಲವೇನೋ. ಕೆಲ ವರ್ಷಗಳ ಹಿಂದೆ ಈ ಯುವಕನ ಹೆಸರು ಹೇಳಿಕೊಂಡು ತಮ್ಮ ಮನೆಯ ಮಕ್ಕಳನ್ನು ಬೈದವರು ಅದೆಷ್ಟೋ ಮಂದಿ. ಇವನನ್ನು ನೋಡಿ ಸ್ವಲ್ಪನಾದರೂ ಬುದ್ಧಿ ಕಲಿ ಎಂದು ಹೇಳಿಸಿಕೊಂಡ ಮಕ್ಕಳು ಇನ್ನೆಷ್ಟೋ. ಹೋದಲ್ಲಿ, ಬಂದಲ್ಲಿ ಈ ಯುವಕನ ಮಾತೇ ಮಾತು. ಪ್ರತಾಪ್​ ಅವರ ಮಾತಿನ ಪ್ರತಾಪಕ್ಕೆ ಮೋಡಿಯಾಗದವೇ ಇಲ್ಲ. ವಿಭಿನ್ನ ಕ್ಷೇತ್ರಗಳ ನುರಿತರು, ಮೇಧಾವಿಗಳು ಎನಿಸಿಕೊಂಡವರೂ ಪ್ರತಾಪ್​ ಮಾತಿಗೆ ತಲೆದೂಗಿದರು. ಎಷ್ಟೋ ವೇದಿಕೆಗಳಲ್ಲಿ ಇವರು ಮಾಡುತ್ತಿದ್ದ ಪ್ರೇರಣಾತ್ಮಕ ಭಾಷಣಕ್ಕೆ ತಲೆದೂಗಿದರು. ಕೇಳುವ ಪ್ರಶ್ನೆಗಳಿಗೆ ಅಷ್ಟೇ ಚೆನ್ನಾಗಿ ಉತ್ತರಿಸುವ ಮೇಧಾವಿ ಎನಿಸಿಕೊಂಡವರು ಡ್ರೋಣ್​. ಡ್ರೋನ್​ ತಯಾರಿಸಲು ತಾನು ಪಟ್ಟಿರುವ ಕಷ್ಟಗಳನ್ನು, ಬೀದಿ ಬದಿಯಲ್ಲಿ ಮಲಗಿ ತುತ್ತು ಅನ್ನಕ್ಕಾಗಿ ಪರದಾಡಿದ ದಿನಗಳನ್ನು ಕಣ್ಣಿಗೆ ಕಟ್ಟುವಂತೆ ಹೇಳುತ್ತಾ ಕೇಳುಗರ ಕಣ್ಣಲ್ಲಿ ನೀರು ತರಿಸಿದ್ದ ಪ್ರತಾಪ್​ ನಿಜ ಬಣ್ಣ ಬದಲಾಗಲು ಹಲವಾರು ವರ್ಷಗಳೇ ಬೇಕಾದವು. ಕೊನೆಗೂ ಇಷ್ಟು ವರ್ಷ ಹೇಳಿದ್ದು, ಮಾತನಾಡಿದ್ದು, ತಮ್ಮ ಬಗ್ಗೆ ಹೇಳಿಕೊಂಡಿದ್ದು, ಡ್ರೋನ್​ ತಯಾರಿಕೆ ಕುರಿತು ವಿವರಣೆ ನೀಡಿದ್ದು ಎಲ್ಲವೂ ಹಸಿಹಸಿ ಸುಳ್ಳು ಎಂದು ತಿಳಿದು ಹಲವು ಕೇಸ್​ಗಳು ದಾಖಲಾದವು. ಸ್ವಲ್ಪ ಸಮಯ ತಲೆ ಮರೆಸಿಕೊಂಡು ಮತ್ತೆ ಈಗ ಕಾಣಿಸಿಕೊಂಡಿದ್ದಾರೆ ಪ್ರತಾಪ್​.

ಇದೀಗ ಬಿಗ್​ಬಾಸ್​ನಲ್ಲಿ ಕಾಣಿಸಿಕೊಂಡಿರೋ ಡ್ರೋನ್​, ಅಲ್ಲಿಯೂ ಹವಾ ಸೃಷ್ಟಿಸುತ್ತಿದ್ದಾರೆ.  ಬಿಗ್​ಬಾಸ್​ ಮನೆಯೊಳಕ್ಕೆ ಹೋಗಲು ಕಡಿಮೆ ಅಂಕ ಬಂದಿರುವ ಕಾರಣ ಮನೆಯೊಳಕ್ಕೆ ಹೋಗುವುದಿಲ್ಲ ಎನ್ನುವಂಥ ವಾತಾವರಣ ಆರಂಭದಲ್ಲಿ ಬಿಗ್​ಬಾಸ್​ ಸೃಷ್ಟಿಮಾಡಿತ್ತು. ಇವೆಲ್ಲವೂ ಉದ್ದೇಶಪೂರ್ವಕ ಎನ್ನುವುದು ತಿಳಿದವರಿಗೆ ಹೊಸತಲ್ಲ. ಕೊನೆಗೂ ಅವರಿಗೆ ಎಂಟ್ರಿ ನೀಡಲಾಗಿದೆ. ಬಿಗ್​ಬಾಸ್​ ಮನೆಯಲ್ಲಿಯೂ ಇತರ ಕೆಲ ಸ್ಪರ್ಧಿಗಳು ಪ್ರತಾಪ್​ ಅವರಿಗೆ ಡ್ರೋನ್​ ವಿಷಯವಾಗಿ ಟ್ರೋಲ್​ ಮಾಡುತ್ತಿದ್ದಾರೆ. ಇನ್ನು ಕೆಲವರು ಬಿಕಿನಿ ಸೋನುಗೌಡ ಅವರನ್ನು ಒಪ್ಪಿಕೊಂಡಂತೆ, ಡ್ರೋನ್​ ಪ್ರತಾಪ್​ ಅವರನ್ನು ಯಾಕೆ ಒಪ್ಪಿಕೊಳ್ಳುವುದಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ. 

