ಪತ್ನಿಯನ್ನು ಹೊರಹಾಕುವ ಭರದಲ್ಲಿ ಮನೆಯವರಿಗೆಲ್ಲಾ ತಿಳಿದೇ ಬಿಡ್ತು ತಾಂಡವ್‌ನ ಬಹುದೊಡ್ಡ ರಹಸ್ಯ. ಏನದು?
ತಾಂಡವ್ ದೌರ್ಜನ್ಯ ಮಿತಿಮೀರಿದೆ. ಪತ್ನಿ, ಇಬ್ಬರು ಮಕ್ಕಳ ಅಮ್ಮನಾಗಿರುವ ಹೊಣೆಗಾರಿಕೆಯಿಂದ ಭಾಗ್ಯ ಎಲ್ಲವನ್ನೂ ಸಹಿಸಿಕೊಳ್ಳುತ್ತಿದ್ದಾಳೆ. ಹೇಗಾದರೂ ಮಾಡಿ ಭಾಗ್ಯಳನ್ನು ಮನೆಯಿಂದ ಹೊರಕ್ಕೆ ಹಾಕುವ ಯೋಚನೆಯಲ್ಲಿದ್ದಾನೆ ತಾಂಡವ್. ಅವನ ದೌರ್ಜನ್ಯ ಎಷ್ಟರಮಟ್ಟಿಗೆ ಹೋಗಿದೆ ಎಂದರೆ, ಖುದ್ದು ಮಾವನೇ ತನ್ನ ಮಗನಿಂದ ದೂರವಾಗು ಎಂದು ಭಾಗ್ಯಳಿಗೆ ಹೇಳುತ್ತಿದ್ದಾನೆ. ಭಾಗ್ಯಳನ್ನು ಆತ ಪತ್ನಿ ಎಂದು ಒಪ್ಪಿಕೊಂಡೇ ಇಲ್ಲ. ಇದೇ ಮಾತನ್ನು ಈಗ ತಾಂಡವ್ ಅಪ್ಪನೂ ಹೇಳುತ್ತಿದ್ದಾನೆ. ನೀನು ಪತ್ನಿಯಂತೆ ಅಲ್ಲ, ಗುಲಾಮಳಂತೆ ಬದುಕುತ್ತಿರುವಿ. ಇನ್ನು ಈ ನೋವು ಸಾಕು. ನಿನಗೆ ತಾಂಡವ್ ಅರ್ಹನಲ್ಲ. ಆತನಿಂದ ನೀನು ಕಷ್ಟಪಟ್ಟಿದ್ದು ಸಾಕು. ಆತನಿಗಾಗಿ ನೀನು ಜೀವ ತೆತ್ತಿದ್ದು ಸಾಕು.ನೀನು ನಮ್ಮ ಸೊಸೆಯಲ್ಲ, ಮಗಳು ಇದ್ದಂತೆ. ನಿನ್ನ ನೆಮ್ಮದಿ ಮುಖ್ಯ. ತಾಂಡವ್ ಜೊತೆ ನೀನಿದ್ದರೆ ನಿನಗೆ ಸುಖವಿಲ್ಲ. ಗುಲಾಮಳಂತೆ ಬದುಕಬೇಕು. ಆದ್ದರಿಂದ ಅವನನ್ನು ಬಿಟ್ಟುಬಿಡು ಮಗಳೇ ಎನ್ನುತ್ತಿದ್ದಾನೆ.
