ಭಾಗ್ಯಶ್ರೀ ಕಣ್ಣೀರು ದೌರ್ಬಲ್ಯ ಅಲ್ಲ, ಆಕೆಯನ್ನು ಬೇಕೆಂದು ಟಾರ್ಗೆಟ್ ಮಾಡ್ತಿದ್ದಾರೆ: ಪತಿ ಭರತ್ ಹೇಳಿಕೆ ವೈರಲ್

By Vaishnavi Chandrashekar  |  First Published Oct 30, 2023, 2:09 PM IST

ಪದೇ ಪದೇ ಭಾಗ್ಯ ಜನರ ಮುಂದೆ ವೀಕ್ ಅಗಿ ಕಾಣಿಸುತ್ತಿರುವುದಕ್ಕೆ ಕಾರಣವೇನು? ಯಾರು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಪತಿ ಭರತ್ ಮಾತನಾಡಿದ್ದಾರೆ. 


ಕಲರ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 10ರಲ್ಲಿ ಕಿರುತೆರೆ ನಟಿ ಭಾಗ್ಯಶ್ರೀ ಸ್ಪರ್ಧಿಸುತ್ತಿದ್ದಾರೆ. ಭಾಗ್ಯ ಎಂಟ್ರಿ ಕೊಟ್ಟಿದ್ದು ಕಿರುತೆರೆ ವೀಕ್ಷಕರಿಗೆ ಖುಷಿಯಾಗಿದೆ ಆದರೆ ಏನೂ ಆಟವಾಡದೆ ಸದಾ ಅಳುತ್ತಿರುವುದನ್ನು ನೋಡಿ ಬೇಸರ ವ್ಯಕ್ತ ಪಡಿಸುತ್ತಿದ್ದಾರೆ. ಅಲ್ಲದೆ ಭಾಗ್ಯ ಕೇಳಿದರೂ ಅವಕಾಶ ಕೊಡದ ಕಾರಣ ಪತಿ ಭರತ್ ಕೂಡ ಟಾರ್ಗೆಟ್ ಆಗುತ್ತಿರುವ ವಿಚಾರದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.  

'ಹೌದು ಭಾಗ್ಯಳನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಅಂತ ನನಗೆ ಅನಿಸುತ್ತಿತ್ತು. ಆಮೇಲೆ ಒಬ್ಬ ವ್ಯಕ್ತಿಯನ್ನು ಪದೇ ಪದೇ ಟಾರ್ಗೆಟ್ ಮಾಡುತ್ತಿದ್ದಾರೆ ಅಂದ್ರೆ ಅದಕ್ಕೆ ಎರಡು ಕಾರಣ ಇದೆ... ಒಂದು ಆ ವ್ಯಕ್ತಿ ತುಂಬಾ ಸ್ಟ್ರಾಂಗ್ ಇದ್ದಾರೆ ಅವರಿಂದ ನಮ್ಮ ಆಟಕ್ಕೆ ತೊಂದರೆ ಅಗುತ್ತದೆ ಎಂದು ಟಾರ್ಗೆಟ್ ಮಾಡುತ್ತಾರೆ ಮತ್ತೊಂದು ಕಾರಣ ಏನೆಂದರೆ ಅಲ್ಲಿ ಗುಂಪು ಮಾಡಿಕೊಳ್ಳುತ್ತಾರೆ ನಾವೇ ಒಂದು ಗ್ರೂಪ್ ಇದ್ದೀನಿ ನಾವಿಷ್ಟು ಜನ ಸಾಕು ಯಾರೂ ಬೇಡ ಅನ್ನೋ ತರ ಮಾಡಿಕೊಳ್ಳುತ್ತಾರೆ. ಎರಡೂ ರೀತಿಯಲ್ಲಿ ಸನ್ನಿವೇಶಗಳು ಆಗಿರಬಹುದು...ಆ ಬಾಕ್ಸ್‌ನಲ್ಲಿ ಇಡೀ ದಿನವನ್ನು ತೋರಿಸುತ್ತಾರೆ ಅದನ್ನು ನಾವು ನೋಡಿ ನಂಬಲು ಆಗಲ್ಲ. ಏಕೆಂದರೆ ಆಕೆಯಲ್ಲಿ ಸತ್ಯ ಸತ್ವ ಹೊರಗೆ ಬಂದೇ ಬರುತ್ತದೆ....ಸುದೀಪ್ ಸರ್ ಪದೇ ಪದೇ ಹೇಳಿದರು ಫಿಸಿಕಲ್ ಟಾಕ್ಸ್‌ ಆಡಲು ಮಾತ್ರ ಇಲ್ಲಿಗೆ ಬಂದಿಲ್ಲ ಅಂತ. ಒಬ್ಬರನ್ನು ತಂಡದಿಂದ ಹೊರಗಡೆ ಇರುವುದು ಸರಿ ಅಲ್ಲ ಮೊದಲೇ ನಿರ್ಧಾರ ಮಾಡಿಕೊಂಡು ಗೇಮ್ ಯಾರು ಆಡಬೇಕು ಎಂದು ತೀರ್ಮಾನ ಮಾಡಿಕೊಂಡಿದ್ದಾರೆ ತುಂಬಾ ಕ್ಲಬ್ ಕ್ರಿಯೇಟ್ ಮಾಡಿಕೊಂಡಿದ್ದಾರೆ. ಎಲ್ಲಾ ರೀತಿಯ ಯೋಚನೆ ಇರುವ ವ್ಯಕ್ತಿಗಳನ್ನು ಒಂದು ಕಡೆ ಸೇರಿಸುವುದು ಬಿಗ್ ಬಾಸ್. ಇದೊಂದು ಚಾಲೆಂಜಿಂಗ್ ಗೇಮ್ ಆನಿಸುತ್ತದೆ' ಎಂದು ಕನ್ನಡ ಖಾಸಗಿ ಟಿವಿ ಸಂದರ್ಶನದಲ್ಲಿ ಭರತ್ ಮಾತನಾಡಿದ್ದಾರೆ. 

