ಫಸ್ಟ್ ನೈಟ್ ನಲ್ಲಿ ಹಾಲು ಹಿಡಿದು ಬಂದ ಶ್ರೇಷ್ಠಾ, ತಾಂಡವ್ ಮನಸ್ಸೆಲ್ಲ ಭಾಗ್ಯಾ ಮೇಲೆ!

Published : Mar 01, 2025, 09:43 AM ISTUpdated : Mar 01, 2025, 12:24 PM IST
ಫಸ್ಟ್ ನೈಟ್ ನಲ್ಲಿ ಹಾಲು ಹಿಡಿದು ಬಂದ ಶ್ರೇಷ್ಠಾ, ತಾಂಡವ್ ಮನಸ್ಸೆಲ್ಲ ಭಾಗ್ಯಾ ಮೇಲೆ!

ಸಾರಾಂಶ

ತಾಂಡವ್ ಶ್ರೇಷ್ಠಾಳನ್ನು ಮದುವೆಯಾದರೂ ಭಾಗ್ಯಾಳನ್ನು ಮರೆಯಲು ಸಾಧ್ಯವಾಗುತ್ತಿಲ್ಲ. ಶ್ರೇಷ್ಠಾ ಮೊದಲ ರಾತ್ರಿಯ ಕನಸಿನಲ್ಲಿದ್ದರೆ, ತಾಂಡವ್ ಭಾಗ್ಯಾಳಿಗೆ ಬುದ್ಧಿ ಕಲಿಸಲು ಯೋಜನೆ ರೂಪಿಸುತ್ತಿದ್ದಾನೆ. ಇದರಿಂದ ಕೋಪಗೊಂಡ ಶ್ರೇಷ್ಠಾ, ತಾಂಡವ್‌ನನ್ನು ಪ್ರಶ್ನಿಸುತ್ತಾಳೆ. ಭಾಗ್ಯಾಳಿಂದ ದೂರವಾಗಿ ತಾಂಡವ್‌ಗೆ ಮಾರಿಹಬ್ಬ ಕಟ್ಟಿಟ್ಟ ಬುತ್ತಿ ಎನ್ನುತ್ತಿದ್ದಾರೆ ವೀಕ್ಷಕರು. ಭಾಗ್ಯಾ ತನ್ನ ಮನೆಯ ಇಎಂಐ ಕಟ್ಟಲು ಹೋರಾಡುತ್ತಿದ್ದಾಳೆ.

ತಾಂಡವ್ ನನ್ನು ಭಾಗ್ಯಾಳಿಂದ ದೂರ ಮಾಡಿ ತನ್ನ ಬಹುದಿನದ ಕನಸನ್ನು ಶ್ರೇಷ್ಠಾ ಈಡೇರಿಸಿಕೊಂಡಿದ್ದಾಳೆ. ಶ್ರೇಷ್ಠಾ ಕೊರಳಿಗೆ ತಾಂಡವ್ ತಾಳಿ ಏನೋ ಬಿದ್ದಿದೆ. ಆದ್ರೆ ತಾಂಡವ್ ಮಾತ್ರ ಭಾಗ್ಯಾಳನ್ನು ಮರೀತಾನೇ ಇಲ್ಲ. ಶ್ರೇಷ್ಠಾ ಫಸ್ಟ್ ನೈಟ್ ಫೀಲ್ ನಲ್ಲಿದ್ರೆ ತಾಂಡವ್, ಭಾಗ್ಯಾಳ ಚಿಂತೆಯಲ್ಲಿದ್ದಾನೆ. ಹೇಗೆ ಭಾಗ್ಯಾಗೆ ಬುದ್ದಿ ಕಲಿಸ್ಬೇಕು ಎಂಬ ಆಲೋಚನೆಯಲ್ಲಿ ಮುಳುಗಿದ್ದಾನೆ. ಪಾಪ, ಸೀರೆಯುಟ್ಟು, ಹಾಲು ಹಿಡಿದು ಬೆಡ್ ರೂಮ್ ಗೆ ಬಂದ ಶ್ರೇಷ್ಠಾ, ತಾಂಡವ್ ತನ್ನನ್ನು ಹೊಗಳ್ತಾನೆ, ತನ್ನನ್ನು ಮುದ್ದಾಡ್ತಾನೆ, ಕೊನೆಗೂ ಪ್ರೀತಿ ಮದುವೆಗೆ ತಿರುಗ್ತಲ್ಲ ಅಂತ ಖುಷಿಯಾಗ್ತಾನೆ ಅಂದ್ಕೊಂಡಿದ್ಲು. ಆದ್ರೆ ಎಲ್ಲ ಉಲ್ಟಾ ಆಗಿದೆ. ಸುಂದರವಾಗಿ ಅಲಂಕರಿಸಿರೋ ಬೆಡ್ ರೂಮ್, ಹಾಲು ಹಿಡಿದು ಬಂದ ಶ್ರೇಷ್ಠಾ ಬಗ್ಗೆ ತಾಂಡವ್ ಗೆ ಕಿಂಚಿತ್ತೂ ಗಮನ ಇಲ್ಲ. ತಾಂಡವ್ ಸಂಪೂರ್ಣವಾಗಿ ಕಳೆದು ಹೋಗಿದ್ದಾನೆ. ಈ ಸತ್ಯ ಗೊತ್ತಾಗಿ ಶ್ರೇಷ್ಠಾ ಉಗ್ರ ರೂಪ ತಾಳಿದ್ದಾಳೆ. ಒಂದ್ಕಡೆ ಬಿಟ್ಟು ಹೋದ ಹಳೆ ಹೆಂಡ್ತಿ ಇನ್ನೊಂದು ಕಡೆ ಕಟ್ಕೊಂಡಿರೋ ಹೊಸ ಹೆಂಡ್ತಿ. ಇಬ್ಬರ ಮಧ್ಯೆ ತಾಂಡವ್ ಏನಾಗ್ತಾನೆ ಕಾದುನೋಡ್ಬೇಕು.