ಅಷ್ಟಕ್ಕೂ ತಾಂಡವ್ಗೆ ಯಾವುದೇ ಕಾರಣಕ್ಕೂ ಭಾಗ್ಯ ಬೇಡ. ಅವನಿಗೆ ಬೇಕಿರುವುದು ಶ್ರೇಷ್ಠಾ. ಇದೇ ಕಾರಣಕ್ಕೆ 16 ವರ್ಷಗಳ ದಾಂಪತ್ಯ ಜೀವನಕ್ಕೆ ತೆರೆ ಎಳೆಯಲು ಹೊರಟಿದ್ದಾನೆ. ಡಿವೋರ್ಸ್ಗೆ ಸಜ್ಜಾಗಿದ್ದಾನೆ. ಆದರೆ ಯಾವುದೇ ಕಾರಣಕ್ಕೂ ದಾಂಪತ್ಯ ಉಳಿಸಿಕೊಳ್ಳುವ ಪಣ ತೊಟ್ಟಿದ್ದಾಳೆ ಭಾಗ್ಯ. 16 ವರ್ಷಗಳ ಸಂಸಾರ... ಎರಡು ಬೆಳೆದು ನಿಂತಿರುವ ಮಕ್ಕಳು... ಈ ಹಂತದಲ್ಲಿ ಡಿವೋರ್ಸ್ ಎಂದರೆ...? ಅದೂ ಭಾಗ್ಯಳಂಥ ಹೆಣ್ಣುಮಗಳಿಗೆ? ಸಾಧ್ಯವೇ ಇಲ್ಲ. ಮೇಲ್ನೋಟಕ್ಕೆ ಎಷ್ಟೇ ಗಟ್ಟಿಗಿತ್ತಿಯಾದರೂ ಸಂಸಾರ, ಮನೆ, ಮಕ್ಕಳು ಎನ್ನುವ ವಿಷಯ ಬಂದಾಗ ಬಹುತೇಕ ಹೆಣ್ಣುಮಕ್ಕಳು ಸೋಲಲೇಬೇಕಿರುವ ಸ್ಥಿತಿ ಇದೆ. ಇಂಥ ಸ್ಥಿತಿಯಲ್ಲಿ ತನ್ನ ಸಂಸಾರವನ್ನು ಹೇಗಾದರೂ ಉಳಿಸಿಕೊಂಡು, ಗಂಡನ ಮನಸ್ಸನ್ನು ಒಲಿಸಿಕೊಳ್ಳುವ ಅಂದುಕೊಳ್ಳುತ್ತಿರುವಾಗಲೇ ಮಾವನೇ ಖುದ್ದು ಮಗಳೇ ಗಂಡನನ್ನು ಬಿಟ್ಟುಬಿಡು ಎನ್ನುತ್ತಿದ್ದಾನೆ.
ಮಗಳೇ ಗಂಡನನ್ನು ಬಿಟ್ಟುಬಿಡು ಎಂದ ಮಾವ... ಇಷ್ಟವಿಲ್ಲದ ಮದುವೆ ಮಾಡಿಸೋ ಮುನ್ನ ತಲೆ ಬೇಕಿತ್ತಲ್ವೆ?
ಇದೇ ಭರದಲ್ಲಿ ಮಾತನಾಡುವಾಗ ತಾಂಡವ್, ನಿನಗೆ ಈ ಮನೆಯಲ್ಲಿ ಸಿಗುವ ಐಷಾರಾಮಿ ಜೀವನ ಬಿಟ್ಟು ಹೋಗಲು ಮನಸ್ಸು ಇಲ್ಲ ಅಲ್ವಾ? ಆ ಕೊಂಪೆಯಲ್ಲಿ ಹೋಗಿ ಬದುಕಲು ನಿನಗೆ ಇಷ್ಟವಿಲ್ಲ. ಅದಕ್ಕೇ ಇಲ್ಲೇ ಇರಲು ಬಯಸಿರುವಿ ಎಂದು ಕೂಗಾಡುತ್ತಲೇ, ನಿನಗೆ ಎಷ್ಟು ದುಡ್ಡು ಬೇಕು ಹೇಳು, ಅಷ್ಟನ್ನು ನಾನು ಕೊಡುತ್ತೇನೆ ಎಂದು ಪರ್ಸ್‌ನಲ್ಲಿರುವ ದುಡ್ಡನ್ನು ಅವಳ ಬಳಿ ಎಸೆಯುತ್ತಾನೆ. ಈ ಭರದಲ್ಲಿ ಗುಟ್ಟೊಂದು ರಟ್ಟಾಗಿ ಹೋಗುತ್ತದೆ. ಅಷ್ಟಕ್ಕೂ ಈ ಗುಟ್ಟು ತಾಂಡವ್ ಮತ್ತು ಶ್ರೇಷ್ಠಾಳ ಸಂಬಂಧದ ಬಗ್ಗೆ ಅಲ್ಲ. ಅದು ಸದ್ಯ ಗೊತ್ತಾಗುವುದಿಲ್ಲ ಬಿಡಿ. ಆದರೆ ಈ ಗುಟ್ಟು ಎಸ್‌ಎಸ್‌ಎಲ್‌ಸಿ ಹಾಲ್ ಟಿಕೆಟ್ ಗುಟ್ಟು!