Tap to resize

Latest Videos

ಹೊಡೆದಾಡುವ ಮಟ್ಟಕ್ಕೆ ಕಾಟ ಕೊಟ್ಟಿದ್ದರು; ತುಕಾಲಿ ಸಂತು ಅಸಲಿ ಮುಖ ಬಿಚ್ಚಿಟ್ಟ ಯತಿರಾಜ್

'ಭಾಗ್ಯಳನ್ನು ನೋಡಿ ನಾನು ಭಾವುಕನಾಗಿ ಏಕೆಂದರೆ ಅಕೆ ಪ್ರಾಮಾಣಿಕವಾಗಿ ಹೇಳುತ್ತಾಳೆ ನಾನು ಸ್ಪೋರ್ಟ್‌ ವ್ಯಕ್ತಿ ಅಲ್ಲ ನನಗೆ ಆಟವಾಡಲು ಕಷ್ಟವಾಗುತ್ತದೆ ಎಂದು ಹೇಳಿದರು. ಮನಸಿನಲ್ಲಿರುವ ಭಾವನಯನ್ನು ಸರಿಯಾಗಿ ವ್ಯಕ್ತ ಪಡಿಸಿದಲು ಅದು ಒಳ್ಳೆಯ ವಿಚಾರ ಇಷ್ಟ ಆಯ್ತು. ಭಾಗ್ಯ ಕಣ್ಣೀರು ಹಾಕಿದ್ದು ದೌರ್ಬಲ್ಯ  ಅಲ್ಲ ಕಣ್ಣೀರುನೂ ಸುಮ್ಮನೆ ಬರಲ್ಲ. ನೋವನ್ನು ಕಣ್ಣೀರಿನ ಭಾವನ ರೀತಿಯಲ್ಲಿ ಹೊರ ಬರುತ್ತದೆ. ಎಲ್ಲನೂ ಆಕೆ ಎದುರಿಸುತ್ತಾಳೆ. ಎಲ್ಲರೂ ಆಕೆಯನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಅಂದ್ರೆ ಆಕೆಯಲ್ಲಿ ಏನೋ ಶಕ್ತಿ ಇದೆ ಆ ವ್ಯಕ್ತಿಗೆ ಒಳ್ಳೆಯದಾಗಲಿದೆ. ಎರಡನೇ ವಾರದ ನಾಮಿನೇಷನ್‌ನಲ್ಲಿ ಸೇಫ್ ಆಗಿದ್ದಾಳೆ ಗೆದ್ದಿದ್ದಾಳೆ' ಎಂದು ಭಾಗ್ಯಶ್ರೀ ಪತಿ ಮಾತನಾಡಿದ್ದಾರೆ' ಎಂದು ಭರತ್ ಹೇಳಿದ್ದಾರೆ. 

click me!