ಅನೈತಿಕ ಸಂಬಂಧ ಹೊಂದಿದ್ದಕ್ಕೆ ಅನುಭವಿಸು ಮಗನೇ, ತಾಂಡವ್‌ಗೆ ಉಗಿದು ಉಪ್ಪಿನಕಾಯಿ ಹಾಕಿದ ನೆಟ್ಟಿಗರು!

Published : Oct 30, 2023, 04:04 PM ISTUpdated : Oct 30, 2023, 04:12 PM IST
ಅನೈತಿಕ ಸಂಬಂಧ ಹೊಂದಿದ್ದಕ್ಕೆ ಅನುಭವಿಸು ಮಗನೇ, ತಾಂಡವ್‌ಗೆ ಉಗಿದು ಉಪ್ಪಿನಕಾಯಿ ಹಾಕಿದ ನೆಟ್ಟಿಗರು!

ಸಾರಾಂಶ

ಹಾಗಿದ್ದರೆ ಏನಾಗುತ್ತಿದೆ ಸೀರಿಯಲ್ ಭಾಗ್ಯಲಕ್ಷ್ಮೀ ಕತೆಯಲ್ಲಿ? ತಾಂಡವ್ ತನ್ನ ಹೆಂಡತಿ ಬಿಟ್ಟು ಶ್ರೇ‍ಷ್ಠಾ ಎಂಬ ಇನ್ನೊಬ್ಬಳ ಜತೆ ಸಂಬಂಧ ಇಟ್ಟುಕೊಂಡಿರುವುದು ಗೊತ್ತೇ ಇದೆ. ಆಕೆ ಮದುವೆಯಾಗುವ ತನಕ ಹೇಗೋ ಮೆಂಟೇನ್ ಮಾಡಿದರಾಯ್ತು ಎಂದಿದ್ದ ತಾಂಡವ್‌ಗೆ ಈಗ ಸಮಸ್ಯೆ ಎದುರಾಗಿದೆ. 

ಭಾಗ್ಯಲಕ್ಷ್ಮೀ ಸೀರಿಯಲ್ ಕಥೆ ಹೊಸ ಹೊಸ ಹೊಸ ತಿರುವು ಪಡೆದುಕೊಂಡು ವೀಕ್ಷಕರು ಊಹಿಸಲೂ ಅಸಾಧ್ಯವಾದ ರೀತಿಯಲ್ಲಿ ಸಾಗುತ್ತಿದೆ. ಇಷ್ಟು ದಿನವೂ ತಾಂಡವ್‌ ಮನೆಯವರಿಂದ ಬಿಚ್ಚಿಟ್ಟಿದ್ದ ಅನೈತಿಕ ಸಂಬಂಧ, ಈಗ ತಾಂಡವ್‌ ಲವರ್ ಬಾಯಿಂದಲೇ ಹೊರಬಂದಿದೆ. ಈಗ ತಾಂಡವ್ ತಪ್ಪಿಸಿಕೊಳ್ಳುವ ದಾರಿ ಸಂಪೂರ್ಣ ಮುಚ್ಚಿಹೋಗಿದೆ ಎನ್ನಬಹುದು. 

ತಾಂಡವ್ ಪ್ರೇಯಸಿ ಶ್ರೇಷ್ಠಾ ಮನೆಯವರೆಲ್ಲರ ಮುಂದೆ ತಾಂಡವ್ ಮರೆತು ತಾನು ಇನ್ಯಾರನ್ನೂ ಮದುವೆಯಾಗಲು ಸಾಧ್ಯವೇ ಇಲ್ಲ ಎಂದಿದ್ದಾಳೆ. ತನಗೆ ಬೇರೆ ಮದುವೆ ಆಗುವ ಸಂದರ್ಭ ಬರಲು ಶ್ರೇಷ್ಠಾ ಸೂಸೈಡ್ ಪ್ರಯತ್ನ ಮಾಡಿ ಬದುಕಿದ್ದಾಳೆ. ಆಸ್ಪತ್ರೆಯಲ್ಲಿ ಹಾಸಿಗೆ ಮೇಲೆ ಮಲಗಿರುವ ಶ್ರೇಷ್ಠಾ ಪೊಲೀಸ್ ವಿಚಾರಣೆ ವೇಳೆ 'ತಾಂಡವ್ ಮನೆಯವರೆಲ್ಲರ ಮುಂದೆ ನಾನು ಸತ್ಯವನ್ನು ಬಾಯ್ಬಿಡುತ್ತೇನೆ. ಅವರನ್ನು ಕರೆಸಿ' ಎಂದು ಹೇಳಿ ತಾಂಡವ್ ಮನೆಯವರನ್ನು ಕರೆಸಿಕೊಂಡಿದ್ದಾಳೆ.

