ಅಮೃತಧಾರೆ ಸೀರಿಯಲ್ ನಾಯಕ ಗೌತಮ್‌ಗಿಂದು ಹುಟ್ಟುಹಬ್ಬದ ಸಂಭ್ರಮ: ರಾಜೇಶ್ ರಿಯಲ್ ಜೀವನದ ಇಂಟರೆಸ್ಟಿಂಗ್ ವಿಷ್ಯ ಇಲ್ಲಿದೆ..
ಅವನೊಬ್ಬ ಮಿಲೇನಿಯರ್ ಬಿಜಿನೆಸ್‌ಮೆನ್. ಯಾವುದೇ ವ್ಯವಹಾರವನ್ನು ಫಟಾಫಟ್ ಮಾಡಬಲ್ಲ. ಆದರೆ ಪ್ರೀತಿಯ ವಿಷಯ ಬಂದಾಗ ಮಾತ್ರ ಜೀರೋ! ಪ್ರೀತಿ-ಪ್ರೇಮ ಎನ್ನುವುದು ಗೊತ್ತೇ ಇಲ್ಲ. ಈ ಸಮಯದಲ್ಲಿ ಯುವತಿಯೊಬ್ಬಳ ಜೊತೆ ಜಟಾಪಟಿ. ಸಿಕ್ಕಸಿಕ್ಕಲೆಲ್ಲಾ ಇಬ್ಬರ ನಡುವೆ ಗಲಾಟೆ-ಕಾದಾಟ. ಆದರೆ ಈ ಬಿಜಿನೆಸ್‌ಮೆನ್‌ನ ಚಿಕ್ಕಮ್ಮನ ಕುತಂತ್ರದಿಂದ ಅದೇ ಹುಡುಗಿಯ ಜೊತೆ ಈ ಬಿಜಿನೆಸ್‌ಮೆನ್ ಮದ್ವೆಯಾಗಿದೆ. ಇವರಿಬ್ಬರೂ ಒಟ್ಟಾಗಲು ಸಾಧ್ಯವೇ ಇಲ್ಲ. ಆದ್ದರಿಂದ ಮಕ್ಕಳು ಆಗುವುದಿಲ್ಲ. ಇನ್ನು ಆಸ್ತಿಯೆಲ್ಲಾ ತಮ್ಮ ಪಾಲೇ ಎಂದು ಚಿಕ್ಕಮ್ಮ ಕುತಂತ್ರ ಮಾಡಿದ್ದಳು. ಆದರೆ ಎಲ್ಲವೂ ಉಲ್ಟಾ ಆಗ್ತಿದೆ. ಪ್ರೀತಿ, ಪ್ರೇಮದ ಗಂಧಗಾಳಿ ಇಲ್ಲದ ಈ ಕೋಟ್ಯಧಿಪತಿಗೆ ಈಗ ಲವ್ ಶುರುವಾಗಿದೆ, ಅದೂ ಪತ್ನಿಯ ಮೇಲೆ. ಅತ್ತ ಪತಿಯನ್ನು ಕಂಡರೆ ಉರ ಉರ ಅಂತಿದ್ದ ಪತ್ನಿಗೂ ಲವ್ ಶುರುವಾಗಿದೆ. ಪರಸ್ಪರ ಪ್ರೀತಿಯನ್ನು ನಿವೇದನೆ ಮಾಡಿಕೊಳ್ಳದಿದ್ದರೂ, ಒಬ್ಬರನ್ನೊಬ್ಬರು ಬಿಟ್ಟು ಇರಲಾರದಷ್ಟು ಪ್ರೀತಿ ದೊಡ್ಡದಾಗಿ ಬೆಳೆದಿದೆ...!
ಹೌದು. ಸೀರಿಯಲ್ ಪ್ರೇಮಿಗಳಿಗೆ ಇದು ಯಾವ ಕಥೆ ಎಂದು ತಿಳಿದೇಬಿಟ್ಟಿದೆ. ಅದೇ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಅಮೃತಧಾರೆ ಸೀರಿಯಲ್. ಇದರಲ್ಲಿ ಬಿಜಿನೆಸ್‌ಮ್ಯಾನ್ ಆಗಿರುವ ಗೌತಮ್ ಹಾಗೂ ಪತ್ನಿ ಭೂಮಿಕಾ ಕ್ಯೂಟ್ ಲವ್ ಸ್ಟೋರಿ ಪ್ರೇಕ್ಷಕರ ಮನಸ್ಸು ಗೆದ್ದಿದೆ. ಒಬ್ಬರನ್ನೊಬ್ಬರು ಬಿಟ್ಟಲಿರಲಾರದ ಇವರ ಬಾಂಧವ್ಯಕ್ಕೆ ಸೋ ಸ್ವೀಟ್ ಎನ್ನುತ್ತಿದ್ದಾರೆ ನೆಟ್ಟಿಗರು. ಅಂದಹಾಗೆ, ಗೌತಮ್ ಪಾತ್ರಧಾರಿಯ ಹೆಸರು ರಾಜೇಶ್ ನಟರಂಗ. ಇಂದು ಅಂದರೆ ಏಪ್ರಿಲ್ 18 ರಾಜೇಶ್ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಜೀ ಕನ್ನಡ ವಾಹಿನಿ ವಿಶೇಷ ವಿಡಿಯೋ ರಿಲೀಸ್ ಮಾಡಿದೆ.
ಬಿಡುಗಡನೇ ಆಗಿಲ್ಲ, ಆಗ್ಲೇ ಸಾವಿರ ಕೋಟಿ ಬಾಚಿದ ಪುಷ್ಪ-2: ಶೀಘ್ರದಲ್ಲೇ 3! ಏನಿದು ವಿಷಯ?
