
ಜೀ ಕನ್ನಡ ಹೊಸ ರಿಯಾಲಿಟಿ ಶೋ ಜೊತೆ ಧೂಳೆಬ್ಬಿಸಲು ಸಜ್ಜಾಗಿದೆ. ಬೋಲ್ಡ್ ಆಗಿರುವ, ಇನ್ನೂ ಹಳ್ಳಿಯನ್ನೇ ನೋಡದ ಹುಡುಗಿಯರಿಗೆ ಈ ರಿಯಾಲಿಟಿ ಶೋನಲ್ಲಿ ಪಾಲ್ಗೊಳ್ಳೋಕೆ ಅವಕಾಶ ಸಿಗ್ತಿದೆ. ಅಕುಲ್ ಬಾಲಾಜಿ ನೇತೃತ್ವದಲ್ಲಿ ಮತ್ತೊಮ್ಮೆ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್ ಸ್ಟೈಲಿನ ರಿಯಾಲಿಟಿ ಶೋ ಜೀ ಕನ್ನಡದಲ್ಲಿ ಬರಲಿದೆ. ಸದ್ಯ ಶೋ ಪ್ರಾರಂಭಿಕ ಹಂತದಲ್ಲಿದ್ದು, ಆಡಿಷನ್ ಗೆ ಎಲ್ಲ ತಯಾರಿ ನಡೆದಿದೆ.
ಹಿಂದೆ ಸುವರ್ಣ ವಾಹಿನಿಯಲ್ಲಿ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ರಿಯಾಲಿಟಿ ಶೋ ನಡೆಯುತ್ತಿತ್ತು. ರಿಯಾಲಿಟಿ ಶೋ ಈಗಾಗಲೇ ನಾಲ್ಕು ಸೀಸನ್ ಮುಗಿಸಿದೆ. ಅದ್ರಲ್ಲಿ ಅಕುಲ್ ಬಾಲಾಜಿ ನಿರೂಪಕರಾಗಿ ಪ್ರಮುಖ ಪಾತ್ರ ವಹಿಸಿದ್ದರು. ಇತ್ತೀಚಿಗೆ ಜೀ ಕನ್ನಡದಲ್ಲಿ ಪ್ರಸಾರ ಆಗ್ತಿದ್ದ ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ಸ್ಪರ್ಧಿಗಳು ಯಲ್ಲಾಪುರದ ಸಿದ್ದಿ ಜನಾಂಗವಿರುವ ಹಳ್ಳಿಗೆ ಹೋಗಿ, ಹಳ್ಳಿ ಲೈಫ್ ಎಂಜಾಯ್ ಮಾಡಿದ್ರು. ಅಲ್ಲಿಗೆ ಸ್ಪೇಷಲ್ ನಿರೂಪಕರಾಗಿ ಅಕುಲ್ ಎಂಟ್ರಿ ಕೊಟ್ಟಿದ್ದರು. ಶೋನಲ್ಲಿ ಅಕುಲ್ ನೋಡಿದ್ದ ಫ್ಯಾನ್ಸ್, ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಶೋ ಮಿಸ್ ಮಾಡಿಕೊಳ್ತಿದ್ದೇವೆ. ಶೀಘ್ರದಲ್ಲಿ ಈ ಶೋ ಶುರುವಾಗ್ಲಿ ಅಂತ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈಗ ಅಕುಲ್ ಬಾಲಾಜಿ, ಇಂಥಹದ್ದೆ ಶೋ ನಡೆಸಿಕೊಡುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಪ್ರೇಕ್ಷಕರಿಗೆ ಖುಷಿ ನೀಡಲು ಬರ್ತಿದ್ದಾರೆ.
ಜೀ ಕನ್ನಡ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಆಡಿಷನ್ ಮಾಹಿತಿ ಇರುವ ಪ್ರೋಮೋವನ್ನು ಪೋಸ್ಟ್ ಮಾಡಿದೆ. ಅದ್ರಲ್ಲಿ ಅಕುಲ್ ಬಾಲಾಜಿಯವರನ್ನು ನೀವು ನೋಡ್ಬಹುದು. ವೆದರ್ ರಿಪೋರ್ಟ್ ನೀಡ್ತಿರುವ ಅಕುಲ್, ಕರ್ನಾಟಕದಲ್ಲಿ ಸುನಾಮಿಯಾ ಅಂತ ಅಚ್ಚರಿ ವ್ಯಕ್ತಪಡಿಸ್ತಾರೆ. ನನ್ನ ಫೆವರೆಟ್ ರಿಯಾಲಿಟಿ ಶೋ ಬರ್ತಿದೆ ಅಂದ್ಮೇಲೆ ಸುನಾಮಿ, ಸುಂಟರಗಾಳಿ ಎಲ್ಲ ಬರ್ಲೇಬೇಕು ಎನ್ನುತ್ತ ರಿಯಾಲಿಟಿ ಶೋ ಬಗ್ಗೆ ಮಾಹಿತಿ ನೀಡಿದ್ದಾರೆ.
