
‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ ಭಾಗ್ಯ ಈಗ ಮನೆಯನ್ನು ನಡೆಸಬೇಕಿದೆ, ಮಕ್ಕಳನ್ನು ಓದಿಸಬೇಕಿದೆ. ಇನ್ನು ಇರುವ ಸಾಲವನ್ನು ತೀರಿಸಬೇಕಿದೆ. ಹೀಗಾಗಿ ಅವಳು ಅಡುಗೆ ಕಾಂಟ್ರ್ಯಾಕ್ಟ್ ಹಿಡಿದಿದ್ದಾಳೆ. ಅಡುಗೆ ಮಾಡಲು ಜನರ ಅಗತ್ಯ ಇದೆ. ಇದಕ್ಕಾಗಿ ಅವಳಿಗೆ ಮಹಿಳಾ ಶಕ್ತಿ ಸಾಥ್ ನೀಡಿದೆ.
ಮಹಿಳಾ ಶಕ್ತಿ ಸಾಥ್
ಅತ್ತೆ ಕುಸುಮಾ, ತಂಗಿ ಪೂಜಾ ಕೂಡ ಭಾಗ್ಯಗೆ ಸಾಥ್ ಕೊಟ್ಟಿದ್ದಾರೆ. ಆಗ ಕುಸುಮಾಗೆ ಅನಾರೋಗ್ಯ ಉಂಟಾಗಿದೆ. ಹೀಗಾಗಿ ಅವರಿಬ್ಬರು ಆಸ್ಪತ್ರೆಗೆ ಹೋಗಬೇಕಾಗಿ ಬಂತು. ಭಾಗ್ಯ ಒಬ್ಬಳೇ ಅಷ್ಟೆಲ್ಲ ಜನರಿಗೆ ಅಡುಗೆ ಮಾಡೋದು ದೊಡ್ಡ ಟಾಸ್ಕ್ ಆಗಿತ್ತು. ಈಗ ಕಲರ್ಸ್ ಕನ್ನಡ ಧಾರಾವಾಹಿಯಲ್ಲಿ ಪ್ರಸಾರ ಆಗುವ ಧಾರಾವಾಹಿ ನಟಿಯರು ಆಗಮಿಸಿದ್ದಾರೆ.
ಕೊನೆಗೂ ವೀಕ್ಷಕರ ಬಹುದಿನದ ಆಸೆ ಈಡೇರಿಸಿದ ʼಭಾಗ್ಯಲಕ್ಷ್ಮೀʼ, ʼಲಕ್ಷ್ಮೀ ಬಾರಮ್ಮʼ ಧಾರಾವಾಹಿ ತಂಡ!
ಸಹಾಯ ಮಾಡಿದ ನಾಯಕಿಯರು!
ʼಬೃಂದಾವನʼ ಧಾರಾವಾಹಿ ನಟಿ ಅಮೂಲ್ಯ, ವಧು ಧಾರಾವಾಹಿ ನಾಯಕಿ, ಲಕ್ಷ್ಮೀ ಬಾರಮ್ಮ ಧಾರಾವಾಹಿ ಸುಪ್ರೀತಾ, ರಾಮಾಚಾರಿ ಧಾರಾವಾಹಿ ನಾಯಕನ ತಾಯಿ, ದೃಷ್ಟಿಬೊಟ್ಟು ಧಾರಾವಾಹಿ ದೃಷ್ಟಿ ಕೂಡ ಆಗಮಿಸಿದ್ದಾರೆ. ಇವರಿಂದ ಎಲ್ಲ ಅಡುಗೆ ತಯಾರಾಗಿದೆ. ಈಗ ಬಡಿಸುವವರು ಬೇಕು. ಈ ನಾರಿಮಣಿಯರೇ ಎಲ್ಲರಿಗೂ ಬಡಿಸಿದ್ದಾರೆ. ಈ ಮೂಲಕ ಅವರು ಭಾಗ್ಯ ಸೋಲಲು ಬಿಡದೆ, ಗೆಲ್ಲಿಸಿದ್ದಾರೆ. ಭಾಗ್ಯಕ್ಕಳನ್ನು ಎಲ್ಲ ತಂಗಿಯರು ಸಹಾಯ ಮಾಡಿದ್ದಾರೆ. ಕೈಹಿಡಿದ ಗಂಡ ನಡುನೀರಿನಲ್ಲಿ ಬಿಟ್ಟು ಬೇರೆ ಮದುವೆ ಆದರೂ ಕೂಡ, ಉಳಿದವರು ಅವಳ ಸಹಾಯಕ್ಕೆ ಬಂದಿರೋದು ಖುಷಿಯ ವಿಷಯ.
