ಕುದುರೆ ಮೇಲೇರಲು ಪರದಾಡಿದ 'ಅಮೃತಧಾರೆ' ಭೂಮಿಕಾ: ರಿಯಲ್​ ಗಂಡನ ಜೊತೆ ಕ್ಯೂಟ್​ ಫೋಟೋಶೂಟ್​

By Suvarna News  |  First Published Oct 30, 2023, 3:45 PM IST

ರಿಯಲ್​ ಗಂಡನ ಜೊತೆ ಕುದುರೆ ಮೇಲೇರಿ 'ಅಮೃತಧಾರೆ' ಭೂಮಿಕಾ ಕ್ಯೂಟ್​ ಫೋಟೋಶೂಟ್​!
 


ಭೂಮಿಕಾ (Bhoomika) ಎಂದಾಕ್ಷಣ ಧಾರಾವಾಹಿ ಪ್ರಿಯರ ಕಣ್ಣಮುಂದೆ ಬರುವುದು ಅಮೃತಧಾರೆ ಸೀರಿಯಲ್​ ನಾಯಕಿ. ವಯಸ್ಸಾದರೂ ಮದುವೆಯಾಗದೇ ಉಳಿದ ಮಧ್ಯಮ ಕುಟುಂಬದ ಹೆಣ್ಣುಮಗಳೊಬ್ಬಳು ಒತ್ತಾಯಪೂರ್ವಕವಾಗಿ ವಯಸ್ಸಾಗಿರುವ ಕೋಟ್ಯಧಿಪತಿ ಬಿಜಿನೆಸ್​ಮೆನ್​ ಜೊತೆ ಮದುವೆಯಾಗಿ ಸಂಸಾರದಲ್ಲಿ ಹೊಂದಿಕೊಳ್ಳಲು ಪರದಾಡುತ್ತಿರುವ ಪಾತ್ರ ಈ ಭೂಮಿಕಾಳದ್ದು. ಭೂಮಿಕಾ ಪಾತ್ರಕ್ಕೆ ಜೀವ ತುಂಬಿರೋ ನಟಿಯ ಅಸಲಿ ಹೆಸರು ಛಾಯಾ ಸಿಂಗ್​. ಸಾಮಾಜಿಕ ಜಾಲತಾಣದಲ್ಲಿಯೂ ಆ್ಯಕ್ಟೀವ್​ ಆಗಿರೋ ಛಾಯಾ ಸಿಂಗ್​ ಆಗಾಗ್ಗೆ ಕೆಲವೊಂದು ರೀಲ್ಸ್​ ಮಾಡುತ್ತಿರುತ್ತಾರೆ, ಕೆಲವೊಂದು ಮಾಹಿತಿ ಶೇರ್​ ಮಾಡಿಕೊಳ್ಳುತ್ತಿರುತ್ತಾರೆ. ಇದೀಗ ಕುದುರೆಯ ಮೇಲೇರಿರುವ ವಿಡಿಯೋ ಶೇರ್​ ಮಾಡಿದ್ದಾರೆ. ಇದರಲ್ಲಿ ನಿಜ ಜೀವನದ ಪತಿಯ ಜೊತೆ ಕ್ಯೂಟ್​ ಫೋಟೋಶೂಟ್​ ಮಾಡಿಸಿಕೊಂಡಿದ್ದಾರೆ.

 ಅಂದಹಾಗೆ, ಅಮೃತಧಾರೆಯ ರೀಲ್​ ಲೈಫ್​ನಲ್ಲಿ ಗೌತಮ್​ ಈಕೆಯ ಪತಿಯಾದರೆ, ರಿಯಲ್​ ಲೈಫ್​ ಪತಿಯ ಹೆಸರು. ಕೃಷ್ಣ. ಕೃಷ್ಣ ಎನ್ನುವವರ ಜೊತೆ ಛಾಯಾ ಅವರ ಮದುವೆಯಾಗಿದ್ದು, ಇನ್​ಸ್ಟಾಗ್ರಾಮ್​ನಲ್ಲಿ ಅವರು ಪತಿಯ ಜೊತೆ ಆಗಾಗ ಫೋಟೋ ಶೇರ್​  ಮಾಡಿಕೊಳ್ಳುತ್ತಿರುತ್ತಾರೆ.  ಮದುವೆಯಾಗಿ 11 ವರ್ಷಗಳೇ ಕಳೆದಿವೆ. ಬೆಂಗಳೂರಿನ ಬೆಡಗಿ  ಛಾಯಾ ಸಿಂಗ್ ನಿಜ ಜೀವನದಲ್ಲಿ ತುಂಬಾ ಸಾಫ್ಟ್​ ಅಂತೆ. ಅವರಿಗೆ  ಕೃಷ್ಣ ಅವರ ಪರಿಚಯವಾದದ್ದು, ತಮಿಳು ಚಿತ್ರದಲ್ಲಿ  ನಟಿಸುವ ಸಮಯದಲ್ಲಿ.  ಕೃಷ್ಣ ಅವರೂ  ಸಿನಿಮಾರಂಗದಲ್ಲೇ ಇದ್ದು, ತಮಿಳು ಕಿರುತೆರೆಯ ಜನಪ್ರಿಯ ನಟ. 2010ರಲ್ಲಿ ತಮಿಳು ನಟ ಕೃಷ್ಣರನ್ನು ಮೊದಲು ಭೇಟಿಯಾಗಿದ್ದರು. 