Tap to resize

Latest Videos

ಬಿಗ್​ಬಾಸ್​ ಮನೆಯಲ್ಲೂ ಹಾರದ ಡ್ರೋನ್​: ಪ್ರತಾಪನ ಅವಸ್ಥೆ ಕಂಡು ಅಯ್ಯೋ ಅಂತಿದ್ದಾರೆ ಫ್ಯಾನ್ಸ್​!

ಬಿಗ್​ಬಾಸ್​ ಸ್ಪರ್ಧಿಗಳಾಗಿರುವ ಸಂತೋಷ್ ಮತ್ತು ಸ್ನೇಹಿತ್ ಸೇರಿಕೊಂಡು ಪ್ರತಾಪ್ ವೃತ್ತಿ ಬಗ್ಗೆ ಹಾಸ್ಯ ಮಾಡಿದ್ದಾರೆ. ಹೊರ ಜನರನ್ನು ಡೋಂಗಿ ಮಾಡುತ್ತಾನೆ ಎಂದು ಹಾಸ್ಯ ಮಾಡಿದ ಸ್ನೇಹಿತ್‌ ಬಗ್ಗೆ ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. 'ನಿಮ್ಮ ಫೀಲ್ಡ್‌ನಲ್ಲಿ ನೀವು ಹೇಗೆ ಹೆಸರು ಮಾಡಿದ್ದೀರಾ ನನ್ನ ಫೀಲ್ಡ್‌ನಲ್ಲಿ ನಾನು ಹೆಸರು ಮಾಡಿರುವೆ' ಎಂದು ಪ್ರತಾಪ್ ಹೇಳುತ್ತಿದ್ದರೂ ಪ್ರತಿಯೊಬ್ಬರು ಬೇಕೆಂದು ಕಾಲೆಳೆಯುತ್ತಿದ್ದಾರೆ. ಹೊರಗೆ ಮಾಡಿರುವ ತಪ್ಪು ಅರ್ಥ ಮಾಡಿಕೊಂಡು ಒಪ್ಪಿಕೊಂಡು ಜನರಿಗೆ ತಮ್ಮ ಮೇಲಿರುವ ಅಭಿಪ್ರಾಯವನ್ನು ಬದಲಾಯಿಸಬೇಕು ಎಂದು ಪ್ರತಾಪ್ ಕಷ್ಟ ಪಡುತ್ತಿದ್ದಾರೆ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಪ್ರತಾಪ್‌ಗೆ ಮತ್ತೊಂದು ಚಾನ್ಸ್ ಕೊಡಬೇಕು ಎಂದು ನೆಟ್ಟಿಗರು ಸಪೋರ್ಟ್ ಮಾಡುತ್ತಿದ್ದಾರೆ. 