ಅಂದಹಾಗೆ, ರಾಜೇಶ್ ನಟರಂಗ ಅವರು 'ಸ್ಮಶಾನ' ಮತ್ತು 'ಕುರುಕ್ಷೇತ್ರ' ಧಾರಾವಾಹಿಯ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಗುರುತಿಸಿಕೊಳ್ಳುವ ಮೂಲಕ ಕಿರುತೆರೆಗೆ ಕಾಲಿಟ್ಟವರು. 'ಮಾಯಾಮೃಗ' ಧಾರಾವಾಹಿಯಲ್ಲಿ ಮೊದಲ ಬಾರಿ ಬಣ್ಣ ಹಚ್ಚಿದ ರಾಜೇಶ್ ನಟರಂಗ ಮುಂದೆ 'ಮುಕ್ತ', 'ಬದುಕು', 'ಶಕ್ತಿ', 'ಗುಪ್ತಗಾಮಿನಿ', 'ನಾನೂ ನನ್ನ ಕನಸು' ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಗೌತಮ್ ಪಾತ್ರಕ್ಕೆ ಜೀವ ತುಂಬಿರುವ ರಾಜೇಶ್, ಪೋಷಕನಟನಾಗಿ, ಖಳನಟನಾಗಿ ಕನ್ನಡ ಕಿರುತೆರೆ ಮತ್ತು ಹಿರಿತೆರೆ ಎರಡರಲ್ಲೂ ಕೂಡ ತಮ್ಮದೇ ಆದ ಛಾಪನ್ನ ಮೂಡಿಸಿದ್ದಾರೆ. ಅವರ ಅಭಿನಯಕ್ಕೆ ನಿಬ್ಬೆರಗಾಗದವರೇ ಇಲ್ಲ.
ಇವರ ರಿಯಲ್ ಪತ್ನಿಯ ಹೆಸರು ಚೈತ್ರಾ. ಹಿಂದೊಮ್ಮೆ ರಿಯಾಲಿಟಿ ಷೋನಲ್ಲಿ ತಮ್ಮ ಅಳಿಯನನ್ನು ಚೈತ್ರಾ ಅವರ ಅಮ್ಮ ಬಾಯ್ತುಂಬಾ ಹೊಗಳಿದ್ದರು. ತಮ್ಮ ಮಗಳಿಗೆ ಎಂಥ ಗಂಡ ಬೇಕಿತ್ತು ಎಂಬ ಬಗ್ಗೆ ಕನಸು ಕಂಡಿದ್ದೆ. ಪ್ರತಿಯೊಬ್ಬ ತಾಯಿಯೂ ತಮ್ಮ ಮಗಳಿಗೆ ಇದೇ ರೀತಿ ಗಂಡ ಸಿಗಬೇಕು ಎಂದು ಕನಸು ಕಂಡಿರುತ್ತಾಳೆ. ಆದರೆ ಕೆಲವರಿಗೆ ಮಾತ್ರ ಆ ಅದೃಷ್ಟ ಸಿಕ್ಕಿರುತ್ತದೆ. ನನ್ನ ಮಗಳಿಗೆ ಯಾವ ರೀತಿಯ ಗಂಡ ಸಿಗಬೇಕು ಎಂದು ಕನಸು ಕಂಡಿದ್ದೆನೋ ನಿಜಕ್ಕೂ ಅಂಥದ್ದೇ ಗಂಡ ಸಿಕ್ಕಿದ್ದಾನೆ ಎಂದು ಭಾವುಕರಾಗಿದ್ದರು. ಇದೇ ವೇಳೆ ರಾಜೇಶ್ ಅವರ ಗುಟ್ಟೊಂದನ್ನು ಪತ್ನಿ ರಿವೀಲ್ ಮಾಡಿದ್ದರು. ಅದೇನೆಂದರೆ, ಒಮ್ಮೆ ಹಬ್ಬದ ಸಂದರ್ಭದಲ್ಲಿ ಶಾಸ್ತ್ರಕ್ಕೆಂದು ಇಟ್ಟಿದ್ದ ಆಹಾರವನ್ನೂ ತಿಂದುಬಿಟ್ಟಿದ್ರಂತೆ ರಾಜೇಶ್ ನಟರಂಗ! ಬಾಳೆಯಲ್ಲಿ ಇಟ್ಟಿದ್ದ ಎಲ್ಲಾ ಆಹಾರ ಗುಳುಂ ಮಾಡಿಬಿಟ್ಟಿದ್ರು. ಆಗ ಅವರ ಚಿಕ್ಕಪ್ಪ, ಅಯ್ಯೋ ಇದೇನಿದು ಎಲ್ಲಾ ತಿಂದುಬಿಟ್ಯಲ್ಲೋ, ಎಲೆಯಲ್ಲಿ ಚೂರಾದ್ರೂ ಉಳಿಸೋ, ಅನ್ನ ಕಾಣದೇ ಇರೋರ್ ಥರ ತಿಂತಾ ಇದ್ಯಲ್ಲಾ ಎಂದು ಹೇಳಿದ್ರು ಎಂಬುದನ್ನು ನೆನಪಿಸಿಕೊಂಡಿದ್ದರು.
ಸುಖ ಸಂಸಾರಕ್ಕೆ 12 ಸೂತ್ರ ಯಾಕಪ್ಪ? ಇದೊಂದೇ ಸೂತ್ರ ಪಾಲಿಸಿ ನೋಡಿ, ಲೈಫ್ ಸೂಪರ್ ಎಂದ ಅಮೃತಧಾರೆ ಗೌತಮ್!