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿರುವ ಭಾಗ್ಯಲಕ್ಷ್ಮಿ ಸೀರಿಯಲ್ ಎರಡು ದಿನಗಳ ಹಿಂದೆ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿತ್ತು. ಇಂದೆ ಒಂದು ಬಾರಿ ಮದುವೆಯಾಗೋಕೆ ಮುಂದಾಗಿದ್ದ ತಾಂಡವ್ ಹಾಗೂ ಶ್ರೇಷ್ಠಾ ಮದುವೆ ನಿಂತಿತ್ತು. ಈ ಬಾರಿಯೂ ಹಾಗೇ ಆಗುತ್ತೆ, ಭಾಗ್ಯಾ ಅವರ ಮುಂದೆ ಬಂದು ಅಂಗಲಾಚುತ್ತಾಳೆ ಅಂದ್ಕೊಂಡಿದ್ದ ವೀಕ್ಷಕರಿಗೆ ಭಾಗ್ಯಾ ಶಾಕ್ ನೀಡಿದ್ದಳು. ಏಕಾಏಕಿ ತಾಳಿ ಕಿತ್ತು ತಾಂಡವ್ ಕೈಗಿಟ್ಟು ಬಂದಿದ್ದಳು. ಇದು ಭಾಗ್ಯಾಗೆ ಬಿಡುಗಡೆ ಭಾಗ್ಯವಾದ್ರೆ ತಾಂಡವ್ ಗೆ ಸಹಿಸಲಾಗದ ಅವಮಾನ. 

ಇದುವರೆಗೂ ನನ್ನ ಹತ್ರ ಫೋನ್‌ ಇಲ್ಲ ಎಂದ 'ಲಕ್ಷ್ಮಿ ಬಾರಮ್ಮ' ಭೂಮಿಕಾ; ಡವ್ ಕಮ್ಮಿ ಮಾಡು ಎಂದು ಕಾಲೆಳೆದ ನೆಟ್ಟಿಗರು