ಸಂಗೀತಾ-ಕಾರ್ತಿಕ್ ಮಧ್ಯೆ ಯಾರೂ ಫಿಟ್ಟಿಂಗ್ ಇಡಲು ಸಾಧ್ಯವೇ ಇಲ್ಲ, ಇಲ್ಲಿವೆ ನೋಡಿ ಬೇಕಾದಷ್ಟು ಸಾಕ್ಷಿ!

ಶ್ರೇಷ್ಠಾ "ನಾನು ತಾಂಡವ್ ಮರೆತು ಬೇರೆ ಯಾರನ್ನೂ ಮದುವೆಯಾಗಲು  ಸಾಧ್ಯವಿಲ್ಲ. ತಾಂಡವ್ ನನ್ನ ಮನಸುಕನಸಿನಲ್ಲೂ ತುಂಬಿಕೊಂಡಿದ್ದಾನೆ. ನನಗೆ ತಾಂಡವ್ ಬಿಟ್ಟು ಬೇರೆ ಯಾರನ್ನೂ ಮದುವೆಯಾಗಲು ಸಾಧ್ಯವಿಲ್ಲ' ಎನ್ನುತ್ತಾಳೆ. ಶ್ರೇಷ್ಠಾ ಮಾತನ್ನು ಕೇಳಿ ಭಾಗ್ಯಾ, ಕುಸುಮಾ ಸೇರಿದಂತೆ ಎಲ್ಲರೂ ಸಿಕ್ಕಾಪಟ್ಟೆ ಕಂಗಾಲಾಗಿದ್ದಾರೆ. ಕುಸುಮಾ ಗರಬಡಿದವಳಂತೆ ನಿಂತಿದ್ದರೆ, ಭಾಗ್ಯಾ ಬಾಯಿಂದ ಮಾತೇ ಬರುತ್ತಿಲ್ಲ. ತಾಂಡವ್‌ ಅಕ್ಷರಶಃ ಸಿಡಲು ಬಡಿದವರಂತೆ ನಿಂತಿದ್ದಾನೆ. 

ಬಿಗ್ ಬಾಸ್ ಮನೆಯಲ್ಲಿ ಭಾರೀ ಹೊಡೆದಾಟ; ಕಾರ್ತಿಕ್ ಮುಂದೆ ಮಂಡಿಯೂರಿ ಬಿದ್ದು ಒದ್ದಾಡುತ್ತಿರುವ ಪ್ರತಾಪ್

ಹಾಗಿದ್ದರೆ ಏನಾಗುತ್ತಿದೆ ಸೀರಿಯಲ್ ಭಾಗ್ಯಲಕ್ಷ್ಮೀ ಕತೆಯಲ್ಲಿ? ತಾಂಡವ್ ತನ್ನ ಹೆಂಡತಿ ಬಿಟ್ಟು ಶ್ರೇ‍ಷ್ಠಾ ಎಂಬ ಇನ್ನೊಬ್ಬಳ ಜತೆ ಸಂಬಂಧ ಇಟ್ಟುಕೊಂಡಿರುವುದು ಗೊತ್ತೇ ಇದೆ. ಆಕೆ ಮದುವೆಯಾಗುವ ತನಕ ಹೇಗೋ ಮೆಂಟೇನ್ ಮಾಡಿದರಾಯ್ತು ಎಂದಿದ್ದ ತಾಂಡವ್‌ಗೆ ಈಗ ಸಮಸ್ಯೆ ಎದುರಾಗಿದೆ. ಏಕೆಂದರೆ ಆಕೆ ತಾನು ತಾಂಡವ್‌ನನ್ನು ಬಿಟ್ಟು ಬೇರೆ ಯಾರನ್ನೂ ಮದುವೆಯಾಗುವುದಿಲ್ಲ ಎಂದು ಹಠ ಹಿಡಿದಿದ್ದಾಳೆ. ಮುಂದೇನಾಗಲಿದೆ ಎಂಬುದನ್ನು ತಿಳಿಯಲು ಭಾಗ್ಯಲಕ್ಷ್ಮೀ ಇಂದಿನ ಸಂಚಿಕೆ ನೋಡಬೇಕು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?