BBK12: ಈಗಲೇ ಮದುವೆಯಾಗೋಕೆ ರೆಡಿಯಿರೋ ಮಂಗಳೂರಿನ ರಕ್ಷಿತಾ ಶೆಟ್ಟಿ ಯಾಕೆ ಸ್ಪಷ್ಟವಾಗಿ ಕನ್ನಡ ಮಾತನಾಡಲ್ಲ?

Published : Jul 15, 2025, 03:03 PM IST
bigg boss kannada rakshitha shetty

ಸಾರಾಂಶ

Bigg Boss Kannada Season 12 ಮನೆಗೆ ಬಂದಿರೋ ರಕ್ಷಿತಾ ಶೆಟ್ಟಿ ಅವರು ತುಳು, ಕನ್ನಡ, ಹಿಂದಿ ಭಾಷೆಯನ್ನು ಮಿಕ್ಸ್‌ ಮಾಡಿ ಮಾತನಾಡಿಯೇ ಫೇಮಸ್‌ ಆಗಿದ್ದಾರೆ. ಇವರ ಕುರಿತ ಕುತೂಹಲಕರ ವಿಷಯಗಳು ಇಲ್ಲಿವೆ. 

ಬಲೆ ಬಲೆ ಎನ್ನುತ್ತ ಕನ್ನಡ, ತುಳು, ಹಿಂದಿ ಭಾಷೆ ಮಿಕ್ಸ್‌ ಮಾಡಿ Vlog ವಿಡಿಯೋ ಮಾಡಿ ಫೇಮಸ್‌ ಆದ ರಕ್ಷಿತಾ ಶೆಟ್ಟಿ ಅವರು ಈಗ ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋಗೆ ಬಂದಿದ್ದಾರೆ. ಕಿಚ್ಚ ಸುದೀಪ್‌ ಜೊತೆಗೆ ಅವರ ಮಾತುಕತೆ ವೀಕ್ಷಕರನ್ನು ನಗೆಗಡಲಲ್ಲಿ ತೇಲಿಸಿತ್ತು. ಕೆಲವು ತಿಂಗಳುಗಳ ಹಿಂದೆ ಅವರು ತಮ್ಮ ಹಿನ್ನಲೆ, ಪಾಲಕರು, ಭವಿಷ್ಯದ ಬಗ್ಗೆ ಮಾತನಾಡಿದ್ದಾರೆ. Coorg Buzz ಎನ್ನುವ ಯುಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. 

ಎಲ್ಲಿಯವರು?

ರಕ್ಷಿತಾ ಶೆಟ್ಟಿ ಮಂಗಳೂರಿನವರು. ಮಂಗಳೂರಿನಲ್ಲಿ ಹುಟ್ಟಿದ್ದು, ಮುಂಬೈನಲ್ಲಿ ಬೆಳೆದೆ. ನನ್ನ ತಾಯಿಯ ತವರು ಮನೆ ಇಲ್ಲಿದೆ. ಹೀಗಾಗಿ ಅಪ್ಪ-ಅಮ್ಮನನ್ನು ಭೇಟಿ ಮಾಡೋಕೆ ನಾನು ಆದಾಗ ಮುಂಬೈಗೆ ಹೋಗ್ತೀನಿ. ನನಗೆ ತಂಗಿ ಇದ್ದಾಳೆ.

ಮಂಗಳೂರಿನಲ್ಲಿ ನೆಲೆಸಿದ್ದು ಯಾಕೆ?

Vlog ಮಾಡ್ತಿರೋದಿಕ್ಕೆ ರಕ್ಷಿತಾ ಶೆಟ್ಟಿ ಅವರು ಮಂಗಳೂರಿನಲ್ಲಿಯೇ ನೆಲೆಸಿದ್ದಾರೆ.

ವಿದ್ಯಾರ್ಹತೆ

ಬಿಬಿಎಂ ಓದಿದ್ದೇನೆ. ರಾಷ್ಟ್ರೀಯ ಕ್ರೀಡಾಪಟು ಆಗಿದ್ದೆ. ಈಗ ಕ್ರೀಡೆ ಬಿಟ್ಟೆ.

ಮೊದಲ Vlog ಶುರು ಆಗಿದ್ದು ಹೇಗೆ?

ಮುಂಬೈನಲ್ಲಿ ಪಕ್ಕದ ಮನೆಯವರನ್ನು ಕೂಡ ಮಾತನಾಡಿಸೋದಿಲ್ಲ. ಮಂಗಳೂರಿನಲ್ಲಿ ಮಾತ್ರ ಎಲ್ಲರೂ ಮನೆಯ ಬಾಗಿಲು ಒಪನ್‌ ಮಾಡಿಟ್ಟುಕೊಂಡಿತ್ತಾರೆ.

Vlog ಪ್ಲ್ಯಾನ್‌ ಮಾಡೋದು ಹೇಗೆ?

ಇಂದು ಚಳಿ ಇದ್ದರೆ, ಏನು ಅಡುಗೆ ಮಾಡಿರ್ತಾರೋ ಅದನ್ನು ಕಂಟೆಂಟ್‌ ಕ್ರಿಯೇಟ್‌ ಮಾಡ್ತೀವಿ.

ಬಲೆ ಬಲೆ ಹುಟ್ಟಿದ್ದು ಹೇಗೆ?

ತುಳುನಾಡಿನವರಿಗೆ ಬಲೆ ಬಲೆ ಶಬ್ದವೇ ಒಂದು ಎಮೋಶನಲ್.‌ ನಾನು ಬಲೆ ಬಲೆ

ಅಪ್ಪ-ಅಮ್ಮ ಏನು ಹೇಳುತ್ತಾರೆ? ಸಂಬಂಧಿಕರು ಏನು ಹೇಳುತ್ತಾರೆ?