ಹೌದು. ಭಾಗ್ಯ ಮಗಳ ಜೊತೆ ಎಸ್‌ಎಸ್‌ಎಲ್‌ಸಿ ಬರೆಯಲು ಹೋಗುತ್ತಿರುವ ಸಂದರ್ಭದಲ್ಲಿ ಭಾಗ್ಯ ಪರೀಕ್ಷೆ ಬರೆಯಬಾರದು ಎನ್ನುವ ಕಾರಣಕ್ಕೆ ತಾಂಡವ್ ಅವಳ ಹಾಲ್ ಟಿಕೆಟ್ ಕದ್ದು ಮುಖಕ್ಕೆ ಇಂಕ್‌ನಿಂದ ಬಳಿದು ಅದನ್ನು ತನ್ನ ಬಳಿಯೇ ಇಟ್ಟುಕೊಂಡಿರುತ್ತಾನೆ. ಇದು ಗೊತ್ತಿಲ್ಲದ ಭಾಗ್ಯಳಿಗೆ ಪರೀಕ್ಷೆ ಬರೆಯುವುದು ಕಷ್ಟವಾಗುತ್ತದೆ. ಆದರೆ ಕೊನೆಗೆ ಅಲ್ಲಿ ಹೇಗೋ ಸಮಸ್ಯೆ ಬಗೆಹರಿಯುತ್ತದೆ. ಆದರೆ ಹಾಲ್ ಟಿಕೆಟ್ ಎಲ್ಲಿ ಹೋಯ್ತು ಎನ್ನುವುದು ಮಾತ್ರ ಯಾರಿಗೂ ತಿಳಿದಿರುವುದಿಲ್ಲ. ಇದೀಗ ಪರ್ಸ್‌ನಿಂದ ಅದು ಕೆಳಗೆ ಬೀಳುತ್ತಿದ್ದಂತೆಯೇ ಎಲ್ಲರಿಗೂ ಅದರ ಗುಟ್ಟು ತಿಳಿಯುತ್ತದೆ. ಇಷ್ಟೆಲ್ಲಾ ಹಿಂಸೆ ಕೊಡುವ ಗಂಡ ನಿನಗ್ಯಾಕಮ್ಮಾ, ಬಿಟ್ಟುಬಿಡು. ಇಂಥ ಬಾಳು ನಿನಗ್ಯಾಕೆ ಕೇಳ್ತಿದ್ದಾರೆ ಭಾಗ್ಯಲಕ್ಷ್ಮಿ ಫ್ಯಾನ್ಸ್.
ಇನ್ನೂ ಮದ್ವೆನೇ ಆಗ್ಲಿಲ್ಲ ಕಣ್ರೋ... ಫಸ್ಟ್ನೈಟ್ ಶುರು ಮಾಡಿಕೊಂಡುಬಿಟ್ರಾ ಎನ್ನೋದಾ ಫ್ಯಾನ್ಸ್!