ಭಾಗ್ಯಾ ಹೀಗೆ ಮಾಡ್ತಾಳೆ ಅಂತ ತಾಂಡವ್ ಕನಸಿನಲ್ಲೂ ಊಹಿಸಿರಲಿಲ್ಲ. ಹಾಗಾಗಿಯೇ ಭಾಗ್ಯಾ ಕಿತ್ತುಕೊಟ್ಟ ತಾಳಿಯನ್ನು ತನ್ನ ಕೈನಲ್ಲಿಟ್ಟುಕೊಂಡಿದ್ದಾನೆ. ಅದನ್ನು ಆಗಾಗ ನೋಡ್ತಾ, ಸೇಡು ತೀರಿಸಿಕೊಳ್ಳೋ ಪ್ಲಾನ್ ಮಾಡ್ತಿದ್ದಾನೆ. ಇದೆಲ್ಲ ಗೊತ್ತಿದ್ರೂ ಶ್ರೇಷ್ಠಾ ಮಾತ್ರ ತಾಂಡವ್ ಜೊತೆ ಹೊಸ ಬದುಕು ಶುರು ಮಾಡುವ ಕನಸು ಕಂಡಿದ್ದಾಳೆ. ಇಂದಿನ ಸಂಚಿಕೆಯಲ್ಲಿ ಶ್ರೇಷ್ಠಾ, ಹಾಲು ಹಿಡಿದು ಬೆಡ್ ರೂಮ್ ಗೆ ಬರ್ತಾಳೆ. ತಾಂಡವ್ ತನಗೆ ಕಾಯ್ದಿದ್ದಾನೆ ಅಂದ್ಕೊಂಡು,   ನನಗೆ ವೇಟ್ ಮಾಡ್ತಿದ್ಯಾ ತಾಂಡವ್ ಅಂತ ಬಾಯಿಬಿಟ್ಟು ಕೇಳ್ತಾಳೆ. ಆದ್ರೆ ತಾಂಡವ್ ಉದಾಸೀನ ಉತ್ತರ ಮಾತ್ರ ಶ್ರೇಷ್ಠ ಉರಿದುಕೊಳ್ಳುವಂತೆ ಮಾಡುತ್ತೆ. ನಿನಗೆ ಏಕೆ ಕಾಯಬೇಕು, ಆ ಭಾಗ್ಯಾ ಬಗ್ಗೆ ಆಲೋಚನೆ ಮಾಡ್ತಿದ್ದೆ ಅಂತ ಭಾಗ್ಯಾ ಹೆಸರು ಹೇಳ್ತಿದ್ದಂತೆ ಕೋಪಗೊಳ್ಳುವ ಶ್ರೇಷ್ಠಾ, ಹಾಲಿನ ಲೋಟವನ್ನು ಬಿಸಾಕ್ತಾಳೆ. ಅಷ್ಟೇ ಅಲ್ಲ, ತಾಂಡವ್ ಮೇಲೆ ಕಿರುಚಾಡ್ತಾಳೆ. ಈಗ ನಮ್ಮಿಬ್ಬರ ಮದುವೆ ಆಗಿದೆ. ಈಗ್ಲೂ ಕ್ಷಣ ಕ್ಷಣಕ್ಕೂ ಭಾಗ್ಯಾ ಬಗ್ಗೆ ಆಲೋಚನೆ ಮಾಡೋದು ಏಕೆ. ಅವಳು ಮುಗಿದಿರೋ ಚಾಪ್ಟರ್ ಎನ್ನುತ್ತಿದ್ದಾಳೆ. ಶ್ರೇಷ್ಠಾಗೆ ಅದು ಮುಗಿದ ಚಾಪ್ಟರ್ ಆದ್ರೆ ತಾಂಡವ್ ಗೆ ಅಲ್ಲ. 

ಈ ಜಗತ್ತಿನಿಂದ ಹೋಗೋ 2 ದಿನದ ಮೊದ್ಲು ರಾಘಣ್ಣ ಬಳಿ ಅಪ್ಪು ಹೇಳಿದ್ದೇನು? ಕಣ್ಣೀರು ಬರದೇ

ತಾಂಡವ್ ಹಾಗೂ ಶ್ರೇಷ್ಠಾ ನೋಡಿದ ವೀಕ್ಷಕರು ನಿಮ್ಮಿಬ್ಬರಿಗೆ ಇದು ಬೇಕಿತ್ತಾ ಅಂತ ಪ್ರಶ್ನೆ ಕೇಳ್ತಿದ್ದಾರೆ. ಆತುರದಲ್ಲಿ ಮದುವೆಯಾಗಿದ್ದೀರಿ, ಇನ್ಮುಂದೆ ಇಬ್ಬರಿಗೂ ಮಾರಿಹಬ್ಬ ಗ್ಯಾರಂಟಿ ಎನ್ನುತ್ತಿದ್ದಾರೆ. ಇತ್ತ ಭಾಗ್ಯಾ ಹೋರಾಟ ಶುರುವಾಗಿದೆ. ಐದು ತಿಂಗಳಿಂದ ಮನೆ ಇಎಂಐ ಕಟ್ಟಿಲ್ಲ ತಾಂಡವ್. ಅದ್ರ ಹೊಣೆ ಭಾಗ್ಯಾ ಮೇಲಿದೆ. ಭಾಗ್ಯಾ ಜೊತೆ ತಾಂಡವ್ ಅಪ್ಪ – ಅಮ್ಮ ಕೂಡ ತಮ್ಮ ಬಂಗಾರ ನೀಡಿ, ಸಾಲ ತೀರಿಸೋ ನಿರ್ಧಾರಕ್ಕೆ ಬಂದಿದ್ದಾರೆ.  
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಏನ್ರೀ ಇದು ತೆವಲು? ರಜತ್‌, ಅಶ್ವಿನಿ ಗೌಡ, ರಘು ಯಾಕೆ ಹೀಗೆಲ್ಲ ಮಾಡಿದ್ರು?
Aadi Lakshmi Purana Serial: ವಿರುದ್ಧ ದಿಕ್ಕಿನಲ್ಲಿ ಸಾಗುವ, ಒಬ್ಬರನ್ನೊಬ್ಬರು ಕಂಡರೆ ಆಗದವ್ರು ಮದುವೆಯಾಗುವ ಕಥೆ