ಅದೇನೇ ಇದ್ದರೂ ಇದೀಗ ಪ್ರತಾಪ್​ ಅವರ ಹಳೆಯ ವಿಡಿಯೋ ಒಂದು ಸಕತ್​ ವೈರಲ್​ ಆಗುತ್ತಿದೆ. ಅದೇನೆಂದರೆ,   ಬಿಗ್‌ ಬಾಸ್‌ಗೆ ಪ್ರತಾಪ್‌ ಹೋಗುತ್ತಿದ್ದಾರೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ನಿಮಗೆ ಆ ರೀತಿ ಆಫರ್‌ ಬಂದಿತ್ತಾ ಎಂದು ಸಂದರ್ಶಕರೊಬ್ಬರು ಡ್ರೋನ್​ ಪ್ರತಾಪ್‌ ಅವರನ್ನು ಕೇಳಿದ್ದಾರೆ.  ಇದಕ್ಕೆ ಉತ್ತರಿದ್ದ ಪ್ರತಾಪ್‌ ನನಗೆ ಆಫರ್‌ ಬಂದಿತ್ತು ಆದರೆ, ನಾನು ಹೋಗಲಿಲ್ಲ, ನನಗೆ ಆಸಕ್ತಿ ಇಲ್ಲ ಎಂದು ಉತ್ತರಿಸಿದ್ದಾರೆ.  ಎಲ್ಲರೂ ಬೇಕು ಬೇಕು ಎಂದು ಲಾಬಿ ಮಾಡಿ ಬಿಗ್​ಬಾಸ್​ಗೆ ಹೋದರೆ  ನೀವೇಕೆ ಬೇಡ ಎನ್ನುತ್ತೀರಿ ಎಂದು ಪ್ರಶ್ನೆ ಕೇಳಿದಾಗ, ನನಗೆ ಮಾಡೋಕೆ ಬಹಳ ಕೆಲಸ ಇದೆ, ತಿಂಗಳುಗಟ್ಟಲೆ ಒಂದು ಕಡೆ ಕೂರೋಕೆ ಆಗುವುದಿಲ್ಲ. ಬಿಗ್‌ ಬಾಸ್‌ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಏನೂ ಐಡಿಯಾ ಇಲ್ಲ. ಐಡಿಯಾ ಇಲ್ಲದ ಜಾಗಕ್ಕೆ, ಆಸಕ್ತಿ ಇಲ್ಲದ ಕಡೆಗೆ ಹೋಗಿ ಏನು ಮಾಡೋದು ಎಂದು ಪ್ರತಾಪ್‌ ಹೇಳಿದ್ದು, ಇದೀಗ ವೈರಲ್​ ಆಗಿದೆ. ಈ ವಿಡಿಯೋ ನೋಡಿ ಪ್ರತಾಪ್​ ಅವರ ಕಾಲೆಳೆಯುತ್ತಿದ್ದಾರೆ ನೆಟ್ಟಿಗರು. 

ನಾನು ಬಿಗ್‌ ಬಾಸ್‌ಗೆ ಹೋಗುವುದಿಲ್ಲವೆಂದು ಸಂಗೀತಾ ಶೃಂಗೇರಿ ಕೂಡಾ ಹೇಳಿದ್ದಾಗಿ ಸುದೀಪ್‌, ಬಿಗ್‌ ಬಾಸ್‌ ಓಪನಿಂಗ್‌ ವೇದಿಕೆಯಲ್ಲಿ ಸಂಗೀತಾ ಕಾಲೆಳೆದಿದ್ದರು. ಇದೀಗ ಪ್ರತಾಪ್‌ ವಿಡಿಯೋ ವೈರಲ್‌ ಆಗುತ್ತಿದೆ.‌ ಪ್ರತಾಪ್​ ಕುರಿತ ವಿಡಿಯೋಗೆ ಪರ-ವಿರೋಧ ನಿಲುವು ವ್ಯಕ್ತವಾಗುತ್ತಿದೆ. ಅವ್ನ್ ಬಗ್ಗೆ ಟ್ರೊಲ್ ಮಾಡಿದಕ್ಕೆ ಅಲ್ವಾ ನಿಮ್ ಪೇಜ್ ಫಾಲೋವರ್ಸ್ ಜಾಸ್ತಿ ಆಗಿದು, ಇವಾಗ bigboss ಹೋಗಿದ್ದಾರೆ, ಸಪೋರ್ಟ್ ಮಾಡಿ ಎಂದು ಒಬ್ಬರು ಹೇಳಿದ್ದಾರೆ. ಅವನನ್ನ ಬಿಟ್​ ಬಿಡಿ ಗುರು, ರೋಸ್ಟ್​ ಮಾಡಿದ್ದು ಸಾಕು, ಎಷ್ಟೂ ಅಂತ ಗೋಳು ಹೊಯ್ಕೋತಿರಾ ಅಂತಿದ್ದಾರೆ ಇನ್ನು ಕೆಲವರು. ನಡೀರಿ ಎಲ್ಲರೂ ಪೊರಕೆ ತೊಗೊಂಡ ಹೋಗೋಣ ಎಂದು ಕಮೆಂಟಿಗರೊಬ್ಬರು ಕಮೆಂಟ್ ಮಾಡಿದ್ದರೆ, ಚಾರ್ಲಿ ಹೀರೋಯಿನ್ನೇ ಹೋಗಲ್ಲ ಅಂದೋರು ಹೋಗಿದ್ದಾರೆ, ಇವನ್ಯಾವ ಲೆಕ್ಕ ಎಂದು ಇನ್ನೊಬ್ಬರು ಕಮೆಂಟ್​ ಮಾಡಿದ್ದಾರೆ. 
 
ಬಿಗ್​ಬಾಸ್​ ಮನೆಯಿಂದ ಹೊರಬಂದ ಶಾಸಕ ಪ್ರದೀಪ್​ ಈಶ್ವರ್​: ಕೊಟ್ಟ ಕಾರಣ ಕೇಳಿ ಟ್ರೋಲ್​ಗಳ ಸುರಿಮಳೆ!

 
 
 
 
 
 
 
 
 
 
 
 
 
 
 

A post shared by KUSHKA HAKLA (@kushka.hakla)

click me!