Tap to resize

Latest Videos

10 ಲಕ್ಷ ಜನರ ಸಮಾಧಿ ಮೇಲೆ ಕಟ್ಟಿದ ಚೀನಾ ಮಹಾಗೋಡೆ: ಕುತೂಹಲದ ಮಾಹಿತಿ ಬಿಚ್ಚಿಟ್ಟ ಡಾ.ಬ್ರೋ

'ಆನಂದಪುರತು ವೀಡ್' (Anandhapurathu Veedu) ಎಂಬ ಸಿನಿಮಾದ ವೇಳೆ ಭೇಟಿಯಾದ ಇವರು ಪರಸ್ಪರ ಇಷ್ಟಪಟ್ಟು ನಂತರ ಹಿರಿಯರ ಒಪ್ಪಿಸಿ, ಅವರ ಆಶೀರ್ವಾದ ಪಡೆದು 2012ರಲ್ಲಿ ಮದುವೆಯಾಗಿದ್ದಾರೆ. 2010ರಲ್ಲಿ ತೆರೆ ಕಂಡ ಈ ಚಿತ್ರ  ಸೂಪರ್‌ನ್ಯಾಚುರಲ್ ಮಿಸ್ಟರಿ ಸಿನಿಮಾವಾಗಿದ್ದು, ಇವರಿಬ್ಬರೂ  ನಟಿಸಿದ್ದಾರೆ.  ನಿರ್ದೇಶಕ ಶಂಕರ್ ನಿರ್ಮಾಣದ ಈ ಚಿತ್ರಕ್ಕೆ ಪಾಸಿಟಿವ್ ಪ್ರತಿಕ್ರಿಯೆ ಹೆಚ್ಚು ಸಿಕ್ಕಿತ್ತು. ಈ ಸಿನಿಮಾದಲ್ಲಿ ಛಾಯಾ ಅವರು ನಾಯಕಿ ಪಾತ್ರ ಮಾಡಿದ್ದರೆ ಕೃಷ್ಣ (Krishna) ಅವರು ನೆಗೆಟಿವ್ ಪಾತ್ರ ಮಾಡಿದ್ದರು. ಇನ್ನು ರನ್ ಎನ್ನುವ ಧಾರಾವಾಹಿಯಲ್ಲಿ ಕೃಷ್ಣ, ಛಾಯಾ ಸಿಂಗ್ ಒಟ್ಟಿಗೆ ನಟಿಸಿದ್ದರು. 2019ರಲ್ಲಿ ಈ ಧಾರಾವಾಹಿ ಪ್ರಸಾರ ಆಗಿ 197 ಎಪಿಸೋಡ್ ಪ್ರಸಾರ ಆಗಿತ್ತು. ಟಿಆರ್‌ಪಿ ಕಾರಣದಿಂದವೋ ಅಥವಾ ಇನ್ಯಾವುದೋ ಕಾರಣಕ್ಕೋ ಏನೋ ಈ ಸೀರಿಯಲ್ ಬಹುಬೇಗ ಅಂತ್ಯ ಆಗಿತ್ತು.