Bhagyalakshmi Serial: ತಾಂಡವ್ ಮುಖಕ್ಕೆ ಭಾಗ್ಯ ತಾಳಿ ಕಿತ್ತೆಸೆದ ಬಳಿಕ ಕಥೆ ಹೇಗೆ ಸಾಗತ್ತೆ?
ಠಕ್ಕರ್ ಕೊಡ್ತಿರೋ ಭಾಗ್ಯ!
ಎಷ್ಟೇ ಬದಲಾದರೂ, ಎಷ್ಟೇ ಹೊಂದಿಕೊಂಡರೂ ಕೂಡ ತಾಂಡವ್ ಹಠ ಮಾಡಿ ಶ್ರೇಷ್ಠಳನ್ನು ಮದುವೆ ಆದನು. ಹೀಗಾಗಿ ಭಾಗ್ಯ ತನ್ನ ತಾಳಿಯನ್ನು ತೆಗೆದು ಎಸೆದಿದ್ದಾಳೆ. ನಾನು ಕಟ್ಟಿದ ಮಾಂಗಲ್ಯವನ್ನು ತೆಗೆದಳು ಅಂತ ಭಾಗ್ಯ ಮೇಲೆ ತಾಂಡವ್‌ಗೆ ಸಿಟ್ಟು ಬಂದಿದ್ದಂತೂ ಹೌದು. ಮದುವೆಯಾದಮೇಲೆ ಶ್ರೇಷ್ಠ ಜೊತೆ ಚೆನ್ನಾಗಿರೋದು ಬಿಟ್ಟು ತಾಂಡವ್ ಭಾಗ್ಯಳನ್ನು ಸೋಲಿಸಲು ಏನೆಲ್ಲ ಮಾಡಬಹುದು ಎಂದು ನಿತ್ಯ ಪ್ಲ್ಯಾನ್ ಮಾಡುತ್ತಿದ್ದಾನೆ. ಇವನು ಕೊಟ್ಟ ಕಷ್ಟಗಳಿಗೆ ಭಾಗ್ಯ ಠಕ್ಕರ್ ಕೊಡುತ್ತಿದ್ದಾಳೆ. ಎಲ್ಲ ವಿಚಾರದಲ್ಲಿಯೂ ಭಾಗ್ಯಳಿಗೆ ದೇವರು ಒಂದಲ್ಲ ಒಂದು ಸಹಾಯ ಮಾಡುತ್ತಿದ್ದಾನೆ.
ಎಲ್ಲ ದುಡ್ಡು ಕೊಟ್ಟು ಮನೆ ಉಳಿಸಿಕೊಳ್ತಾಳಾ ಭಾಗ್ಯ?
ಭಾಗ್ಯ ಐವತ್ತು ಸಾವಿರ ರೂಪಾಯಿ ಕೊಟ್ಟರೆ ಮಾತ್ರ ಮನೆ ಉಳಿದುಕೊಳ್ಳುತ್ತದೆ. ಅಡುಗೆ ಮಾಡಿದ್ದಕ್ಕೆ ಭಾಗ್ಯಳಿಗೆ ಮೂವತ್ತೆರಡು ಸಾವಿರ ರೂಪಾಯಿ ಮಾತ್ರ ಸಿಕ್ಕಿದೆ. ಉಳಿದ ಹಣಕ್ಕೆ ಭಾಗ್ಯ ಏನು ಮಾಡ್ತಾಳೆ ಅಂತ ಕಾದು ನೋಡಬೇಕಿದೆ. ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ಭಾರೀ ರೋಚಕತೆಯಿಂದ ಕೂಡಿವೆ.
ಏನೇ ಆದರೂ ಕೂಡ ಈ ಬಾರಿಯೂ ಭಾಗ್ಯ ಸೋಲೋದಿಲ್ಲ. ತಾಂಡವ್-ಶ್ರೇಷ್ಠ ಮುಖಕ್ಕೆ ಮಂಗಳಾರತಿ ಎತ್ತುವ ಹಾಗೆ ಮಾಡೋದಂತೂ ಪಕ್ಕಾ ಎನ್ನಬಹುದು.
ಪಾತ್ರಧಾರಿಗಳು
ಭಾಗ್ಯ ಪಾತ್ರದಲ್ಲಿ ಸುಷ್ಮಾ ಕೆ ರಾವ್, ತಾಂಡವ್ ಪಾತ್ರದಲ್ಲಿ ಸುದರ್ಶನ್ ರಂಗಪ್ರಸಾದ್, ಶ್ರೇಷ್ಠ ಪಾತ್ರದಲ್ಲಿ ಕಾವ್ಯಾ ಗೌಡ, ಕುಸುಮಾ ಪಾತ್ರದಲ್ಲಿ ಪದ್ಮಜಾ ರಾವ್ ಅವರು ನಟಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.