ಹಳ್ಳಿ ಬದುಕನ್ನು ಕಲಿಸುವ ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಅಂತ ಜೀ ಕನ್ನಡ ಹೇಳಿದೆ. ಆದ್ರೆ ರಿಯಾಲಿಟಿ ಶೋಗೆ ಇನ್ನೂ ನಾಮಕರಣ ಮಾಡಿಲ್ಲ. ಆಡಿಷನ್ ಇದೇ ಜುಲೈ 19ರಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೀತಾ ಇದೆ. 18 ರಿಂದ 28 ವರ್ಷ ವಯಸ್ಸಿನ City Modern ಯುವತಿಯರು ಇದ್ರಲ್ಲಿ ಭಾಗವಹಿಸ್ಬಹುದು ಅಂತ ಶೀರ್ಷಿಕೆ ಹಾಕಲಾಗಿದೆ. ನೀವೂ ರಿಯಾಲಿಟಿ ಶೋನಲ್ಲಿ ಪಾಲ್ಗೊಳ್ಳೋ ಆಸಕ್ತಿ ಹೊಂದಿದ್ರೆ ಆಧಾರ್ ಕಾರ್ಡ್ ಹಾಗೂ ಪಾಸ್ಪೋರ್ಟ್ ಸೈಜ್ ಫೋಟೋ ಜೊತೆ ಜುಲೈ 19 ರಂದು ಕಂಠೀರವ ಸ್ಟುಡಿಯೋದಲ್ಲಿ ನಡೆಯುವ ಆಡಿಷನ್ ನಲ್ಲಿ ಪಾಲ್ಗೊಳ್ಬಹುದು.
ಪ್ರೋಮೋ ನೋಡಿದ ಫ್ಯಾನ್ಸ್ ಖುಷಿಯಾಗಿದ್ದಾರೆ. ಇಂಡೋರ್ ಪ್ರೋಗ್ರಾಂ ನೋಡಿ ಬೋರ್ ಆಗಿದೆ. ಔಟ್ ಡೋರ್ ರಿಯಾಲಿಟಿ ಶೋ ನೋಡೊಕೆ ಅವಕಾಶ ಸಿಗ್ತಿದೆ ಅಂತ ವೀಕ್ಷಕರು ಖುಷಿಯಾಗಿದ್ದಾರೆ. ಅಕುಲ್ ಬಾಲಾಜಿ ಸ್ಟೈಲ್ ಹಾಗೂ ಜಡ್ಜ್ಮೆಂಟ್ ನೋಡೋಕೆ ಫ್ಯಾನ್ಸ್ ಕಾತರರಾಗಿದ್ದಾರೆ. ಶೋ ಶೀಘ್ರದಲ್ಲಿ ಅಂತ ಜೀ ಕನ್ನಡ ಹೇಳಿದೆ. ಆಡಿಷನ್ ಮುಗಿದು ಶೋ ಶುರುವಾಗೋಕೆ ಇನ್ನೆರಡು ತಿಂಗಳಾದ್ರೂ ಬೇಕೇ ಬೇಕು. ಅಂದ್ರೆ ಕಲರ್ಸ್ ಕನ್ನಡದ ಬಿಗ್ ಬಾಸ್ ಶೋ ಶುರುವಾಗು ಟೈಂನಲ್ಲೇ ಈ ಪ್ಯಾಟೆ ಹುಡುಗಿಯರ ಹಳ್ಳಿ ಲೈಫ್ ಕೂಡ ಶುರುವಾಗುವ ಸಾಧ್ಯತೆ ಇದೆ. ಕಲರ್ಸ್ ಕನ್ನಡ ಬಿಗ್ ಬಾಸ್ ಗೆ ಟಕ್ಕರ್ ನೀಡೋಕೆ ಜೀ ಕನ್ನಡ ಮಾಸ್ಟರ್ ಪ್ಲಾನ್ ಅಂತಿದ್ದಾರೆ ವೀಕ್ಷಕರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.