ಇದೀಗ ಪತಿಯ ಜೊತೆಗಿನ ಈ ಫೋಟೋಶೂಟ್​ ಸಕತ್​ ವೈರಲ್​ ಆಗುತ್ತಿದೆ. ಛಾಯಾ ಸಿಂಗ್​ ಇದರಲ್ಲಿ ರಾಣಿಯಂತೆ ಕಂಗೊಳಿಸುತ್ತಿದ್ದಾರೆ. ಕುದುರೆಯೊಂದು ಕಾಣಿಸಿಕೊಂಡಿದ್ದು, ಅದರ ಮೇಲೆ ಏರಲು ಪತಿ ಕೃಷ್ಣ ಅವರು ಸಹಾಯ ಮಾಡುವುದನ್ನು ವಿಡಿಯೋದಲ್ಲಿ ನೋಡಬಹುದು. ನಂತರ ಕುದುರೆ ಪಕ್ಕದಲ್ಲಿ ಇಬ್ಬರೂ ಫೋಟೋಶೂಟ್​ ಮಾಡಿಸಿಕೊಂಡಿದ್ದು, ಫ್ಯಾನ್ಸ್​ ಕ್ಯೂಟ್​ ಕಪಲ್​ ಎನ್ನುತ್ತಿದ್ದಾರೆ. 

ದೇಹ ಪ್ರದರ್ಶಿಸುತ್ತಾ ಎಕ್ಸ್​ಪೋಸ್​ ಮಾಡೋದು ಈಸಿ ಅಂದ್ಕೊಂಡ್ರಾ? ನೆಟ್ಟಿಗರ ವಿರುದ್ಧ ಕಿಡಿ ಕಾರಿದ 'ಪುಷ್ಪ' ನಟಿ


ಅಂದಹಾಗೆ ಕೆಲ ದಿನಗಳ ಹಿಂದೆ   ಹ್ಯಾಟ್ರಿಕ್​ ಹೀರೋ ಶಿವರಾಜ್​ ಕುಮಾರ್​ ಅವರ ಜೊತೆಗೆ ಹೇಳಿರುವ ಡೈಲಾಗ್​ ಒಂದು ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಟ್ರೆಂಡ್​ ಆಗಿತ್ತು.  ಇದನ್ನು ನೋಡಿ ಛಾಯಾ ಸಿಂಗ್​ ಬೆಳ್ಳಿ ಪರದೆಯ ಮೇಲೆ ಮತ್ತೆ ಎಂಟ್ರಿ ಕೊಡಲಿದ್ದಾರಾ ಎಂದು ಫ್ಯಾನ್ಸ್​ ಕೇಳುತ್ತಿದ್ದರು. ಆದರೆ ಅಸಲಿಗೆ ಇದು ಹೊಸ ಸಿನಿಮಾದ ಅಪ್​ಡೇಟ್​ ಅಲ್ಲ. 2017ರಲ್ಲಿ ಬಿಡುಗಡೆಯಾಗಿದ್ದ ಮಫ್ತಿ ಚಿತ್ರದ ಡೈಲಾಗ್​, ಇತ್ತೀಚೆಗಷ್ಟೇ ನಡೆದ ಕಾರ್ಯಕ್ರಮವೊಂದರಲ್ಲಿ ಇವರಿಬ್ಬರೂ ಪುನಃ ಆ ಚಿತ್ರದ ಡೈಲಾಗ್​ ಹೇಳಿದ್ದು, ಅದನ್ನೀಗ ಪುನಃ ಛಾಯಾ ಸಿಂಗ್​ ಶೇರ್​ ಮಾಡಿಕೊಂಡಿದ್ದಾರೆ. ಅದು ಸಕತ್​ ವೈರಲ್​ ಆಗುತ್ತಿದೆ.   ಅಂದಹಾಗೆ ಶಿವರಾಜ್ ಕುಮಾರ್ ಜೊತೆ ಛಾಯಾ ಸಿಂಗ್ ರೌಡಿ ಅಳಿಯ ಸಿನಿಮಾದಲ್ಲಿ ನಟಿಸಿದ್ದರು. ಬಳಿಕ   ಸೂಪರ್ ಹಿಟ್ ಮಫ್ತಿ ಸಿನಿಮಾದಲ್ಲೂ ಒಟ್ಟಿಗೆ ನಟಿಸಿದ್ದಾರೆ. ಶಿವಣ್ಣ ತಂಗಿಯ ಪಾತ್ರದಲ್ಲಿ ಛಾಯಾ ಸಿಂಗ್ ಮಿಂಚಿದ್ದರು. ಅಣ್ಣ-ತಂಗಿಯ ಕಾಂಬಿನೇಷನ್ ಅಭಿಮಾನಿಗಳ ಹೃದಯ ಗೆದ್ದಿತ್ತು.  

 

click me!