ನನ್ನ ತಂದೆ-ತಾಯಿಗೆ ಸೋಶಿಯಲ್‌ ಮೀಡಿಯಾ ಬಗ್ಗೆ ಮಾಹಿತಿ ಇಲ್ಲ. ಸಂಬಂಧಿಕರು ಮಾತ್ರ ಅಪ್ಪ ಅಮ್ಮನಿಗೆ ಈ ಬಗ್ಗೆ ಹೇಳಿದಾಗ ಅವರು ಹು ಅಂತ ಹೇಳಿಬಿಡ್ತಾರೆ. ವೇದಿಕೆಯಲ್ಲಿ ನಾನು ಡ್ಯಾನ್ಸ್‌ ಮಾಡುವಾಗ ನನ್ನ ತಾಯಿಗೆ ನಾನು ತಪ್ಪು ಮಾಡುವೆನೋ ಎಂಬ ಭಯ ಶುರು ಆಗುವುದಂತೆ.

ಎಲ್ಲ ಭಾಷೆ ಮಾತಾಡ್ತೀರಿ?

ಹಿಂದಿ, ತುಳು, ಕನ್ನಡ ಭಾಷೆ ಎಲ್ಲವನ್ನು ಮಾತನಾಡೋದು ಮಿಕ್ಸ್‌ ಮಾಡಿ ಮಾತಾಡೋದು ಕಷ್ಟ. ಎಲ್ಲ ಭಾಷೆಯನ್ನು ಮಾತಾಡೋದು ಖುಷಿ ಕೊಡ್ತಿದೆ. ಎಲ್ಲರಿಗೂ ತುಳು ಭಾಷೆ ಗೊತ್ತಿರೋದಿಲ್ಲ, ಹೀಗಾಗಿ ಕನ್ನಡವೋ, ಇಂಗ್ಲಿಷ್‌ ಮಾತಾಡಬೇಕಾಗುತ್ತದೆ. ಅಪ್ಪ-ಅಮ್ಮ ತುಳು ಮಾತನಾಡ್ತಾರೆ, ಆದರೆ ಕನ್ನಡ ಮಾತನಾಡೋಕೆ ನನ್ನ ಜೊತೆ ಯಾರೂ ಇರಲಿಲ್ಲ. ವಿಡಿಯೋ ನೋಡಿ ಕನ್ನಡ ಕಲಿತೆ.

Vlog ಹೇಗೆ ಮಾಡ್ತಾರೆ?

ನಾನು ಎಡಿಟ್‌ ಮಾಡದೆ, ಮರ್ಜ್‌ ಮಾಡಿ ವಿಡಿಯೋ ಅಪ್‌ಲೋಡ್‌ ಮಾಡ್ತೀನಿ. ಎಡಿಟ್‌ ಮಾಡದಿರೋದಿಕ್ಕೆ ನನ್ನ ವಿಡಿಯೋ ಕಂಟೆಂಟ್‌ ಟ್ರೋಲ್‌ ಆಗುತ್ತದೆ. ಈ ಟ್ರೋಲ್‌ಗಳನ್ನು ನಾನು ಎಂಜಾಯ್‌ ಮಾಡ್ತೀನಿ. ನನಗೆ ಟ್ರೋಲರ್ಸ್‌ ಬೇಕು, ಟ್ರೋಲರ್ಸ್‌ಗೆ ನಾನು ಬೇಕು. ಇಲ್ಲಸಲ್ಲದ ವಿಷಯಗಳನ್ನು ಅವರು ಹೇಳಿದಾಗ ಬೇಜಾರು ಆಗುತ್ತದೆ. ನಾನು ಹೀಗೆ ಇರೋದು..

ಭವಿಷ್ಯದ ಬಗ್ಗೆ ಯೋಚನೆ ಏನು?

ನಾನು ಕೆಲಸ ಮಾಡಲ್ಲ, ಉದ್ಯಮ ಮಾಡ್ತೀನಿ.

ಮದುವೆ ಪ್ಲ್ಯಾನ್‌ ಏನು?

ಯಾವಾಗ ಬೇಕಿದ್ರೂ ಮದುವೆ ಆಗಬಹುದು. ನಾನು ಮಾನಸಿಕವಾಗಿ ರೆಡಿಯಾಗಿದ್ದರೆ ಯಾವಾಗ ಬೇಕಿದ್ದರೂ ಮದುವೆ ಆಗುವೆ. ಇವತ್ತು ಹುಡುಗ ಸಿಕ್ಕರೆ ಇವತ್ತೇ ಮದುವೆ ಆಗ್ತೀನಿ. ನಾನು ಯಾರನ್ನೂ ಕರೆಯದೆ ಮದುವೆ ಆಗುವೆ, ಇದರ ಅವಶ್ಯಕತೆ ಇಲ್ಲ. ಇವತ್ತು ಬಂದು ಊಟ ಮಾಡಿ ಹೋಗುವವರ ಮನಸ್ಸು ಪವಿತ್ರವಾಗಿರೋದಿಲ್ಲ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Gowri Kannada Serial: ಪ್ರೀತಿಸಿ, ವಿಮಾನದಲ್ಲಿಯೇ ಮದುವೆಯಾದ್ರು; ಫಸ್ಟ್‌ನೈಟ್‌ನಲ್ಲಿ ಮಹಾಸತ್ಯ ಬಯಲು!
ಸದ್ದಿಲ್ಲದೆ ಮದುವೆಯಾದ ಬ್ರಹ್ಮಗಂಟು ಧಾರಾವಾಹಿ ನಟಿ Geetha Bharathi Bhat; ಸುಂದರ ಫೋಟೋಗಳಿವು